Tuesday 23 December, 2008

ಹಿಡಿ ಪ್ರೀತಿ

ಚಿತ್ರಾರವರ ಬ್ಲಾಗಲ್ಲಿ "ಏನೂ ಬೇಡ.. ಒಂದು ಹಿಡಿ ಪ್ರೀತಿ ಕೊಡ್ತೀರಾ?!" ಲೇಖನ ಓದಿ ಆ ಸಾರಾಂಶವನ್ನೇ ಕವನದಲ್ಲಿ ಬರೆದಿದ್ದೇನೆ. ಇದರ ವಿಚಾರವೆಲ್ಲಾ ಆಕೆಯದ್ದೇ. ಅವರ ಅನುಮತಿಯಿಲ್ಲದೆ ಕವನ ಬರೆದಿದ್ದೆ. ಆಮೇಲೆ ಅವರೇ ತಮ್ಮ ಬ್ಲಾಗಿನಲ್ಲೂ ಈ ಕವನಕ್ಕೆ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು.

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರ ಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ*
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

--
*"ಪ್ರೀತಿಯ ಕಿಡಿಯಿಂದ"- ಇದು ನನ್ನ ಸ್ವಂತದ್ದು.

14 ಜನ ಸ್ಪಂದಿಸಿರುವರು:

Lakshmi Shashidhar Chaitanya said...

super :)ಸಾರಾಂಶ ನ ಚೆನ್ನಾಗಿ ತಿಳಿಸಿದ್ದೀರಾ.

ಅಂತರ್ವಾಣಿ said...

ok ma thnx

shivu.k said...

ಜಯಶಂಕರ್,

ಈ ಕವನ ಮತ್ತು ಫೋಟೊ ನೋಡಿ ನಾನು ಚಿತ್ರಾ ಬ್ಲಾಗಿನಲ್ಲಿ ಥ್ಯಾಂಕ್ಸ್ ಹೇಳಿಯಾಗಿದೆ. ನಾನು ಕೊಟ್ಟ ಥ್ಯಾಂಕ್ಸುಗಳನ್ನು ನೀವು ಅವರ ವ್ಯಾನಿಟಿ ಬ್ಯಾಗಿಗೆ, ಚಿತ್ರ ನಿಮ್ಮ ಕಿಸೆಗೆ ಒಬ್ಬರಿಗೊಬ್ಬರೂ ಬದಲಾಯಿಸಿಕೊಳ್ಳುತ್ತಿದ್ದಿರಲ್ಲ !

ಅಂತರ್ವಾಣಿ said...

ಶಿವಣ್ಣ,
ಇವತ್ತು ನಾವಿಬ್ಬರೂ ಒಪ್ಪಂದಕ್ಕೆ ಬಂದು... ಸಮವಾಗಿ ನಿಮ್ಮ ಥ್ಯಾಂಕ್ಸಗಳನ್ನು ಹಂಚಿಕೊಂಡಿದ್ದೇವೆ. :)

ನಿಮಗೂ ವಂದನೆಗಳು.

Ittigecement said...

ಅಂತರ್ವಾಣಿ....

ಚಿತ್ರಾರವರ ಲೇಖನ ದಷ್ಟೇ..ಸಮರ್ಥವಾಗಿ ಬಂದಿದೆ ನಿಮ್ಮ ಕವನ...

ಈ ಪ್ರೀತಿಗಾಗೆ ಅಲ್ಲವೇ ನಾವೆಲ್ಲ ಪರಿತಪಿಸುವದು...
ಸ್ವಲ್ಪವೇ ಸಿಕ್ಕರೂ ಸಾಕು ಅನ್ನುತ್ತೇವೆ...
ಒಮ್ಮೆ ಸಿಕ್ಕ ಪ್ರೀತಿಯನ್ನು ಭದ್ರವಾಗಿಟ್ಟುಕೊಂಡುಬಿಡಿ..
ಹೋದರೆ ಮತ್ತೆ ಸಿಗುವದು ಅಪರೂಪ...
ಚಂದವಾದ ಕವನಕ್ಕೆ ಅಭಿನಂದನೆಗಳು...

Sushma Sindhu said...

ಹಾಯ್,
ಚೆನ್ನಾಗಿದೆ :)

ಚಿತ್ರಾ ಸಂತೋಷ್ said...

ಕವಿಗಳೇ ..ಕವನ ಬರೆದಿದ್ದಕ್ಕೆ ತುಂಬಾ ಧನ್ಯವಾದಗಳು. ಇನ್ನು ಮುಂದೆ ಬ್ಲಾಗಿನಲ್ಲಿ ಹಾಕಿದ ಚಿತ್ರಕ್ಕೆಲ್ಲ ಕವನ ಬರೆಯಿರಿ. ಚೆನಾಗಿರ್ತವೆ ನಿಮ್ ಕವನ.
@ಶಿವಣ್ಣ ನಾವಿಬ್ರೂ 50:50..ನಿಮ್ಮ ಕೃತಜ್ಷತೆಗಳನ್ನು ಸರಿಯಾಗಿ ಹಂಚಿಕೊಂಡಿದ್ದೀವಿ..ಇನ್ನು ಜಗಳ ಆಡೋಲ್ಲ ಆಯಿತಾ? ಮಂಡೆಬಿಸಿ ಮಾಡ್ಕೋಬೇಡಿ...
-ತುಂಬುಪ್ರೀತಿ,
ಚಿತ್ರಾ

ಅಂತರ್ವಾಣಿ said...

ಪ್ರಕಾಶಣ್ಣ,
ಸರಿಯಿದೆ ನೀವು ಹೇಳಿದ್ದು.

ಸುಷ್ಮಾ,
ವಂದನೆಗಳು

ಚಿತ್ರಾ,
ನಿಮ್ಮ ಬ್ಲಾಗಿನಲ್ಲಿರುವ ಎಲ್ಲಾ ಚಿತ್ರಗಳಿಗೆ ಕವನ ಬರೆಯುವ ಪ್ರಯತ್ನ ಮಾಡುತ್ತೇನೆ.

ತೇಜಸ್ವಿನಿ ಹೆಗಡೆ said...

ಶಂಕರ್,

ಚೆನ್ನಾಗಿದೆ. ಕೊನೆಯ ಸಾಲುಗಳು ತುಂಬಾ ಇಷ್ಟವಾದವು.

ಅಂತರ್ವಾಣಿ said...

thnx tEju akka :)

Harisha - ಹರೀಶ said...

ಹ್ಮ್ಮ್.. ನನ್ನ ಪರೀಕ್ಷೆಗೂ ಇದೆ ಥರ ಪದ್ಯರೂಪದಲ್ಲಿ ಸಾರಾಂಶ ಬರೆದುಕೊಟ್ಟಿದ್ದಿದ್ದರೆ.. :-(

ಅಂತರ್ವಾಣಿ said...

hari,
ninna pareekSheya bagge doDDa article bari.. adakke kavana roopa koDutteeni :)...

Parisarapremi said...

ಎಲ್ರೂ ಕವನ ಓದಿ ಗದ್ಯದಲ್ಲಿ ಸಾರಾಂಶ ಬರೆದರೆ, ನೀವು ಸೂಪರ್ ಕಣ್ರೀ, ವೈಸ್ ವರ್ಸಾ ನೀವು!! ;-)

ಒಂದು ಸಲಹೆ, ಕವನಗಳಿಗೆ ಚಿತ್ರಗಳನ್ನು ಹಾಕಬೇಡಿ ಅಂತ. ಕವನಗಳು ಓದುಗನ ಮನಸ್ಸಿನ, ಅನುಭವದ ಮತ್ತು ಕಲ್ಪನಾಶಕ್ತಿಯ ವ್ಯಾಪ್ತಿಯಲ್ಲಿರಬೇಕು ಎಂದು ನಾನು ನಂಬಿದ್ದೇನೆ. ಚಿತ್ರ ಹಾಕಿಬಿಟ್ಟರೆ, ಹ್ಯೂಮನ್ ಸೈಕಾಲಜಿ, ನಮ್ಮ ಮನಸ್ಸು ಆ ಚಿತ್ರಕ್ಕೇ ಕೇಂದ್ರೀಕೃತವಾಗುವಂತಾಗುತ್ತೆ. ನೋಡಿ ಯೋಚಿಸಿ.. ಇದೊಂದು ಸಲಹೆಯಷ್ಟೆ.

ಬೈ ದ ವೇ, ಕವನ ಸೊಗಸಾಗಿದೆ.

ಅಂತರ್ವಾಣಿ said...

ಅರುಣ್,
ವಂದನೆಗಳು.

ಕೆಲವೊಂದು ಚಿತ್ರ ನೋಡಿದಾಗ ಸ್ಫೂರ್ತಿ ಪಡೆದು ಅದಕ್ಕೆ ಕವನ ಬರೆದಾಗ ಮಾತ್ರ ನಾನು ಚಿತ್ರ ಬಳಸುತ್ತೇನೆ. [ಅದನ್ನು "ಚಿತ್ರ ಕವನ" ಅಂತ ವಿಭಾಗ ಮಾಡಿದ್ಡೇನೆ.] ಚಿತ್ರ ಬಳಸದಿರುವ ಸಲಹೆ ಕೂಡ ಚೆನ್ನಾಗಿದೆ.