Tuesday 30 December, 2008

ಮೊಬೈಲು ಮರೆತಾಗ...

ಬೆಳಿಗ್ಗೆ ಗಡಿಬಿಡಿಯಲ್ಲಿದ್ದೆ. ಆಫೀಸಿಗೆ ಹೋಗಲು ತಡವಾಗುತ್ತಾಯಿತ್ತು. ಅಮ್ಮ ನನ್ನ ಊಟದ ಡಬ್ಬಿಯನ್ನು ಬ್ಯಾಗಿನೊಳಗೆ ಇಟ್ಟಿದ್ದರು. ತುಂಬಾ ಗಡಿಬಿಡಿಯಲ್ಲಿದ್ದಿದ್ದರಿಂದ ಬ್ಯಾಗನ್ನು ಮರೆತು ಆಫೀಸಿಗೆ ಹೊರಟೆ. ಮಧ್ಯ ದಾರಿಯಲ್ಲಿ ಬ್ಯಾಗು ನನ್ನ ಬಳಿ ಇಲ್ಲವೆಂದು ಅರಿವಿಗೆ ಬಂತಾದರೂ ತಲೆ ಕೆಡೆಸಿಕೊಳ್ಳದೇ ಹೋಗಿ ಆಫೀಸು ಬಸ್ ಹತ್ತಿದೆ.

ಈ ದಿನ ಬಸ್ಸಿನಲ್ಲಿ ಹೊಸ ಮುಖವನ್ನು ನೋಡಿದೆ. ಅವರು ನನ್ನ ಪಕ್ಕದಲ್ಲೇ ಕುಳಿತಿದ್ದರು. ನಾನು ಎಂದಿನಂತೆ ಮೌನ ರಾಜ! ಸ್ವಲ್ಪ ಹೊತ್ತಿನಲ್ಲೇ ಯಾಕೋ ನನ್ನ ಮೊಬೈಲಿಗಾಗೆ ಜೇಬಿನೊಳಗೆ ಹುಡುಕಿದೆ. ಆದರೆ ಅದು ಸಿಗಲಿಲ್ಲ. ನಂತರ ಈ ವ್ಯಕ್ತಿ ತಮ್ಮ ಮೊಬೈಲನ್ನು ಕೊಟ್ಟು ಕರೆ ಮಾಡು.. ಇಲ್ಲೇ ಬಿದ್ದಿದ್ದರೆ ಸಿಗುತ್ತದೆ ಎಂದರು. ನನಗೆ ಅವರ SIMಯಿಂದ ಕರೆ ಮಾಡಲು ಮುಜುಗರವಾಯಿತು. ಅದಕ್ಕೆ ನನ್ನ Walletಯಿಂದ ನನ್ನ "SIM" Card ತೆಗೆದೆ! ನಂತರ ಅದನ್ನು ಆತನ ಫೋನಿನೊಳಗೆ ಹಾಕಿ, ನನ್ನ ನಂಬರಿಗೆ ಕರೆ ಮಾಡಿದೆ. ಅದನ್ನು ಅಮ್ಮ ಸ್ವೀಕರಿಸಿದರು. "ಮಗು, ಮನೆಯಲ್ಲೇ ಮೊಬೈಲ್ ಹಾಗು ಬ್ಯಾಗು ಬಿಟ್ಟೀದ್ದೀಯಲ್ಲಾ?, ಊಟದ ಡಬ್ಬಿ ಕೂಡ ಇಲ್ಲೇ ಇದೆ" ಅಂದರು. ಇರಲಿ ಅಮ್ಮ.. ನಾನು ಊಟ ಆಫೀಸಿನಲ್ಲೇ ಮಾಡುತ್ತೇನೆ, ಸದ್ಯ ಫೋನು ಮನೆಯಲ್ಲೇ ಇದೆ ಅಲ್ವ ಸಾಕು ಎಂದೆ. ನನ್ನ ಫೋನು ಮನೆಯಲ್ಲಿ ಜೋಪಾನವಾಗಿದೆ ಎಂದು ಸಂತಸ ಪಟ್ಟೆ.

ಆತನಿಗೆ ಧನ್ಯವಾದ ಹೇಳಿ, ಫೋನು ಹಿಂದಿರುಗಿಸಲು ಹೋದಾಗ, "ಇದು ನಿಮ್ಮ ಬಳಿಯೇ ಇರಲಿ, ನಿಮ್ಮ ಫೋನು ನಿಮ್ಮ ಕೈಗೆ ಬಂದ ಮೇಲೆ ನನಗೆ ಹಿಂದಿರುಗಿಸಿ" ಎಂದರು. ಇಂತಹ ಸದ್ಗುಣವುಳ್ಳವರೂ ಇದ್ದಾರಲ್ಲಾ ನಮ್ಮ ಪ್ರಪಂಚದಲ್ಲಿ ಎಂದು ಅನಿಸಿತು. ನಂತರ ಆತ ಮತ್ತೆ ಸಿಗದೇ ಹೋದರೆ ಫೋನು ಹಿಂದಿರುಗಿಸಲು ಅಸಾಧ್ಯವಾಗಬಹುದೆಂದು, ನನ್ನ ಪಕ್ಕದಲ್ಲೇ ಇದ್ದ ನನ್ನ ಬ್ಯಾಗಿನಿಂದ ಪುಸ್ತಕ ತೆಗೆದು ಆತನ ವಿ-ಅಂಚೆ ವಿಳಾಸ ಬರೆಸಿಕೊಂಡೆ.

ಇದೆಲ್ಲಾ ಆದ ಮೇಲೆ ಒಂದು ದಿನ ಆತ ನನಗೆ ಸಿಕ್ಕಿದ. ಅವನ ಫೋನು ಹಿಂದಿರುಗಿಸಲು ಹೋದಾಗ ಏನಾಯಿತೋ ಗೊತ್ತಾಗಲಿಲ್ಲ... ಅಮ್ಮ ಬಂದು "ಮಗು, ಎದ್ದೇಳು... ೬ ಗಂಟೆ ಆಯ್ತು"ಅಂದರು.

---
ಎರಡು ದಿನಗಳ ನಂತರ
---

ನಾನು ಯಥಾ ಪ್ರಕಾರ ಮೊಬೈಲು ಮರೆತು ಆಫೀಸಿಗೆ ಹೋಗಿದ್ದೆ. ಮೊಬೈಲು ಶೋಕೇಸಿನಲ್ಲಿ ಇದ್ದದ್ದು ಗಮನಿಸಿದ ಅಮ್ಮ, "ಅಯ್ಯೋ! ಗೂಬೆ... ಫೋನು ಮರೆತು ಹೋಗಿದ್ದಾನಲ್ಲ..." ಎಂದು ಹೇಳಿ, ಫೋನು ತೆಗೆದು ಕೊಂಡು ನನಗೆ ಫೋನು ಮಾಡಿದರು. ನನ್ನ ಫೋನು ರಿಂಗ ಕೂಡ ಆಯ್ತು ಆದರೆ ನಾನು ಸ್ವೀಕರಿಸಲಿಲ್ಲ. ಯಾಕೆ ಸ್ವೀಕರಿಸುತ್ತಿಲ್ಲ ಎಂದು ಯೋಚನೆ ಮಾಡುತ್ತಾಯಿದ್ದರಂತೆ ಎಚ್ಚರವಾದ ಮೇಲೆ ತಿಳಿಯಿತು ಅದು ಫೋನಿನ ರಿಂಗಿಂಗ್ ಅಲ್ಲ..... ನಮ್ಮ ಮನೆ Alarm ಕೂಗುತ್ತಿತ್ತು!


ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮ ಮೊಗದಲ್ಲಿ ನಗು ಸದಾ ಇರಲಿ

14 ಜನ ಸ್ಪಂದಿಸಿರುವರು:

Ittigecement said...

ಅಂತರ್ವಾಣಿ...
ಬಹಳ ಚಂದವಾಗಿ ಬರೆದಿದ್ದೀರಿ..
ಎರ್ಡು ಕನಸುಗಳ ಭಾವರ್ಥಗಳೂ ಚೆನ್ನಾಗಿವೆ...

ನಿಮಗೂ ಹೊಸ ವರುಷ..
ಹೊಸ ಕನಸು.. ಹೊಸ ಆಸೆ...
ಎಲ್ಲವೂ ನನಸಾಗಲಿ..

ಶುಭ ಹಾರೈಸುವೆ...

ಪ್ರಕಾಶಣ್ಣ..

Unknown said...

Nimma mobile mareyo prasanga nijavagi nadediro haghe baredidira..kansalli madida haghe dina oota matte cell phone marethu hogbedi officege :) :)

Hosavarshada hardika shubhashayagalu JS.

sunaath said...

ಜಯಶಂಕರ,
ಮೊಬೈಲ್ ಅವಾಂತರ ಚೆನ್ನಾಗಿದೆ.
ಹೊಸ ವರ್ಷವು ಹರುಷದಾಯಕವಾಗಲಿ.

ಅಂತರ್ವಾಣಿ said...

ಪ್ರಕಾಶಣ್ಣ,
ಕನಸು ನನಸಾಗಲಿ ಅಂತೀರಲ್ಲ... ದಯವಿಟ್ಟು ಬೇಡ.

ಲಿಲ್ಲಿ,
ದಿನ ಅಮ್ಮ ಜ್ಞಾಪಿಸುತ್ತಾರೆ.. ಹಾಗಾಗಿ ಮರೆಯೋದಿಲ್ಲ. ಇದು ನನ್ನ ಮನಸ್ಸಿನಲ್ಲಿ ಇದ್ದಿದ್ದರಿಂದ ಅದೇ ಕನಸಾಗಿ ಅಮ್ಮನಿಗೂ ನನಗೂ ಬಿದ್ದಿದೆ.

ಸುನಾಥಂಕಲ್,
ವಂದನೆಗಳು

Sushma Sindhu said...

ಹಾಯ್,
ಮೊಬೈಲ್ ಕನಸು ಇಂಟರೆಸ್ಟಿಂಗ್ ಆಗಿತ್ತು.
'ಎರಡು ದಿನಗಳ ನ೦ತರ' ಆದಮೇಲೆ ಇರುವುದು ಅದೇ ಕನಸಿನ ಮು೦ದುವರೆದ ಭಾಗವೋ ಅಥವಾ ಎರಡು ದಿನದ ನ೦ತರ ಮತ್ತೆ ಮೂಡಿ ಮು೦ದುವರೆದದ್ದೋ?? ಸ್ವಲ್ಪ ಕಾಂಪ್ಯೂಸ್ ಆಗಿದೆ :)

ತೇಜಸ್ವಿನಿ ಹೆಗಡೆ said...

ಶಂಕರ್,

ಈಗ ಗೊತ್ತಾಯ್ತು ಯಾಕೆ ನೀವು ಸದಾ ಹೇಳ್ತೀರಿ ಸ್ವೀಟ್ ಡ್ರೀಮ್ಸ್ ಹೇಳ್ಬೇಡಿ ಅಂತ!..:) ನಿಮಗೂ ಹಾರ್ದಿಕ ಶುಭಾಶಯಗಳು.

ಅಂತರ್ವಾಣಿ said...

sushma,
adu mundivareda bhaaga alla.. namma ammanige bidda kanasu.. :)

teju akka,
inmEle Sweet Dreams antha wish maaDteera?

Harisha - ಹರೀಶ said...

ಸದಾ ಸವಿಗನಸು ಬೀಳಲಿ!

ಅಂತರ್ವಾಣಿ said...

hari,

inmele wish maaDodu nillsu.. pls..
nennenu vichitravaada kanasaaytu..

shivu.k said...

ಜಯಶಂಕರ್,

ಮೊಬೈಲ್ ಕತೆ ಚೆನ್ನಾಗಿದೆ.[ಕನಸಲ್ಲಿ ಬಂದಿದ್ದು ನಿಜವಾಗಲಿ.[ತಮಾಷೆಗೆ].
ಇನ್ನು ಮುಂದೆಲ್ಲಾ ಸವಿಕನಸು ಬೀಳಲಿ.....
ನಿಮಗೂ ಹೊಸ ವರುಷ..
ಹೊಸ ಕನಸು.. ಹೊಸ ಆಸೆ...
ಎಲ್ಲವೂ ನನಸಾಗಲಿ..

ಶುಭ ಹಾರೈಸುವೆ...

ಚಿತ್ರಾ ಸಂತೋಷ್ said...

ಜಯಶಂಕರ್...ಚೆನ್ನಾಗಿದೆ ಬರಹ.
ಆರಂಭದಲ್ಲಿ ಇದು 'ಕನಸು' ಅಂಥ ಗೊತ್ತಾಗಲ್ಲ. ಹೊಪ ವರುಷದ ಶುಭಾಶಯಗಳು..ಅನುದಿನವೂ ಬದುಕು ಖುಷಿ ಖುಷಿಯಾಗಿರಲಿ.
-ತುಂಬುಪ್ರೀತಿ,
ಚಿತ್ರಾ

ಸುಧೇಶ್ ಶೆಟ್ಟಿ said...

ಮೊಬೈಲ್ ಕನಸುಗಳು ಹೀಗೆ ಬೀಳುತ್ತಿರಲಿ:)

ಅಂತರ್ವಾಣಿ said...

ಶಿವಣ್ಣ, ಚಿತ್ರಾ, ಸುಧೇಶ್,
ವಂದನೆಗಳು.

Lakshmi Shashidhar Chaitanya said...

ಎಂಥಾ ಕನಸು ಏನ್ ಕಥೆ ! ನಿಮಗೂ ಹೊಸ ವರ್ಷದ ಶುಭಾಶಯಗಳು