Friday 19 December, 2008

ನೆಲದ ಮೇಲೆ ಕಾಮನಬಿಲ್ಲು


ಈ ಚಿತ್ರಕ್ಕೆ ಶ್ರೀ ಶಿವು ಅವರಿಗೆ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. "ನೆಲದ ಮೇಲೆ ಕಾಮನಬಿಲ್ಲು" ಶೀರ್ಷಿಕೆ ಕೂಡ ಶಿವು ಅವರದ್ದೇ. ಈ ಚಿತ್ರಕ್ಕೆ ಒಂದು ಕವನ ಬರೆಯ ಬೇಕೆಂಬ ಆಸೆಯಾಗಿ ಅವರಲ್ಲಿ ಕೇಳಿಕೊಂಡಾಗ ನನಗೆ ಚಿತ್ರ ಕಳುಹಿಸಿಕೊಟ್ಟಿದ್ದಕ್ಕೆ ಅವರಿಗೆ ವಂದಿಸುತ್ತೇನೆ. ಅವರಿಗೆ ಈ ಕವನದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.



ಏನೀ ನೀರಿನಾಟ ? ಏನೀ ಪ್ರಕೃತಿ ಮಾಟ?
ಏನು ಸೋಜಿಗವೀ ಒಡನಾಟ?

ಕತ್ತಲು ಬೆಳಕ ನಡುವೆ
ಕಣ್ಣ ಹಾಯಿಸಿದಾಗ ಮೋಜು
ಸುತ್ತಲು ಹರಡಿಹ ಹನಿಗಳ
ಸೆರೆ ಹಿಡಿದಿದೆ ಗಾಜು!

ತುಂತುರಿನಾಟದಲ್ಲಿ ಮೂಡಿದೆ
ಅಂಬರದಲ್ಲಿ ಕಾಮನಬಿಲ್ಲು!
ಮಕ್ಕಳಾಟದಲ್ಲಿ ಮೂಡಿದೆ
ನೆಲದ ಮೇಲೆ ಕಾಮನಬಿಲ್ಲು!

ಛಲವಿದ್ದರೆ ಸಾಕು ನಮ್ಮಲ್ಲಿ
ಸಾಧಿಸ ಬಹುದು ಏನನ್ನಾದರೂ
ಊಹಿಸಿದ್ದರೇ ಮಕ್ಕಳು ಮೊದಲು
ಮೂಡಿಸವೆವು ನೆಲದ ಮೇಲೆ ಕಾಮನಬಿಲ್ಲು!

15 ಜನ ಸ್ಪಂದಿಸಿರುವರು:

Ittigecement said...

ಅಂತರ್ವಾಣಿಯವರೆ....

ಶಿವು ಅವರ ಫೋಟೊ ಚಂದವೊ..
ನಿಮ್ಮ ಕವನ ಅಂದವೊ...
ಗೊಂಂದಲ..ಗೊಂದಲವೊ....
ಇಬ್ಬರ ಕೆಲಸಕ್ಕೂ ಹೋಲಿಕೆ ಬೇಡವೊ...
ಎರಡೂ ಮನಸ್ಸಿಗಾನಂದವೊ.......

ಇಬ್ಬರಿಗೂ ಅಭಿನಂದನೆಗಳು..!!

ಅಂತರ್ವಾಣಿ said...

ಪ್ರಕಾಶಂಕಲ್,
ವಂದನೆಗಳು.

ನಿಮ್ಮ ನುಡಿಗಳು ಅಂದವು :)

sunaath said...

ಜಯಶಂಕರ,
ಶಿವು ಅವರ ಕಾಮನಬಿಲ್ಲು ತೊರಿಸಿದ್ದಕ್ಕಾಗಿ ಧನ್ಯವಾದಗಳು.
ಅಷ್ಟೇ ಚಂದದ ಕವಿತೆಗಾಗಿ ಅಭಿನಂದನೆಗಳು.

shivu.k said...

ಜಯಶಂಕರ್,. ನೀವು ಒಂದು ಒಳ್ಳೆಯ ಕವನವನ್ನು ಬರೆದು ಚಿತ್ರದ ಜೀವನವನ್ನು ಸಾರ್ಥಕತೆಗೊಳಿಸಿದ್ದೀರಿ..ಥ್ಯಾಂಕ್ಸ್.

ತೇಜಸ್ವಿನಿ ಹೆಗಡೆ said...

ಶಂಕರ್,

ಮೊದಲು ಶಿವು ಅವರಿಗೆ ಹಾರ್ದಿಕ ಅಭಿನಂದನೆಗಳು. ಅದ್ಭುತ ಛಾಯಾಗ್ರಹಣ! ಎರಡು ಮಾತಿಲ್ಲ. ಚಿತ್ರಕ್ಕೆ ಸಂಪೂರ್ಣ ಮನಸೋತೆ. ಆಕರ್ಷಕ ಶೀರ್ಷಿಕೆ ಕೂಡ. ಇಂತಹ ಅಪೂರ್ವ ಚಿತ್ರವನ್ನು ನಮಗೆ ನೋಡಲು ಕೊಟ್ಟಿದ್ದಕ್ಕೆ ಶಿವು ಅವರಿಗೆ ಧನ್ಯವಾದಗಳು.

ಇನ್ನು ಕವನ. ಚಿತ್ರಕ್ಕೆ ಪುಟವಿಟ್ಟಂತಿದೆ ಕವನ. ಸರಳ, ಸುಂದರವಾಗಿದೆ. ಮತ್ತಷ್ಟು ಕವನಗಳು ಅಂತರ್ವಾಣಿಯಿಂದ ಹೊರಬರುವಂತಾಗಲಿ.

ಅಂತರ್ವಾಣಿ said...

ಸುನಾಥಂಕಲ್,ಶಿವಣ್ಣ, ತೇಜು ಅಕ್ಕ,
ವಂದನೆಗಳು.

ಇಂತಹ ಚಿತ್ರ ನೋಡಿದಾಗಲೆ ಬರೆಯೋ ಮನಸ್ಸಾಗುತ್ತೆ.

ಚಿತ್ರಾಕರ್ಕೇರಾ, ದೋಳ್ಪಾಡಿ said...

ಜನರಿಗೆ ಅರ್ಥವೇ ಆಗದ ಹಾಗೆ ಕವನ ಬರೆಯೋದು ಒಂದು ಕಲೆಯಾದರೆ, ಜನರಿಗೆ ಅರ್ಥವಾಗೋ ರೀತಿ ಸರಳವಾಗಿ ಬರೆಯೋದು ಇನ್ನೊಂದು ಕಲೆ. ನಂಗೆ ಇಂಥ ಸರಳ ಕವನಗಳೇ ಇಷ್ಟವಾಗೋದು. ನಿಮ್ಮ ಕವನ ಚೆನ್ನಾಗಿದೆ ಅನ್ನೋದಕ್ಕಿಂತಲೂ ಅದರಲ್ಲಿ ಶಬ್ಧಗಳ ಜೋಡಣೆ, ಹರಿವು, ಓದಿಸಿಕೊಂಡು ಹೋಗುತ್ತೆ..ಅದು ಇಷ್ಟ ಆಯಿತು. ಇರಲಿ..ಏನೋ ಬರೆದ್ರಿ..ಅದನ್ನು ಚೆನ್ನಾಗಿ ಬರೇತೀರಿ..ಅದೇ ಕಲೆ! ಶುಭವಾಗಲಿ...
ತುಂಬುಪ್ರೀತಿ,
ಚಿತ್ರಾ

ಅಂತರ್ವಾಣಿ said...

ಚಿತ್ರಾ,
ವಂದನೆಗಳು.

ಸುಧೇಶ್ ಶೆಟ್ಟಿ said...

ಶಿವೂ ಅವರ ಚಿತ್ರ ಎಷ್ಟು ಚೆನ್ನಾಗಿದೆ. ಅವರಿಗೆ ಅಭಿನ೦ದನೆಗಳು.
ಜೇ... ಚಿತ್ರದ ಭಾವಕ್ಕೆ ಧಕ್ಕೆಯಾಗದ೦ತೆ ಮೂಡಿರುವ ನಿಮ್ಮ ಕವನ ಚೆನ್ನಾಗಿದೆ. ಚಿತ್ರ ನೋಡಿ ಕವನ ಬರೆಯುವ ಪ್ರಯತ್ನ ತು೦ಬಾ ಇಷ್ಟವಾಯಿತು. ಹೀಗೆ ಬರೆಯುತ್ತಿರಿ.

ಅಂತರ್ವಾಣಿ said...

ನಿಮ್ಮೆಲ್ಲರ ಪ್ರೀತಿಯ ಸೊಲ್ಲು
ಮೂಡಿಸಿತು ಮನದಲ್ಲಿ ಕಾಮನಬಿಲ್ಲು!

Harisha - ಹರೀಶ said...

ಪ್ರಕಾಶಣ್ಣ ಹೇಳಿದಂತೆ.. ಕವನ ಚೆಂದವೋ, ಚಿತ್ರ ಚೆಂದವೋ?.. ಜಯ್ ಕಿ ಜೈ :-)

Lakshmi Shashidhar Chaitanya said...

super photo and an aptly written poem :)

ಅಂತರ್ವಾಣಿ said...

aMbi, maa
vaMdanegaLu

Naveen ಹಳ್ಳಿ ಹುಡುಗ said...

Nimma "Kalligondu Kokkare" ankana tumba chennagide...

ಅಂತರ್ವಾಣಿ said...

naveen avare,
dhanyavaadagaLu