ಎಮ್ಮ ಮನೆಯಂಗಳದಿ
ಬಂದಿತೊಂದು ಪುಟ್ಟ ಜೀವ
ನನ್ನ ಕಾಲ ಪಕ್ಕ ಇದ್ದು,
ಕಾಣದಂತೆ ನಾನಿದ್ದೆ!
ಅದನ್ನು ಕಂಡ ಕ್ಷಣದಲಿ,
ಬಂತು ಮೊಬೈಲು ಕೈಯಲಿ,
ಸೆರೆಹಿಡಿಯುತ ಅದರ ಚಲನ
ಮನಸಿನಲಿ ಮೂಡಿಸಿದೆ ಕವನ
ಶಂಕರನ ಕೊರಳಲ್ಲಿ ಇರದೇ
ಶಂಕರನ ಮನೆ ಅಂಗಳದಲಿ
ಬಂದಿತೊಂದು ಪುಟ್ಟ ಜೀವ
ಸದ್ಯ! ಯಾರಿಗೂ ಕೊಡಲಿಲ್ಲ ನೋವ.
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
12 ಜನ ಸ್ಪಂದಿಸಿರುವರು:
ಅಂತರ್ವಾಣಿಯವರೆ...
ಅಭ್ಯಾಗತರನ್ನು ನೋಡಿ ಗಾಭರಿಯಾಗದೆ ಕೂಲ್ ಆಗಿ ವಿಡಿಯೊ ಮಾಡಿದ್ದೀರಲ್ಲ! ಭೇಷ್!
ವಿಡಿಯೊಕ್ಕೆ ಕವನ ಪೂರಕವಾಗಿದೆ...
ನಾಗರಹಾವಾಗಿತ್ತಾ ಅದು? ಹಾಗಿದ್ದಲ್ಲಿ ತುಂಬಾ ಧೈರ್ಯವಂತರೇ ನೀವು :)
ಹಾವು ಬಂದಾಗಲು ಈ ರೀತಿ ಕವನ ಬರೆಯುತ್ತೀರೆಂದರೆ ನಿಮ್ಮ ದೈರ್ಯ ಮೆಚ್ಚಬೇಕು
ಪ್ರಕಾಶ್ ಅವರೆ,
ಗಾಭರಿಯಾಗುವಂತಹ ವಿಷಯವಲ್ಲ. ಇದಕ್ಕಿಂತಲೂ ದೊಡ್ಡ ಹಾವು ಬಂದಿತ್ತು. ಮನೆಯವರು ಆಚೆ ಹೋಗ ಬೇಡ ಅಂದಿದ್ದರು. ಈ ಮರಿ ಬಂದಾಗ, ಯಾರೂ ಇರಲಿಲ್ಲ. ಅದಕ್ಕೆ ವೀಡಿಯೋ ತೆಗೆದೆ :)
ತೇಜಸ್ವಿನಿ ಅವರೆ,
ನಾಗರಹಾವಾ ಅಂತ ನನಗೂ ಗೊತ್ತಿಲ್ಲ..
ಶಿವು ಅವರೆ,
ಧನ್ಯವಾದಗಳು
ಮನೆಯಲ್ಲಿ ಹಾವಾ?
ಅದೂ ಬೆಂಗಳೂರಲ್ಲಿ ?
ನಂಬುವುದು ಕಷ್ಟ, ಮಾನವರು (!!) ಕಾಣುವುದೇ ಕಷ್ಟ, ಹಾವು ಕಂಡ ನೀವೇ ಧನ್ಯ.
ಶಂಕ್ರ ತಾನೆ ಹೆಸರು, ತಗೊಂಡು ಕುತ್ತಿಗೆಗೆ ಸುತ್ಕೊಬೇಕಿತ್ತು.
ಇಲ್ಲಾಂದ್ರೆ ನಂಗೆ ಪಾರ್ಸೆಲ್ ಮಾಡಬೇಕಿತ್ತು
ಕಟ್ಟೆ ಶಂಕ್ರ
ಶಂಕ್ರಣ್ಣ,
ಊರು ಬೆಂಗಳೂರಾದರೇನು?
ನಮ್ಮ ಪ್ರದೇಶದ ಹೆಸರಲ್ಲೇ "ಅರಣ್ಯ" ಪದ ಸೇರಿದೆ. ಹಾಗಾಗಿ, ಹಾವು ಕಾಣಿಸಿಕೊಳ್ಳೋದು ಸಾಮಾನ್ಯ. ಇದು ಒಂದು ಸ್ಯಾಂಪಲ್ ಅಷ್ಟೆ
video nodidde modle...kavana superru...
ಒಳ್ಳೇ ಹಾವು. ಪಾಪ, ಅದು ಯಾಕೆ ನೋವು ಕೊಡುತ್ತೆ!!
haavna nodi kavana bareebeku ansuttalla... kavigaLige eneneno spoorthi....
ಅರುಣ್,
ಅದು ನೋವು ಕೊಡೋದಿಲ್ಲ ಅಂತ ಆ ದಿನ ನೀವು ಹೇಳಿದ ಮೇಲೆ ಗೊತ್ತಾಗಿದ್ದು. ಇದು ಹಳೆಯ ಕವನ. ಏನೂ ಬದಲಿಸಿಲ್ಲ.
ರಾಜು,
ಹಾಗೆ ಬರಯ ಬೇಕು ಅನಿಸಿತು. ಬರೆದೆ
ಮುಂದೆ ಹಾವಿನ ಆಹಾರದ ಬಗ್ಗೆ ಬರೆಯುತ್ತೇನೆ.
Abba!
nange haavandare thumba bhaya...
nimma dhairya mechcha bEkaadde...
kavana super:)
- Sudesh
ಸುಧೇಶ್,
ಧನ್ಯವಾದಗಳು :)
ಹಾವಿಗೆ ಭಯಪಡಬೇಕಾಗಿಲ್ಲ.
Post a Comment