Tuesday 20 May, 2008

ಅಮ್ಮನಿಗೆ


[ಬಾನುಲಿ.ಕಾಂ ನಲ್ಲಿ ಪ್ರಕಟಿತ]



ಬಾಯಿ ತೆರೆದು ಕೂತೆನಮ್ಮ
ಮಮ್ಮು ತಿನಿಸು ಬಾರಮ್ಮ

ಬಾನ ಕಡೆ ತೋರಿಸಮ್ಮ

ಬಂದಿಹನು ಚಂದಮಾಮ

ಅವನಿಗೆ ಉಣಿಸದಿರಮ್ಮ

ತಿಂದು ಗುಂಡಗಾಗಿಹನಮ್ಮ


ತಿನ್ನಲು ಹಠವ ಮಾಡೆನಮ್ಮ
ನಿನ್ನ ಮುದ್ದು ಕಂದಮ್ಮ....ನಾನಮ್ಮ
ಆಡಲು ಹಠವ ಮಾಡದಿರಮ್ಮ
ನನ್ನ ಮುದ್ದು ಅಮ್ಮ........ನೀನಮ್ಮ

ರಾಮ, ಕೃಷ್ಣರ ಕಥೆಯ ಹೇಳಮ್ಮ
ಪಂಚತಂತ್ರದ ನೀತಿ ಬೋಧಿಸಮ್ಮ
ಕಾಗಕ್ಕ, ಗುಬ್ಬಕ್ಕರ ಸ್ನೇಹ ತಿಳಿಸಮ್ಮ
ನನ್ನ ಒಳ್ಳೆ ಪ್ರಜೆಯಾಗಿಸಮ್ಮ

ನನ್ನ ಬೆಳವಣಿಗೆಗೆ ನೀನು ಅಗತ್ಯ
ನಿನ್ನ ಜೊತೆಯಲಿ ನಾನಿರುವೆ ನಿತ್ಯ!
ಈ ಮಾತು ನಾನಿರುವವರೆಗು ಸತ್ಯ
ಇದಕ್ಕೆ ಸಾಕ್ಷಿಗಳೇ ಚಂದ್ರಾದಿತ್ಯ!

6 ಜನ ಸ್ಪಂದಿಸಿರುವರು:

ತೇಜಸ್ವಿನಿ ಹೆಗಡೆ said...

ಬಾಲ ಭಾಷೆಯಲ್ಲಿರುವ ಕವನ ಹಾಡಿಕೊಳ್ಳುವಂತಿದೆ. ಚೆನ್ನಾಗಿದೆ. ನನ್ನ ಮುದ್ದು ಕಂದನಿಗೆ ಹೇಳಿಕೊಡುವೆ ;-)

maddy said...

thaayi maguvina bandhavyavannu
ee salugalau chennagive bimbisuttave...

bahala chennagide jay..

Anonymous said...

:-)
:-)
:-)
:-)

Lakshmi Shashidhar Chaitanya said...

rama krishnara kathe hELamma...aa stanza sakhath chennagide...eegin makkaLige ivella gotte irolla nodi...baay tegdre batman..harry potter...avra appananthavaru iddare nam kathegaLalli...heLor yaaru illa...kavana ultimate aagide ri jayashankar...very well written !!!

Anonymous said...

ಕಮೆಂಟಾತೀತ....
ಆದರೂ ಇದು ನೆನಪಿಗೆ ಬಂತು ಅಮ್ಮನಿಗಿಂತ ಇನೋರ್ವ ಬಂಧು ಎಂದಿಗೂ ಸಿಗಲಾರರು.

ಚಿತ್ರಾ ಸಂತೋಷ್ said...

ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು....(:)
-ಚಿತ್ರಾ