Thursday 2 October, 2008

ಉಲ್ಟಾ ಪಲ್ಟಾ!

ಹೊಸ ಪ್ರಾಜೆಕ್ಟ್ ಸೇರಿದ ಮೇಲೆ, ಬಿಡುವು ಅಂದರೆ ಏನು ಅನ್ನೋದನ್ನೆ ಮರೆತಿದ್ದೆ. ಒಂದು ದಿನ ಸ್ವಲ್ಪ ಬಿಡುವು ಸಿಕ್ಕಿತು. ಆಗ ಬರೆದದ್ದು

ಬಿಡುವು:

ನಿರಂತರದ ಕೆಲಸದ ಮಧ್ಯೆ
ಉಸಿರಾಟಕ್ಕೆ ಸಿಗುವ

ಅಮೂಲ್ಯ ಕ್ಷಣ!


ಇದು ಯಾವಾಗ ಬರೆದನೋ ಎಲ್ಲಾ ಉಲ್ಟಾ ಪಲ್ಟಾ ಆಯ್ತು. ವಿಪರೀತ ಕೆಲಸ. ರಾತ್ರಿ ೧೦.೩೦ ಕ್ಕೆ ಮನೆ ಸೇರುತ್ತಾಯಿದ್ದೆ. ಸ್ವಲ್ಪ ದಿನಗಳಾದ ಮೇಲೆ, ಮತ್ತೆ ಬಿಡುವು ಆಗ ಬರೆದದ್ದು:

ಹಾಗೆ ಕುಳಿತಿರುವೆ
ಏನು ಮಾಡಲಿ?
ಏನಿದೆ ಮಾಡಲು?
ಹಾಗೆ ಬರೆಯುತ್ತಿರುವೆ

ಮೂರು ದಿನಗಳೇ ಆದವು
ಹೆಚ್ಚಿಲ್ಲ ಕೆಲಸ
ಬ್ಲಾಗುಗಳೆಲ್ಲಾ ಬ್ಲಾಕು
ನನ್ನ ಟೈಂಪಾಸಿಗೆ ಬ್ರೇಕು!

ಕೆಲಸವಿಲ್ಲ ಕಚೇರಿಯಲ್ಲಿ
ಎಲ್ಲೋ ಏನೋ ವಿಘ್ನ!
ಸ್ಫೂರ್ತಿಯಿದೆ ಮನದಲ್ಲಿ
ಕವನಗಳಿಗೇಕೆ ವಿಘ್ನ?

ಹಾಗೆ ಕುಳಿತಿರುವಂತೆ ನನ್ನಿಂದಾಗದು
ಎದ್ದು ಮನೆಗೆ ಬರುವಂತಿಲ್ಲ
ವಿಘ್ನ ಬಗೆ ಹರಿಯುವವರೆಗೂ
ಕಾದು ಕುಳಿತಿರ ಬೇಕು......
ಹಾಗೆ ಕುಳಿತಿರ ಬೇಕು.....

ಇದನ್ನು ಬರೆದ ಮೇಲೆ ಆಕಸ್ಮಿಕವಾಗಿ ಬ್ಲಾಗ್ ಓಪನ್ ಆಯ್ತು. ಆಗ ಬರೆದದ್ದು ನಾನಿದ್ದೆ ಆನೆಯಂತೆ. ಇದಾದ ಮೇಲೆ ಮತ್ತೆ ಉಲ್ಟಾ ಪಲ್ಟಾ! ಈಗ ಏನು ಹೇಳುತ್ತೇನೆ ಅಂದರೆ....

ಹಾಗೆ ಕುಳಿತಿರಲಾರೆ
ಏನಾದರು ಮಾಡ ಬೇಕು
ಏನೇನೋ ಇದೆ ಮಾಡಲು
ಹಾಗೆ ಮಾಡುತ್ತಿರಬೇಕು.

ಬಹಳ ದಿನಗಳೇ ಆದವು
ಎಂಟಕ್ಕೆ ಮನೆಗೆ ಹೋಗಿ
ಬ್ಲಾಗುಗಳಿಗೆ ಬ್ರೇಕು
ಈ ಕೆಲಸ ಸಾಕಪ್ಪಾ ಸಾಕು!

ಬಿಡುವಿಲ್ಲ ಕಚೇರಿಯಲ್ಲಿ
ಬಿಡುವಿಗೇ ವಿಘ್ನ!
ಸ್ಫೂರ್ತಿಯಿದ್ದರೂ ಮನದಲ್ಲಿ
ಕವನಗಳಿಗೆ ವಿಘ್ನ!

ಹಾಗಾಗಿ ತೀರ್ಮಾನ ಮಾಡಿಬಿಟ್ಟೆ... ಕಚೇರಿಯಲ್ಲಿ ಬಿಡುವು ಸಿಕ್ಕರೂ ಕವನಗಳನ್ನು ಬರೆಯೋದಿಲ್ಲ...

7 ಜನ ಸ್ಪಂದಿಸಿರುವರು:

Parisarapremi said...

ಒಳ್ಳೇ ಬ್ರೇಕು..

ಅಲ್ಲಾ ರೀ, ಬ್ಲಾಗುಗಳಿಗೆ ಅವಕಾಶ ಇಲ್ಲ ಅಂದ್ರೆ ಕವನ ಬರೆಯೋಕೆ ಏನು ಅಂತ!! ಪೆನ್ನು ಪೇಪರಿಗೂ ತಡೆ ಹಾಕ್ತಾರಾ ಆಫೀಸಿನಲ್ಲಿ?

ಅಂತರ್ವಾಣಿ said...

ಅರುಣ್,
ಪೆನ್ನು ಪೇಪರ್ರಿಗೆ ತಡೆಯಿಲ್ಲ. ಆದರೆ ಯೋಚನೆ ಮಾಡೋಕೆ ಸಮಯ ಕೊಡೋದಿಲ್ಲ ಅಷ್ಟೊಂದು ಕೆಲಸ ಕೊಡ್ತಾರೆ.. :(

ತೇಜಸ್ವಿನಿ ಹೆಗಡೆ said...

:) Good one!

sunaath said...

ಕಾಲ ಬರತೈತೆ, ಒಳ್ಳೇ ಕಾಲ ಬರತೈತೆ.

Anonymous said...

hehhe nimma kelasada othhada thumbaane chennagide alva.......... hehe
vibbinnavAgide ultapalta:)

shivu.k said...

ಉಸಿರಾಟಕ್ಕೆ ಸಿಕ್ಕ ಅಮೂಲ್ಯ ಕ್ಷಣ!
ತುಂಬಾ ಚೆನ್ನಾಗಿದೆ ಈ ಸಾಲು... ನಿಜಕ್ಕೂ ಸತ್ಯ ಈ ಬೆಂಗಳೂರಲ್ಲಿ. ಕವನ ಚೆನ್ನಾಗಿದೆ.

ನಾನು ಈ ಬ್ಲಾಗ್ ಲೋಕಕ್ಕೆ ಹೊಸ ಸದಸ್ಯ. ನೀವೊಮ್ಮೆ ನನ್ನ ಬ್ಲಾಗಿನೊಳಗೆ ಬನ್ನಿ. ಅಲ್ಲಿ ನನ್ನ ಛಾಯಾಚಿತ್ರಗಳು ಹಾಗೂ ಅದರ ಬಗೆಗಿನ ಲೇಖನಗಳು ನಿಮಗೂ ಇಷ್ಟವಾಗಬಹುದು. ನನ್ನ ಬ್ಲಾಗ್ ವಿಳಾಸ:
http://chaayakannadi.blogspot.com

maddy said...

oh atleast biduvu sikkaga adru baritiralla nivu..
adu nijakku olle vichara....

nange biduvu sikkaga spoorti sigalla!
adu nan grahachara!

olle kavanagalu jay
Madhu