Friday 14 December, 2007

ಮಗುವಾಗಬಾರದಿತ್ತೆ?

ತೊಟ್ಟಿಲಲಿ ಕಿಲ ಕಿಲ ನಗುವಾಗ
ಜಗದ ಅರಿವಿರಲಿಲ್ಲ.
ಮಂಡಿ ಊರಿ ಅಂಬೇಗಾಲಿಡುವಾಗ
ನಾಳಿನ ಚಿಂತೆ ಇರಲಿಲ್ಲ.
ತೊದಲು ಮಾತಾಡುವಾಗ
ಭಾಷೆಯ ಗಂಧವಿರಲಿಲ್ಲ.
ತಾಯಿಯಿಂದ ಕಲಿತಾಗ ಅ ಆ ಇ
ಮೂಡಿತು ಕಲಿಯಲು ಆಸಕ್ತಿ
ನನ್ನದೇ ಆದ ಪ್ರಪಂಚವಿತ್ತು
ಬೆಳೆದಾಗ ತಿಳಿಯಿತು,
ಜೀವನವೇ ದೊಡ್ಡ ಕಸರತ್ತು
ನಾನಿನ್ನು ಮಗುವಾಗಬಾರದಿತ್ತೇ??

ಸಮವಸ್ತ್ರ ಧರಿಸಿ ಶಾಲೆಗೆ ಹೋದಾಗ
ಕಲಿತೆನು ವಿದ್ಯೆ
ಆಟವು ಇತ್ತು ಪಾಠದ ಮಧ್ಯೆ
ನವವಸ್ತ್ರ ಧರಿಸಿ ಕಛೇರಿಗೆ ಹೋದಾಗ
ಕಳೆದೆನು ಅರ್ಧಾದಿನ ಕೂತಲ್ಲಿಂದ ಏಳದೇ
ಕಳೆದ ಬಾಲ್ಯ ಮತ್ತೆ ಬರುವುದೇ?
ನಾನಿನ್ನು ಮಗುವಾಗಬಾರದಿತ್ತೇ??

4 ಜನ ಸ್ಪಂದಿಸಿರುವರು:

Shiva said...

Very Nice.......i thik every one feel this sometime in their life time....

maddy said...

Hi Jay
Nimma blog bahala chennagide..
padyagala jote jotege gadya bhagagalannu saha chennagi roopisiddira..

Keep it up..
Good Luck to you.

Madhu

ಗೌತಮ said...

ಶಂಕರ ನಿನ್ನ blog ಚೆನ್ನಾಗಿದೆ ಇಂತಹ ಕವನಗಳನ್ನು ಮತ್ತೆ ರಚಿಸುವಂತ ಶಕ್ತಿಯನ್ನು ಆ ಕೃಷ್ಣ ಪರಮಾತ್ಮ ನೀಡಲಿ ಯೆಂದು ಹಾರೈಸುವೆ

Anonymous said...

hey nijavagaLu hinddindella nenapaaithu nange kavana odtha odtha
thumba chennagidhe.