Wednesday 6 August, 2008

ನಾನಿದ್ದೆ ಆನೆಯಂತೆ!

ಆನೆಯು ಮರಿಯಾಗಿರುವಾಗಲೇ ಕಾಲಿಗೆ ಸರಪಳಿ ಕಟ್ಟಿರ್ತಾರಂತೆ.. ಎಲ್ಲೂ ಹೋಗಬಾರದು ಅಂತ. ಅದು ವಯಸ್ಸಾದ್ರೂ ಅಷ್ಟೆ ತನಗೆ ಅದನ್ನು ಬಿಡಿಸಲು ಆಗುವುದಿಲ್ಲ ಅಂತ ಕಲ್ಪನೆಯಲ್ಲಿರುತ್ತೆಯಂತೆ. ನಾನು ಅಷ್ಟೆ ಹಾಗೆ ಇದ್ದೆ.

ಏನು ವಿಷಯ ಅಂದ್ರೆ, ನಮ್ಮ ಕಛೇರಿಯಲ್ಲಿ ಬ್ಲಾಗುಗಳನ್ನು ಬ್ಲಾಕ್ ಮಾಡಿದ್ದರು. ಬಹಳ ದಿನಗಳಿಂದ ದಟ್ಸ್ಕನ್ನಡ , ಬಾನುಲಿ.ಕಾಂ ಆದಿಯಾಗಿ ಯಾವೊಂದು ವೆಬ್ ಸೈಟು ಓಪನ್ ಆಗುತ್ತಿರಲಿಲ್ಲ. ಇಂದು ಕೆಲಸವೂ ಹೆಚ್ಚಿರಲಿಲ್ಲ. ಅದಕ್ಕೆ ಹಾಗೆ ಸುಮ್ಮನೆ ಕವನ ಬರೆದೆ. ಏಕೋ ದಟ್ಸ್ಕನ್ನಡ ಓಪನ್ ಆಯ್ತು. ಈಗ ಬ್ಲಾಗನ್ನು ಓಪನ್ ಮಾಡಿದೆ. ನನ್ನ ಆಶ್ಚರ್ಯಕ್ಕೆ ಅದೂ ಓಪನ್ ಆಗಿದೆ. ಆನೆ ವಿಚಾರ ನನ್ನ ಜ್ಞಾಪಕಕ್ಕೆ ಬಂದು ನಾನು ಬರೆದೆ ಅಷ್ಟೆ.

ಮಾನವರೇ ಹಾಗೆ ಎರಡು ಮೂರು ಬಾರಿ ಪ್ರಯತ್ನ ಮಾಡಿದಾಗ ಒಂದು ಕೆಲಸ ಆಗದಿದ್ದಲ್ಲಿ ಮತ್ತೆ ಅದರ ಪ್ರಯತ್ನವನ್ನೇ ಮಾಡುವುದಿಲ್ಲ. ಇದಕ್ಕೆ ಹೊಂದುವಂತೆ ಶಾಲೆದಿನಗಳಲ್ಲಿದ್ದ ಜೇಡ ಹಾಗು ಸೋತ ರಾಜನ ಕಥೆ ನೆನಪಾಗದೆ ಇರುವುದಿಲ್ಲ. ಆದರೆ ನಾನಿಲ್ಲ ಪ್ರತಿದಿನ ಸೈಟು ಓಪನ್ ಮಾಡಲು ಪ್ರಯತ್ನ ಪಟ್ಟರೆ ಕಂಪನಿಯ ನಿಯಮದಂತೆ ಎಲ್ಲಾ ಬ್ಲಾಕಾಗಿರುತ್ತೆ!ಇಂದೇಕೋ ಓಪನ್ ಆಗಿದೆ. ಮುಂದೆಯೂ ಹೀಗೆ ಓಪನ್ ಆದರೆ ಸಂತೋಷ ಇಲ್ಲದಿದ್ದರೂ ಸಂತೋಷ!

3 ಜನ ಸ್ಪಂದಿಸಿರುವರು:

ತೇಜಸ್ವಿನಿ ಹೆಗಡೆ said...

ಶಂಕರ್,

ಬರಹ ಓದಿ ನಗುಬಂದರೂ ಅದರೊಳಗಿನ ಸತ್ಯತೆಗೆ ಮನಸ್ಸು ಹೌದೆಂದಿತು. ನಿಜ.. ಆಗದು ಎಂದು.. ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ. .. ಪ್ರಯತ್ನಕ್ಕೆ ಮಾತ್ರ ಫಲ ತಾನೇ?:)

Sudi said...

hmmmm hope ಆನೆ ಸರಪಳಿ ಬಿಡಿಸಲು successful aagutte all time ;)

Lakshmi Shashidhar Chaitanya said...

are wah ! office inda update maadiddeera ? very nice ! try try try again till you succeed nenpaaytu ! keep trying and updating ! :-)