Wednesday 22 July, 2009

ಗುಬ್ಬಿ ಮರಿ ಕಂಡೆನಮ್ಮ

ಅಂದು ಈ ರೀತಿ ಕೇಳಿದ್ದೆ,

"ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ....

ಪೂರ್ತಿ ಕವನ ಇಲ್ಲಿದೆ.

ಆದರೆ ಇಂದು (ತಿಂಗಳ ಹಿಂದೆ) ಮತ್ತೆ ಗುಬ್ಬಿ ಮರಿಯನ್ನು ಬೆಂಗಳೂರಿನಲ್ಲಿ ಕಂಡೆ! ಆ ಕ್ಷಣಕ್ಕೆ ನನಗಾದ ಆನಂದವನ್ನು ಕವನದ ಮೂಲಕ ಹೇಳಬೇಕೆಂದು, ಆ ಕವನದ ಧಾಟಿಯಲ್ಲೇ ಈ ಕವನವನ್ನು ಬರೆದೆ.

ಗುಬ್ಬಿ ಮರಿ ಕಂಡೆನಮ್ಮ
ಕಣ್ಣಿಗಿಂದು ಹಬ್ಬವಮ್ಮ
ನನ್ನ ನೋಡ ಬೇಕೆಂದು
ಮತ್ತೆ ಹಾರಿ ಬಂತೇನಮ್ಮ?

ನನ್ನ ಊಟ ಸುಲಭವಮ್ಮ
ನಿನ್ನ ಓಟ ನಿಲ್ಲಿಸಮ್ಮ
ಮನೆಯ ಅಂಗಳದಿ ಬಂದ
ಗುಬ್ಬಿ ಮರಿ ತೋರಿಸಮ್ಮ

ಆಟಿಕೆ ಗುಬ್ಬಿ ಏಕಮ್ಮ?
ಹಾರುವ ಗುಬ್ಬಿ ಇದೆಯಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂತಿಹ ಗುಬ್ಬಿ ತೋರಿಸಮ್ಮ

7 ಜನ ಸ್ಪಂದಿಸಿರುವರು:

Sudi said...

nice one dude.. continued nice from the previous one
keep rocking :)

shivu.k said...

ಗುಬ್ಬಿಯನ್ನು ಕಂಡಷ್ಟೆ ಖುಷಿಯಾಯಿತು..

sunaath said...

ಜಯಶಂಕರ,
ಗುಬ್ಬಿಮರಿಯ ನೋಟ ದುರ್ಲಭವಾಗಿರುವ ಈ ಸಂದರ್ಭದಲ್ಲಿ, ನೀವೇ ಪುಣ್ಯವಂತರು. ಆ ಸಮಯದ ನಿಮ್ಮ ಖುಶಿ ಈ ಕವನದಲ್ಲಿ ಚೆನ್ನಾಗಿ ವ್ಯಕ್ತವಾಗಿದೆ.

ಸುಧೇಶ್ ಶೆಟ್ಟಿ said...

nimma more keli gubbi mari haari bandirabeku nimma nodalu:) kavana bareyalu nimage spoorthi needalu:)

Guruprasad said...

ನಮಗೂ ಅಸ್ಟೆ.... ಬೆಂಗಳೂರಿನಲ್ಲಿ ಒಂದು ಗುಬ್ಬಿ ಯನ್ನು ಕಂಡರೆ ಎಷ್ಟು ಕುಶಿ ಆಗುತ್ತೆ.....
ನಿಮ್ಮ ಕವನವನ್ನು ನೋಡಿ... ಮತ್ತೆ ಗುಬ್ಬಿ , ಗುಬ್ಬಿ ಮರಿಗಳು ನಮ್ಮ ಬೆಂಗಳೂರನ್ನು ಬಂದು ಸೇರಿಕೊಳ್ಳಲಿ...
ತುಂಬ ಸಿಂಪಲ್ ಆಗಿ ಚೆನ್ನಾಗಿ ಇದೆ ನಿಮ್ಮ ಕವನ....

ಅಂತರ್ವಾಣಿ said...

ಎಲ್ಲರಿಗೂ ವಂದನೆಗಳು :)

Harisha - ಹರೀಶ said...

ವಾರದ ಕೆಳಗೆ ನಮ್ಮ ಮನೆ ಹತ್ತಿರ ನಾನೂ ಒಂದು ಜೋಡಿ ಗುಬ್ಬಿಗಳನ್ನು ನೋಡಿದೆ... ಆಶ್ಚರ್ಯ, ಸಂತೋಷ ಒಟ್ಟಿಗೇ ಆಯ್ತು :-)