Sunday 7 December, 2008

ಕಲ್ಲಿಗೊಂದು ಕೊಕ್ಕರೆ

ನಮ್ಮ ಮನೆಯ ಎದುರು ಇರುವ ಕೊಳಕು ನೀರಿನಿಂದಾದ ಕೊಳದಲ್ಲಿ ಈ ಮಿತ್ರರು ಸಂಸಾರ ಹೂಡಿದ್ದಾರೆ. (ಹಿಂದೆ ಇದೇ ಕೊಳದಲ್ಲಿ ಕಪ್ಪೆಗಳು ಇದ್ದವು.) ಅವರ ಮಾತುಕತೆ ಅವರಿಂದಲೇ ಕೇಳಿ.


[ ನಾವೆಲ್ಲಾ ಶಂಕ್ರಣ್ಣನ ಮನೆ ಎದುರು ಇದ್ದೀವಿ. ನೀವೆಲ್ಲಾ ನೋಡಲು ಬನ್ನಿ ]



[ಹಾರ ಬೇಡಿ... ಇರಿ ಫೋಟೋ ತೆಗಿತಾನಂತೆ..]

[ನಮ್ಮ ಚಿತ್ರಾನೆ ತೆಗಿ...ಅವರಿಗಿಲ್ಲ ಅದೃಷ್ಟ!]


[ನೀವು ಹಾರಿಬಿಟ್ರಾ? ನಿಮಗೂ ಇಲ್ಲ ಅದೃಷ್ಟ!]

[ನನ್ನ ಫೋಟೋನೆ ತೆಗೆ. ಚೆನ್ನಾಗಿ ಪೋಸ್ ಕೊಡುತ್ತಾಯಿದ್ದೀನಾ...?]

[ಹಾಯ್ ಶಂಕ್ರಣ್ಣ.. ನಾವಿಲ್ಲಿದ್ದೀವಿ... ತೆಗೆ... ದೂರ ಆದರೂ ಪರ್ವಾಗಿಲ್ಲ...ಹಸಿರಿನ ಮಧ್ಯೆ ಬಿಳಿ ಜೀವಿಗಳು ನಾವು...]


[ಅಯ್ಯೋ! ಎಷ್ಟು ಹೇಳಿದರೂ ಕೇಳೋದಿಲ್ವಲ್ಲಾ ನೀವುಗಳು...ಬನ್ನಿ Group ಫೋಟೋ ತೆಗೆಸಿಕೊಳ್ಳೋಣ....]

[ಸಾಲಾಗಿ ಕೂತಿದ್ದೀವಿ.. ಈಗ ತೆಗೆ Group ಫೋಟೋ.]

ವಿ.ಸೂ: ಫೋಟೋಗ್ರಾಫಿ ಒಂದು ಹವ್ಯಾಸವಷ್ಟೇ.

10 ಜನ ಸ್ಪಂದಿಸಿರುವರು:

shivu.k said...

ಶಂಕ್ರಣ್ಣ ನೀನು ಬಲು ಚಲೋ ಕ್ಯಾಪ್ಷನ್ ಕೊಟ್ಟಿದ್ದೀರಲ್ಲಣ್ಣ. ನಿಮ್ಮ ಶೀರ್ಷಿಕೆ ಚೆನ್ನಾಗಿದೆ. ಮುಂದುವರಿಸಿ.

ಅಂತರ್ವಾಣಿ said...

ಶಿವಣ್ಣ,
ವಂದನಗಳು.

ಮುಂದೆ ತೆಗೆದಾಗಲೆಲ್ಲಾ ಪೋಸ್ಟ್ ಮಾಡುತ್ತೇನೆ

Harisha - ಹರೀಶ said...

ಪರ್ವಾಗಿಲ್ವೆ! ಬೆಂಗಳೂರಲ್ಲಿ ಕಾಗೆ-ಗೂಬೆ ಬಿಟ್ರೆ ಬೇರೆ ಪಕ್ಷಿಗಳೇ ಇಲ್ಲ ಅಂತ ಅಂದ್ಕೊಂಡಿದ್ದೆ.. :-)

Ittigecement said...

ಅಂತರ್ವಾಣಿ....

ನೀವು ಆ ಸಂದರ್ಭವನ್ನು ಖುಷಿಯಾಗಿ ಅನುಭವಿಸಿದ್ದು..ನಿಮ್ಮ ಶಿರ್ಷಿಕೆಯಿಂದ ಗೊತ್ತಾಗುತ್ತದೆ...
ಸ್ವಲ್ಪ ಕ್ಲೋಸ್-ಅಪ್ ಇದ್ದರೆ ಇನ್ನೂ ಮಜಾ ಬರ್ತಿತ್ತು...
ಎಲ್ಲಿದೆ ಅಷ್ಟೊಂದು ಕೊಕ್ಕರೆಗಳು..ನನ್ನ ಕಣ್ಣಿಗೆ ಬಿದ್ದಿಲ್ಲವಲ್ಲಾ...
ನಾನು ದಿನಾಲು ಬರ್ತೀನಿ ನಿಮ್ಮ "ಸಿಂಗಾಪುರ" ಕ್ಕೆ....!!

ನಿಮ್ಮ ಬ್ಲೊಗ್ ವೈವಿದ್ಯಮಯವಾಗಿದೆ...
ಧನ್ಯವಾದಗಳು...

ತೇಜಸ್ವಿನಿ ಹೆಗಡೆ said...

parisarapremi :)

ಅಂತರ್ವಾಣಿ said...

maa,
avella cute anthane haakiddu...

ambi,
nam manege baa ivannu live aagi torusteeni free of cost... :)

prakaashanna,
singapura layout hattira illa.. nam mane opposite ide ivu.. aa koLaku neenira koLa batti hOdare.. ivu haara bahudEno... :(

teju akka,
vaMdanegaLu

sunaath said...

ಜಯಶಂಕರ,
ಕೊಳಚೆಯಲ್ಲಿ ಕೊಕ್ಕರೆ ಚೆನ್ನಾಗಿದೆ.

ಅಂತರ್ವಾಣಿ said...

ಸುನಾಥಂಕಲ್
ವಂದನೆಗಳು.

ಸುಧೇಶ್ ಶೆಟ್ಟಿ said...

ಚೆನ್ನಾಗಿದೆ ರೀ ಬೆ೦ಗಳೂರಿನ ಕೊಕ್ಕರೆಗಳು. ನಮ್ಮ ಹಳ್ಳಿಯಲ್ಲಿ ಇವು ತು೦ಬಾ ಸಾಮಾನ್ಯ. ಆದರೆ ಬೆ೦ಗಳೂರಿನಲ್ಲಿ ಇವನ್ನು ನೋಡಿದ ನೀವೇ ಅದ್ರಷ್ಟವ೦ತರು.

ಕ್ಯಾಪ್ಶನ್ಸ್ ಚೆನ್ನಾಗಿದೆ.

ಅಂತರ್ವಾಣಿ said...

ಸುಧೇಶ್,
ವಂದನೆಗಳು. ಅವುಗಳನ್ನು ನೋಡಿದಾಗ ನನಗೆ ಆ ಕ್ಯಾಪ್ಷನ್ ಹೊಳೆಯಿತು..:)