Tuesday 30 December, 2008

ಮೊಬೈಲು ಮರೆತಾಗ...

ಬೆಳಿಗ್ಗೆ ಗಡಿಬಿಡಿಯಲ್ಲಿದ್ದೆ. ಆಫೀಸಿಗೆ ಹೋಗಲು ತಡವಾಗುತ್ತಾಯಿತ್ತು. ಅಮ್ಮ ನನ್ನ ಊಟದ ಡಬ್ಬಿಯನ್ನು ಬ್ಯಾಗಿನೊಳಗೆ ಇಟ್ಟಿದ್ದರು. ತುಂಬಾ ಗಡಿಬಿಡಿಯಲ್ಲಿದ್ದಿದ್ದರಿಂದ ಬ್ಯಾಗನ್ನು ಮರೆತು ಆಫೀಸಿಗೆ ಹೊರಟೆ. ಮಧ್ಯ ದಾರಿಯಲ್ಲಿ ಬ್ಯಾಗು ನನ್ನ ಬಳಿ ಇಲ್ಲವೆಂದು ಅರಿವಿಗೆ ಬಂತಾದರೂ ತಲೆ ಕೆಡೆಸಿಕೊಳ್ಳದೇ ಹೋಗಿ ಆಫೀಸು ಬಸ್ ಹತ್ತಿದೆ.

ಈ ದಿನ ಬಸ್ಸಿನಲ್ಲಿ ಹೊಸ ಮುಖವನ್ನು ನೋಡಿದೆ. ಅವರು ನನ್ನ ಪಕ್ಕದಲ್ಲೇ ಕುಳಿತಿದ್ದರು. ನಾನು ಎಂದಿನಂತೆ ಮೌನ ರಾಜ! ಸ್ವಲ್ಪ ಹೊತ್ತಿನಲ್ಲೇ ಯಾಕೋ ನನ್ನ ಮೊಬೈಲಿಗಾಗೆ ಜೇಬಿನೊಳಗೆ ಹುಡುಕಿದೆ. ಆದರೆ ಅದು ಸಿಗಲಿಲ್ಲ. ನಂತರ ಈ ವ್ಯಕ್ತಿ ತಮ್ಮ ಮೊಬೈಲನ್ನು ಕೊಟ್ಟು ಕರೆ ಮಾಡು.. ಇಲ್ಲೇ ಬಿದ್ದಿದ್ದರೆ ಸಿಗುತ್ತದೆ ಎಂದರು. ನನಗೆ ಅವರ SIMಯಿಂದ ಕರೆ ಮಾಡಲು ಮುಜುಗರವಾಯಿತು. ಅದಕ್ಕೆ ನನ್ನ Walletಯಿಂದ ನನ್ನ "SIM" Card ತೆಗೆದೆ! ನಂತರ ಅದನ್ನು ಆತನ ಫೋನಿನೊಳಗೆ ಹಾಕಿ, ನನ್ನ ನಂಬರಿಗೆ ಕರೆ ಮಾಡಿದೆ. ಅದನ್ನು ಅಮ್ಮ ಸ್ವೀಕರಿಸಿದರು. "ಮಗು, ಮನೆಯಲ್ಲೇ ಮೊಬೈಲ್ ಹಾಗು ಬ್ಯಾಗು ಬಿಟ್ಟೀದ್ದೀಯಲ್ಲಾ?, ಊಟದ ಡಬ್ಬಿ ಕೂಡ ಇಲ್ಲೇ ಇದೆ" ಅಂದರು. ಇರಲಿ ಅಮ್ಮ.. ನಾನು ಊಟ ಆಫೀಸಿನಲ್ಲೇ ಮಾಡುತ್ತೇನೆ, ಸದ್ಯ ಫೋನು ಮನೆಯಲ್ಲೇ ಇದೆ ಅಲ್ವ ಸಾಕು ಎಂದೆ. ನನ್ನ ಫೋನು ಮನೆಯಲ್ಲಿ ಜೋಪಾನವಾಗಿದೆ ಎಂದು ಸಂತಸ ಪಟ್ಟೆ.

ಆತನಿಗೆ ಧನ್ಯವಾದ ಹೇಳಿ, ಫೋನು ಹಿಂದಿರುಗಿಸಲು ಹೋದಾಗ, "ಇದು ನಿಮ್ಮ ಬಳಿಯೇ ಇರಲಿ, ನಿಮ್ಮ ಫೋನು ನಿಮ್ಮ ಕೈಗೆ ಬಂದ ಮೇಲೆ ನನಗೆ ಹಿಂದಿರುಗಿಸಿ" ಎಂದರು. ಇಂತಹ ಸದ್ಗುಣವುಳ್ಳವರೂ ಇದ್ದಾರಲ್ಲಾ ನಮ್ಮ ಪ್ರಪಂಚದಲ್ಲಿ ಎಂದು ಅನಿಸಿತು. ನಂತರ ಆತ ಮತ್ತೆ ಸಿಗದೇ ಹೋದರೆ ಫೋನು ಹಿಂದಿರುಗಿಸಲು ಅಸಾಧ್ಯವಾಗಬಹುದೆಂದು, ನನ್ನ ಪಕ್ಕದಲ್ಲೇ ಇದ್ದ ನನ್ನ ಬ್ಯಾಗಿನಿಂದ ಪುಸ್ತಕ ತೆಗೆದು ಆತನ ವಿ-ಅಂಚೆ ವಿಳಾಸ ಬರೆಸಿಕೊಂಡೆ.

ಇದೆಲ್ಲಾ ಆದ ಮೇಲೆ ಒಂದು ದಿನ ಆತ ನನಗೆ ಸಿಕ್ಕಿದ. ಅವನ ಫೋನು ಹಿಂದಿರುಗಿಸಲು ಹೋದಾಗ ಏನಾಯಿತೋ ಗೊತ್ತಾಗಲಿಲ್ಲ... ಅಮ್ಮ ಬಂದು "ಮಗು, ಎದ್ದೇಳು... ೬ ಗಂಟೆ ಆಯ್ತು"ಅಂದರು.

---
ಎರಡು ದಿನಗಳ ನಂತರ
---

ನಾನು ಯಥಾ ಪ್ರಕಾರ ಮೊಬೈಲು ಮರೆತು ಆಫೀಸಿಗೆ ಹೋಗಿದ್ದೆ. ಮೊಬೈಲು ಶೋಕೇಸಿನಲ್ಲಿ ಇದ್ದದ್ದು ಗಮನಿಸಿದ ಅಮ್ಮ, "ಅಯ್ಯೋ! ಗೂಬೆ... ಫೋನು ಮರೆತು ಹೋಗಿದ್ದಾನಲ್ಲ..." ಎಂದು ಹೇಳಿ, ಫೋನು ತೆಗೆದು ಕೊಂಡು ನನಗೆ ಫೋನು ಮಾಡಿದರು. ನನ್ನ ಫೋನು ರಿಂಗ ಕೂಡ ಆಯ್ತು ಆದರೆ ನಾನು ಸ್ವೀಕರಿಸಲಿಲ್ಲ. ಯಾಕೆ ಸ್ವೀಕರಿಸುತ್ತಿಲ್ಲ ಎಂದು ಯೋಚನೆ ಮಾಡುತ್ತಾಯಿದ್ದರಂತೆ ಎಚ್ಚರವಾದ ಮೇಲೆ ತಿಳಿಯಿತು ಅದು ಫೋನಿನ ರಿಂಗಿಂಗ್ ಅಲ್ಲ..... ನಮ್ಮ ಮನೆ Alarm ಕೂಗುತ್ತಿತ್ತು!


ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಿಮ್ಮ ಮೊಗದಲ್ಲಿ ನಗು ಸದಾ ಇರಲಿ

Tuesday 23 December, 2008

ಹಿಡಿ ಪ್ರೀತಿ

ಚಿತ್ರಾರವರ ಬ್ಲಾಗಲ್ಲಿ "ಏನೂ ಬೇಡ.. ಒಂದು ಹಿಡಿ ಪ್ರೀತಿ ಕೊಡ್ತೀರಾ?!" ಲೇಖನ ಓದಿ ಆ ಸಾರಾಂಶವನ್ನೇ ಕವನದಲ್ಲಿ ಬರೆದಿದ್ದೇನೆ. ಇದರ ವಿಚಾರವೆಲ್ಲಾ ಆಕೆಯದ್ದೇ. ಅವರ ಅನುಮತಿಯಿಲ್ಲದೆ ಕವನ ಬರೆದಿದ್ದೆ. ಆಮೇಲೆ ಅವರೇ ತಮ್ಮ ಬ್ಲಾಗಿನಲ್ಲೂ ಈ ಕವನಕ್ಕೆ ಸ್ಥಾನ ಕೊಟ್ಟಿದ್ದಾರೆ. ಅವರಿಗೆ ವಂದನೆಗಳು.

ಪ್ರೀತಿ ಸಿಗದೆ ಜಗತ್ತಾಗಿದೆ ಕತ್ತಲು
ಯಾರು ಬರುವರು ಇದ ಬೆಳಗಲು?
ಸೂರ್ಯನೋ? ಸೋಮನೋ?

ಪ್ರೀತಿಯ ಹುಡುಕಿ ಬಳಲಿದೆ ಜೀವ
ಎಲ್ಲಡಗಿರ ಬಹುದು ಈ ಪ್ರೀತಿ?
ಸಂಸಾರದಲ್ಲೋ? ಸಂದೇಶಗಳಲ್ಲೋ?

ದಿನವೆಲ್ಲಾ ಅಹಿಂಸೆಯ ವರದಿ
ಮನದಲ್ಲಿ ನೋವಿನ ಸರದಿ
ಹೇಳುವುದೋ? ಬಿಡುವುದೋ?

ಹಿಡಿ ಪ್ರೀತಿಯ ಹಿಡಿಯುವ ಕೈಯಿಲ್ಲಿದೆ
ಹಿಡಿದ ಪ್ರೀತಿಯ ಕಿಡಿಯಿಂದ*
ಜಗತ್ತನ್ನು ಬೆಳಗಿಸುವ ಜೀವವಿಲ್ಲಿದೆ!

--
*"ಪ್ರೀತಿಯ ಕಿಡಿಯಿಂದ"- ಇದು ನನ್ನ ಸ್ವಂತದ್ದು.

Friday 19 December, 2008

ನೆಲದ ಮೇಲೆ ಕಾಮನಬಿಲ್ಲು


ಈ ಚಿತ್ರಕ್ಕೆ ಶ್ರೀ ಶಿವು ಅವರಿಗೆ ರಾಷ್ಟ್ರೀಯ ಮಟ್ಟದ ಛಾಯಾಚಿತ್ರಗಳ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂದಿರುತ್ತದೆ. "ನೆಲದ ಮೇಲೆ ಕಾಮನಬಿಲ್ಲು" ಶೀರ್ಷಿಕೆ ಕೂಡ ಶಿವು ಅವರದ್ದೇ. ಈ ಚಿತ್ರಕ್ಕೆ ಒಂದು ಕವನ ಬರೆಯ ಬೇಕೆಂಬ ಆಸೆಯಾಗಿ ಅವರಲ್ಲಿ ಕೇಳಿಕೊಂಡಾಗ ನನಗೆ ಚಿತ್ರ ಕಳುಹಿಸಿಕೊಟ್ಟಿದ್ದಕ್ಕೆ ಅವರಿಗೆ ವಂದಿಸುತ್ತೇನೆ. ಅವರಿಗೆ ಈ ಕವನದ ಮೂಲಕ ಅಭಿನಂದನೆ ಸಲ್ಲಿಸುತ್ತೇನೆ.



ಏನೀ ನೀರಿನಾಟ ? ಏನೀ ಪ್ರಕೃತಿ ಮಾಟ?
ಏನು ಸೋಜಿಗವೀ ಒಡನಾಟ?

ಕತ್ತಲು ಬೆಳಕ ನಡುವೆ
ಕಣ್ಣ ಹಾಯಿಸಿದಾಗ ಮೋಜು
ಸುತ್ತಲು ಹರಡಿಹ ಹನಿಗಳ
ಸೆರೆ ಹಿಡಿದಿದೆ ಗಾಜು!

ತುಂತುರಿನಾಟದಲ್ಲಿ ಮೂಡಿದೆ
ಅಂಬರದಲ್ಲಿ ಕಾಮನಬಿಲ್ಲು!
ಮಕ್ಕಳಾಟದಲ್ಲಿ ಮೂಡಿದೆ
ನೆಲದ ಮೇಲೆ ಕಾಮನಬಿಲ್ಲು!

ಛಲವಿದ್ದರೆ ಸಾಕು ನಮ್ಮಲ್ಲಿ
ಸಾಧಿಸ ಬಹುದು ಏನನ್ನಾದರೂ
ಊಹಿಸಿದ್ದರೇ ಮಕ್ಕಳು ಮೊದಲು
ಮೂಡಿಸವೆವು ನೆಲದ ಮೇಲೆ ಕಾಮನಬಿಲ್ಲು!

Monday 15 December, 2008

ಸಂಗಾತಿಯ ಚಿಂತೆಯಲ್ಲಿ


[ಚಿತ್ರವನ್ನು ಕಳುಹಿಸಿದ ಶ್ರೀಮತಿ ತೇಜಸ್ವಿನಿಯವರಿಗೆ ವಂದನೆಗಳು]



ಅಂದದ ತುಂಟ ಕಂಗಳು
ಕಂಬನಿ ಹಂಚದೆ;
ಸಂಕಟ ನುಂಗಿವೆ
ಸಂಗಾತಿಯ ಚಿಂತೆಯಲ್ಲಿ

ಬೆಳದಿಂಗಳಲ್ಲಿ ಸೌಂದರ್ಯವಿಲ್ಲ!
ಸಂಗೀತದಲ್ಲಿ ಇಂಚರವಿಲ್ಲ!
ಶ್ರೀಗಂಧದಲ್ಲಿ ಸುಗಂಧವಿಲ್ಲ!
ಸಂಗಾತಿಯ ಚಿಂತೆಯಲ್ಲಿ

ಬೆಂಕಿಗೆ ಸ್ಪಂದಿಸುವುದಿಲ್ಲ!
ನಿಂದಿಸುವರಿಗೆ ನಿಂದನೆಯಿಲ್ಲ!
ಅಂಗಾಂಗಗಳು ಅಂಕೆಯಿಲ್ಲಿಲ್ಲ!
ಸಂಗಾತಿಯ ಚಿಂತೆಯಲ್ಲಿ

ವಿ.ಸೂ: ಈ ಕವನದ ಪ್ರತಿಯೊಂದು ಪದವೂ ಅನುಸ್ವಾರಯುಕ್ತವಾದದ್ದು. ಹಿಂದೆ ಬರೆದ "ಅಂಬಿಗನ ಮಮತೆ"ಯ ಪಲ್ಲವಿ ಮಾತ್ರವೇ ಅನುಸ್ವಾರದಲ್ಲಿತ್ತು. ಬಹು ದಿನಗಳ ಪ್ರಯತ್ನ "ಅನುಸ್ವಾರಗಳ ಕವನ" ಈಗ ಫಲಕಾರಿಯಾಗಿದೆಯೆಂದು ಭಾವಿಸಿದ್ದೇನೆ.

Thursday 11 December, 2008

ಸಂವತ್ಸರ ಪೂರೈಸಿದ ಸಂತಸದಲ್ಲಿ...

ಡಿಸೆಂಬರ್ ೧೨ನೇ ಮಾಸ. ಇವತ್ತು ೧೨ ನೇ ದಿನ. ಇದಕ್ಕೆ ನನ್ನ ಬದುಕಿನಲ್ಲಿ ಒಂದು ವಿಶೇಷವಿದೆ. ಕಳೆದ ವರ್ಷ ಡಿಸೆಂಬರ್ ೧೨ ರಂದು ಮೊದಲ ಪೋಸ್ಟ್ ಮಾಡಿ ನಾನೂ ಒಬ್ಬ ಕನ್ನಡದ ಬ್ಲಾಗರ್ ಎನಿಸಿಕೊಂಡೆ. ಆದರೆ ಕವನಗಳು ಅದಕ್ಕಿಂತ ಮುಂಚೆಯೇ ಇದ್ದವು. ಬ್ಲಾಗು ಶುರುಮಾಡಿದಾಗ ನನ್ನ ಕಾವ್ಯನಾಮವಾದ "ಅಗ್ರಜ" ಅಂತ ಇಟ್ಟಿದ್ದೆ. ಆಮೇಲೆ ಅದು ಹೋಗಿ ಬೇರೊಂದು ಹೆಸರು ಇಟ್ಟೆ. ಅದೂ ಸಮಾಧಾನ ಸಿಕ್ಕಿರಲಿಲ್ಲ. ಸುಮಾರು ೨೦ ಪೋಸ್ಟ್ ಆದ ಮೇಲೆ, "ಅಂತರ್ವಾಣಿ" ಪದ ಸಿಕ್ಕಿತು. ತುಂಬಾ ಹಿಡಿಸಿತು ಹಾಗು ಸೂಕ್ತ ಅನಿಸಿತು. ಹೀಗೆ ಬರೆಯುತ್ತಾ ಒಂದು ವರ್ಷ ಕಳೆದೇ ಹೋಯಿತು.

ಮೊದಲಿನಿಂದ ನನ್ನ ಬ್ಲಾಗನ್ನು ಓದಿದವರಲ್ಲಿ ಮೊದಲ ಸ್ಥಾನವನ್ನು ಕುಮಾರಿ ಲಕ್ಷ್ಮಿ ಪಡೆದಿರುತ್ತಾರೆ. ಅವರ ನಂತರದಲ್ಲಿ ಕುಮಾರಿ ಪುಷ್ಟ, ಶ್ರೀ ಸುಧೀರ್, ಶ್ರೀ ಶಿವ ಹಂಚಿಕೊಂಡಿರುತ್ತಾರೆ. ಆರ್ಕುಟ್, ಕನ್ನಡಿಗರು.ಕಾಂ ಹಾಗು ಮಜಾ ಮಾಡಿ ತಾಣದಲ್ಲಿ ಸಿಕ್ಕ ಅನೇಕ "ಬೆಮಿ" [ಬೆರಳಂಚಿನ ಮಿತ್ರರು] ಓದಿ ಪ್ರೋತ್ಸಾಹಿಸಿದ್ದಾರೆ. ಇವರಲ್ಲಿ ಶ್ರೀ ತ.ವಿ.ಶ್ರೀ, ಶ್ರೀ ಮಧು, ಶ್ರೀಮತಿ ಲಿಲ್ಲಿ ಇದ್ದಾರೆ. ಈ ಸಮಯದಲ್ಲೇ ಶ್ರೀಮತಿ ತೇಜಸ್ವಿನಿ ಅವರ ಪರಿಚಯವಾಯಿತು. ಅಂದಿನಿಂದ ನನ್ನೆಲ್ಲಾ ಕವನಗಳನ್ನು, ಲೇಖನಗಳನ್ನೂ ಓದಿ ತಪ್ಪುಗಳನ್ನು ತಿದ್ದಿ, ನನಗೆ ಪ್ರೋತ್ಸಾಹಿಸುತ್ತಾಯಿದ್ದಾರೆ. ನಂತರ ನನ್ನೀ ಚಿಕ್ಕ ಬ್ಲಾಗು ಶ್ರೀ ಅರುಣ್, ಶ್ರೀ ಹರೀಶ್ , ಶ್ರೀ ಸುನಾಥಂಕಲ್, ಶ್ರೀ ರಾಜು, ಶ್ರೀ ಶಿವಣ್ಣ, ಶ್ರೀ ಪ್ರಕಾಶಣ್ಣ , ಶ್ರೀ ಸುಧೇಶ್ ಕಣ್ಣಿಗೂ ಬಿದ್ದಿದೆ. ಇವರೆಲ್ಲರ ಸತತ ಪ್ರೋತ್ಸಾಹದಿಂದ ಹೆಚ್ಚು ಬರೆಯ ಬೇಕೆಂಬ ಬಯಕೆ ಮನಕ್ಕಾಗಿದೆ.

ನನಗೆ ಪ್ರೋತ್ಸಾಹ ನೀಡುತ್ತಾ ಬಂದಿರು ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು.

"ಅಂತರ್ವಾಣಿ" ಪದಕ್ಕೆ ನಾ ಬರೆದ ಕವನ:

"ಹೇಳುವೆನು ನನ್ನೀ ಅಂತರ್ವಾಣಿಯ
ಕೇಳಿದರು ಸರಿ, ಕೇಳದಿದ್ದರೂ ಸರಿ
ಬರೆಯುವೆನು ನನ್ನೀ ಚೇತನವಿರುವವರೆಗೂ
ಓದಿದರು ಸರಿ, ಓದದಿದ್ದರೂ ಸರಿ"

Sunday 7 December, 2008

ಕಲ್ಲಿಗೊಂದು ಕೊಕ್ಕರೆ

ನಮ್ಮ ಮನೆಯ ಎದುರು ಇರುವ ಕೊಳಕು ನೀರಿನಿಂದಾದ ಕೊಳದಲ್ಲಿ ಈ ಮಿತ್ರರು ಸಂಸಾರ ಹೂಡಿದ್ದಾರೆ. (ಹಿಂದೆ ಇದೇ ಕೊಳದಲ್ಲಿ ಕಪ್ಪೆಗಳು ಇದ್ದವು.) ಅವರ ಮಾತುಕತೆ ಅವರಿಂದಲೇ ಕೇಳಿ.


[ ನಾವೆಲ್ಲಾ ಶಂಕ್ರಣ್ಣನ ಮನೆ ಎದುರು ಇದ್ದೀವಿ. ನೀವೆಲ್ಲಾ ನೋಡಲು ಬನ್ನಿ ]



[ಹಾರ ಬೇಡಿ... ಇರಿ ಫೋಟೋ ತೆಗಿತಾನಂತೆ..]

[ನಮ್ಮ ಚಿತ್ರಾನೆ ತೆಗಿ...ಅವರಿಗಿಲ್ಲ ಅದೃಷ್ಟ!]


[ನೀವು ಹಾರಿಬಿಟ್ರಾ? ನಿಮಗೂ ಇಲ್ಲ ಅದೃಷ್ಟ!]

[ನನ್ನ ಫೋಟೋನೆ ತೆಗೆ. ಚೆನ್ನಾಗಿ ಪೋಸ್ ಕೊಡುತ್ತಾಯಿದ್ದೀನಾ...?]

[ಹಾಯ್ ಶಂಕ್ರಣ್ಣ.. ನಾವಿಲ್ಲಿದ್ದೀವಿ... ತೆಗೆ... ದೂರ ಆದರೂ ಪರ್ವಾಗಿಲ್ಲ...ಹಸಿರಿನ ಮಧ್ಯೆ ಬಿಳಿ ಜೀವಿಗಳು ನಾವು...]


[ಅಯ್ಯೋ! ಎಷ್ಟು ಹೇಳಿದರೂ ಕೇಳೋದಿಲ್ವಲ್ಲಾ ನೀವುಗಳು...ಬನ್ನಿ Group ಫೋಟೋ ತೆಗೆಸಿಕೊಳ್ಳೋಣ....]

[ಸಾಲಾಗಿ ಕೂತಿದ್ದೀವಿ.. ಈಗ ತೆಗೆ Group ಫೋಟೋ.]

ವಿ.ಸೂ: ಫೋಟೋಗ್ರಾಫಿ ಒಂದು ಹವ್ಯಾಸವಷ್ಟೇ.

Thursday 4 December, 2008

ಕಾಲಿಗೊಂದು ಕಪ್ಪೆ

"ಬೋಲೋ ವಟ ವಟ ಮಹಾರಾಜ್ ಕೀ ಜಯ್"





ಮಳೆ ಬಂದ ಕಾಲದಿ
ರಸ್ತೆ ಬದಿಯ ಕೊಳದಿ
ಕಪ್ಪೆಗಳ ಸಂಸಾರವೊಂದಿತ್ತು

ಅರೆ ಕ್ಷಣ ಬಿಡದೇ
ಅವುಗಳ "ವಟ ವಟ" ಕರ್ಣಗಳಿಗಿತ್ತು
ಅಲ್ಪ ದಿನಗಳಲ್ಲೇ
ಎಮ್ಮ ಮನೆಯಂಗಳದಲ್ಲಿ
ಕಾಲಿಗೊಂದು ಕಪ್ಪೆ ಸಿಗುತ್ತಿತ್ತು!


"ಭೋಲೋ ವಟ ವಟ ಮಹಾರಾಜ್ ಕೀ ಜಯ್"

Sunday 30 November, 2008

ಐನೂರು ರೂಪಾಯಿ ಕೊಡುತ್ತೀನಿ......ಏನು ಮಾಡುತ್ತೀರ?

Monday 24 November, 2008

ಎಮ್ಮ ಮನೆಯಂಗಳದಿ

ಎಮ್ಮ ಮನೆಯಂಗಳದಿ
ಬಂದಿತೊಂದು ಪುಟ್ಟ ಜೀವ
ನನ್ನ ಕಾಲ ಪಕ್ಕ ಇದ್ದು,
ಕಾಣದಂತೆ ನಾನಿದ್ದೆ!

ಅದನ್ನು ಕಂಡ ಕ್ಷಣದಲಿ,
ಬಂತು ಮೊಬೈಲು ಕೈಯಲಿ,
ಸೆರೆಹಿಡಿಯುತ ಅದರ ಚಲನ
ಮನಸಿನಲಿ ಮೂಡಿಸಿದೆ ಕವನ

ಶಂಕರನ ಕೊರಳಲ್ಲಿ ಇರದೇ
ಶಂಕರನ ಮನೆ ಅಂಗಳದಲಿ
ಬಂದಿತೊಂದು ಪುಟ್ಟ ಜೀವ
ಸದ್ಯ! ಯಾರಿಗೂ ಕೊಡಲಿಲ್ಲ ನೋವ.

Tuesday 18 November, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾರತಕ್ಕೆ ಪ್ರಯಾಣ

ಹಿಂದಿನ ಭಾಗ

ಸೋಮವಾರದಂದು ನನಗೆ ವಿಪರೀತ ಸಂತಸವಾಗಿತ್ತು. ಮಧ್ಯಾಹ್ನಕ್ಕೆ ಕಾಯುತ್ತಾಯಿದ್ದೆ. ಒಂದು ಗಂಟೆಯ ಕೆಲಸ ಮುಗಿಸಿ ಅಲ್ಲಿದ್ದವರೆಲ್ಲರಿಗೂ ನಾವು ಇಂದು ಮಧ್ಯಾಹ್ನ ಹೊರಡುತ್ತೇವೆಂದು ಹೇಳಿದೆವು. ಎಲ್ಲರೂ ನಮಗೆ "All the best. Safe journey" ಅಂತ ಹಾರೈಸಿದರು. ನಮಗೆ ಕೊಟ್ಟಿದ್ದ security key ಹಿಂದುರುಗಿಸಿ ಪ್ರತಿದಿನ ನಮಗೆ ಶುಭೋದಯ ಹೇಳುತ್ತಿದ್ದ Receptionist ಗೆ ನಗು ಮೊಗದಿಂದ, ಹೋಗಿ ಬಿಟ್ಟು ಬರ್ತೀವಿ ಎಂದು ಹೇಳಿದೆವು. ಆಕೆ ಕೂಡ ನಮಗೆ ಪ್ರಯಾಣ ಸುಖಕರವಾಗಿರಲಿ ಎಂದು ಹೇಳಿದರು. ಆನಂತರ ನಮ್ಮ ಹೊಟೆಲಿಗೆ ಬಂದೆವು. ಕೊನೆ ಬಾರಿಗೆ Cupboard, bathroom ಎಲ್ಲಾ ಕಡೆ ಯಾವೊಂದೂ ವಸ್ತುಗಳನ್ನು ಬಿಟ್ಟಿಲ್ಲವೆಂದು ಖಚಿತ ಪಡಿಸಿಕೊಂಡೆ. ನಂತರ ಲಗ್ಗೇಜ್ಜು ಸಿದ್ಧವಿತ್ತು. ನನ್ನ ಮೊಬೈಲಿಂದ ಸ್ವ-ಚಿತ್ರ ತೆಗೆದೆ.

ಈ ಒಂದೇ ಒಂದು ಚಿತ್ರದಲ್ಲೇ ನಾನು Serious ಆಗಿ pose ಕೊಟ್ಟಿಲ್ಲ.

ನಮ್ಮ "ಆಸ್ತಿ"ಗಳನ್ನು ತೆಗೆದುಕೊಂಡು Receptionಗೆ ಬಂದು ನಮ್ಮ ರೂಮಿನ Key (Card) ಹಿಂದಿರುಗಿಸಿ, ಅಲ್ಲಿಯ ಶಾಸ್ತ್ರಗಳನ್ನು ಮುಗಿಸಿ, ಅವರಿಗೆ ಕೊಡ ಬೇಕಿದ್ದ ಬಾಕಿ ಹಣವನ್ನು ಕೊಟ್ಟು ಹೊಟೆಲಿನಾಚಗೆ ಹೋದೆವು. ಅಲ್ಲೊಂದು Taxi ಸಿದ್ಧವಿತ್ತು. ಅದರೊಳಗೆ ಕೂತು, ವಿಮಾನ ನಿಲ್ದಾಣಕ್ಕೆ ಹೋಗು ಎಂದೆವು. ಆ ಡ್ರೈವರ್ ನಮ್ಮನ್ನು ಮಾತನಾಡಿಸುತ್ತ ಯಾವ ದೇಶ ನಿಮ್ಮದು ಎಂದು ಕೇಳಿದ. ಆಗ ನಾವು "ಭಾರತ"ವೆಂದು ಹೇಳಿದೆವು. ಅವನು ಭಾರತದಲ್ಲಿದ್ದನಂತೆ ಅದರ ವಿಚಾರವನ್ನು ಹೇಳುತ್ತಾ ನಮ್ಮನ್ನು ವಿಮಾನ ನಿಲ್ದಾಣಕ್ಕೆ ತಲುಪಿಸಿದ. ನಂತರ Boarding Pass ತೆಗೆದುಕೊಂಡ ಮೇಲೆ ಕಾಲ ಹರಣ ಮಾಡಲು ಒಂದೊಂದು ಅಂಗಡಿಗೆ ಭೇಟಿ ನೀಡುತ್ತಾಯಿದ್ದೆ. ನನ್ನ ಬಂಧುಗಳಿಗೆ ಉಡುಗೊರೆಗಳನ್ನೂ, ನನ್ನ ಕಚೇರಿಯವರಿಗೆ, "ಮದ್ಯವಿರುವ ಚಾಕೊಲೇಟ್"ಗಳನ್ನೂ ಖರೀದಿಸಿದೆನು.(ಬಹಳ ಬೇಡಿಕೆಯ ಚಾಕೊಲೇಟ್ ಇದು. "Liquor chocolates ತರದೇ ಇದ್ದರೆ ಆಫೀಸಿಗೆ ಬರ ಬೇಡ" ಅಂತ ಕೆಲವರು ಹೇಳಿದ್ದರು). ಅಲ್ಲಿ ಒಂದು ಸಾಮಾನ್ಯವಾದ ಲೇಖನಿಗೆ ೫ Euro ಅಂದರೆ ಸುಮಾರು ೩೨೦ ರೂಗಳು! ಇಲ್ಲೂ ಸಹ ನಾನು ಉಷ್ಣಮಾಪಕಗಳನ್ನು ವೀಕ್ಷಿಸುತ್ತಾಯಿದ್ದೆ ಸುಮ್ಮನೆ ಕುತೂಹಲಕ್ಕೆ.

ನಾವು Immigration ಬಳಿ ಹೋಗುವಾಗ ಒಂದು ಡಿಜಿಟಲ್ ಕ್ಯಾಮರ ಕಣ್ಣಿಗೆ ಬಿದ್ದಿತು. ಆ ಅಂಗಡಿಯವನು, ಈ ಕ್ಯಾಮರಾಗೆ ಇವತ್ತು discount ಇದೆ ಎಂದೆನು. ಕೋಶಿ ಅದನ್ನು ನೋಡಿ, ಈಗ ಖರೀದಿಸೋದು ಸೂಕ್ತ ಎಂದನು. ಹಾಗಾಗಿ ಅದನ್ನು ಖರೀದಿಸಿದೆ. ಮುಂದಿನ ಅಂಗಡಿಗೆಯಲ್ಲಿ ಕೋಶಿಯು ತನ್ನ ಮಿತ್ರರಿಗೆ ಎರಡು ಬಾಟಲ್ಲು "Finlandia"ವನ್ನು ತೆಗೆದುಕೊಂಡ. ಆನಂತರ ನಮ್ಮ ವಿಮಾನ ಹೊರಡುವ ವೇಳೆ ಹತ್ತಿರವಾಯಿತು. ನಾವು ವಿಮಾನವನ್ನೇರಿದೆವು.

ವಿಮಾನದಲ್ಲಿ ಒಂದು ಹಿಂದಿ ಚಿತ್ರ ಪ್ರದರ್ಶನ ಮಾಡಿದರು. ಈ ಚಲನ ಚಿತ್ರ ಮುಗಿದ ಮೇಲೆ ಭಾರತದ ಕುರಿತಾದ ಒಂದು ಟೆಲಿ ಚಿತ್ರ ಪ್ರದರ್ಶನ ಮಾಡಿದರು. ಅದನ್ನು ನೋಡುತ್ತಾ ಪ್ರಯಣ ಮುಗಿಸಿದೆನು.

ಭಾರತದ ನೆಲಕ್ಕೆ ವಿಮಾನ ಸ್ಪರ್ಶ ಮಾಡಿದಾಗ ಮಧ್ಯ ರಾತ್ರಿ ಒಂದು! ಅಲ್ಲಿಂದ Immigration ಮುಗಿಸಿ, ನನ್ನ ಲಗ್ಗೇಜನ್ನು ತೆಗೆದು ಕೊಂಡು ಮನೆಗೆ ಫೋನು ಮಾಡಿ ನನ್ನ ಸುಖಾಗಮನವನ್ನು ತಿಳಿಸಿದೆ. ನಂತರ ಅವರಿಗೆ ಬೆಂಗಳೂರಿನ ವಿಮಾನ ಹೊರಡುವ ಮುಂಚೆ ಕರೆ ಕೊಡುತ್ತೇನೆಂದು ಹೇಳಿದೆ. ನಾವೀಗ Domestic Airpotಗೆ ಹೋಗ ಬೇಕಿತ್ತು. ಅದಕ್ಕಾಗಿ waiting roomಗೆ ಹೋದೆವು. ಅಲ್ಲಿ ತಿಳಿದ ವಿಷಯವೇನೆಂದರೆ ಸದ್ಯಕ್ಕೆ Domestic airportಗೆ ಸಾರಿಗೆ ವ್ಯವಸ್ಥೆಯಿಲ್ಲ. ಸುಮಾರು ೫ ಗಂಟೆಗೆ ಇರುತ್ತದೆಯೆಂದು. ಅಲ್ಲಿಯವರೆಗು ಅಲ್ಲಿ ದೂರದರ್ಶನ ವೀಕ್ಷಿಸುತ್ತಾಯಿದ್ದೆ. ಕೋಶಿಯು "ತನ್ನವರ" ಜೊತೆಯಲ್ಲಿ ಮಾತಾಡುತ್ತಾಯಿದ್ದ. ಆಮೇಲೆ ಬಸ್ಸಿನಲ್ಲಿ ನಾವು Domestic airportಗೆ ಬಂದೆವು. ಇಲ್ಲಿ ಕೋಶಿ ಸ್ವಲ್ಪ ಗಾಬರಿಯಾದ. ಅವನ ಬ್ಯಾಗು ಎಲ್ಲೋ ಕಳೆದು ಹೋಗಿತ್ತು. ಅವನು ನನ್ನ ಕೇಳಿದ ಬ್ಯಾಗಿನ ಬಗ್ಗೆ. ನಾನು ತಿಳಿದಿಲ್ಲವೆಂದೆ. ತಕ್ಷಣ ಬಸ್ಸಿನ ಒಳಗೆ ಹೋಗಿ ನೋಡಿದ. ಆದರೂ ಸಿಗಲಿಲ್ಲ. ಆಮೇಲೆ ಅಲ್ಲಿಯ Manager ಬಳಿ ಹೋಗಿ ಈ ವಿಷಯ ಪ್ರಸ್ತಾಪಿಸಿದ. ಅವರು International airportಗೆ ಕರೆ ಮಾಡಿ, ಬ್ಯಾಗು ಅಲ್ಲಿರುವುದನ್ನು ಖಚಿತ ಪಡಿಸಿದರು.

ಅದನ್ನು ಪಡೆದ ಮೇಲೆ ನಾವು ಬೆಂಗಳೂರಿನ ವಿಮಾನ ಏರಿದೆವು. ದೆಹಲಿಯಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಒಮ್ಮೆ Pilot ಇಂದ ವಿಷಯ ಬಂತು, "Pressure ಏರು ಪೇರು ಆಗುತ್ತಾಯಿದೆ. ದಯವಿಟ್ಟು ನಿಮ್ಮ ಆಸನದಲ್ಲಿ ಬಂದು ಕುಳಿತುಕೊಳ್ಳಿ. ಸೀಟ್ ಬೆಳ್ಟ್ ಧರಿಸಿ!" ಇದಾಗಿ ಒಂದೆರಡು ಕ್ಷಣದಲ್ಲೆ ವಿಮಾನ ಅಲ್ಲಾಡಿತು. ಮನಸ್ಸಿನಲ್ಲೇ ಶಂಕರನ್ನು ನೆನೆದೆ. ಸದ್ಯ ಏನೂ ಆಗಲಿಲ್ಲ!

ನಂತರ ಮನೆಗೆ ಬಂದು ನನ್ನ ಎಲ್ಲಾ ಅನುಭವಗಳನ್ನು ಮನೆಯವರಿಗೆ ಹೇಳುತ್ತಾ, ಅಲ್ಲಿಂದ ತಂದಿದ್ದ chocolates ತಿನ್ನುತ್ತಾ ದಿನ ಕಳೆದೆನು.

ಅಲ್ಲಿಯ ಚಿತ್ರಗಳನ್ನು ವೀಕ್ಷಿಸಲು :

Finland Trip (1)

Wednesday 12 November, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾನುವಾರದ ಬೀಟ್

ಹಿಂದಿನ ಭಾಗ

ಭಾನುವಾರ ಸುಮನ್ ಮನೆಗೆ ಹೋಗುವುದು ನಿರ್ಧಾರವಾಗಿತ್ತು. ಹಿಂದಿನ ದಿನ ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದರಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಆಸೆಯಾಯಿತು. ನಮ್ಮ ಹೊಟೆಲಿನಿಂದ ಬಸ್ ನಿಲ್ದಾಣಕ್ಕೆ ಹೆಚ್ಚೆಂದರೆ ೧೦ ನಿಮಿಷಗಳ ಕಾಲ್ನಡಿಗೆ. ಅದರ ಬದಲು ರೈಲಿನಲ್ಲಿ ಹೋಗೋಣವೆಂದು ನಮ್ಮ ಹೊಟೆಲಿಗೆ ಸಮೀಪದಲ್ಲಿದ್ದ ನಿಲ್ದಾಣಕ್ಕೆ (Rauhalahti) ಹೋದೆವು. ಮೊದಲಿಗೆ ಅಲ್ಲಿಯ Ticket machine ಇಂದ ಟಿಕೆಟ್ ಪಡೆದು ಸುಮಾರು ಆಳಕ್ಕೆ ಇಳಿದೆವು. ನಂತರ ನಗರ ಬಸ್ ನಿಲ್ದಾಣಕ್ಕೆ ಹೋಗುವ ರೈಲನ್ನು ಏರಿದೆವು. ಹೊರಗಿನಿಂದ ಮೆಟ್ರೋದ ಚಿತ್ರ ಇದು.
ಮೆಟ್ರೋ ರೈಲು ಅದೆಷ್ಟು ವೇಗವಾಗಿ ಚಲಿಸಿತೆಂದರೆ,

ಮೆಟ್ರೋ ರೈಲಿನ ಆಸನಗಳಲ್ಲಿ Cushion ಇರಲಿಲ್ಲ.ಈ ಚಿತ್ರದಲ್ಲಿ ಗಮನಿಸಿ ಹಸಿರು ಅಕ್ಷರದ ಫಲಕವಿದೆ. ಅದು ಮುಂಬರುವ ನಿಲ್ದಾಣವನ್ನು ಸೂಚಿಸುತ್ತದೆ.

ಅದರೊಳಗೆ ಹೆಚ್ಚಿನ ಸಮಯ ಕಳೆಯಲೇ ಇಲ್ಲ. ಅಷ್ಟರಲ್ಲಿ ನಾವು ನಗರದ ಬಸ್ ನಿಲ್ದಾಣದ ಬಳಿ ಇದ್ದ ಮೆಟ್ರೋ ನಿಲ್ದಾಣದಲ್ಲಿ ಇಳಿದೆವು. ಆನಂತರ ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯವರು ಅಲ್ಲಿಯ ಬಸ್ ಸಮಯ ಹಾಗು ಮಾಹಿತಿಗಳನ್ನು ಸೂಚಿಸಲು ಒಂದು computer ಇಟ್ಟಿದ್ದರು. ಅದರೊಂದಿಗೆ ಸ್ವಲ್ಪ ಹೊತ್ತು ಕಳೆದು, ನಾವು ಹತ್ತ ಬೇಕಿದ್ದ ಬಸ್ಸಿನ ಬಳಿ ಬಂದೆವು. ನಂತರ ಬಸ್ಸನ್ನು ಹತ್ತಿ ನಮ್ಮ ಬಳಿಯಿದ್ದ ಟಿಕೆಟನ್ನು ತೋರಿಸಿದೆವು. ನಂತರ ಮುಂದಿನ ಸಾಲಿನಲ್ಲೇ ಕುಳಿತು, ನಮ್ಮ ನಿಲ್ದಾಣದ ಹೆಸರನ್ನು ಹೇಳಿ, ಅದು ಬಂದೊಡನೆ ನಮಗೆ ತಿಳಿಸುವುದಾಗಿ ಕೇಳಿಕೊಂಡೆವು. ಈ ಬಸ್ ಹೋದ ದಾರಿಯಲ್ಲೇ ನಮಗೆ ಕಾಣಿಸಿದ್ದು ಹೆಲ್ಸಿಂಕಿಯ ಸೆನೆಟ್. ಸುತ್ತ ಮುತ್ತಲಿನ ಪರಿಸರವನ್ನು ವೀಕ್ಷಿಸುತ ನಮ್ಮ ನಿಲ್ದಾಣಕ್ಕೆ ತಲುಪಿದೆವು. ಅಲ್ಲಿಂದ ಸುಮನ್ ಮನೆ ಹುಡುಕುವ ಕೆಲಸ ನಮ್ಮದಾಗಿತ್ತು. ಅಲ್ಲಿ ಸಿಕ್ಕವರೊಬ್ಬರನ್ನು ನಮ್ಮ ಬಳಿಯಿದ್ದ ಚೀಟಿಯನ್ನು ತೋರಿಸಿ ವಿಳಾಸವನ್ನು ಕೇಳಿದೆವು. ಅವರಿಗೆ ಆಂಗ್ಲ ಭಾಷೆ ಬಾರದ ಕಾರಣ ತಮ್ಮ ಭಾಷೆಯಲ್ಲಿ ಏನನ್ನೂ ಹೇಳಿ ಹೊರಟು ಹೋದರು. ಈ ವಿಳಾಸ ಗೊತ್ತಿಲ್ಲ ಅಂತಲೋ ಅಥವಾ ಆಂಗ್ಲ ಭಾಷೆ ತಿಳಿಯದು ಅಂತಲೋ ಹೇಳಿರುತ್ತಾರೆ ಅಂತ ಹೇಳಬಲ್ಲೆ. ನಾವು ಸ್ವಲ್ಪ ಮುಂದೆ ಸಾಗಿದೊಡನೆ ಸುಮನ್ ವಿಳಾಸ ಸಿಕ್ಕಿತು. ಆತ ನಮ್ಮನ್ನು ಆದರದಿಂದ ಸ್ವಾಗತಿಸಿದನು. ಎಲ್ಲಾ ಉಭಯ ಕುಶಲೋಪರಿ ಮುಗಿದ ನಂತರ ನಮಗೆ ತಿನ್ನಲು ಚಿಪ್ಸನ್ನು ಹಾಗು ಕುಡಿಯಲು ಜ್ಯೂಸನ್ನು ಕೊಟ್ಟನು.

ಹಾಗೆ ಮಾತಾಡುತ್ತಾ, ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಹಸಿವು ಅದನ್ನು ಜ್ಞಾಪಿಸ ಬೇಕಾಯಿತು. ನಂತರ ಅಡುಗೆ ಮಾಡಲು ಸುಮನ್ ಹೊರಟನು. ಆಗ ನನ್ನನ್ನು ಪ್ರಶ್ನಿಸಿದ, "ನೀನು ಮಾಂಸಾಹಾರ ತಿನ್ನುತ್ತೀಯಾ ಇಲ್ವಾ?" ಎಂದು. ನಾನು ಸಸ್ಯಾಹಾರಿಯೆಂದು ಹೇಳಿದೆ. ಆಗ ಆತ ಮೊದಲು ದಾಲು ಹಾಗು ಅನ್ನವನ್ನು ತಯಾರಿಸಿದನು. ದಾಲಿಗೆ ಬೆಳ್ಳುಳ್ಳಿಯನ್ನೂ ಹಾಕಿದ್ದ. ನನಗೆ ಬೆಳ್ಳುಳ್ಳಿ ಸೇರುವುದಿಲ್ಲವೆಂದು ಆತನಿಗೆ ಗೊತ್ತಿರಲಿಲ್ಲ. ನಂತರ ಅವರಿಬ್ಬರಿಗೆ ಚಿಕನ್ನ್ ತಯಾರಿಸಿದ. ನನಗೆ ಈ ಬೆಳ್ಳುಳ್ಳಿ ದಾಲ್ ಅಷ್ಟೇನು ಇಷ್ಟವಾಗಲಿಲ್ಲ. :( ಆದರೂ ಅವನ ಮನಸ್ಸಿಗೆ ನೋವು ಮಾಡ ಬಾರದೆಂದು ಹಾಗೆ ತಿಂದೆನು. ನಮ್ಮ ಊಟವಾದ ಮೇಲೆ ಸ್ವಲ್ಪ ಹೊತ್ತು ಮಾತಾಡಿ ನಾವು ಹೊರಡಲನುವಾದೆವು. ನಂತರ ಆತ ನಮ್ಮನ್ನು ಬಸ್ ನಿಲ್ದಾಣದವರೆಗೂ ಬಿಟ್ಟನು. ನಾವು Espoo ಇಂದ ಹೆಲ್ಸಿಂಕಿಗೆ ಬಂದೆವು. ಆನಂತರ ಮತ್ತೊಮ್ಮೆ ಮೆಟ್ರೋ ಹತ್ತುವ ಆಸೆಯಾಯುತು. ಹೇಗೂ ೧ ಗಂಟೆವರೆಗೂ ಟಿಕೆಟಿನ ಅವಧಿಯಿತ್ತು. ಅಲ್ಲಿಂದ Itäkeskus shopping centreಗೆ ಹೊದೆವು. ಅಲ್ಲಿದ್ದ ಊಷ್ಣಮಾಪಕದಲ್ಲಿ ನಮ್ಮ ಕಣ್ಣಿಗೆ ಆಶ್ಚರ್ಯ ತುವಂತಹ ದೃಶ್ಯ ಕಂಡಿತು. ಉಷ್ಣಾಂಶವು +೭ C ಇತ್ತು! ಆ ದಿನ ಭಾನುವಾರವಾದ್ದರಿಂದ ಕೆಲವೇ ಅಂಗಡಿಗಳು ಮಾತ್ರ ತೆರೆದಿತ್ತು. ಅಲ್ಲಿ ಅಲೆದಾಡಿ ನಂತರ ನೇರವಾಗಿ Rauhalahtiಗೆ ಬಂದಿಳಿದೆವು. ಅಲ್ಲಿ ಸುತ್ತಾಡಿ, ನಮ್ಮ ಹೊಟೆಲಿನ ಮುಂದಿನ ಸಮುದ್ರಕ್ಕೆ ಬಂದು ಕೆಲವು ಫೋಟೋಗಳನು ತೆಗೆದೆವು.
ಊಷ್ಣಾಂಶ ಹೆಚ್ಚಿರೋದಕ್ಕೆ ಇದೇ ಸಾಕ್ಷಿ! ಇಷ್ಟೆಲ್ಲಾ ಆದ ಮೇಲೆ, ಹೊಟೆಲಿಗೆ ಬಂದ ಇನ್ನುಳಿದ ಪ್ಯಾಕಿಂಗ್ ಕೆಲಸ ಮುಗಿಸಿದೆ. ಆನಂತರ ನಮ್ಮ ರಾತ್ರಿಯ ಭೋಜನ ಮಾಡಿದೆವು. ನಾವು ತಂದಿದ್ದ MTR ಪದಾರ್ಥಗಳು, Maggi, ಸಿಹಿ, ಹಾಗು ಖಾರದ ಪದಾರ್ಥಗಳು ಅಂದಿನ ದಿನಕ್ಕೆ ಎಷ್ಟು ಬೇಕೋ ಅಷ್ಟೇ ಇತ್ತು.

ಮತ್ತಷ್ಟು ವಿಚಾರಗಳು:

ಅಲ್ಲಿ ಸತತ Snowfall ಇದ್ದಿದ್ದರಿಂದ ನಾವು ಓಡಾಡುವಾಗ ಜಾಗರೂಕರಾಗಿರ ಬೇಕಿತ್ತು. ಅಲ್ಲಿಯ ನೆಲ ತುಂಬಾ ಜಾರುವಂತಿತ್ತು. ನನ್ನ ಜಾಗರೂಕತೆಯಿಂದ ಅಲ್ಲಿ ಒಮ್ಮೆಯೂ ಜಾರಿ ಬೀಳಲಿಲ್ಲ!

ಪ್ರತಿದಿನ ಬೆಳಿಗ್ಗೆ ಅಲ್ಲಿ ಬಿದ್ದಿದ್ದ ಮಂಜನ್ನು ಎತ್ತುವ ಕೆಲಸ ನಡೆಯುತ್ತಲೇ ಇತ್ತು. ಅದಕ್ಕಾಗಿ ಕೆಲವರನ್ನು ಸರ್ಕಾರ ನೇಮಿಸಿರುತ್ತಾರೆ.

ನಾವು ಹೊಟೆಲಿನಲ್ಲಿ ಬಹಳ ದಿನಗಳಿಂದ ಇದ್ದಿದ್ದರಿಂದ ಅಲ್ಲಿಯ Waiters ಗಳಿಗೆ ನಮ್ಮ ಮುಖ ಪರಿಚಯವಿತ್ತು. ಆದ್ದರಿಂದ ಒಂದು ದಿನ ನಮ್ಮ ಬಳಿ ಬಂದು"ನೀವು ಬಹಳ ದಿನಗಳಿಂದ ಇಲ್ಲಿದ್ದೀರ. ನಿಮ್ಮಿಂದ ಏನಾದರು ಸಲಹೆ ಸೂಚನೆ ಪಡೆಯ ಬೇಕೆಂಬ ಹೆಬ್ಬಯಕೆ ನಮ್ಮದಾಗಿದೆ" ಅಂತ ಹೇಳಿ, Feedback Form ಕೊಟ್ಟು, ಅದನ್ನು ಭರ್ತಿ ಮಾಡಿಯೆಂದು ಹೇಳಿದಳು. ನಾವು ಅದನ್ನು ಭರ್ತಿ ಮಾಡಿದೆವು. ಅವರ ಪೈಕಿ ಕೆಲವರು ವೃದ್ಧೆಯರೂ ಇದ್ದರು. ಕೆಲವರು ಹದಿ ಹರೆಯರೂ ಇದ್ದರು.

ಇದು ಮುಖ್ಯವಾದ ಘಟನೆ. ಪ್ರತಿಸಲವೂ ನನ್ನ ರೂಮಿನ ಬಾಗಿಲು ತೆಗೆಯುವಾಗ ತಪ್ಪದೆ Shock ಹೊಡೆಸಿಕೊಳ್ಳುತ್ತಾಯಿದ್ದೆ. ಅಪರೂಪಕ್ಕೆ Shock ಹೊಡೆಯದೇ ಇದ್ದಲ್ಲಿ ನನಗೆ ಆಶ್ಚರ್ಯವಾಗುತ್ತಿತ್ತು! ಅದರಿಂದ ತಪ್ಪಿಸಿಕೊಳ್ಳಲು ಮೊದ ಮೊದಲು ನಿಧಾನವಾಗಿ ಬಾಗಿಲ ಹ್ಯಾಂಡಲ್ಲನ್ನು ಮುಟ್ಟುತ್ತಿದ್ದೆ ಆದರೂ Shock ಪ್ರಮಾಣ ಎಂದಿನಂತೆಯೇ ಇರುತ್ತಿತ್ತು. ಇದಕ್ಕಾಗಿ ನಾನು ಬಾಗಿಲು ತೆಗೆಯಲು ಕೆಲವೊಮ್ಮೆ Gloves ಬಳಸುತ್ತಾಯಿದ್ದೆ.


ಪ್ರತಿ ನಿತ್ಯವೂ ನನ್ನ ರೂಮನ್ನು ಸ್ವಚ್ಛಗೊಳಿಸುತ್ತಾಯಿದ್ದರು. ಮಡಿಸದೇ ಇದ್ದ ಹೊದಿಕೆಗಳು ಮಡಿಸಿದಂತಿರುತ್ತಿತ್ತು.

ನಮಗೆ ಒದಗಿಸಿದ "Mini Bar" ನಲ್ಲಿ "ಬಾಟಲ್ಲು"ಗಳ ಜೊತೆಗೆ ನಾನು ಕುಡಿಯ ಬಹುದಾದಂತಹ ಬಾಟಲ್ಲುಗಳೂ ಇದ್ದವು. ಅಲ್ಲದೆ Chocolates ಇದ್ದವು. ಯಾವುದನ್ನೂ ಉಪಯೋಗಿಸಲಿಲ್ಲ.

ಕಚೇರಿಯಲ್ಲಿ, ಒಂದು Fridge ಇತ್ತು. ಅಲ್ಲಿಯ ಜನರು ಅವರು ತಂದ ತಿನಿಸುಗಳನ್ನು ಅದರೊಳಗೆ ಇಡುತ್ತಿದ್ದರು. ನಮಗದು ತಿಳಿಯದೆ ಒಂದು ದಿನ ಯಾರೋ ತಂದಿಟ್ಟಿದ್ದ ಪೈನಾಪಲ್ ಜ್ಯೂಸನ್ನು ಕುಡಿದು ಬಿಟ್ಟಿದ್ದೆವು. ಇದನ್ನು ನೆನೆಸಿಕೊಂಡರೆ ಘೋರವಾದ ಪಾಪ ಮಾಡಿದೆವೇನೋ ಅನಿಸುತ್ತದೆ.

ಅಲ್ಲಿಯ Otto (ATM) ನಲ್ಲಿ ಒಮ್ಮೆ ೨೦ Euroಗಳನ್ನು withdraw ಮಾಡಿದ್ದೆ. ಹೆಚ್ಚಿನ ದುಡ್ಡಿನ ಅವಶ್ಯಕತೆ ಇರಲಿಲ್ಲ. ಇಲ್ಲಿಗೆ ಬರುವ ಮುಂಚೆಯೇ ಸ್ವಲ್ಪ ಹಣ ಇತ್ತು. ಅಲ್ಲದೆ ಅಲ್ಲಿ ಎಲ್ಲಾ ಕಡೆಯಲ್ಲೂ Card!

ಕಚೇರಿಯಲ್ಲಿ ಪ್ರತಿದಿನವೂ ತಪ್ಪದೇ ಹಣ್ಣುಗಳನ್ನು ತರಿಸುತ್ತಿದ್ದರು. ನಾನೂ ಕೂಡ ತಪ್ಪದೆ ಆಪಲ್, ಬಾಳೆಹಣ್ಣು, ಆರೆಂಜ್ ಹಣ್ಣುಗಳನ್ನು ತಿನ್ನುತ್ತಾ Suomi ಭಾಷೆಯ ಪತ್ರಿಕೆಗಳನ್ನು ನೋಡುತ್ತಾಯಿದ್ದೆ. ಒಂದು Oven 40 Euros, Camera 210 Euros, 1 Shirt 25 Euro, ಇತ್ಯಾದಿಗಳು. ನಮ್ಮ ಕಚೇರಿಯಲ್ಲಿ TV ಸಹ ಇತ್ತು.

ಅಲ್ಲಿಯ Tramನಲ್ಲಿ ಪ್ರಯಾಣ ಮಾಡಬೇಕು ಅನಿಸಿತ್ತು ಆದರೆ ಆಗಲಿಲ್ಲ.


ಅಲ್ಲಿಯ ರಸ್ತೆ ದಾಟುವಾಗ, ಹಸಿರು ದೀಪವಿದ್ದಾಗಲೇ ದಾಟುತ್ತಾಯಿದ್ದೆವು. ಒಮ್ಮೆ ನಾವು ಬಹಳ ಕಾಲ ನಿಂತಿದ್ದರೂ ಹಸಿರು ದೀಪವು ಹತ್ತಿರಲಿಲ್ಲ. ಆಗ ಅಲ್ಲಿಯ ಕಾರ್ ಸವಾರನೊಬ್ಬ ನಮಗೆ ಕೈ ಸನ್ನೆ ಮಾಡಿ, ಅಲ್ಲಿದ್ದ ಒಂದು Switch ಒತ್ತಲು ಹೇಳಿದ. ಆನಂತರ ನಮಗೆ ಶೀಘ್ರವಾಗಿ ಹಸಿರು ದೀಪ ಹತ್ತಿ, ರಸ್ತೆ ದಾಟಿದೆವು.


ಈ ಚಿತ್ರದ ಎಡ ಭಾಗದಲ್ಲಿ ಗಮನಿಸಿದರೆ ಸೈಕಲ್ ಚಿತ್ರವಿದೆ. ಇಲ್ಲಿ Footpath ಮೇಲೆ ಸೈಕಲ್ ಹೋಗುವ ಪಥ ಕೂಡ ಇದೆ.

ಅಲ್ಲಿಯ ಪ್ರತಿಯೊಂದು ಹೊಟೆಲು, ಕಚೇರಿ, ಮನೆಗಳಲ್ಲಿ ಸರ್ವದಾ ಬಿಸಿ ನೀರು ಇರುತ್ತದೆ. ಅದಲ್ಲದೆ ಪ್ರತಿಯೊಂದು ಕೋಣೆಯಲ್ಲೂ Room Heater ಇರುತ್ತದೆ. ಇದರಿಂದ ರೂಮೊಳಗಿನ ಉಷ್ಣಾಂಶವು ೨೫ರ ಆಸು ಪಾಸು ಇರುತ್ತಿತ್ತು. ಈ ಅನುಭವವೇ
"ಹೊಟೆಲ್
ಒಳಗೂ, office ಒಳಗೂ
ಕಾಲಿಟ್ಟರೆ ಸಾಕು
ಬದುಕುವುದು ನನ್ನ ಜೀವ " ಈ ಸಾಲುಗಳಾಗಿ ಬಂದಿದೆ.

Thursday 6 November, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಶನಿವಾರದ ಅಲೆದಾಟ

ಹಿಂದಿನ ಭಾಗ ಇಲ್ಲಿದೆ

ಶನಿವಾರ ನಮಗೆ ಅತಿಯಾದ ಉತ್ಸಾಹವಿತ್ತು. ಏಕೆಂದರೆ ಅದು ನಮ್ಮ ಕೊನೆಯ ವಾರಾಂತ್ಯ. ಇನ್ನೆರಡು ರಾತ್ರಿಗಳನ್ನು ಕಳೆದರೆ, ನಾವು ದೆಹಲಿಗೆ ಹಾರುವ ವಿಮಾನದೊಳಗೆ ಕೂರ ಬಹುದಾಗಿತ್ತು. ಯಾರ್ಕ್ಕೊ ಹೇಳಿದಂತೆ ಕೆಲವು ತಾಣಗಳನ್ನು ನೋಡಲು ಹೋದೆವು. ಹೊಟೆಲಿನ ಪಕ್ಕದ ರಸ್ತೆಯಲ್ಲಿ ಸಾಗುತ್ತಾಯಿದ್ದೆವು. ನಾವು ರಸ್ತೆ ದಾಟುವ ಸಮಯ ಬಂದಾಗ ಆಕಡೆಯಿಂದ ಒಂದು ಕಾರ್ ಬರುತ್ತಾಯಿತ್ತು. ನಾವು ಸುಮ್ಮನೆ ನಿಂತೆವು. ಆಗ ಆ ಕಾರಿನಲ್ಲಿದ್ದವರು, ಕಾರನ್ನು ನಿಲ್ಲಿಸಿದರು. ನಾವು ಅವನು ಸಾಗಲಿ ಎಂದು ಸುಮ್ಮನಿದ್ದರೆ, ಆತ ನಮಗೆ ಕೈ ಸನ್ನೆ ಮಾಡಿ, "ನೀವು ಮೊದಲು ಹೋಗಿ" ಎಂದನು. ಇದನ್ನು ನೋಡಿ ನನಗೆ ಅತೀಯಾದ ಆಶ್ಚರ್ಯವಾಯಿತು. ಭಾರತದಲ್ಲಿ ನಮಗೆ ಕಾರಿನಲ್ಲಿ ಓಡಾಡೋರು ಯಾರು ತಾನೆ ನಿಲ್ಲಿಸಿ, "ನೀವು ಮೊದಲು ಹೋಗಿ" ಎನ್ನುತ್ತಾರೆ? ಈ ಕಾರಿನ ಅನುಭವ ಒಮ್ಮೆ ಮಾತ್ರವಾದದ್ದಲ್ಲ. ಅನೇಕ ಬಾರಿ ಹೀಗಾಗಿದೆ.


ನಾವು chocolates ಖರೀದಿಸಲು ಒಂದು ಮಾಲಿಗೆ ಹೋಗುತ್ತಾಯಿದ್ದೆವು. ಆಗ ಅಲ್ಲಿಯ ವಾತಾವರಣದಲ್ಲಿ ಮಂಜಿನ ಪ್ರಮಾಣ ಕಡಿಮೆಯಾಗಿತ್ತು. ಕೆಲವು ದಿನಗಳಲ್ಲಿ +೪ C ಗೂ ಉಷ್ಣಾಂಶವಿರುತ್ತಿತ್ತು. ಹಾಗಾಗಿ ಅಲ್ಲಲ್ಲಿ ಹಸಿರು ಕಾಣಿಸುತ್ತಾಯಿತ್ತು. ನಮ್ಮ ಎರಡನೆ ವಾರದಲ್ಲಿ ಬಿಳಿ ಮರಳಿದ್ದ ಪ್ರದೇಶದಲ್ಲೇ ಈಗ ಹುಲ್ಲು ಕಾಣಲಾರಂಭಿಸಿತು.
ನಾವು ಆ ಮಾಲಿನಲ್ಲಿ ಅನೇಕ ಸಮಯ ಕಳೆದು, chocolatesಗಳನ್ನು ಕೊಂಡೆವು. ನಂತರ ಹೆಲ್ಸಿಂಕಿಯ ಬಸ್ ನಿಲ್ದಾಣದಲ್ಲಿ ಹಾಗು ರೈಲು ನಿಲ್ದಾಣದಲ್ಲಿ ತಿರುಗಾಡಲು ಹೋಗುವಾಗ ದಾರಿಯಲ್ಲಿ ನಮ್ಮ ಕಣ್ಣಿಗೆ ಬಿದ್ದ ದೃಶ್ಯವಿದು. ಒಬ್ಬ ನಿರುದ್ಯೋಗಿ, ತನ್ನ ಗಿಟಾರನ್ನು ಹಿಡಿದು ಸಂಗೀತ ನುಡಿಸುತ್ತಾಯಿದ್ದ. ಆತನಿಗೆ ಅಲ್ಲಿಯ ಜನರು ಹಣ ಸಹಾಯ ಮಾಡುತ್ತಾಯಿದ್ದರು. ಈತನ ಹಾಗೆ ಇನ್ನು ಅದೆಷ್ಟೋ ಜನರ ಜೀವನದ ಅಲ್ಪ ಭಾರವನ್ನು ಅಲ್ಲಿಯ ಸರ್ಕಾರ ಹೊತ್ತಿದೆ. ನಿರುದ್ಯೋಗಿಗಳಿಗೆ ಸರ್ಕಾರವು ಮಾಸಿಕ ೫೦೦ Euroಗಳನ್ನು ನೀಡುತ್ತದೆ.

ನಾವು ಬಸ್ ನಿಲ್ದಾಣಕ್ಕೆ ಹೋಗಿ, ಅಲ್ಲಿ ಫೋಟೋಗಳನ್ನು ತೆಗೆದು ಕಾಲ ಕಳೆಯುತ್ತಾಯಿದ್ದೆವು. ರೈಲು ನಿಲ್ದಾಣದಲ್ಲಿ ತಿರುಗಾಡುತ್ತಾಯಿದ್ದಾಗ ನಮ್ಮ ಕಣ್ಣಿಗೆ ಬಿದ್ದದ್ದು "Namaskaar" (ಭಾರತದ ಹೊಟೆಲ್) ನಾವು ಅಲ್ಲಿಗೇನು ಭೇಟಿ ನೀಡಲಿಲ್ಲ.

ಬಸ್ ನಿಲ್ದಾಣದ ಎದುರು, Skating ಆಡುತ್ತಾಯಿದ್ದ ಮಂದಿಯನ್ನು ನೋಡಿ ಸ್ವಲ್ಪ ಹೊತ್ತು ಕಳೆದೆವು. ಅಲ್ಲಿ ಎಲ್ಲಾ ವಯಸ್ಸಿನವರಿದ್ದರು. ಕೆಲವು ಚಿಕ್ಕ ಮಕ್ಕಳು ಅತ್ಯುತ್ಸಾಹದಿಂದ ಆಡುತ್ತಾಯಿದ್ದರೆ ಇನ್ನು ಕೆಲವರು ಭಯಗೊಂಡಿದ್ದರು. ಅಲ್ಲಿಂದ ನಾವು Metro ಸಾರಿಗೆ ನಿಲ್ದಾಣಕ್ಕೆ ಸಾಗಿದೆವು. Metro complex ಒಳಗೆ ನಿಲ್ದಾಣಕ್ಕೆ ತಲುಪುವ ಮುನ್ನ ಅನೇಕ ಅಂಗಡಿಗಳು ಇದ್ದವು. ಎಲ್ಲಾ ಅಂಗಡಿಗಳ ಮಧ್ಯೆ ಇದೂ ಸಹ ಇತ್ತು.
ಇದರೊಳಗೆ ಪ್ರವೇಶಿಸಿದೆವು ಏನಾದರು ಕೊಳ್ಳ ಬಹುದೇ ಎಂದು. ಆದರೆ ನಮಗೆ ಅಲ್ಲಿದ್ದ ವಸ್ತುಗಳೆಲ್ಲಾ ದುಬಾರಿ ಎನಿಸಿತು. ಭಾರತದಲ್ಲಿ ೧೦- ೨೦ ರೂಗಳಿಗೆ ಸಿಗುವ ವಸ್ತುಗಳನ್ನೇ ಇಲ್ಲಿ ೫ Euro, ೮ Euroಗೆ ಮಾರಾಟ ಮಾಡುತ್ತಾಯಿದ್ದರು. ಅಲ್ಲಿಗೆ ಹೋಗಿ ಭಾರತದ ಮುಖಗಳನ್ನು ನೋಡಿ ಹಿಂದಿರುಗಿದೆವು. ಅಷ್ಟರಲ್ಲಿ ಹೊಟ್ಟೆ ಹಸಿದು, ಅಲ್ಲಿದ್ದ ಒಂದು ಹೊಟೆಲಿಗೆ ಹೋದೆವು. ಅಲ್ಲಿ ತಿನ್ನೋಕೆ ಏನಾದರೂ ಸರಿ, ಸಸ್ಯಾಹಾರ ಸಿಕ್ಕರೆ ಸಾಕು ಎಂದಿದ್ದೆ. ಹೋಟೆಲಿನವನಿಗೆ, ಸಸ್ಯಾಹಾರ ತಿನಿಸು ಏನಿದೆ ಎಂದು ಕೇಳಿದೆ. ಆಗ ಅಲ್ಲಿದ್ದ ಒಂದು ತಿನಿಸನ್ನು ತೋರಿಸಿದ. ಇನ್ನೊಮ್ಮೆ ಕೇಳಿದೆ ಇದು ಸಸ್ಯಾಹಾರ ತಾನೆ? ಎಂದು. ಅದಕ್ಕೆ ಅವನು ಹೌದು ಎಂದ. ಅದರ ಹೆಸರನ್ನೂ ಕೇಳದೆ, ಅದರ ದರವನ್ನೂ ನೋಡದೆ, "ಅದನ್ನೇ ಒಂದು ಪ್ಲೇಟ್ ಕೋಡು" ಎಂದೆ. ಅದರ ದರ ೮ - ೯ Euro ಇತ್ತು ಅಂತ ನನ ಜ್ಞಾಪಕ. ಅನ್ನ, ಸಾಂಬರು, ಅದರ ಮಧ್ಯದಲ್ಲಿ ಬೊಂಡವನ್ನು ಹೋಲುವಂತಿದ್ದ ಒಂದು ತಿನಿಸಿತ್ತು. ಅಲ್ಪ ಸ್ವಲ್ಪ ತಿಂದು, ಅಲ್ಲಿಂದ ಹೊರಟೆವು.

Metroವು ಭೂಮಿಗಿಂತ ಸಾಕಷ್ಟು ತೆಳ ಭಾಗದಲ್ಲಿ ಇತ್ತು. ತಲುಪಿದ ಮೇಲೆ ಎಷ್ಟು ಆಳಕ್ಕೆ ಇಳಿದೆವೆಂದರೆ:

ಅಲ್ಲಿ ಪ್ರತಿ ೨ ನಿಮಿಷಕ್ಕೆ ಒಂದು ಮೆಟ್ರೋ ರೈಲು ಬರುತ್ತಾಯಿತ್ತು. ನಿಲ್ದಾಣದಲ್ಲಿ ಸಮೂದಿಸುತ್ತಾಯಿದ್ದ ಸಮಯಕ್ಕೆ ಸರಿಯಾಗಿಯೇ ಬರುತ್ತಾಯಿತ್ತು. ಬಂದ ತಕ್ಷಣವೇ ಅದರ ಬಾಗಿಲು ತೆಗೆದು, ೧೫-೨೦ ಸೆಕೆಂಡಿನೊಳಗೆ ಶಬ್ದ ಮಾಡಿ, ಬಾಗಿಲನ್ನು ಮುಚ್ಚಿ, ಮುಂದೆ ಸಾಗುತ್ತಾಯಿತ್ತು. ಆ ಮೆಟ್ರೋದ ಚಾಲಕರ ಪೈಕಿ ಹೆಂಗಸರೂ ಇದ್ದರು.

ಮೆಟ್ರೋದಿಂದ ಹೊರ ಬಂದಾಗ, ಕೆಲವು ಪೋಲೀಸರು ಒಬ್ಬ ಕಳ್ಳನನ್ನು ಹಿಡಿಯುವ ದೃಶ್ಯ ನೋಡಿದೆವು. ಅಲ್ಲಿ ಏನಾಗುತ್ತಾಯಿದೆ ಎನ್ನುವಷ್ಟರಲ್ಲಿ ಕಳ್ಳನನ್ನು ಹಿಡಿದು ಕೊಂಡು ಹೋಗಿ ಬಿಟ್ಟರು. ನನ್ನ ಮೊಬೈಲಿಗೆ ಕೆಲಸವೇ ಸಿಗಲಿಲ್ಲ! ನಂತರ ಅಲ್ಲಿಯ ನಗರದ ಮತ್ತಷ್ಟು ಪ್ರವಾಸಿ ತಾಣದ ಬಗ್ಗೆ ಹೆಲ್ಸಿಂಕಿಯ ಟೂರ್ ಪುಸ್ತಕದಿಂದ ನೋಡಿದೆವು. ಹತ್ತಿರದಲ್ಲೆ ಪೋಸ್ಟ್ ಆಫೀಸ್ ಇತ್ತು. ಅಲ್ಲಿಗೆ ಹೋದೆವು. ಕೋಶಿಯು "ತನ್ನವರಿಗೆ" ಬೇಕೆಂದು ಕೆಲವು Stamps ಹಾಗು ಗ್ರೀಟಿಂಗ್ ಕಾರ್ಡ್ ಖರೀದಿಸಿದ. ನನಗೆ Stampಗಳಲ್ಲಿ ಆಸಕ್ತಿಯಿರಲಿಲ್ಲ. ನನಗೆ ಹೆಲ್ಸಿಂಕಿಗೆ ಬಂದ ಮೇಲಂತೂ ಪ್ರತಿ ಗಂಟೆಗೊಮ್ಮೆ ಉಷ್ಣಾಂಶ ನೋಡುವುದು ರೂಢಿಯಾಗಿತ್ತು. ಕಚೇರಿಗೆ ಬಂದೊಡನೆ, http://weather.yahoo.com ಕ್ಲಿಕ್ಕಿಸಿ, ತಕ್ಷಣದ ಉಷ್ಣಾಂಶ ತಿಳಿಯುತ್ತಾಯಿದ್ದೆ. ಹಾಗಾಗಿ ಅಲ್ಲೊಂದು ಉಷ್ಣಮಾಪಕ ಖರೀದಿಸೋಕೆ ಮುಂದಾದೆ. ಎರಡು ಬೇರೆ ಬೇರೆ ವಿನ್ಯಾಸದ ಉಷ್ಣಮಾಪಕವನ್ನು ಗಮನಿಸಿದೆ. ಎರಡರಲ್ಲೂ ಒಂದೇ ಸಮನಾದ ಉಷ್ಣಾಂಶವಿರಲಿಲ್ಲ! ಯಾವುದು ಸರಿ ಇವುಗಳಲ್ಲಿ ಅಂತ ತಿಳಿಯದೆ ಅದನ್ನು ಖರೀದಿಸುವ ಆಸೆ ಬಿಟ್ಟೆ!

ಮುಂದೆ ನಮ್ಮ ಪಟ್ಟಿಯಲ್ಲಿದ್ದದ್ದು "Kamppi". ಈ ಪ್ರದೇಶವು ಬಸ್ ನಿಲ್ದಾಣಕ್ಕೂ ನಮ್ಮ ಹೋಟೆಲಿಗೂ ಮಧ್ಯ ದಾರಿಯಲ್ಲಿ ಇದೆ. ಇಲ್ಲೂ ನಾವು ಏನನ್ನೂ ಖರೀದಿಸದೆ ಸಾಗುತ್ತಾಯಿದ್ದೆವು. ಆಗ ಅಲ್ಲಿ ಕೆಲವರು ವಿವಿಧ ರೀತಿಯ ಆಟಗಳನ್ನು ಆಡುತ್ತಾಯಿದ್ದರು. ಅದನ್ನು ನೋಡಿಕೊಂಡು ಕಾಲ ಕಳೆದೆವು. ನಾವು ಕಡೆಯ ಮಹಡಿ ಹತ್ತಿದಾಗ ಜನರು ಗುಂಪು ಅವರತ್ತ ಸಾಗುವಂತೆ ಮಾಡಿತು. ವಿಪರೀತ ಕಿರುಚಾಟವಿತ್ತು. ಆಗ ಅಲ್ಲಿ ಫ್ಯಾಶನ್ ಶೋ ನಡಿಯುತ್ತಾಯಿತ್ತು. ಅಂಗನೆಯರು ಬೆಕ್ಕಿನ ನಡಿಗೆಯಲ್ಲಿ ಬಂದು ಹೋಗುತ್ತಾಯಿದ್ದರು. ಅಲ್ಲಿದ್ದವರ ಕ್ಯಾಮರ ಹಾಗು ಮೊಬೈಲಿಗೆ ಕೆಲಸ ಹೆಚ್ಚಾಗಿತ್ತು. ಒಂದು ಅದ್ಭುತವಾದ ಫ್ಯಾಶನ್ ಶೋ ನೋಡಿದೆ. ನಂತರ ಅಲ್ಲಿ ಕುಣಿತವೂ ಇತ್ತು. ಎಲ್ಲದರ ವಿಡಿಯೋ ಮುಂದಿನ ಪೋಸ್ಟ್ ಗಳಲ್ಲಿ ಹಾಕುತ್ತೇನೆ. ಇದನ್ನು ಮುಗಿಸಿಕೊಂಡು ಹೊಟೆಲಿಗೆ ಬಂದು ನನ್ನ Packing ಶುರು ಮಾಡಿದೆ. ಆ ರಾತ್ರಿ "Terminator" ಸಿನೆಮಾ ನೋಡಿದ ನೆನೆಪು.

Monday 27 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಪ್ರಾಜೆಕ್ಟ್ ಡೆಮೊ

ಹಿಂದಿನ ಭಾಗ ಇಲ್ಲಿದೆ

ಮೂರನೆ ವಾರದಲ್ಲಿ:
ನಾವು ಇಲ್ಲಿಗೆ ಬಂದ ಮೊದಲನೆ ಅಥವಾ ಎರಡನೆ ದಿನವೇ ನಮ್ಮ Senior Executive ನನ್ನ ಬಳಿ ಬಂದು, "ನೀನು ಕಲ್ತಿರೋ Toolನಲ್ಲಿ ಪ್ರಾಜೆಕ್ಟ್ ಹೇಗೆ execute ಮಾಡುತ್ತೀಯ? ಅದರ Demo ನ ನೀನು ಹೋಗುವ ಮೊದಲು ತೋರಿಸೋದಕ್ಕೆ ಆಗುತ್ತಾ?" ಅಂತ ಕೇಳಿದರು. ಅವರಿಗೆ ನಾನು ಸರಿ, Basic Module ತೋರಿಸ ಬಹುದು ಎಂದೆ. ಅದಕ್ಕೆ ಅವರು ನಾವು ಹೋಗುವ ಮುನ್ನ ಒಂದು ದಿನವನ್ನು ನಿಶ್ಚಯಿಸಿ ಆ ದಿನಕ್ಕೆ ನಾನು Demo ಕೊಡ ಬೇಕೆಂದು ಹೇಳಿದರು. ಇದಕ್ಕಾಗಿ ನಾನು ಪ್ರಾಜೆಕ್ಟಿನ ಬಹು ಮುಖ್ಯ ವಿಷಯಗಳನ್ನು ಚೆನ್ನಾಗಿ ಅರಿತು ಕೊಳ್ಳುತ್ತಾಯಿದ್ದೆ. ಎರಡು ವಾರಗಳ ಸತತ ಅಭ್ಯಾಸದಿಂದ ಹಾಗು Sergey, Jarkko ರವರಿಂದಲೂ ಮಾರ್ಗದರ್ಶನ ಪಡೆದು Demo ಕೊಡಲು ಸಿದ್ಧತೆ ನೆಡೆಸುತ್ತಾಯಿದ್ದೆ.

ತೆರೋ ಇಲ್ಲಿಗೆ ಬಂದ ದಿನ Execution ಹೇಗೆ ಪ್ರಾರಂಭಿಸಿ ಬೇಕು ಎಂದು KT ತೆಗೆದು ಕೊಂಡಿದ್ದರು. ಆದರೆ ನಾನು ಪ್ರಾರಂಭಿಸುವುದಕ್ಕೆ ಆಗಲಿಲ್ಲ. ಅವರ Laptopನಲ್ಲಿದ್ದ Software ಇಂದ execution ಬಗ್ಗೆ ಹೇಳಿದರು. ಆದರೆ ನನ್ನ Computerನಲ್ಲಿ ಆ Software Install ಆಗಿದ್ದರೂ ಸರಿಯಾಗಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಈ ಸಮಸ್ಯೆಗೆ ಕಾರಣ ಹುಡುಕಲು ನನಗಾಗಲೀ, ತೆರೋಗಾಗಲಿ ತಿಳಿಯಲಿಲ್ಲ. ಆದ್ದರಿಂದ ತೆರೋ ಆ Tool ಕಂಪನಿಯ Support Teamಗೆ ಒಂದು Mail ಕಳುಹಿಸಿದರು. ನಮ್ಮ ದುರಾದೃಷ್ಟ, ಮಾರನೆ ದಿನವೇ ಉತ್ತರವು Suomi ಭಾಷೆಯಲ್ಲಿ ಬಂದು ಸೇರಿತು. ಅದರೊಂದಿಗೆ ಕೆಲವು Attachmentsಗಳು ಇದ್ದವು. ಅವೆನ್ನಲ್ಲಾ Download ಮಾಡಿ, ಯಾರ್ಕ್ಕೊ ಬಳಿ ಹೋದೆವು. "ಯಾರ್ಕ್ಕೊ, ಆ Mailನಲ್ಲಿ ಏನು ಬರೆದಿದ್ದಾರೆ ಎಂಬುದನ್ನು ತಿಳಿಸಿ ಎಂದು ಕೇಳಿಕೊಂಡೆವು. ಅದಕ್ಕೆ ಯಾಕ್ಕೊ ತಮ್ಮ mail ನೋಡಿ, ಇದನ್ನು ನಿಮಗೆ ಆಂಗ್ಲ ಭಾಷೆಯಲ್ಲಿ ತರ್ಜುಮೆ ಮಾಡಿ ಕಳುಹಿಸುತ್ತೇನೆ ಎಂದು ಹೇಳಿ, ಸ್ವಲ್ಪ ಸಮಯದಲ್ಲೇ ಆಂಗ್ಲ ಆವೃತ್ತಿ ನಮ್ಮ Mailboxಗೆ ಬಂದು ಸೇರುವಂತೆ ಮಾಡಿದರು. ಅದನ್ನು ಓದಿದ ಮೇಲೆ, ನನ್ನ ಸಮಸ್ಯೆಗೆ ತಕ್ಕೆ ಉತ್ತರವನ್ನು ಕಳುಹಿಸಿರುವುದು ತಿಳಿಯಿತು. ತದನಂತರ ನನ್ನ ಕೆಲಸ ಅತಿ ವೇಗದಲ್ಲಿ ಸಾಗಿತು. ನಾನು Demo ಕೊಡಲು ಸಿದ್ಧನಾಗಿದ್ದೆ.

ನಾಲ್ಕನೆ ವಾರ:
ನಾನು Demo ಕೊಡಬೇಕಾದ ದಿನ ಬಂತು. ಆ ದಿನ Tapani,( ನಮ್ಮ Sr. Executive), Jarkko, Michael Bevesdorf ಹಾಗು ಇನ್ನು ಕೆಲವರು ಇದ್ದರು. Demo ಮುಗಿದ ನಂತರ ಅವರಿಗೆ ಪ್ರಾಜೆಕ್ಟ್ ಸಾಗುತ್ತಿರುವ ಬಗ್ಗೆ ಹೆಮ್ಮೆಯಾಯಿತು.

ಆ ದಿನ ಶುಕ್ರವಾರವಾದ್ದರಿಂದ ಎಲ್ಲರೂ ಹೋಗುವ ಮುನ್ನ ನಮ್ಮ ಪ್ರಯಾಣಕ್ಕೆ ಶುಭ ಹಾರೈಸಿದರು. "Convey my regards to ಬಾಂಗಲೋರ್ Team" ಅಂತ ಹೇಳಿದರು. ಅಲ್ಲಿಯವರೆಲ್ಲಾ ನಮಗೆ ಅಲ್ಲಾದ ಅನುಭವವೇನು ಎಂಬುದಾಗಿ ಕೇಳಿ, ಅತೀ ಆತ್ಮೀಯತೆಯಿಂದ ಮಾತನಾಡಿಸಿದರು. ಯಾರ್ಕ್ಕೊ ನಮಗೆ ಮತ್ತಷ್ಟು ಪ್ರವಾಸಿ ತಾಣಗಳ ಬಗ್ಗೆ ಹೇಳಿದರು. Demo ವಿಚಾರವನ್ನು ಈಗ ಮರೆತು, ನನ್ನ ನಾಲ್ಕನೆ ವಾರದ ವಿಷಯಕ್ಕೆ ಬರುತ್ತೇನೆ.

ಇದು ಕಡೆಯ ವಾರವಾದ್ದರಿಂದ ನನಗೆ, ನನ್ನ ಗೆಳಯರಿಂದಲೂ, ನೆಂಟರಿಂದಲೂ ತಮಗಾಗಿ ಏನಾದರು ತರುವುದಕ್ಕೆ ಮೇಲಿಂದ ಮೇಲೆ ಬೇಡಿಕೆಗಳು ಬರುತ್ತಾಯಿದ್ದವು. ಒಂದು ದಿನ ನಮ್ಮ ಕಚೇರಿಯ ಸಮೀಪದಲ್ಲೇ ಇದ್ದ Verkkokauppa mall ಗೆ ಹೋದೆ. ಎಂದಿನಂತೆ ಅಲ್ಲಿ Window shopping ಮಾಡಿ, ಕೆಲವು ಪ್ರತಿಷ್ಠಿತ ಮೊಬೈಲ್ ಫೋನಿನ ಬೆಲೆಗಳನ್ನು ಬರೆದು ಕೊಂಡು ಬಂದೆ. ನನಗಾಗಿ ಬೇಕಾದ ವಸ್ತುವೆಂದರೆ ಒಂದು ಡಿಜಿಟಲ್ ಕ್ಯಾಮರ. ಅದರ ಬೆಲೆಯನ್ನೂ ಬರೆದು ಕೊಂಡು ಬಂದೆ. ನನಗೆ ಅವೆಲ್ಲಾ ತುಂಬಾ ದುಬಾರಿಯೆನಿಸಿತು. ಭಾರತದಲ್ಲಿ ಇಲ್ಲಿಗಿಂತ ಕಡಿಮೆ ದರಕ್ಕೆ ಫೋನುಗಳು ಸಿಗುತ್ತವೆಯೆಂದು ಗೊತ್ತಾಯಿತು. ನಂತರ ನನಗೆ ಕೇಳಿದವರಿಗೆ ಅದರ ಬೆಲೆಯನ್ನು ಹೇಳಿ, ಭಾರತದ ಬೆಲೆಯನ್ನೂ ಹೇಳಿದೆ. ಆಗ ಅವರೆಲ್ಲಾ ಏನೂ ತರ ಬೇಡ ಅಲ್ಲಿಂದ ಎಂದು ಸುಮ್ಮನಾದರು. ನನ್ನ ಡಿಜಿಟಲ್ ಕ್ಯಾಮರಾದ ಕನಸು ಕನಸಾಯಿತು.

ಈ ವಾರಾಂತ್ಯಕ್ಕೆ ನಾವು ಸುಮನ್ ಮನೆಗೆ ಹೋಗ ಬೇಕಿತ್ತು. ಈತ ನಮ್ಮ ಮಾಜಿ ಸಹೋದ್ಯೋಗಿ. ಅವರಿಗೆ ಭಾನುವಾರ ಬರುವುದಾಗಿ Scrap ಮೂಲಕ್ ಕೋಶಿ ಹೇಳಿದ. ಹೀಗಿರುವಾಗ ಒಂದು ಸಂಜೆ ನಾನು ಕೆಲವು Chocolates ಖರೀದಿಸಲು ಅಂಗಡಿಗೆ ಹೋದೆ. ನಾನು ಕೆಲವು ಅಂಗಡಿಗಳಲ್ಲಿ ತಿರುಗಾಡಿ, ಯಾವುದೋ ಒಂದು ಅಂಗಡಿಯಲ್ಲಿ ಕೆಲವು chocolatesಗಳನ್ನು ಖರೀದಿಸಿದೆ. ಆಗ ನನ್ನ ಕಣ್ಣಿಗೆ ಬಿದ್ದದ್ದು ಒಂದು ಆಟಿಕೆ (Cruise). ಅದನ್ನು ನನ್ನ ಗುಂಡ ನಂಬರ್ ೧ (ಆದಿತ್ಯ)ಗೆ ತೆಗೆದು ಕೊಂಡೆ. ಆಮೇಲೆ ಒಂದು Dianosorus ಆಟಿಕೆಯನ್ನು ನನ್ನ ಪುಟಾಣಿ ನಂ ೨ (ಸಹನ)ಗೆ ತೆಗೆದು ಕೊಂಡೆ. ನನ್ನ ಪುಟಾಣಿ ನಂ ೧ (ಶದ್ದು)ಗೆ ಮೆಚ್ಚುಗೆಯಾಗುವ Barbie ಬೊಂಬೆಗಳು ನನ್ನ ಕಣ್ಣಿಗೆ ಬೀಳಲಿಲ್ಲ. ಇಷ್ಟನ್ನೆಲ್ಲಾ ಕೊಂಡು ಕೊಂಡು ಹೊಟೆಲಿಗೆ ಬಂದೆ. ನಂತರ ನನ್ನ Packing ಕಾರ್ಯವನ್ನು ಸ್ವಲ್ಪ ಸ್ವಲ್ಪವಾಗಿಯೇ ಶುರುಮಾಡಿದೆ.

Tuesday 21 October, 2008

ಫಿನ್ ಲ್ಯಾಂಡಿಗೆ ಪ್ರವಾಸ(೧) - ಕೃಷ್ಣ ದರ್ಶನ - ಭಾರಿ ಭೋಜನ!

Moi (Hi)

ಹಿಂದಿನ ಭಾಗ ಇಲ್ಲಿದೆ

ಬಟ್ಟೆ ಒಗೆಯುವುದು:
ಈ ಭಾಗ ಎರಡನೆ ವಾರದ ಮಧ್ಯದಲ್ಲೆ ಪ್ರಾರಂಭವಾಗ ಬೇಕಿತ್ತು ಆದರೆ ಈಗ ಬರೆಯುತ್ತಿದ್ದೇನೆ. ವಾರದಲ್ಲಿ ಧರಿಸಿದ ಬಟ್ಟೆಯನ್ನು ವಾರಾಂತ್ಯದಲ್ಲಿ ಒಗೆಯುವುದೆಂದು ಅಂದುಕೊಂಡರೂ ವಾರದ ಮಧ್ಯದಲ್ಲೇ ಸಮಯವಿದ್ದರಿಂದ ಆಗಲೆ ಒಗೆಯುವುದಕ್ಕೆ ತೀರ್ಮಾನ ಮಾಡಿದೆ. ಹೊಟೆಲಿನಲ್ಲಿ ಬಟ್ಟೆ ಒಗೆಯುವು ವ್ಯವಸ್ಥೆ ಇದ್ದರೂ ಕೂಡ ನಾನೆ ಒಗೆಯುವುದು ಸರಿ ಎಂದು ಭಾವಿಸಿದ್ದೆ. ನಮ್ಮ ಮನೆಯಲ್ಲಿ ವಾರಾಂತ್ಯಗಳಲ್ಲಿ ಹಾಗು ಈಗಲೂ ಅಮ್ಮನಿಗೆ ಬಟ್ಟೆ ಒಗೆಯಲು ಸಹಾಯ ಮಾಡಿ ಅನುಭವವಿದ್ದರಿಂದ ನನಗೆ ಬಟ್ಟೆ ಒಗೆಯುವುದು ಬೇಜಾರಾಗಲಿಲ್ಲಿ. ಅದಕ್ಕಾಗಿಯೇ ಅಮ್ಮ ನನಗೊಂದು Soapನ್ನೂ ಕೂಡ ಲಗ್ಗೇಜ್ ಜೊತೆ ಇಟ್ಟಿದ್ದರು. ನಾನು ಬಹಳ ಉತ್ಸಾಹದಿಂದ ಬಚ್ಚಲು ಮನೆಗೆ ಬಟ್ಟೆ ನೆನೆಸೋಕೆ ಹೋದೆ. ಆದರೆ ಅಲ್ಲಿ ನೆನೆಸೋಕೆ ಒಂದು bucket ಕೂಡ ಇರಲಿಲ್ಲ. ಆಮೇಲೆ ತಲೆ ಉಪಯೋಗಿಸಿದೆ. Wash basin ನ ನೀರು ಹೋಗದಂತೆ ಮಾಡಿ, ಬಟ್ಟೆಯನ್ನು ಅಲ್ಲಿ ನೆನೆಸಿದೆ.
ನಾನು ಷರ್ಟ್ ಹಾಗು ಪ್ಯಾಂಟನ್ನು ನೆನೆಸಿ ಮೊದಲು ಒಗೆದೆ. ಅದೇನೋ ಸಕ್ಕತ್ತಾಗಿ ಸ್ವಚ್ಛವಾಯಿತು. ಅಲ್ಲಿಯೇ ಇದ್ದ ಒಂದು ಪೈಪಿನ ಮೇಲೆ ಒಣ ಹಾಕಿದೆ. ಆಮೇಲೆ ನನ್ನ Thermal Wearನ್ನು ನೆನೆಸಿದೆ. ಅದನ್ನು ನೆನೆಸಿ ಸ್ವಲ್ಪ ಕ್ಷಣದಲ್ಲೆ ಗಬ್ಬು ವಾಸನೆ ನನ್ನ ರೂಮನ್ನೆಲ್ಲಾ ಆವರಿಸಿತು. ನನಗಂತೂ ಇದನ್ನು ನೆನೆಸಿದ್ದೇ ತಪ್ಪಾಯಿತೇನೋ ಅನಿಸಿತು. ಈಗಲು ಆ ದುರ್ನಾತ ನನ್ನ ಮೂಗಿಗೆ ಬಂದಂತೆ ಆಗುತ್ತಿದೆ. ಆ ದುರ್ನಾತದಲ್ಲೂ ಒಮ್ಮೊಮ್ಮೆ ನನ್ನ ಕೈ ಮೂಸಿಕೊಂಡು ನೋಡಿಕೊಳ್ಳುತ್ತಾಯಿದ್ದೆ. ಈ ದುರ್ನಾತಕ್ಕೆ ಏನು ಕಾರಣವೆಂದು ಕಂಡು ಹಿಡಿಯ ಬೇಕೆಂದು ಕೊಂಡೆ. ಆದರೆ ನಾನು ವಿಜ್ಞಾನಿಯಲ್ಲವೆಂದು ಅಂತರ್ವಾಣಿ ಹೇಳಿತು. ಬಹುಶಃ ಪ್ರಾಣಿಯ ಚರ್ಮದ ವಾಸನೆ ಆಗಿರಬೇಕು.

ಈ ಬಟ್ಟೆ ಒಗೆಯೋ ಕಾರ್ಯ ೨ ವಾರ ನಡೆಯಿತಷ್ಟೆ. ಕಡೆಯ ವಾರದಂದು ಒಗೆಯುವ ಕಾರ್ಯವನ್ನು ಮುಂದೂಡಿಸಿದೆ. ಏಕೆಂದರೆ ಭಾರತಕ್ಕೆ ತರಳ ಬೇಕಿತ್ತು. ಅಲ್ಲಿ ಅಮ್ಮ ನನಗಿಂತಲೂ ಸ್ವಚ್ಛ ಮಾಡುವಾಗ ನಾನೇಕೆ ಒಗೆಯಲಿ ಎಂದು ಸುಮ್ಮನಾದೆ.

ಅಲ್ಲಿಯ ಜನರು:

ಅಲ್ಲಿಯ ಜನರಂತೂ ಸಹಾಯ ಹಸ್ತಕ್ಕೆ ಎತ್ತಿದ ಕೈ ಎನಿಸಿತು. ಯಾರನ್ನಾದರೂ ಸಹಾಯ ಬೇಡ ಬಹುದಾಗಿತ್ತು. ನಮ್ಮ ಪ್ರಾಜೆಕ್ಟ್ ಅಲ್ಲದೇ ಬೇರೊಂಡು ಪ್ರಾಜೆಕ್ಟಿನವರು ಇದ್ದರು. ನನ್ನ ಪರಿಚಯವಿಲ್ಲದಿದ್ದರೂ ಬೆಳಿಗ್ಗೆ ಬಂದ ತಕ್ಷಣ "Terve" (ತೆರ್ವೆ..) (Hello) ಎನ್ನುತ್ತಾಯಿದ್ದರು. ನನಗೆ ಅವರ ಭಾಷೆ ಗೊತ್ತಿಲ್ಲದಿದ್ದರಿಂದ, "Good Morning" ಎನ್ನುತ್ತಿದ್ದೆ.

ಈಗ ಮತ್ತೆ ನನ್ನ ವಾರ ಹಾಗು ವಾರಾಂತ್ಯದ ಬದುಕಿನ ಕಡೆಗೆ.

ಮೂರನೆ ವಾರ:
ಈ ವಾರದಲ್ಲಿ ನಮಗೆ ಇನ್ನೊಂದು Knowledge Transfer (KT) ಕಾರ್ಯಕ್ರಮ ಇತ್ತು. ಬರುವ ವ್ಯಕ್ತಿಯ ಹೆಸರು ತೆರೊ ಮಾಯ್ಸಿಯೋ (Tero Moisio). ಆತ ತಾಂಪರೆ (Tampere) ಊರಿಂದ ಬರಬೇಕಿತ್ತು. ಈ ವ್ಯಕ್ತಿಯನ್ನು ನಾನು ಮುಂದಿನ ಲೇಖನಗಳಲ್ಲೂ ಹೇಳುತ್ತೇನೆ. ಆತನೊಂದಿಗೆ ಬೆಂಗಳೂರಿಂದ ಪ್ರತಿ ವಾರದಲ್ಲೂ Status Call ಮೂಲಕ ಸಂಪರ್ಕದಲ್ಲಿದ್ದೆ. ಅದಲ್ಲದೆ MSN Messenger ಮೂಲಕವೂ ಪ್ರತಿ ದಿನ ನನ್ನ ಮೊದಲ Project ಬಗ್ಗೆ ಮಾತು ಕತೆಯಾಡುತ್ತಾಯಿದ್ದೆವು. ಈಗ ನಾನು ಹೋಗಿದ್ದು ನನ್ನ ಎರಡನೆ ಪ್ರಾಜೆಕ್ಟ್.

ತೆರೋರನ್ನು ಭೇಟಿ ಮಾಡಿ, ಅವರಿಂದ KT ಮುಗಿದ ಮೇಲೆ ಮತ್ತೆ ನನ್ನ ಕೆಲಸದ ಕಡೆ ಗಮನ ಕೊಟ್ಟೆ. ನಮ್ಮ ಇಡೀ ಕಂಪನಿಯಲ್ಲಿ ತೆರೋ ಹಾಗು ನನಗೆ ಬಿಟ್ಟು ಇನ್ನುಳಿದವರಿಗ್ಯಾರಿಗೂ ನಾವು ಉಪಯೋಗಿಸುತ್ತಾಯಿದ್ದ Tool (Software) ತಿಳಿದಿರಲಿಲ್ಲ. ಈ software ಅನ್ನು ಮರೆಯುವಂತಿಲ್ಲ. ಅದರಿಂದಲೇ ನನಗೆ ಫಿನ್ ಲ್ಯಾಂಡಿಗೆ ಬರೋ ಯೋಗ ಸಿಕ್ಕಿತೆಂದು ಭಾವಿಸಿದ್ದೇನೆ. ಇದನ್ನು ಅತಿಶಯೋಕ್ತಿಗೆ ಹೇಳುತ್ತಿಲ್ಲ. ನನಗೆ ಏನಾದರು ಸಂಶಯ ಬಂದರೆ ಅದನ್ನು ಪೂರ್ಣವಾಗಿ ನಾನೇ ನಿಭಾಯಿಸಬೇಕು. ತೆರೊ ಇದ್ದರಾದರೂ ಅವರಿಗೆ Coding ಹೆಚ್ಚಾಗಿ ಬರುತ್ತಿರಲಿಲ್ಲ. ಮೇಲ್ನೋಟದ ವಿಚಾರಗಳನ್ನು ತುಂಬಾ ಸ್ಪಷ್ಟವಾಗಿ ಹೇಳುತ್ತಾಯಿದ್ದರು. ಅದನ್ನು ನಮ್ಮ projectಗೆ ಹೊಂದುವಂತೆ ಮಾಡಬೇಕಾದ ದೊಡ್ಡ ಜವಾಬ್ದಾರಿ ನನ್ನ ಮೇಲೆ ಇತ್ತು.

ಪ್ರತಿ ದಿನ ನನ್ನ ಅಪ್ಪ ಹಾಗು ಅಮ್ಮ ಕೃಷ್ಟನ ದೇವಸ್ಥಾನಕ್ಕೆ ಹೋಗು ಅಂತ ಹೇಳುತ್ತಲೇ ಇದ್ದರು. ಹಾಗಾಗಿ ಒಂದು ದಿನ ಕೆಲಸವಾದ ಮೇಲೆ ಒಮ್ಮೆ ನೋಡಿ ಕೊಂಡು ಬರೋಣ. ಶನಿವಾರ ಹಾಗು ಭಾನುವಾರ ಪ್ರಾರ್ಥನೆ ಹಾಗು ಭೋಜನ ಮಾಡೋಣ ಅಂತ ಯೋಚಿಸಿ, ದೇವಸ್ಥಾನವಿದ್ದ ರಸ್ತೆಯ ಹೆಸರನ್ನು (Ruoholahdenkatu) ಒಂದು ಹಾಳೆಯ ಮೇಲೆ ಬರೆದು ಕೊಂಡು Google Maps ತೋರಿಸಿದ ದಾರಿಯಲ್ಲೇ ನಡೆದೆ. ಅಲ್ಲಿ ರಸ್ತೆಯ ಹೆಸರು ಎಲ್ಲಿ ಹುಡುಕಿದರೂ ನನ್ನ ಕಣ್ಣಿಗೆ ಬೀಳಲೇಯಿಲ್ಲ. ಹಾಗಾಗಿ ಅಲ್ಲಿಂದ ಒಬ್ಬಾಕೆಯ ಬಳಿ ದಾರಿ ಕೇಳಲು ಹೋದೆ. ಆಕೆ ಆಗಲೇ ತನ್ನ ಕಾರನ್ನು ಏರುತ್ತಾಯಿದ್ದಳು. Hi. "Where is this Road?" ಅಂತ ಕೇಳಿದೆ. ಆಗ ಆಕೆ ಕಾರನ್ನು ಏರದೇ.. ಸ್ವಲ್ಪ ನಡೆದು ಬಂದು ಆ ರಸ್ತೆಯ ಕಡೆ ಕೈ ತೋರಿಸುತ್ತಾ, "Here it is" ಎಂದಳು. ಅವಳಿಗೆ ಧನ್ಯವಾದ ಹೇಳಿ, ಕೃಷ್ಣನ ಹುಡುಕುವ ಪ್ರಯತ್ನ ಮಾಡಿದೆ. ಆ ರಸ್ತೆಯಲ್ಲಿ ಹಾಗೆ ಸಾಗಿ ಬಂದು Google ನಮೂದಿಸಿರುವ ನಂಬರನ್ನು ಹುಡುಕಿದೆ. ಅಲ್ಲಿ ದೊಡ್ಡ ಗೇಟೊಂದಿತ್ತು. ತಲೆ ಮೇಲೆತ್ತಿ ನೋಡಿದರೆ ಗೋಪುರವೇ ಇಲ್ಲ! ನನ್ನ ಮನಸ್ಸಿನಲ್ಲಿ ದೇವಸ್ಥಾನ ಭಾರತದಲ್ಲಿಯ ಹಾಗೆಯೇ ಒಂದು ಗೋಪುರವೆಲ್ಲಾ ಇರುತ್ತೆ ಅಂತ ತಿಳಿದಿದ್ದೆ. ಇಲ್ಲಿ ಹಾಗಿರಲಿಲ್ಲ. ಆ ಗೇಟಿಂದ ಇಣುಕಿ ನೋಡಿದೆ. ಒಂದು ಮೈದಾನದ ರೀತಿ ಇತ್ತು. ಅಲ್ಲಿ ದೇವಸ್ಥಾನವಿರ ಬಹುದು ಎಂದು ತೀರ್ಮಾನಿಸಿ, ಈ ವಾರಾಂತ್ಯ ಕಾರ್ಯಕ್ರಮ ಇಲ್ಲೇ ಅಂತ ಅಂದುಕೊಂಡೆ.

ಈ ಮಧ್ಯೆ ನಮ್ಮ ಕಂಪನಿಯ ಮಾಜಿ ನೌಕರರಿಬ್ಬರು Helsinki ಹತ್ತಿರಕ್ಕೆ ಇರುವ ಊರು Espoo ನಲ್ಲಿ ಒಂದು ಕಂಪನಿಗೆ ದುಡಿಯುತ್ತಾಯಿದ್ದರು. ನನ್ನ ಸಹೋದ್ಯೋಗಿ ಅವರೊಂದಿಗೆ ಆರ್ಕುಟ್ ಮೂಲಕ ಸಂಪರ್ಕದಲ್ಲಿದ್ದ. ಅವರು ನಮ್ಮಿಬ್ಬರನ್ನು ಒಂದು ವಾರಾಂತ್ಯಕ್ಕೆ ಅವರ ಮನೆಗೆ ಬರಲು ಆಮಂತ್ರಿಸಿದರು. ಈ ವಿಷಯವನ್ನು ನನಗೆ ಹೇಳಿದ. ನಾನು ಒಪ್ಪಿದೆ. ಹಾಗಾಗಿ ಈ ವಾರಾಂತ್ಯಕ್ಕೆ ಅವರಲ್ಲಿ ಒಬ್ಬನ ಮನೆಯಲ್ಲಿ ಕಳೆಯುವುದು ,ಮುಂದಿನ ವಾರ ಇನ್ನೊಬ್ಬನ ಮನೆಯಲ್ಲಿ ಎಂದು ತೀರ್ಮಾನವಾಯಿತು.


ಶನಿವಾರ ಬಂತು. ನಾವಿಬ್ಬರೂ ಹೊರಡಲು ತಯಾರಾಗಿದ್ದೆವು. ಆಗ ನನ್ನ ಸಹೋದ್ಯೋಗಿ, Espooನಲ್ಲಿದ್ದ ಗಿರೀಶ್ ನ ಜೊತೆ ಚಾಟ್ ಮಾಡಿ, ಅವನಿದ್ದ ಊರನ್ನು ತಲುಪುವುದು ಹೇಗೆಂದು ಪ್ರಶ್ನಿಸಿದನು. ಅವನು ಒಂದು ಬಸ್ಸಿನ ನಂಬರ್ ಹೇಳಿದ. ಹಾಗೆ ಒಂದು ಬಸ ವೇಳಾ ಪಟ್ಟಿಯ Linkನ್ನೂ ಕಳುಹಿಸಿದ. ನಾವು ಆ ಲಿಂಕಿಂದ್ದ ನಮಗೆ ಹತ್ತಿರದ ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ಬರುತ್ತದೆ ಎಂಬ ವಿಚಾರ ತಿಳಿದೆವು. ಗಿರೀಶ್ ನಮಗೆ ಹೇಳಿದ್ದು Espoo bus stop ಎದುರುಗಡೆ ದೊಡ್ದದೊಂದು ಮಾಲ್ ಇದೆ. ಅಲ್ಲಿ ಒಂದು ಅಂಗಡಿಯ ಬಳಿ ಬನ್ನಿ. ಅಲ್ಲಿಗೆ ಬರುತ್ತೇನೆ.

ನಾವಿಬ್ಬರು ಬಸ್ಸಿಗೆ ಕಾದೆವು. ಹೇಳಿದ ಸಮಯಕ್ಕೆ ಸರಿಯಾಗಿ ಬಸ್ ಬಂದಿತು. ನಾವಿಬ್ಬರೂ ಹತ್ತಿದೆವು. ನಂತರ Driverಗೆ ಆ ಮಾಲಿನ ಹೆಸರನ್ನು ಹೇಳಿ ಟಿಕೆಟ್ ಪಡೆದು, ಆ ಮಾಲು ಬಂದೊಡನೆ ನಮಗೆ ತಿಳಿಸಿ ಎಂದು ಕೇಳಿಕೊಂಡೆವು. ಟಿಕೆಟಿನ ಬೆಲೆ ೩ Euro ೬೦ Cents ( ಹೆಚ್ಚು ಕಡಿಮೆ.. ೨೧೫ ರೂಗಳು).ಇಲ್ಲೂ ಅಷ್ಟೇ ಟಿಕೆಟಿನ ಅವಧಿ, ೧ ಗಂಟೆ ೩೦ ನಿಮಿಷಗಳು. ನಂತರ ಮೊದಲ ಆಸನದಲ್ಲೇ ಕುಳಿತೆವು. ಭಾರತದ ಹಾಗೆ ಅದು ಮಹಿಳೆಯರಿಗಾಗೇ ಮೀಸಲ್ಪಟ್ಟ ಆಸನವಲ್ಲ! ಬಸ್ಸು ಹಾಗೆ ಸಾಗಿ, ೧೫-೨೦ ನಿಮಿಷಗಳಲ್ಲಿ ನಾವು ಇಳಿಯ ಬೇಕಿದ್ದ ಮಾಲಿನ ಸಮೀಪಕ್ಕೆ ಬಂದಿತು. ಡ್ರೈವರ್ ನಮ್ಮನು ಇಳಿಯಲು ಸೂಚಿಸಿದನು. ಅವನಿಗೆ ಒಂದು ಕಿರು ನಗೆ ಬೀರಿ, ಧನ್ಯವಾದ ಅರ್ಪಿಸಿ ಸಾಗಿದೆವು. ಮಾಲಿನ ಒಳಗೆ ಹೋಗಿ, ಎಲ್ಲಾ ಅಂಗಡಿಗಳಲ್ಲೂ Window Shopping ಮಾಡಿ, ಅವನು ಹೇಳಿದ ಅಂಗಡಿ ಮುಂದೆ ಬಂದೆವು. ಆದರೆ ಅವನು ಅಲ್ಲಿಗೆ ಇನ್ನು ಬಂದಿರಲಿಲ್ಲ. ಸ್ವಲ್ಪ ಸಮಯ ಕಳೆದೆವು. ನಂತರ ಬಂದ ಪುಣ್ಯಾತ್ಮ! ಬಂದೊಡನೆ ಕ್ಷೇಮ ಸಮಾಚಾರ... ಫಿನ್ ಲ್ಯಾಂಡಿನ ಚಳಿ ಬಗ್ಗೆ ಪ್ರಶ್ನಿಸಿದ. ಎಲ್ಲ ವಿಚಾರಗಳು ಆದ ಮೇಲೆ, ಅಂಗಡಿಯೊಂದರಲ್ಲಿ ಕೆಲವು ಮನೆಗೆ ಬೇಕಾದ ವಸ್ತುಗಳನ್ನು ಖರೀದಿಸಿದ. ಎಲ್ಲಾರು ಅವನ ಮನೆಗೆ ಹೋದೆವು. ಅವನೊಂದಿಗೆ ಇನ್ನು ೬-೭ ಜನ ಹುಡುಗರು ವಾಸವಾಗಿದ್ದರು. ಅದೇ ಮನೆಯಲ್ಲಿ ನಮ್ಮ ಇನ್ನೊಬ್ಬ ಮಾಜಿ ಸಹೋದ್ಯಾಗಿಯೂ ಇದ್ದ. ಆದರೆ ಅವನು ಬೇರೇ ಮನೆಯಲ್ಲಿದ್ದ. ವಾರಾಂತ್ಯಕ್ಕೆ ಮಾತ್ರ ಇಲ್ಲಿಗೆ ಬಂದಿದ್ದ. ಅಲ್ಲಿ ಎಲ್ಲರ ಪರಿಚಯವಾಯ್ತು. ನಮ್ಮ ಮನೆಯಲ್ಲಿ ಊದುಬತ್ತಿಯ ವಾಸನೆ ಮಾತ್ರ ಸೇವಿಸಿದ್ದ ನನಗೆ ಸ್ವಲ್ಪ ಹೊತ್ತಿನಲ್ಲೇ ಆ ಮನೆಯಲ್ಲಿ ಧೂಮಪಾನದ ವಾಸನೆ ಸೇವಿಸ ಬೇಕಾಯಿತು. ನನ್ನ ಸಹೋದ್ಯಾಗಿ ಧೂಮಪಾನ ಮಾಡುತ್ತಾಯಿರಲಿಲ್ಲ. ಸದ್ಯ ನನ್ನ ಜೊತೆ ಅವನೊಬ್ಬನಾದರೂ ಇದ್ದಾನಲ್ಲ. ಅಷ್ಟೇ ಸಮಾಧಾನ. ಮಿಕ್ಕವರೆಲ್ಲಾ ಹೊಗೆ ಬಂಡಿ ಬಿಡುತ್ತಾಯಿದ್ದರು.

ಸ್ವಲ್ಪ ಸಮಯದಲ್ಲೆ ನಿಮ್ಮ ತಿಂಡಿ ಆಗಿದೆಯೇ? ಇಲ್ಲದಿದ್ದರೆ ಇಲ್ಲಿ ತಿನ್ನಿ ಅಂತ ಹೇಳಿದರು. ನಾವು ಅದಕ್ಕೆ ಉತ್ತರವಾಗಿ, ತಿಂಡಿ ಆಗಿದೆ ಅಂದೆವು. ನಂತರ ಬಾಳೆಹಣ್ಣಿನ Milk shake ಮಾಡುತ್ತೇವೆ ಎಂದು ಹೇಳಿ, ಮಾಡಿದರು. ಅದನ್ನು ಕುಡಿದ ಮೇಲೆ ಹೀಗೆ ಮಾತು ಕಥೆ ಆಡುತ್ತಾಯಿದ್ದೆವು. ಚಲನ ಚಿತ್ರಕ್ಕೆ ಯಾವ ರೀತಿ ಹಿನ್ನೆಲೆ ಸಂಗೀತ ಇರುತ್ತದೆಯೋ ಅದೇ ರೀತಿ ಇಲ್ಲಿ ಹಿನ್ನೆಲೆ ವಾಸನೆ! ಆಮೇಲೆ ಯಾವುದೋ ಒಂದು ಸಿನೆಮಾ ಹಾಕಿ ಎಲ್ಲರೂ ನೋಡುತ್ತಾಯಿದ್ದರು. ನಾನು ಸೋಫಾದ ಮೇಲೆ ಮಲಗಿಕೊಂಡು ನೋಡುತ್ತಾಯಿದ್ದೆ. ಗೊತ್ತಿಲ್ಲದೆ ಸುಮಾರು ೧ ಗಂಟೆಗಳ ಕಾಲ ನಿದ್ರಿಸಿದೆ. ಈ ಒಂದು ಗಂಟೆಯೇ ನನ್ನ ಮನಸ್ಸು ಸರಿಯಿದ್ದ ಸಮಯವೆಂದು ಈಗ ತಿಳಿಯಿತು.

ಆ ಮನೆಯಲ್ಲಿದ್ದವರು ಯಾರೂ ನನಗೆ ಹೊಂದುವಂತವರಾಗಿರಲಿಲ್ಲ. ಒಂದು ವಾಕ್ಯ ಮಾತಾಡಿದರೆ ಅದರಲ್ಲಿ ಮುಕ್ಕಾಲು ಭಾಗದಷ್ಟು ಅವಾಚ್ಯ ಪದಗಳೇ! ನನಗೆ ಕೇಳೋಕೆ ಅಸಹ್ಯವೆನಿಸಿತು. ಸಂಜೆ ಹೊರಡುತ್ತೇನಲ್ಲ ಹೇಗೋ ಸಹಿಸಿಕೊಳ್ಳೋಣವೆಂದು ಸುಮ್ಮನಿದ್ದೆ.
ಈ ಮನೆಯವರ ಪೈಕಿ ಒಬ್ಬ ಎಲ್ಲಿಂದಲೋ ಇಲ್ಲಿಗೆ ಬರುವವನಿದ್ದ. ಆಗೆ ಅವನಿಗೆ ಇಲ್ಲಿಂದ ಒಂದು ಕರೆ ಹೋಯಿತು. ೧೨ ಬಾಟಲ್ಲುಗಳ ಒಂದು ಕೇಸನ್ನು ತೆಗೆದು ಕೊಂಡು ಬಾ ಅಂತ. ಅವನು ಇವರ ಮಾತಿನಂತೆ ತಂದು ಬಿಟ್ಟು.

Milk Shake ಹಾಗು ಇನ್ನಿತರ ಆಹಾರವನ್ನು ಸೇವಿಸಿದ್ದರಿಂದ ನನಗೆ ಮಧ್ಯಾಹ್ನ ಊಟವನ್ನೇ ಮಾಡಲಿಲ್ಲ. ಸಂಜೆಯಾದ ಮೇಲೆ ಹೊರಡಲು ತಯಾರಿ ನಡೆಸುವಾಗ ಅವರೆಲ್ಲಾ ಬಂದು ಇವತ್ತು ಇಲ್ಲೇ ಇದ್ದು ಬಿಡಿ. Beachಗೆ ಹೋಗೋಣ. Beach ಮೇಲೆ walking ಮಾಡೋಣ ಅಂದರು. ಹೇಗೂ ನೀರೆಲ್ಲಾ ಗೆಡ್ಡೆಯಾಗಿತ್ತು. ನನಗೂ ಹೊಸ ಅನುಭವವಾಗುತ್ತೆ ಅಂತ ಒಪ್ಪಿದೆ. ಆ ಎಲ್ಲಾ ಬಾಟಲ್ಲುಗಳ ಜೊತೆಗೆ ನಾನು ಕುಡಿಯುವ ಬಾಟಲ್ಲು (Orange juice, apple juice) ಎಲ್ಲವನ್ನು ಹೊತ್ತು ಮನೆಯಿಂದ Beachನ ಅತ್ತ ಸಾಗಿದೆವು.

Beachಗೆ ಹೋಗಿ, ಅದರ ಮೇಲೆಲ್ಲಾ ಓಡಾಗಿ, ಅವರೆಲ್ಲರೂ ತಮ್ಮ ತಮ್ಮ ಬಾಟಲ್ಲುಗಳನ್ನು ಮುಗಿಸಿದರು. ನಾನೂ ಕೂಡ ನನ್ನ ಬಾಟಲ್ಲನ್ನು ಮುಗಿಸಿದೆ. ಮನೆಗೆ ಬಾಟಲ್ಲುಗಳನ್ನು ತಂದ ವ್ಯಕ್ತಿಯೇ ನನ್ನೊಂದಿಗೆ ಆರೆಂಜ್ ಜ್ಯೂಸ್, ಆಪಲ್ ಜ್ಯೂಸ್ ಕುಡಿದ. ಸಮುದ್ರದ ಗೆಡ್ಡೆಯಲ್ಲಿ ಒಂದು ರಂಧ್ರ ಮಾಡಿ ಕೇಲಗಿದ್ದ ನೀರನ್ನು ಬಾಟಲಿನೊಳಗೆ ತುಂಬಿ ಆಟವಾಡುತ್ತಾ, ಒಂದು ಖಾಲಿ ಬಾಟಲನ್ನು ಒಬ್ಬ ಸಮುದ್ರದ ಪಾಲು ಮಾಡಿದ. ಆಗ ಇನ್ನೊಬ್ಬ ಬೇಸರ ಪಟ್ಟು, ಎಂಥ ಅನ್ಯಾಯದ ಕೆಲಸ ಮಾಡಿದೆಯಲ್ಲೋ ಅಂತ ಹೇಳಿದ. ಅಲ್ಲಿ ಈ ರೀತಿ ಕುಡಿದ ಬಾಟಲ್ಲನ್ನು ಅಂಗಡಿಯವರಿಗೆ ಹಿಂದಿರುಗಿಸಿದರೆ ೧ ಖಾಲಿ ಬಾಟಲ್ಲಿಗೆ ೧೦ Cents ಕೊಡುತ್ತಾರೆಂಬ ವಿಷಯ ತಿಳಿಯಿತು. ಭಾರತದಲ್ಲಿ ಖಾಲಿ ಬಾಟಲ್ಲನ್ನು ಅಂಗಡಿಯವರು ತೆಗೆದು ಕೊಳ್ಳುತ್ತಾರೋ ಇಲ್ಲವೋ ಎಂಬ ವಿಷಯ ನನಗೆ ತಿಳಿಯದು. ಆದರೂ "ಖಾಲಿ ಬಾಟಲ್ಲಿ... "ಅಂತ ಕೂಗಿ ಕೊಂಡು ಮನೆ ಬಾಗಿಲಿಗೆ ಬರೋರು ಇದ್ದಾರೆ.

ಇನ್ನೇನು ಸೂರ್ಯ ಭೂಮಿಗೆ ಟಾಟಾ ಹೋಳೋ ಸಮಯ ಬಂತು. ನಾವೆಲ್ಲಾ ಮನೆ ಸೇರ ಬೇಕು ಎಂದು ಅವಸರವಸರದಲ್ಲೇ ಸಾಗಿ ಮನೆಗೆ ಬಂದೆವು. ಆನಂತರ ಅವರಲ್ಲಿ ಒಂದಿಬ್ಬರು ಸೇರಿ, ಅಡುಗೆ ಮಾಡಿದರು. ದಾಲ್ ಹಾಗು ಅನ್ನ ಮಾಡಿದರು. ಬೇಗ ತಿಂದು ಯಾವುದೋ ಒಂದು ರೂಮಿನಲ್ಲಿ ಸಿಕ್ಕಿದ್ದನ್ನು ಹಾಸಿಕೊಂಡಿ, ದಿಂಬಿಲ್ಲದೆ ದುಃಖ ತುಂಬಿಕೊಂಡು, ಸಿಕ್ಕಿದ್ದನ್ನು ಹೊದ್ದು ನಿದ್ದೆ ಮಾಡಿದೆ. ಸ್ವಲ್ಪ ಹೊತ್ತಿನಲ್ಲೇ ಯಾರೋ ಬಂದು "Jay.. Jay" ಅಂತ ಕೂಗಿದರು. ನಾನು ಎಚ್ಚರವಾಗಿದ್ದರೂ ಅವರಿಗೆ ಉತ್ತರ ಕೊಡಲಿಲ್ಲ. ಸುಮ್ಮನಿದ್ದೆ. ಮರು ದಿನ ಬೇಗನೇ ಎಚ್ಚರವಾಯಿತು. ಸ್ನಾನವನ್ನು ಮಾಡಿ ಕೂತು ಬಿಟ್ಟೆ.

ಇಷೆಲ್ಲಾ ಆಗುವಾಗಲೇ ಫಿನ್ ಲ್ಯಾಂಡಿಗೆ ಬರುವ ಮುನ್ನ ನಡೆದ ಒಂದು ಕಹಿ ಘಟನೆಗೆ ಕವನ ರೂಪ ಕೊಟ್ಟು ಬರೆಯುತ್ತಿದ್ದ ದುರಾದೃಷ್ಟ ಪೂರ್ತಿಯಾಯಿತು. ಈ ಮಧ್ಯೆ ಅವರಲ್ಲಿ ಒಬ್ಬ ಕ್ಯಾರೆಟ್ ಹಲ್ವಾ ಮಾಡುವುದಾಗಿ ಹೇಳಿದ. ನಂತರ ಅವರ ಮನೆಗೆ ಕರೆ ಮಾಡಿ ಅದರ ವಿಧಾನವನ್ನು ಕೇಳಿ ನಮಗೆಲ್ಲಾ ಸಿಹಿ ಸಿಹಿಯಾದ ಹಲ್ವಾ ತಯಾರಿಸಿದ. ಕಹಿಯ ಜೊತೆ ಸಿಹಿ ಸೇರಿತು. ಅಲ್ಲಿ ಊಟವಾದ ಮೇಲೆ ನಾನು ಹಾಗು ಕೋಶಿ ಹೊಟೆಲಿನ ಕಡೆ ಬಂದೆವು. ಆಮೇಲೆ ಕೃಷ್ಣನ ದೇವಾಲಯಕ್ಕೆ ಹೋಗಬೇಕೆಂದು ತೀರ್ಮಾನಿಸಿದೆ.

ಕೋಶಿಯ ರೂಮಿಗೆ ಹೋಗಿ, ಈ ರಾತ್ರಿ ನಾನು ಊಟಕ್ಕೆ ಇರೋದಿಲ್ಲ. ನೀನೆ ಮಾಡಿಕೊ. ನಾನು ಬೆಳಿಗ್ಗೆ ಸಿಗುತ್ತೇನೆ ಎಂದು ಹೇಳಿ ಕೃಷ್ಣನ ದೇವಾಲಯಕ್ಕೆ ಹೋದೆ. ಆ ಗೇಟನ್ನು ತೆಗೆಯಲು ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ಇನ್ನೊಮ್ಮೆ ಪ್ರಯತ್ನ ಪಟ್ಟೆ ಆದರೂ ಆಗಲಿಲ್ಲ. ಒಂದು ಕ್ಷಣ ಏನೂ ತೋಚದಂತಾಯಿತು. ನಂತರ ನನ್ನ ಸಹಾಯಕ್ಕೆ ಬಂದದ್ದು ನಾನು ನೋಡಿದ ಸಿನಿಮಾಗಳು! ಯಾರಾದರು ಒಂದು ವೇಳೆ ಆ ಕಡೆಯಿಂದ ಬಂದರೆ ಅಥವಾ ಈ ಕಡೆಯಿಂದ ಹೋದರೆ, ಬಾಗಿಲು ಮುಚ್ಚುವುದರೊಳಗೆ ಒಳಗೆ ಹೋಗಿ ಬಿಡೋಣ ಅಂತ ಅಂದುಕೊಂಡೆ. ಬಾಗಿಲ ಬಳಿ ಇರುವುದು ಬೇಡವೆಂದು ಸ್ವಲ್ಪ ದೂರದಲ್ಲಿ ನಿಂತು "ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ .. ಕೂಗಿದರು ಧ್ವನಿ ಕೇಳಲಿಲ್ಲವೆ ?" ಅಂತ ಹಾಡುತ್ತಾಯಿದ್ದೆನು. ಕನಕದಾಸರು ನನಗೂ ಅನ್ವಯವಾಗುವಂತೆ ಶತಮಾನಗಳ ಹಿಂದೆಯೇ ಬರೆದಿದ್ದರು. ಕನಕದಾಸರು ಮೈ ಮರೆತು ಹಾಡಿದ ಈ ಹಾಡನ್ನು ನಾನು ಶ್ರುತಿ, ತಾಳ, ರಾಗ, ಭಾವವನ್ನೆಲ್ಲಾ ಮರೆತು ಹಾಡಿದೆ. ಕೊನೆಯ ಸಾಲುಗಳನ್ನು ಹಾಡಿ, "ಬಾಗಿಲನು ತೆರೆದು.. ಟಣ್ ಟಣ್ ಟಣ್ಣ್" ಅಂತ ಹಿನ್ನೆಲೆ ಸಂಗೀತ ಕೊಡುತ್ತಾಯಿದ್ದೆ, ತಕ್ಷಣವೇ ಕೃಷ್ಣನ ಅನುಗ್ರಹವೆಂಬಂತೆ ಆ ಕಡೆಯಿಂದ ಯಾರೋ ವ್ಯಕ್ತಿಯೊಬ್ಬ ಬಂದನು. ಆತ ಬಾಗಿಲನ್ನು ತೆಗೆದು ಹೊರಗಡೆ ಸಾಗಿದೆ. ನಾನು ರಸ್ತೆಯ ಆ ಭಾಗಿದಿಂದ ಸಂತೋಷದಿಂದ ಓಡಿ ಬಂದೆ. ಅಷ್ಟರಲ್ಲಿ ಬಾಗಿಲು ಮುಚ್ಚಿ ಹೋಯಿತು. ಒಟ್ಟು ಸುಮಾರು ೧೫ ನಿಮಿಷಗಳ ಕಾಲ ಅಲ್ಲೇ ಇದ್ದೆ. ಆದರೂ ಒಳಗೆ ಹೋಗಲು ಸಾಧ್ಯವಾಗಲಿಲ್ಲ. ಅಲ್ಲಿ ಯಾರೂ ನನ್ನ ಕಣ್ಣಿಗೆ ಕಾಣಿಸಲಿಲ್ಲ ಸಹಾಯ ಬೇಡೋಣವೆಂದರೆ. ಆಮೇಲೆ ಯಾಕೋ ದೇವರು ನನ್ನನ್ನು ಬಲಗಡೆಗೆ ನೋಡಲು ಹೇಳಿದ ಅನ್ನಿಸುತ್ತೆ. ಅಲ್ಲಿ ೪ Buttons ಇದ್ದವು.

೧. ******
೨ *******
೩ Krishna Temple
೪. ******

ಆಗ ನಾನು ಮೂರನೆ button ಒತ್ತಿ ನಂತರ ಬಾಗಿಲು ತೆಗೆಯಲು ಪ್ರಯತ್ನ ಪಟ್ಟೆ. ಕೃಷ್ಣನ ದಯೆ, ಬಾಗಿಲು ತೆಗೆಯಿತು. ಈಗ ಒಳಗೆ ಹೋಗಿ, ಮೈದಾನ ಹತ್ತಿರ ನೋಡಿದರೆ ದೇವಸ್ಥಾನವೇ ಇಲ್ಲ. ಅಲ್ಲಿ ಮೂರನೆ button ಒತ್ತಿದ್ದರಿಂದ, ಮೂರನೆ ಮಹಡಿಗೆ ಹೋಗಿ ನೋಡೋಣವೆಂದು ಮೂರನೆ ಮಹಡಿಗೆ ಹೋದೆ. ಅಲ್ಲಿ ಆಚೆ ಕಡೆ ಅನೇಕ ಪಾದರಕ್ಷೆಗಳು ಇದ್ದವು. ನನ್ನ shoes ಕಳಚಿ, ಒಳಗೆ ಹೋದೆ. ಅಲ್ಲಿ ಸಿಕ್ಕ ಫಿನ್ ಲ್ಯಾಂಡಿನ ಪ್ರಜೆ ನನಗೆ ಹೇಳಿದ ಮಾತು "ನಮಸ್ಕಾರ್!" ಆಗ ಸ್ವಲ್ಪ ಆಶ್ಚರ್ಯವಾಯಿತು. ನಾನೂ "ನಮಸ್ಕರಾ" ಅಂತ ಹೇಳಿದೆ. ಆತ ಭಾರತದ ಉಡುಪುಗಳಾದ ಪಂಚೆ, ಹಾಗು ಜುಬ್ಬದಲ್ಲಿದ್ದೆ. ಹಣೆಯ ಮೇಲೆ ISKCON ಮುದ್ರೆಯಿತ್ತು. ಆಮೇಲೆ ದೇವಾಲಯದ ಒಳಗೆ ಪ್ರವೇಶ ಮಾಡಿದೆ. ಅಲ್ಲಿ ಕೃಷ್ಣನ ವಿಗ್ರಹಕ್ಕೆ ನಮಿಸಿ, ಕುಳಿತುಕೊಂಡೆ. ದೇವಾಲಯಕ್ಕೆ ಸಂಬಂಧ ಪಟ್ಟ ಅಲ್ಲಿಯ ಪ್ರಜೆಯೊಬ್ಬ ಭಗವದ್ಗೀತೆಯ ಒಂದು ಅಧ್ಯಾಯದ ವಿಚಾರ ಮಾತಾಡುತ್ತಾಯಿದ್ದರು. ಅವರು ಅದನ್ನು ಸಂಸ್ಕೃತದಲ್ಲಿ ಹಾಗು ಆಂಗ್ಲ ಭಾಷೆಯಲ್ಲಿ ಹೇಳುತ್ತಾಯಿದ್ದರು. ಇನ್ನೊಬ್ಬರು Suomi ಭಾಷೆಯಲ್ಲಿ ಅದರ ಅರ್ಥವನ್ನು ಹೇಳುತ್ತಾಯಿದ್ದರು. ಅಲ್ಲಿ ನೆರೆದಿದ್ದವರು ಸುಮಾರು ೨೫ - ೩೦ ಮಂದಿ. ಅವರಲ್ಲಿ ಭಾರತೀಯರೂ ಹಾಗು ಅಲ್ಲಿಯ ಜನರೂ ಸೇರಿದ್ದರು. ದೇವಾಲಯಕ್ಕೆ ಸಂಬಂಧ ಪಟ್ಟವರು ಬ್ರಾಹ್ಮಣರಾಗಿ ಮತಾಂತರ ಗೊಂಡವರಂತೆ ಕಾಣಿಸುತ್ತಿದ್ದರು. ಅಲ್ಲಿಯ ಜನತೆಗೆ ನಮ್ಮ ಭಗವದೀತೆಯ ಮೇಲೆ ಅಪಾರಾದ ಗೌರವ ಇದೆಯೆಂಬುದು ತಿಳಿಯಿತು. ಅಲ್ಲಿಯ ಜನರೆಲ್ಲರೂ ಗೀತೆಯ ಚೆರ್ಚೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದರು. ಅಲ್ಲಿಯ ಹೆಂಗಸರು ಸೀರೆಯನ್ನು ಉಡುವುದನ್ನು ರೂಢಿ ಮಾಡಿಕೊಂಡಿದ್ದರು. ಭಾರತದ ಕೆಲವು ಮಾನಿನಿಯರು ಸೀರೆಯಲ್ಲಿರಲಿಲ್ಲ! ಪಾಶ್ಚಾತ್ಯ ದೇಶದವರು ನಮ್ಮ ಸಂಸ್ಕೃತಿ ಅಳವಡಿಸಿಕೊಂಡರೆ ಇಲ್ಲಿಯವರು ಅವರ ಸಂಸ್ಕೃತಿಯನ್ನು ಅನುಸರಿಸುತ್ತಾರೆ. ಇದೆಲ್ಲಾ ಆದ ಮೇಲೆ ಪ್ರಸಾದ ವಿನಿಯೋಗವೆಂದು, ಎಲ್ಲರಿಗೂ ತಟ್ಟೆ ಹಾಕಿದರು. ಮಾಡಿದ ಅಡುಗೆಯನ್ನು ಪ್ರತಿಯೊಬ್ಬರಿಗೂ ಚೆನ್ನಾಗಿ ಬಡಿಸಿದರು. ನಾನು ಅಲ್ಲಿ ತಿಂದ ತಿನಿಸು, ಅನ್ನ ಹಾಗು ಸೊಪ್ಪಿನ ಹುಳಿ ಜೊತೆಗೆ ಯಾವುದೋ ಒಂದು ಪಲ್ಯ. ಇದಾದ ಮೇಲೆ ಹಲ್ವಾ ಅನ್ನೋ ಹೆಸರಿನಲ್ಲಿ ಒಂದು ತಿನಿಸನ್ನು ಬಡಿಸಿದರು. ಅದನ್ನು ನೋಡಿದಾಗಲೆ ತಿಳಿಯಿತು ಅದು ಸಜ್ಜಿಗೆ ಅಂತ. (ತಿಂಡಿ ಒಂದೇ ನಾಮ ಹಲವು). ನಾನು ದೇವರ ಸನ್ನಿಧಿಯಲ್ಲಿ ಆ ಸಂಜೆ ಕಳೆದೆನು. ಆದರೆ ಹೀಗೆ apartment ನಲ್ಲಿ ದೇವಸ್ಥಾನ ಇರೋದು ನನಗೆ ಸರಿಯೆನಿಸಲಿಲ್ಲ.


ಅಲ್ಲಿಂದ ಹೊಟೆಲಿಗೆ ಬಂದು ಮಲಗಿದೆ. ಅಲಾರ್ಮ್ ಹೊಡೆದಾಗಲೆ ನನ್ನಗೆ ಎಚ್ಚರ.

ಹೆಲ್ಸಿಂಕಿಯ ಕೃಷ್ಣ ನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲಿಂಕಿನಲ್ಲಿ ನೋಡ ಬಹುದು:
http://www.saunalahti.fi/~krishna/html/in_english.html

ಈ ವೆಬ್ ಸೈಟಿನಲ್ಲಿ, ಸುಓಮಿ ಭಾಷೆಯನ್ನೂ ಸಹ ನೋಡ ಬಹುದು.

ಮುಂದಿನ ಪೋಸ್ಟ್ ಮಾಡುವವರೆಗು Moi Moi (Bye)

Thursday 16 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಸುಓಮೆನ್ಲಿನ್ನ ಕೋಟೆ

ಹಿಂದಿನ ಭಾಗ ಇಲ್ಲಿದೆ

ಕಳೆದ ಪೋಸ್ಟಿನಲ್ಲಿ ಕೋಟೆಗೆ ಹೋಗಿದ್ವಿ ಎಂದು ಹೇಳಿದ್ದೆ. ಆ ಕೋಟೆ ಹೇಗಿರುತ್ತೆ ಅಂತ ಸುನಾಥ್ ಅಂಕಲ್ ಕೇಳಿದ್ದರು. ಅದರ ಬಗ್ಗೆ ಈಗ ಇಲ್ಲಿ ಹೇಳುತ್ತೇನೆ.

ನಾವು Ferry ಒಳಗೆ ಕೂತು, ಐಸ್ ಗೆಡ್ಡೆಯ ಮೇಲೆ (ಸಮುದ್ರದ ನೀರು ಗೆಡ್ಡೆಯಾಗಿತ್ತು), ಸಾಗಿ ೧೦-೧೫ ನಿಮಿಷಗಳಲ್ಲಿ ಆ ಕೋಟೆಗೆ ತಲುಪಿದೆವು. ಹವ್ಯಾಸಕ್ಕೆ ಫೋಟೋಗಳನ್ನು ತೆಗೆಯುವವನು ನಾನು. ಹಾಗಾಗಿ ಆ ಗೆಡ್ಡೆಯನ್ನು ಸೆರೆ ಹಿಡಿಯುವು ಕೆಲಸದಲ್ಲಿ ನನಗೆ ತುಂಬಾ ಖುಶಿಕೊಡುತ್ತಾಯಿತ್ತು. ನಾವು ಆ ಕೋಟೆಯ ಹತ್ತಿರ ಹೋಗಿ ಇಳಿದೆವು. ನಮ್ಮಂದಿಗೆ ಅನೇಕ ಪ್ರವಾಸಿಗರು, ಅಲ್ಲಿಯ ಜನರೂ ಇದ್ದರು. ಅಲ್ಲಿಂದ ಮುಂದೆ ಸಾಗಿ ಹೆಬ್ಬಾಗಿಲ ಬಳಿ ಹೋದೆವು. ಅಲ್ಲಿ ಪ್ರವೇಶಕ್ಕೆ ಯಾವುದೇ ಶುಲ್ಕವಿರಲಿಲ್ಲ. ಹೆಬ್ಬಾಗಿಲನ್ನು ನೋಡಿ ನನಗೆ ಮೊದಲು ಜ್ಞಾಪಕವಾದದ್ದು ನಾನು ಓದಿದ್ದ ಸರ್ಕಾರಿ ಜ್ಯೂನಿಯರ ಕಾಲೇಜು.
ಇಲ್ಲಿಂದ ಸಾಗಿ ಮುಂದೆ ಹೋಗುತ್ತಲೇ ಕಣ್ಣಿಗೆ ಬಿದ್ದದ್ದು "ಬಿಳಿ ಮರಳು" (ಎಲ್ಲಾ ಕಡೆ ಐಸ್ ಐಸ್... ವೆರಿ ವೆರಿ ನೈಸ್!). ಈ ಕೋಟೆಗೆ ೨೫೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಹಾಗು ಇದನ್ನು UNESCO ದವರು World's Heritage List ನಲ್ಲಿ ದಾಖಲಾಯಿಸಿದ್ದಾರೆ. ಇದನ್ನು ಮಿಲಿಟರಿಯವರು ಉಪಯೋಗಿಸುತ್ತಾಯಿದ್ದರಂತೆ. ಇದರೊಳಗೆ ಒಂದು ಚರ್ಚ್ ಇತ್ತು. ಅದರ ಬಯಲಲ್ಲಿ ಮಕ್ಕಳು ಆಟವಾಡುತ್ತಾಯಿದ್ದರು. ಇದರ ಜೊತೆಗೆ ಚಳಿ ಅನ್ನೋ ಮಹಾ ಶತ್ರು ನಮ್ಮೊಂದಿಗೆ ಇದ್ದ! ನಾವು ಉಳಿದವರನ್ನು ಹಿಂಬಾಲಿಸಿ ಹೋದಂತೆ ಸ್ವಲ್ಪ ನಾನು ಹೊಟೆಲಿನಿಂದ ಹೊರಟಾಗ ಹೊಳೆದ ಸಾಲಿಗೆ ತಕ್ಕಂತೆ ಇಲ್ಲೊಂದು ಚಿತ್ರ ಸಿಕ್ಕಿತು.

"ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿ"


ಸುಮಾರು ದೂರ ಹೋದ ಮೇಲೆ ಒಂದು ವಸ್ತು ಸಂಗ್ರಹಾಲಯವಿತ್ತು. ಅಲ್ಲೂ ಅಷ್ಟೆ ಪ್ರವೇಶಕ್ಕೆ ಶುಲ್ಕವಿರಲಿಲ್ಲ. ಆ ಸಂಗ್ರಹಾಲಯ, ಈ ಕೋಟೆಗೆ ಸಂಬಂಧಿಸಿದ ವಿಷಯಗಳು ಹಾಗು ಚಿತ್ರಣಗಳಿಂದ ತುಂಬಿ ಕೊಂಡು ಅದ್ಭುತವಾಗಿತ್ತು. ಎಲ್ಲಾ ಚಿತ್ರವನ್ನು ನೋಡಿ, ಅಲ್ಲಿಂದ ಹೊರಟೆವು. ಮುಂದೆ ನಮ್ಮ ಕಣ್ಣಿಗೆ ಬಿದ್ದದ್ದು, ಅಲ್ಲಿ ೧೮೦೦, ೧೮೫೦ ಯ ಕಾಲದಲ್ಲಿ ನಿರ್ಮಿಸಿದ ಅನೇಕ ಕಟ್ಟಡಗಳು.
ಒಂದೆರಡು ಚಿತ್ರಗಳು...















ಆ ಎಲ್ಲಾ ವಿಷಯಗಳ ಬಗ್ಗೆ ಬರೆಯಲು ನನ್ನ ನೆನಪಿನ ಶಕ್ತಿ ಅಡ್ಡಿ ಪಡಿಸುತ್ತಾಯಿದೆ. ಒಂದೂವರೆ ವರ್ಷದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳೋದು ತುಂಬಾ ಕಷ್ಟ. ಆಗ ನನಗೆ ಪ್ರವಾಸ ಕಥನ ಬರೆಯಬೇಕೆಂಬ ಆಸೆ ಇರಲಿಲ್ಲ.

ಹೆಚ್ಚಿನ ಮಾಹಿತಿಗೆ: ಸುಓಮೆನ್ಲಿನ್ನ ಕೋಟೆ

Saturday 11 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ವಾರಾಂತ್ಯದ ಬದುಕು

ಹಿಂದಿನ ಭಾಗ ಇಲ್ಲಿದೆ.

ಮೊದಲನೆ ವಾರ:
ಶುಕ್ರವಾರ ರಾತ್ರಿ ಟಿ.ವಿ. ವೀಕ್ಷಿಸಿ, ಯಾವಾಗ ಮಲಗಿದನೋ ನನಗೇ ಗೊತ್ತಿಲ್ಲ. ಬೆಳಿಗ್ಗೆ ಎದ್ದು ಸ್ನಾನವನ್ನು ಮುಗಿಸಿ, ತಿಂಡಿ ತಿನ್ನಲು ನಾನು ಹಾಗು ಅವನು ಹೋದ್ವಿ. ಏನು ವಿಶೇಷವಿರಲಿಲ್ಲ. ಅದೇ Bread- Jam, ೧ ಲೋಟ Juice, ಬಾಳೆ ಹಣ್ಣು, ಕಲ್ಲಂಗಡಿ ಹಣ್ಣು, ಹಾಲು.

ತಿಂಡಿ ಆದ ಮೇಲೆ ಏನು ಮಾಡೋದು ಅಂತ ಯೋಚನೆ ಮಾಡಲೇ ಇಲ್ಲ. ಸ್ವಲ್ಪ ಹೊತ್ತು ಟಿ.ವಿ. ನೋಡಿದ್ವಿ. ಆಮೇಲೆ ತಾಯಿ ಕರುಳು ನನ್ನ ಕರೆಯಿತು. ಓಡಿ ಹೋದೆ ಆಫೀಸಿಗೆ, ಚಾಟ್ ಮಾಡೋಕೆ... Laptop ಇರಲಿಲ್ಲವೇ ಅಂತ ಪ್ರಶ್ನಿಸಿದರೆ... ನಮ್ಮ ಕಂಪನಿ ಕೊಡಲಿಲ್ಲ ಅಂತ ಉತ್ತರ ಕೊಡುತ್ತೀನಿ. ಇಲ್ಲಿಗೆ ಬಂದ ಮೇಲೆ, ಸಹೋದ್ಯೋಗಿಗೆ ಸರಿಯಾದ Computer ಸಿಗದೆ Laptop ಕೊಟ್ಟಿದ್ದರು. ನಾನು ಅದನ್ನು ಉಪಯೋಗಿಸಲಿಲ್ಲ. ಅವನು ದೆಹಲಿ ವಿಮಾನ ನಿಲ್ದಾಣದಲ್ಲಿ ಫೋನಿನ ಪ್ರಸಂಗ ನೋಡಿದ್ದರಿಂದ Laptop ಅವನ ಉಪಯೋಗಕ್ಕೆ ಬೇಕಾಗುತ್ತದೆ ಎಂದು ಆಫೀಸಿನ ಕಡೆ ಹೊರಟೆ.

ನಾನು ಆಫೀಸಿಗೆ ಹೋಗಿ, ತುಂಬಾ ಹೊತ್ತು ಚಾಟಿಂಗ್ ಮಾಡಿ, ಶುಕ್ರವಾರ ಸಂಜೆಯಿಂದ ಹಿಡಿದು ಅದುವರೆಗೂ ಏನು ವಿಷಯಗಳು ನಡೆಯಿತು ಅಂತ ಹೇಳಿದೆ. ಅಮ್ಮ ಹೇಳಿದ್ರು ಅಲ್ಲಿ ಕೃಷ್ಣನ ದೇವಸ್ಥಾನಕ್ಕೆ ಹೋಗು ಅಂತ . ಆಶ್ಚರ್ಯವಾಗುವ ಸಂಗತಿಯಲ್ಲ. ಇಲ್ಲಿ ISKCON ಸಂಸ್ಥೆಯ ಕೃಷ್ಣನ ದೇವಾಲಯವಿದೆ. ನಾನು Google Maps ಸಹಾಯದಿಂದ ಅದರ ವಿಳಾಸ ಹಾಗು ಮಾರ್ಗ ತಿಳಿದು ಕೊಂಡೆ. ನಮ್ಮ ಹೋಟೆಲಿನಿಂದ ಸುಮಾರು ೫ ನಿಮಿಷಗಳ ಕಾಲ್ನಡಿಗೆ ಅದು ಇತ್ತು. ಹೆಲ್ಸಿಂಕಿಗೆ ಬರಬೇಕು ಅಂತ ತಿಳಿದಾಗಲೇ ಮೊದಲು ನಾನು ಹುಡುಕಿದ್ದು "Vegetarian Foods / Hotels in Helsinki". ಆಗ ಹೇಗೋ ಇದು ಕಣ್ಣಿಗೆ ಬಿತ್ತು. ಶನಿವಾರ ಹಾಗು ಭಾನುವಾರಗಳಲ್ಲಿ, ಪ್ರಾರ್ಥನೆ ಹಾಗು ಭೋಜನವಿರುತ್ತದೆ ಅಂತ ಗೊತ್ತಾಯಿತು. ಹಾಗಾಗಿ ಇಲ್ಲಿಗೆ ಬಂದ ಮೇಲೆ ಅದರ ವಿಳಾಸ ಹುಡುಕಿದೆ. ಅದಲ್ಲದೆ ಇನ್ನು ಕೆಲವು ಭಾರತದ ಹೋಟೆಲುಗಳು ಇದ್ದವು.

ಚಾಟಿಂಗೆಲ್ಲಾ ಮುಗಿಸಿ, ಸ್ವಲ್ಪ ಹೊತ್ತಾದ ಮೇಲೆ, ನಾನು ಹೋಟೆಲಿಗೆ ಹೋದೆ ಭೋಜನಕ್ಕೆ. ಆಮೇಲೆ ಹಾಗೆ ಸಮಯ ಕಳೆದೇ ಹೋಯಿತು. ಶನಿವಾರ ಮುಗಿದು ಭಾನುವಾರ ಬಂತು. ನನ್ನ Breakfast ಬಗ್ಗೆ ಹೆಚ್ಚಿನ ವಿಷಯವಿಲ್ಲ ಏಕೆಂದರೆ ಅವಷ್ಟನ್ನು ಬಿಟ್ಟು ಇನ್ನೇನನ್ನೂ ತಿನ್ನಲಿಲ್ಲ. ಇಡೀ ತಿಂಗಳು ಅಷ್ಟೇ ನನ್ನ ಬೆಳಗಿನ ಆಹಾರವಾಗಿತ್ತು.

ಯಾಕೆ ನಾವು ಹೀಗೆ ಸೋಮಾರಿಗಳು ಯಾಕೆ ಆದೆವೋ ನಮಗೇ ಗೊತ್ತಿಲ್ಲ. ಶನಿವಾರದಂತೆ ಭಾನುವಾರ ಕೂಡ ವ್ಯರ್ಥವಾಯಿತು. ಆಚೆ ತಿರುಗಾಡಲು ಮನಸ್ಸೇ ಬರಲಿಲ್ಲ! ಪ್ರಾಯಶಃ ಮನೆ ಬಿಟ್ಟು ಬಂದ ನೋವು ನಮಗರಿಯದೇ ನಮ್ಮ ಮನಸ್ಸಿಗೆ ತಿಳಿದಿತ್ತು ಅನಿಸುತ್ತೆ.

ಎರಡನೆ ವಾರ:

ನಮ್ಮ ಕೆಲಸಕ್ಕೆ ಸಂಬಂಧಿಸಿದಂತೆ Project Architect ಬೇರೇ ದೇಶ (Latvia) ದಿಂದ ಬರಬೇಕಿತ್ತು ನಮಗೆ Project ಬಗ್ಗೆ ಅತೀ ಸೂಕ್ಷ್ಮ ವಿಚಾರಗಳನ್ನು ತಿಳಿಸಲು. ಆತನ ಹೆಸರು Sergejs Brosalvskis. ಸೆರ್ಗೆ ಅಂತ ಅವರನ್ನು ಸಂಭೋದಿಸ ಬಹುದಾಗಿತ್ತು. ಆತ ನಮ್ಮೊಂದಿಗೆ ಎರಡು ದಿನಗಳ ಕಾಲ Projectನ ಎಲ್ಲಾ ವಿಚಾರಗಳನ್ನು ಹೇಳಿದರು. ಅವರೂ ಸಹ ನಮ್ಮ ಹೊಟೆಲಿನಲ್ಲೇ ತಂಗಿದ್ದರು. ನಮಗೂ ಒಬ್ಬ ಜೊತೆಗರ ಸಿಕ್ಕಂತಾಯಿತು. ಅವರು ಶುಕ್ರವಾರ ಹೊರಟು ಹೋದರು. ಅದಾದ ಮೇಲೆ, Jarkko ನಮ್ಮನ್ನು ಕೇಳಿದರು "What are your plans for this weekend?" ನಾವಿಬ್ಬರೂ ಊರು ಸುತ್ತೋದು ಅಂತ ಹೇಳಿದೆವು. ಆಗ ಆತ, ಇಲ್ಲೊಂದು ಕೋಟೆ ಇದೆ, ಅಲ್ಲಿಗೆ ಹೋಗಿ, ಚೆನ್ನಾಗಿದೆ ಅಂತ ಹೇಳಿದರು. ಆ ಕೋಟೆಯ ಮಾರ್ಗವನ್ನು Google Maps ಸಹಾಯದಿಂದ ತೋರಿಸಿದರು. ನಮಗೂ ಅಲ್ಲಿಗೆ ಹೋಗುವೆ ಆಸೆಯಾಯಿತು. ಅದರ ಹೆಸರು "Suomenlinna Fortress" (ಹೆಚ್ಚಿನ ಮಾಹಿತಿಗೆ ಲಿಂಕ್ ಒತ್ತಿ).

ನಾವು ಅಲ್ಲಿಗೆ ಹೋಗ ಬೇಕೆಂದು, ಬೆಳಿಗ್ಗೆ ತಿಂಡಿ ತಿಂದು, Reception ಬಳಿ ಹೋಗಿ ಅವರನ್ನು ಕೇಳಿದೆವು ಆ ಕೋಟೆಗೆ ಹೋಗುವುದು ಹೇಗೆ. ಆಗ ಆತ, ಅಲ್ಲೇ ಇದ್ದ Helsinki Map ನ್ನು ತೆಗೆದು, ಮೊದಲಿಗೆ ನಮ್ಮ ಹೋಟೆಲನ್ನು ಗುರುತು ಮಾಡಿ, "ನಾವೀಗ ಇಲ್ಲಿದ್ದೇವೆ. ನೀವು ಈ ಮಾರ್ಗವಾಗಿ ಸಮುದ್ರ ತಲುಪುತ್ತೀರ. ಅಲ್ಲಿ ನಿಮಗೆ ಗಂಟೆಗೊಂದು Ferry ಇರುತ್ತೆ. ಅದರೊಂದಿಗೆ ಹೋಗ ಬಹುದು." ಅಂತ ಹೇಳಿದ. ಅವನಿಗೆ ಧನ್ಯವಾದ ಅರ್ಪಿಸಿ, ನಾವು ಹೋಟೆಲಿನ ಬಾಗಿಲ ಬಳಿ ಹೋದೆವು. ನನಗೆ ಮೊದಲು ಎದುರಿಗೆ ಕಾಣಿಸಿದವನು ಆದಿತ್ಯ. ಅಲ್ಲಿಂದ ಹೊರಗೆ ಸಾಗುತ್ತಿದ್ದಂತೆ ಅನುಭವಿಸಿದ್ದು.. ಚಳಿ! ಆಗಲೇ ಹೊಳೆದ ಸಾಲುಗಳು..
"ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿ.."
ಮುಂದೆ ನನ್ನೆಲ್ಲಾ ಅನುಭವಗಳನ್ನು ಸೇರಿಸಿ ಬರೆದ Finland ಚಳಿ ಕವನವಾಯಿತು.

ನಾವು ಹಾಗೆ ಸಾಗುತ್ತಾಯಿದ್ದಾಗ ಅಲ್ಲಿಯ ಕಟ್ಟಡಗಳ ಫೋಟೋ, ರಸ್ತೆಯ ಫೋಟೋ ತೆಗೆಯುತ್ತಾಯಿದ್ದೆ. ಸುಮಾರು ೨೦೦ಕ್ಕೂ ಹೆಚ್ಚು ಫೋಟೋಗಳನ್ನು ತೆಗೆದಿದ್ದೇನೆ ನನ್ನ ಒಂದು ತಿಂಗಳ ಪ್ರವಾಸದಲ್ಲಿ. ಅಷ್ಟರಲ್ಲಿ ನಾನು ಕೇವಲ ೮ ರಲ್ಲಿ ಮಾತ್ರ ಮುಖ ತೋರಿಸಿದ್ದೇನೆ. ಅಂತದೊಂದು ಫೋಟೊ ಇಲ್ಲಿದೆ.

ನನ್ನ ನೋಡದವರು ದಪ್ಪಗಿದ್ದಾನೆ ಅಂತ ತಿಳಿಯ ಬೇಡಿ. Winter Dress, ದಪ್ಪದಾದ T Shirt, ಅದರ ಮೇಲೆ Sweater, ಅದರ ಮೇಲೆ Jerkin ಎಲ್ಲವನ್ನು ಧರಿಸಿದ್ದಕ್ಕೆ ಹಾಗಿ ಕಾಣಿಸುತ್ತಾಯಿದ್ದೆ. ಒಂದು Match Stickಗೂ ಇಷ್ಟನ್ನೆಲ್ಲಾ ಹಾಕಿದರೆ ಅದು Walking Stick ಥರ ಕಾಣುತ್ತೆ. :). ಸಾಮಾನ್ಯವಾಗಿ ಕಣ್ಣುಗಳು, ಹಾಗು ಮೂಗು ಮಾತ್ರ ಹೊರಗಿನ ಪ್ರಪಂಚಕ್ಕೆ ತೋರುತ್ತಾಯಿದ್ದೆ. ಈ ದಿನ ಕೋತಿ ಟೋಪಿಯನ್ನು ಸ್ವಲ್ಪ ಕೆಳಗಿಳಿಸಿದ್ದೆ. ನಾನೇ ಅದು ಅಂತ ತಿಳಿಯಲಿ ಎಂದು.

ಮುಂದೆ ಸಾಗುತ್ತಾ Ferry ಇದ್ದ ಕಡೆಗೆ ಹೋದೆವು. ಅಲ್ಲಿ ಟಿಕೆಟ್ ಖರೀದಿಸುವ ಕೆಲಸ ಈಗ ನಮ್ಮದಾಗಿತ್ತು. ಭಾರತದ ಥರ ಇಲ್ಲಿ ಒಬ್ಬರನ್ನೋ ಇಬ್ಬರನ್ನೋ ನೇಮಿಸಿರುವುದಿಲ್ಲ ಟಿಕೆಟ್ ಕೊಡಲು. ಎರಡು - ಮೂರು Ticket Machineಗಳು ಇರುತ್ತವೆ. ಅದರಲ್ಲಿ ೨ Euro ಹಾಕಿದರೆ ಸಾಕು, ಒಂದು ಟಿಕೆಟ್ ಹೊರ ಬರುತ್ತೆ. ಅದರ ಅವಧಿ ೧ ಗಂಟೆ ೩೦ ನಿಮಿಷ. ಅಷ್ಟರಲ್ಲಿ ಪ್ರಯಾಣ ಮಾಡಿ, ಕೋಟೆ ನೋಡಿ ಬರ ಬೇಕು. ಇಲ್ಲದೆ ಇದ್ದಲ್ಲಿ, ಕೋಟೆಯ ಬಳಿ ಇರುವ Machine ನಿಂದ ಮತ್ತೆ ೨ Euro ಹಾಕಿ ಇನ್ನೊಂದು ಟಿಕೆಟ್ ಖರೀದಿಸಬೇಕು. ಟಿಕೆಟ್ machineದು ಇನ್ನೊಂದು ವಿಶೇಷವೆಂದರೆ ಅತೀ ಹೆಚ್ಚು ಅಂದರೆ, ೧೯ Euro ೯೦ Cents ಮಾತ್ರ ಚಿಲ್ಲರೆಯ ರೂಪದಲ್ಲಿ ಕೊಡುತ್ತದೆ. ನಾವೇನಾದರು ೨ Euro Ticketಗೆ ೫೦ Euro ನ Machine ಹಾಕಿದರೆ, ಟಿಕೆಟ್ ಜೊತೆಗೆ ೧೯ Euro ೯0 Cents ಮಾತ್ರ ಹೊರ ಬರುತ್ತೆ. ಮಿಕ್ಕಿದ ಹಣವೆಲ್ಲಾ ಕೃಷ್ಟಾರ್ಪಣಮಸ್ತು!

ಅಲ್ಲಿ ಎರಡು ಟಿಕೆಟ್ ಖರೀದಿಸಿ, ಹೊರೆಟೆವು, ಕೋಟೆಗೆ. ಕೋಟೆಯಲ್ಲಿ ತಿರುಗಾಡಿ, ಸುಸ್ತಾಗಿ, ಪುನಃ ಬಂದೆವು Ferry ಹತ್ತಲು. Ferry ಸ್ವಲ್ಪ ತಡವಾಗಿಯೇ ಬಂದಿತು. ಅದರಿಂದ ಹೆಲ್ಸಿಂಕಿಗೆ ಬಂದೆವು. ಅಲ್ಲಿ ಮತ್ತೆ ಊರು ಸುತ್ತಿ, ಹೊಟೆಲಿಗೆ ಹೋದೆವು ತಿಂದು ಮಲಗಲು. ಸ್ವಲ್ಪ ನಿದ್ದೆ ಆದಮೇಲೆ, ನಾನು ಆಫೀಸಿಗೆ ಹೋದೆ. ಚಾಟ್, ಆರ್ಕುಟ್, ಇತ್ಯಾದಿಗಳ ಕಡೆ ಗಮನ ಕೊಡೋಕೆ. ಅಲ್ಲಿಂದ ಬಂದು, ಟಿ.ವಿ ನೋಡಿದೆ. ಆಗ ಎಲ್ಲೆಡೆ ಹಿಮ ಇದ್ದಿದ್ದರಿಂದ ಅಲ್ಲಿಯ ಜನರು Skiing ಮಾಡುತ್ತಾಯಿದ್ದರು. ಈ ಆಟವನ್ನು ನೋಡೋದು ಒಂದು ಅದ್ಭುತ ರೋಮಾಂಚನಕಾರಿ ಅನುಭವ! ಅದರೊಂದಿಗೆ ಶನಿವಾರ ಕಳೆದು ಭಾನುವಾರ ಬಂದಿತು. ನಾನು ಪ್ರತಿದಿನ ಅದನ್ನೇ ನೋಡುತ್ತಾಯಿದ್ದೆ. ಕೆಲವೊಮ್ಮೆ ಫುಟ್ಬಾಲ್ ಕೂಡ ಪ್ರಸಾರವಾಗುತ್ತಾಯಿತ್ತು.

ಭಾನುವಾರ ಮತ್ತೆ ಊರು ಸುತ್ತೋದು, ಫೋಟೋಗಳು ತೆಗೆಯೋದು.

Monday 6 October, 2008

ಕನಸಲ್ಲು ನಿನ್ನ ರೂಪ -- ಈ ಮನದಲ್ಲಿ ತರಲು ತಾಪ!

ನನ್ನ ಪರಿಸ್ಥಿತಿಗೆ ಹೊಂದುವಂತಹ ಶೀರ್ಷಿಕೆ ಕೊಟ್ಟ ನನ್ನ ಆರ್. ಎನ್. ಜಯಗೋಪಾಲರಿಗೆ ವಂದಿಸುತ್ತ, ನಿಮಗೆಲ್ಲರಿಗೂ ಮತ್ತೆ ಸ್ವಾಗತ ನನ್ನ ಕನಸಿನ ಬಗ್ಗೆ ಕೇಳೋದಕ್ಕೆ.

ಆರು ತಿಂಗಳ ಹಿಂದೆ ನನ್ನ ಕನಸನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೆ ( Mall @ Malleshwara.) ಈಗ ಮತ್ತೆ ಬಂತು ಕಾಲ ನನ್ನದೊಂದು ಕನಸನ್ನು ಹೇಳಲು.

ಇತ್ತೀಚೆಗೆ ಕೆಲಸ ಬಹಳಯಿದೆ ಅಂತ ಕೆಲವರಿಗೆ ಹೇಳಿದ್ದೆ. ಪ್ರತಿ ದಿನ ನಾನು ಮನೆ ತಲುಪುವ ವೇಳೆಗೆ ರಾತ್ರಿ ೧೦.೩೦ ಆಗಿರುತ್ತೆ. ಬಂದ ಮೇಲೆ ಮಮ್ಮು ಆಮೇಲೆ ತಾಚಿ. ರಾತ್ರಿ ಕನಸಲ್ಲಿ ಈಗ ಯಾರು ಬರ ಬಹುದು ಸ್ವಲ್ಪ ಯೋಚನೆ ಮಾಡಿ........?

ಹಿಂದಿ ಚಿತ್ರ ತಾರೆಯರು ಅಂತ ಊಹಿಸಿದ್ದೀರಾ? No Chances.... ನನಗೆ ಹಿಂದಿಯಲ್ಲಿ ಗೊತ್ತಿರೋರು ಕೇವಲ ನಾಕು ಮಂದಿ. ಅವರ್ಯಾರೂ ಬಂದಿಲ್ಲ. ಇನ್ನು ಕನ್ನಡ ತಾರೆಯರು ಅಂತೀರಾ? ಅವರೂ ಇಲ್ಲ ಬಿಡಿ. ಹೆಚ್ಚಾಗಿ ಸಿನಿಮಾ ನೋಡೋನಲ್ಲ ನಾನು. ಹಾಗಾದರೆ ಯಾರು ಬಂದಾರು....? ನಮ್ಮ Manager, Team Lead ಅಂತೀರ ಅವರೂ ಬರೋದಿಲ್ಲ.

ನನ್ನ ಕನಸಲ್ಲಿ ಬಂದದ್ದು ನಾನು ಮತ್ತೆ ನನ್ನ ಕೆಲಸ! ಅದೇನೋ ೯ ರಿಂದ ೮ ರ ವರೆಗೆ ಕೆಲಸ ಮಾಡಿ, ಸದ್ಯ ಮನೆ ತಲುಪಿದನಲ್ಲಾ ಅಂತ ನಿದ್ದ ಮಾಡಿದರೆ.. ಕನಸಲ್ಲೆಲಾ ನಾನು computer ಕುಟ್ಟುತ್ತಿರುವ ಹಾಗೆ, ಬೆಳಿಗ್ಗೆ ನನಗೆ ವಹಿಸಿದ ಕೆಲಸವನ್ನು ಮಾಡುತ್ತಿರುವ ಹಾಗೆ ಕನಸು ಕಾಣುತ್ತೀನಿ. ಇದು ಒಂದು ದಿನ ಬಂದರೆ ಪರವಾಗಿಲ್ಲ. ಆದರೆ ಬೇರೇ ಕನಸುಗಳಂತೆ ಇದು ಪ್ರತಿ ರಾತ್ರಿ ಬರುತ್ತೆ. ಕನಸಲ್ಲೂ ನಾನು ಕೆಲಸ ನಿರ್ವಹಿಸುತ್ತಿರುವ ಹಾಗೆ ಅನ್ನಿಸುತ್ತೆ. ನಮ್ಮ Client ಹಾಗು company ನನಗೆ ಹೆಚ್ಚು ಸಂಬಳ ಕೊಡ ಬೇಕು. ಯಾಕೆಂದರೆ ಮನೇಲೂ ಅವರ ಕೆಲಸ ಮಾಡುತ್ತೀನಲ್ಲ ಅದಕ್ಕೆ. (ನಗಲಿಲ್ವಾ ನೀವು?... ಅಯ್ಯೋ ಜೋಕ್ ಮಾಡಿದೆ ರೀ ನಾನು.. ಸ್ವಲ್ಪ ನಕ್ಕು ಬಿಡಿ....). ಇನ್ನೂ ಕೆಲಸ ಮುಗಿದಿರೋದಿಲ್ಲ ಅಷ್ಟರಲ್ಲಿ ಅಮ್ಮ ಆಫೀಸಿಗೆ ಬರುತ್ತಾರೆ. ಆಗ ನಾನು, "ಇಲ್ಲಿಯಾಕೆ ಬಂದ್ಯಮ್ಮ?" ಅಂತ ಕೇಳಿದಾಗ ಅವರು ಕೊಡುವ ಉತ್ತರ "೬.೧೫ ಆಯ್ತು ಏಳೋ ಬೇಗಾ... ಹೋಗಲ್ವಾ ಆಫೀಸಿಗೆ????". ಎಚ್ಚರವಾದ ಮೇಲೆ ಅಬ್ಬಬ್ಬಾ ಅಂದರೆ ೩ ಗಂಟೆ ಆರಾಮಾಗಿರುತ್ತೇನೆ ಆಮೇಲೆ ಮತ್ತೆ ಕೆಲಸ....

ಇಷ್ಟೇ ಆಗಿದಿದ್ದರೆ ಸುಮ್ಮನಿರುತ್ತಿದ್ದೆ. ನಿನ್ನೆ ರಾತ್ರಿ ನನಗೆ ಇವನೆಲ್ಲಾ ಬ್ಲಾಗಿನಲ್ಲಿ ಬರೆಯುವ ಹಾಗೆಯೇ ಕನಸಾಯ್ತು. ಅದಕ್ಕೆ ಕಡೇ ಪಕ್ಷ ಇದಾದರೂ ನನಸಾಗಲಿ ಎಂದು ಬರೆದೆ.

ಇನ್ನೊಂದು ವಿಷಯ ನೆನಪಾಯ್ತು ಈಗ. ನಾನು PUC ವ್ಯಾಸಂಗ ಮಾಡುವಾಗ ಪ್ರತಿ ರಾತ್ರಿ, Physics ಹಾಗು Chemistry Experiments ಮಾಡುತ್ತಾಯಿದ್ದೆ. BE ಓದುತ್ತಿರುವಾಗಲೂ ಅಷ್ಟೇ, IC ಗಳನ್ನೆಲಾ ಜೋಡಿಸಿ ಏನೋ experiments ಮಾಡಿಕೊಳ್ಳುತ್ತಾಯಿದ್ದೆ. ಹಾಳದ Experimentಗಳು ಕನಸಲ್ಲೂ ಸರಿಯಾದ Output ಬರುತ್ತಾಯಿರಲಿಲ್ಲ!

ರಾತ್ರಿ ಹೊತ್ತು ನನ್ನ ಜೊತೆ ಮಾತಾಡುವ ಬೆಮಿ ಗಳಿಗೆ ಹೇಳುತ್ತಾಯಿರುತ್ತೇನೆ.. "ನನಗೆ Good Night ಮಾತ್ರ wish ಮಾಡಿ. ಅದರ ಜೊತೆಗೆ Sweet Dreams ಅಂತ ದಯವಿಟ್ಟೂ Wish ಮಾಡಬೇಡಿ." ಅದರೂ ಕೆಲವರು ಇದನ್ನು ಮರೆತಿರುತ್ತಾರೆ. "sweet dreams... sweeeetest Dreams " ಅಂತೆಲ್ಲಾ ಹೇಳ್ತಾರೆ. ಆ ರಾತ್ರಿ ನನಗೋ "ಯಾವಾಗ ಹಲ್ಲು ಮುರಿಯುತ್ತೇ", "ಯಾವ ಮಾಲಿನಲ್ಲಿ ಹೋಗಿ ಚಿಂದಿ ಬಟ್ಟೇ ಖರೀದಿಸುತ್ತೇನೋ" ಹೀಗೆ ಅವೆಲ್ಲಾ ನೆನೆಪಾಗುತ್ತೆ. ಕೆಲವೊಮ್ಮೆ ಅಂತೂ ನಿದ್ದೆ ಮಾಡಲೋ ಬೇಡವೋ ಅನ್ನಿಸುತ್ತೆ. ನಿದ್ದ ಮಾಡಿದಾಗಲೂ ಭಯ ನನಗೆ!

ಇದರಿಂದ ನಾನು ನಿಮ್ಮನ್ನು ಕೇಳಿ ಕೊಳ್ಳುವುದು ಏನೆಂದರೆ, ನೀವು ಇನ್ನು ಮುಂದೆ "May all your dreams come true!" ಅಂತ ದಯವಿಟ್ಟೂ ಹಾರೈಸದಿರಿ. ನಾನು ಈ ರೀತಿ ಕನಸು ಕಂಡಿರುತ್ತೇನೆ. ನಿಮ್ಮ ಬಾಯಿ ಹಾರೈಕೆಯಿಂದ ಅದು ನನಸಾದರೇ... ನಾನು ಹಲ್ಲು ಮುರಿದ ಮುದುಕನಾಗಿ ಮಲ್ಲೇಶ್ವರದಲ್ಲಿ ಚಿಂದಿ ಬಟ್ಟೆ ಹಾಕಿ ಕೊಂಡು ಓಡಾಡುತ್ತಾಯಿರುತ್ತೇನೆ... ಇಲ್ಲ ಇಲ್ಲ... ೨೪ ಗಂಟೆನೂ Computer ಕುಟ್ಟುತ್ತಾ ಕೆಲಸ ಮಾಡುತ್ತಾಯಿರುತ್ತೇನೆ. ಬ್ಲಾಗಿಗೂ ಸಮಯ ಕೊಡೋಕೆ ಆಗೋದಿಲ್ಲ. ಆಮೇಲೆ ನಿದ್ದ ಯಾವಾಗ ಮಾಡಲಿ ನಾನು?

ಬೇರೆಯವರಿಗೆ "May all your dreams come true!" ಅಂತ ಹಾರೈಸುವ ಮೊದಲು ಒಂದು ಸಲ ಯೋಚನೆ ಮಾಡಿರಿ. ಅವರಿಗೆ ಏನಾದರು ಈ ರೀತಿಯಾದ ಕನಸಾಗಿದೆಯೇ ಎಂದು ಕೇಳಿ, Confirm ಆದ ಮೇಲೆ ಹಾರೈಸಿ. ನನಗೆ ಮಾತ್ರ ಹಾರೈಸ ಬೇಡಿ.

ಕಡೇದಾಗಿ ಅಂತರ್ವಾಣಿ ಹೇಳೋದು,

ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕ್ರಣ್ಣ

ಮತ್ತೆ ಒಳ್ಳೆ ಕನಸು ಬಂದಾಗ ಬರೆಯುತ್ತೇನೆ.

Thursday 2 October, 2008

ಉಲ್ಟಾ ಪಲ್ಟಾ!

ಹೊಸ ಪ್ರಾಜೆಕ್ಟ್ ಸೇರಿದ ಮೇಲೆ, ಬಿಡುವು ಅಂದರೆ ಏನು ಅನ್ನೋದನ್ನೆ ಮರೆತಿದ್ದೆ. ಒಂದು ದಿನ ಸ್ವಲ್ಪ ಬಿಡುವು ಸಿಕ್ಕಿತು. ಆಗ ಬರೆದದ್ದು

ಬಿಡುವು:

ನಿರಂತರದ ಕೆಲಸದ ಮಧ್ಯೆ
ಉಸಿರಾಟಕ್ಕೆ ಸಿಗುವ

ಅಮೂಲ್ಯ ಕ್ಷಣ!


ಇದು ಯಾವಾಗ ಬರೆದನೋ ಎಲ್ಲಾ ಉಲ್ಟಾ ಪಲ್ಟಾ ಆಯ್ತು. ವಿಪರೀತ ಕೆಲಸ. ರಾತ್ರಿ ೧೦.೩೦ ಕ್ಕೆ ಮನೆ ಸೇರುತ್ತಾಯಿದ್ದೆ. ಸ್ವಲ್ಪ ದಿನಗಳಾದ ಮೇಲೆ, ಮತ್ತೆ ಬಿಡುವು ಆಗ ಬರೆದದ್ದು:

ಹಾಗೆ ಕುಳಿತಿರುವೆ
ಏನು ಮಾಡಲಿ?
ಏನಿದೆ ಮಾಡಲು?
ಹಾಗೆ ಬರೆಯುತ್ತಿರುವೆ

ಮೂರು ದಿನಗಳೇ ಆದವು
ಹೆಚ್ಚಿಲ್ಲ ಕೆಲಸ
ಬ್ಲಾಗುಗಳೆಲ್ಲಾ ಬ್ಲಾಕು
ನನ್ನ ಟೈಂಪಾಸಿಗೆ ಬ್ರೇಕು!

ಕೆಲಸವಿಲ್ಲ ಕಚೇರಿಯಲ್ಲಿ
ಎಲ್ಲೋ ಏನೋ ವಿಘ್ನ!
ಸ್ಫೂರ್ತಿಯಿದೆ ಮನದಲ್ಲಿ
ಕವನಗಳಿಗೇಕೆ ವಿಘ್ನ?

ಹಾಗೆ ಕುಳಿತಿರುವಂತೆ ನನ್ನಿಂದಾಗದು
ಎದ್ದು ಮನೆಗೆ ಬರುವಂತಿಲ್ಲ
ವಿಘ್ನ ಬಗೆ ಹರಿಯುವವರೆಗೂ
ಕಾದು ಕುಳಿತಿರ ಬೇಕು......
ಹಾಗೆ ಕುಳಿತಿರ ಬೇಕು.....

ಇದನ್ನು ಬರೆದ ಮೇಲೆ ಆಕಸ್ಮಿಕವಾಗಿ ಬ್ಲಾಗ್ ಓಪನ್ ಆಯ್ತು. ಆಗ ಬರೆದದ್ದು ನಾನಿದ್ದೆ ಆನೆಯಂತೆ. ಇದಾದ ಮೇಲೆ ಮತ್ತೆ ಉಲ್ಟಾ ಪಲ್ಟಾ! ಈಗ ಏನು ಹೇಳುತ್ತೇನೆ ಅಂದರೆ....

ಹಾಗೆ ಕುಳಿತಿರಲಾರೆ
ಏನಾದರು ಮಾಡ ಬೇಕು
ಏನೇನೋ ಇದೆ ಮಾಡಲು
ಹಾಗೆ ಮಾಡುತ್ತಿರಬೇಕು.

ಬಹಳ ದಿನಗಳೇ ಆದವು
ಎಂಟಕ್ಕೆ ಮನೆಗೆ ಹೋಗಿ
ಬ್ಲಾಗುಗಳಿಗೆ ಬ್ರೇಕು
ಈ ಕೆಲಸ ಸಾಕಪ್ಪಾ ಸಾಕು!

ಬಿಡುವಿಲ್ಲ ಕಚೇರಿಯಲ್ಲಿ
ಬಿಡುವಿಗೇ ವಿಘ್ನ!
ಸ್ಫೂರ್ತಿಯಿದ್ದರೂ ಮನದಲ್ಲಿ
ಕವನಗಳಿಗೆ ವಿಘ್ನ!

ಹಾಗಾಗಿ ತೀರ್ಮಾನ ಮಾಡಿಬಿಟ್ಟೆ... ಕಚೇರಿಯಲ್ಲಿ ಬಿಡುವು ಸಿಕ್ಕರೂ ಕವನಗಳನ್ನು ಬರೆಯೋದಿಲ್ಲ...

Tuesday 23 September, 2008

’ಮ’ಕಾರದ ಮಾನಿನಿಯರು!

[ ಇದು ಪೋಸ್ಟ್ ಆಗುತ್ತಾಯಿರುವ ೫೦ನೇ ಕವನ. ಆದರೆ ಇದು ೫೦ನೇ ಕವನ ಅಲ್ಲ. 2006 ರಲ್ಲಿ, ನನ್ನ ತಂಗಿ ಹಾಗು ತಮ್ಮ ಕೆಲವು ಹುಡುಗೀಯರ ಹೆಸರುಗಳನ್ನು ಕೊಟ್ಟು ಒಂದು ಕವನ ರಚಿಸಲು ಹೇಳಿದರು. ಅವರ ಬಲವಂತಕ್ಕೆ ಬರೆದದ್ದು. ಅದೇಕೋ ನನ್ನ ಆರಂಭದ ಕವನಗಳು ’ಮ’ ಕಾರದಿಂದ ಪ್ರಾರಂಭ ಮಾಡಿದ್ದೆ. ಆಮೇಲೆ, ನನ್ನ ಕವನ / ಲೇಖನದ ಶೀರ್ಷಿಕೆಗಳು ಕೆಲವು ’ಮ’ಕಾರದಿಂದ ಆರಂಭವಾಗಿವೆ: ಮೆಲೋಡಿಯಸ್ ಮೋಹನ, ಮಾಲ್ @ಮಲ್ಲೇಶ್ವರ, ಮಲೆಯಲ್ಲೊಂದು ಮಾಣಿಕ್ಯ, ಮರುಳು ಮಾತುಗಳು, ಮಗುವಾಗಬಾರದಿತ್ತೇ? ಇತ್ಯಾದಿಗಳು. ಇಂದಿನ ಕವನದ ಶೀರ್ಷಿಕೆ ಬೇರೆ ಏಕೆ ಇಡಲಿ ಎಂದು ’ಮ’ಕಾರದಿಂದ ಪ್ರಾರಂಭ ಮಾಡಿದೆ. ಖಂಡಿತವಾಗಿಯೂ ಟಿ.ಎನ್.ಸೀತಾರಾಮ್ ಅವರ ಪ್ರಭಾವವಿಲ್ಲ! ]

ಹುಡುಗಿಯರ ಹೆಸರಿನ ಕವನವಿದು
ತಂಗಿಯು ಇಟ್ಟ ಪ್ರಶ್ನೆಯಿದು
ಹತ್ತಾರು ಚೆಲುವೆಯರು ಬರುವ
ಪುಟ್ಟದೊಂದು ಕವನವಿದು.

ಮೀರಾ.. ನಿನ್ನ ಮೆಚ್ಚಿದೆ ಮನಸಾರ
ಕೊಡಲೇ ನಿನಗೆ "ಮುತ್ತಿನ" ಹಾರ?
ಮೀನ, ಮೀನಾ ನೋಡು ನನ್ನ
ಹಾಡುವೆ ನಿನಗೆ ಮೊದಲ ಗಾನ.

ಮಧುವಿನ ಹಾಗಿದ್ದ ನಿನ್ನ ಮಾತು
ಮಗುವಿನ ಹಾಗೆ ನನ್ನ ಮಾಡಿತು.
ಮಾಧುರಿ ನಿನ್ನ ಕಾಣಲು
ಬಿಡಳು ಮಂಡೋದರಿ
ಅವಳಂಥ ನಾರಿ, ರಾವಣನಿಗೆ ಸರಿ.

ಮಲ್ಲಿಕಾ ಜೊತೆಗೆ ಮಂದಿರಕ್ಕೆ ಹೋಗುವೆನೆಂದರೆ
ಹಿಂದೆ ಓಡಿ ಬರುವಳು ಮೇನಕ.
ಮೋನಿಕಾ ಜೊತೆಗೆ ಹಾಡಲು ಹೋಗುವೆನೆಂದರೆ
ಬಂದು ಕಾಡುವಳು ಮಲೈಕಾ.

ಮಧುರವಾದ ಮಾತಿಂದ ಮೌನ ಮಾಡಿದೆ
ಮೇಘ ಸಂದೇಶ ಕಳಿಸಿದರೆ ಮಾಯ ಮಾಡಿದೆ.

ಮನೀಷ ನೀ ಬಾರೆ, ನಗು ನಗುತಾ
ನಿನ್ನ ಮೊಗವ ನೋಡುತ
ಕಾಲ ಕಳೆಯುವ ತವಕ.
ಮಯೂರಿ, ನಿನ್ನ ಲಾಸ್ಯಕೆ
ಗರಿ ಮುಚ್ಚಿತು ಮಯೂರ!

Wednesday 17 September, 2008

ಶ್ರದ್ಧಾ


ಹಾಡಲು ಬಾರದೆ ನಾನು
ಕರೆಸಿಹೆ ಕೋಗಿಲೆಯನ್ನು
ಹಾಡುತ ಹಾರೈಸಲೆಂದು

ನೆಗೆಯಲು ಬಾರದೆ ನಾನು
ಕರೆಸಿಹೆ ಹುಲ್ಲೆಯನ್ನು
ಉಡುಗೊರೆಯ ನೀಡಲೆಂದು

ಇರುಳನ್ನು ಓಡಿಸಲಾಗದೆ ನಾನು
ಕರೆಸಿಹೆ ಚಂದ್ರನನ್ನು
ಚಂದ್ರಮುಖಿಯ ನೋಡಲೆಂದು

ಭುವನ ಸುಂದರಿಯ ಮುಂದೆ
ಅನ್ಯ ಸುಂದರಿಯರೇ?
ಚಲನವಿಲ್ಲದ ನೋಟಕೆ
ಧನ್ಯ ನೀವು ನಯನಗಳೆ!


ಪ್ರೀತಿಯ ಪುಟಾಣಿ ಶದ್ದುಗೆ ಹು.ಹ.ಹಾ ಶುಭಾಶಯಗಳು

Sunday 14 September, 2008

ಹನಿಗವನಗಳು - ೨

ಪತಿ

ಕೆ.ಎಸ್.ಎನ್. ಹೇಳಿದ್ದರು
ನೀ ಕಟ್ಟಿ ಕೊಂಡಾಗಾಗುವೆ
ಕೋಟ್ಯಾಧಿಪತಿ..
ನಾ ಇವಳನ್ನು ಕಟ್ಟಿ ಕೊಂಡಾದೆ
ಕೋತಿಯ ಪತಿ!

Come-ಪನಿ

ಕೂಗಿ ಕೂಗಿ ಕರೆಯಿತು
ನನ್ನ Company,
Come ನನ್ನಲ್ಲಿ
ನಿನಗಿದೆ ಇಲ್ಲಿ
ಮಾಡಲು ಬೇಕಾದಷ್ಟು ಪನಿ*

ಪನಿ= ಕೆಲಸ (ತೆಲುಗು ಮೂಲ)

ಬಿಡುವು

ನಿರಂತರದ ಕೆಲಸದ ಮಧ್ಯ
ಉಸಿರಾಟಕ್ಕೆ ಸಿಗುವ
ಅಮೂಲ್ಯ ಕ್ಷಣ!

ದುಡಿಮೆ

ಕಷ್ಟ ಪಟ್ಟು ದುಡಿದೆ
ಕಂಪನಿಯ Welfareಗೆ
ಕೂಡಲೆ ಬಂದಿತು
ಆಮಂತ್ರಣ Farewellಗೆ!

ಅಣ್ಣಂದಿರು

ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕರಣ್ಣ

Saturday 6 September, 2008

ದೇವದಾಸಿ

ಆಕೆಗಿನ್ನು ೧೩. ಶಾಲೆಯಲ್ಲಿ ಓದುತ್ತಾಯಿದ್ದಾಳೆ. ಅದು ಹೇಗೋ ಒಬ್ಬನ ಮೇಲೆ ಪ್ರೀತಿ ಉಂಟಾಗಿತ್ತು. ಆ
ಹುಡುಗ ಇವಳನ್ನು ಓಡಿ ಹೋಗಲು ಕರೆದನಂತೆ. ಆದರೆ ಈಕೆಯ ಮನಸ್ಸು ಒಪ್ಪಲಿಲ್ಲ. ತಂದೆ ತಾಯಿಯರನ್ನು
ಬಿಟ್ಟು ಓಡಿ ಹೋಗ ಬಾರದು ಎಂಬ ಮನಸ್ಸಿತ್ತು. ಆದರೆ ಈ ವಿಷಯವು ಮನೆ ಮಂದಿಗೆ ತಿಳಿದು ಇವಳನ್ನು
ದೇವದಾಸಿ ಮಾಡಲು ಹೊರಟರು.

ಎಲ್ಲರೂ ಸವದತ್ತಿ ಯಲ್ಲಮ್ಮನ ಗುಡ್ದಕ್ಕೆ ಹೋಗಿ ಇವಳನ್ನು ವಧುವಿನಂತೆ ಸಿಂಗರಿಸಿದರು. ಆಕೆಗೆ ಕೈತುಂಬಾ
ಬಳೆಗಳನ್ನು ತೊಡಿಸಿದಾಗ ಬಹಳ ಆನಂದವಾಯಿತಂತೆ. ಎಲ್ಲಾ ಶಾಶ್ತ್ರಗಳನ್ನು ಮುಗಿಸಿ ಕುತ್ತಿಗೆಗೆ ಒಂದು ತಾಳಿ 
ಕಟ್ಟಿದರು. ಈಗ ಇವಳು ದೇವದಾಸಿ! ಈ ಪದವು ಕೇಳಲು ಹಿತವಾಗಿದೆಯಷ್ಟೇ! ಬೇಸರದ ಸಂಗತಿಯಂದರೆ
ಇಷ್ಟನ್ನೆಲ್ಲಾ ಮಾಡಲು ಇವಳ ಹೆತ್ತಮ್ಮನ ಆಶೀರ್ವಾದವೂ ಇತ್ತು.

ಇದೆಲ್ಲಾ ಆದ ನಂತರ ಎಂದಿನಂತೆ ಶಾಲೆಗೆ ಹೋದಳು.ಸಹಪಾಠಿಗಳೆಲ್ಲಾ ಇವಳ ತಾಳಿಯನ್ನು ನೋಡಿ, ನಿನಗೆ
ಯಾವಾಗ ಮದುವೆಯಾಯಿತು? ನಿನ್ನ ಗಂಡ ಯಾರು? ಎಲ್ಲಿದ್ದಾನೆ? ಅಂತೆಲ್ಲಾ ಅನೇಕ ಪ್ರಶ್ನೆಗಳನ್ನಿಟ್ಟರು. ಆಕೆಗೆ
ಯಾವುದಕ್ಕೂ ಉತ್ತರಿಸಲು ಆಗಲಿಲ್ಲ. ಏನು ತೊಚುತ್ತೆ ...? ಪ್ರಿಯತಮ ಕರೆದಾಗ ಈಕೆ ಓಡಿ ಹೋಗಿದ್ದರೆ
ಚೆನ್ನಾಗಿರುತ್ತಿತ್ತೋ ಏನೋ ಅಂತ ನನಗೆ ಅನ್ನಿಸಿತು.

ಇವಳ ಭಾವ, ಈ ಪದ್ಧತಿ ನಡೆಸಲು ಬೇಕಾಗುವ ಖರ್ಚುಗಳನ್ನೆಲ್ಲಾ ಭರಸಿದನಂತೆ.ಹಾಗಾಗಿ ಇವಳ ತಾಯಿ
ಆತನೊಂದಿಗೆ ಮಲಗಲು ಹೇಳಿದ್ದಳಂತೆ. ಅಷ್ಟೇ ಅಲ್ಲ ಸಿಕ್ಕವರೆಲ್ಲರ ಜೊತೆಗೂ ಮಲಗಿದ್ಡಾಳಂತೆ.ಇವಳೇ
ಹೇಳುವಹಾಗೆ ಇವಳ ಅಕ್ಕನ ಸಂಸಾರ ಸರಿಯಿರಬೇಕಾದರೆ ಈಕೆ ಭಾವಾನೊಂದಿಗೆ ರಾತ್ರಿಗಳ ಕಳೆಯಬೇಕಿತ್ತು.
ಹೀಗೆ ದಿನಗಳು ಕಳೆದಂತೆ ಈಕೆ ಗರ್ಭವತಿಯಾದಳು.ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಳು.ಮತ್ತೆರಡು
ವರ್ಷಗಳಲ್ಲಿ ಇನ್ನೊಂದು ಗಂಡು ಮಗುವಿಗೆ ಜನ್ಮವಿತ್ತಳು. ಇಷ್ಟೇ ಈಕೆಯ ಸಂಸಾರ.ನಿನ್ನ ಮಕ್ಕಳು ಏನ್
ಮಾಡ್ತಾಯಿದ್ದರೆ ಅಂತ ಕೇಳಿದಾಗ, ಆಕೆ ಹೆಮ್ಮೆಯಿಂದ ಹೇಳುತ್ತಾಳೆ "ಹೈ ಸ್ಕೋಲ್ ಓದುತ್ತಾಯಿವೆ".
ತಂದೆ ಹೆಸರು ಏನನ್ನು ಕೊಟ್ಟಿದ್ದೀರ ಅಂತ ಕೇಳಿದಾಗ ಆಕೆ ಹೇಳುತ್ತಾಳೆ "ನನ್ನ ಹೆಸರನ್ನೇ ಕೊಟ್ಟಿದ್ದೀನಿ".
ಯಾಕಮ್ಮ ತಂದೆ ಯಾರು ಅಂತ ಗೊತ್ತಿಲ್ಲವೇ? ಅಂತ ಕೇಳಿದ ಪ್ರಶ್ನೆಗೆ "ತಂದೆ ಹೆಸರು ಕೊಟ್ಟರೆ ಅವರು
ಮುಂದೆ ಹಕ್ಕು ಚಲಾಯಿಸ ಬಹುದು.ಹಾಗಾಗಿ ಕೊಟ್ಟಿಲ್ಲ".ಈ ಮಾತನ್ನು ಕೇಳಿದಾಗ ತುಂಬಾ ದುಃಖವಾಯಿತು
ನನಗೆ.

ಈಕೆಯ ತಾಯಿದ ಮಹದಾಸೆ ಇದ್ದದ್ದು ಇವಳನ್ನು ಪುಣೆ, ಮುಂಬೈಗೆ ಕಳುಹಿಸಿ ಹೆಚ್ಚು ಹೆಚ್ಚು ಹಣ
ಸಂಪಾದಿಸುವುದು.
ಆದರೆ ದೇವರ ದಯೆಯಿಂದ ಇದು ಸಾಧ್ಯವಾಗಲಿಲ್ಲ.

ಈಕೆಯ ಮಗಳು ಒಮ್ಮೆ ಕೇಳಿದಳಂತೆ "ನಮ್ಮಪ್ಪ ಯಾರಮ್ಮ? ನಮ್ಮಪ್ಪ ಎಲ್ಲಮ್ಮ?... ನಿನ್ನ ಮದುವೆ
ಮಾಡಿಕೊಟ್ಟಿದ್ದರೆ,ನಮ್ಮ ಜೊತೆಗೆ ಅಪ್ಪನೂ ಇರುತ್ತಿದ್ದರಲ್ವೇನಮ್ಮ". ಏನು ಉತ್ತರ ಕೋಟ್ಟಾಳು ಈಕೆ? ನಾನು
ಏನು ಹೇಳುತ್ತೀನಿ ಅಂದರೆ, ಆ ಯಲ್ಲಮ್ಮನ ಸಮ್ಮುಖದಲ್ಲಿ, ಒಂದು ಕೆಟ್ಟ ಪದ್ಧತಿಯನ್ನು ಆಚರಿಸಿ ಎಷ್ಟೋ
ಹೆಣ್ಣು ಮಕ್ಕಳ ಜೀವನವನ್ನು ಹಾಳು ಮಾಡಿದ್ದಾರೆ. ಈಗಲೂ ಈ ಪದ್ಧತಿಯಿದೆಯಂತೆ.

ಈಕೆಯ ಜೀವನ ಬರೀ ನೋವೆ? ಅಂತ ಯೋಚನೆ ಮಾಡುತ್ತಾಯಿದ್ದೆ. ಆಗ ಈಕೆ ಜೀವನಕ್ಕೆ Turning
Point ಸಿಕ್ಕಿತು. ಮಹಿಳಾ ಹಿತ/ಅಭಿವೃದ್ದಿ ಮಾಡುವ ಸಂಘವೊಂದು ಈಕೆಯಿದ್ದೆ ಊರಿಗೆ ಬಂದು,"ಇಲ್ಲಿ
ದೇವದಾಸಿಯರು ಇದ್ದಾರೆಯೆ? ಅಂಥವರಿಗೆ ತಿಳುವಳಿಕೆ ಮಾತು ಹೇಳಿ, ಮುಂದೆ ಈ ರೀತಿ ಆಗದಿರಲು
ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನಿಮ್ಮ ಊರಲ್ಲಿ ಅಂಥವರು ಇದ್ದರೆ ದಯವಿಟ್ಟು ತೋರಿಸಿ. ಅವರಿಗೆ
ಒಳ್ಳೆ ಭವಿಷ್ಯ ನಿರೂಪಿಸುತ್ತೇವೆ". "ನಮ್ಮೂರಲ್ಲಿ ದೇವದಾಸಿ ಅಂತ ಯಾರೂ ಇಲ್ಲ" ಅಂತ ಹೇಳಿದ್ದಳಂತೆ.
ಆ ಊರಿನ ಜನರಿಗೆ ಇದು ಹೊಸ ಪದ. ಅವರಿಗೆ ಗೊತ್ತಿದ್ದ ಪದವೆಂದರೆ ಸೂX.ಇವರುಗಳು ನಮ್ಮ ತಲೆ
ತಿನ್ನೋಕೆ ಬಂದಿದ್ದಾರೆ ಅಂತ ತಿಳಿದ ದೇವದಾಸಿಯರು,"ನೀವು ನಾಳೆ ಬನ್ನಿ. ನೀವು ರಾತ್ರಿ ೧೦ ಗಂಟೆಗೆ
ಬನ್ನಿ" ಅಂತೆಲ್ಲ ಹೇಳಿ ಕಳುಹಿಸುತ್ತಾಯಿದ್ದರಂತೆ. ಆದರೆ ಆ ಸಂಘದವರು ಅವರು ಹೇಳಿದ ಸಮಯಕ್ಕೆ
ಸರಿಯಾಗಿ ಅವರನ್ನು ಭೇಟಿಮಾಡುತ್ತಾಯಿದ್ದರಂತೆ. ಏನಾದರೂ ಆಗಲಿ ಒಮ್ಮೆ ಅವರ ಭಾಷಣ ಕೇಳಬೇಕು
ಅಂತ ಕೇಳಿದರಂತೆ ಆ ಊರಿನ ದೇವದಾಸಿಯರು. ಅವರ ಮಾತು ಕೇಳಿದ ಮೇಲೆ,ನಮ್ಮ ಮೇಲೆ
ಲೈಂಗಿಕ ಕಿರುಕುಳ ಕೊಡುವವರನ್ನು ಶಿಕ್ಷೆಗೆ ಗುರಿ ಪಡಿಸಬಹುದು ಎಂಬ ವಿಚಾರ ತಿಳಿದು ಕೊಂಡರಂತೆ.
ಎಂದಿನಂತೆ ಈಕೆ ಭಾವ ಒಂದು ರಾತ್ರಿ ಬರಲು ಹೇಳಿದನಂತೆ. ಆಗ ಈಕೆ, "ಹಿಂದೆ ಆಗಿರೋದು ಆಗೋಯ್ತು.
ಇನ್ನು ಮುಂದೆ ನೀನು ಹೀಗೆ ಕರೆದರೆ.. ಪೋಲೀಸಿಗೆ ಹಿಡಿದು ಕೊಡುತ್ತೀನಿ. ಹುಷಾರ್!" ಅಂತ
ಗದರಸಿದಳಂತೆ.ಅಬ್ಬಾ! ಏನಮ್ಮ ನಿನ್ನ ಧೈರ್ಯ.. ಮೆಚ್ಚೆದೆ ಕಣಮ್ಮ..ಅಲ್ಲಿಂದ ಈಕೆ ಹಾಗು ಇವಳಂತೆ
ಇದ್ದ ಕೆಲವರು,ಈ ಪದ್ಧತಿನಿಲ್ಲುಸುವುದರಲ್ಲಿ ತೊಡಗಿದ್ದಾರಂತೆ. ದೇವದಾಸಿ ಶಾಸ್ತ್ರ ನಡಿತಾಯಿದೆ ಅಂತ ವಿಚಾರ
ತಿಳಿದ ತಕ್ಷಣವೇ ಪೋಲೀಸಿಗೆ ದೂರು ನೀಡಿ,ಅವರನ್ನು ಅಲ್ಲಿಗೆ ಕರೆದು ಕೊಂಡು ಹೋಗಿ
ತಡಿಯುತ್ತಾಯಿದ್ದಾಳಂತೆ. ಹೀಗೆ ಮುಂದುವರಿಸಮ್ಮ.

ಈಕೆಯ ಸಂಸಾರಕ್ಕೆ ಮತ್ತೊಬ್ಬರು ಸೇರಿದ್ದಾರಂತೆ. ಯಾರೆಂದರೆ, ಈಕೆಯ ಪ್ರಿಯತಮ! ಅವನು ಇವಳೊಂದಿಗೆ
ಇದ್ದಾನಂತೆ. ಈ ವಿಚಾರ ಕೇಳಿದ ಮೇಲೆ "ಪ್ರೀತಿ ಸುಳ್ಳಲ್ಲ!" ಅಂತ ಗೊತ್ತಾಗುತ್ತೆ ಅಲ್ವಾ?

ಈ ಕೆಟ್ಟ ಪದ್ಧತಿ ನಿಂತು ಹೋಗಲಿ. ಇದಕ್ಕೆ ಯಾರೂ ಬಲಿಯಾಗುವುದು ಬೇಡ.

Saturday 30 August, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಆಫೀಸು <-->ಹೋಟೆಲ್ಲು

ಹಿಂದಿನ ಭಾಗ ಇಲ್ಲಿದೆ.

ನಾವು ಹೋಟೆಲನ್ನು ತಲುಪಿದೆವು. ಅಲ್ಲಿ ಭಾರತದ ಮುಖಗಳನ್ನು ನೋಡಿ ಸ್ವಲ್ಪ ಸಮಾಧಾನವಾಯಿತು. ಆದರೆ ಒಂದು ತೊಂದರೆ ನನಗಾದದ್ದು ಎಂದರೆ, ಸಸ್ಯಹಾರಿ ಹಾಗು ಮಾಂಸಹಾರಿಯ ಭೋಜನಾಲಯವದು. ನನಗಂತೂ ಮುಜುಗರವಾಯಿತು. ಸಸ್ಯಹಾರಿಯ ತಿನಿಸು ಕೊಡು ಅಂತ waiterಗೆ ಹೇಳಿದೆ. ಅವರೆಲ್ಲಾ ಮಾಂಸಾಹಾರವನ್ನು ತೆಗೆದು ಕೊಂಡರು. ಒಂದೇ ಟೇಬಲ್ಲಿನಲ್ಲಿ ಕುಳಿತು ಭೋಜನ ಮುಗಿಸಿದೆವು.

ಅಲ್ಲಿಂದ ನಾವು ಆಫೀಸಿಗೆ ಬಂದೆವು. ನಮ್ಮ ಕರ್ತವ್ಯ ನಿಭಾಯಿಸುತ್ತಾಯಿದ್ದೆವು. ಸಮಯ 3.30 - 4 PM ಇರಬೇಕು, ಆಗ ಯಾರ್ಕ್ಕೊ ಬಂದು, "Hey!!... Go and have fruits" ಅಂದರು. ಇದೇನಪ್ಪಾ ಅಂತ ನಮ್ಮ ಕಾಫಿ ಕೇಂದ್ರದ ಕಡೆಗೆ ಹೋದ್ವಿ.

ಅಲ್ಲಿ ಒಂದು ಬುಟ್ಟಿಯಷ್ಟು ಹಣ್ಣುಗಳನ್ನು ಇಟ್ಟಿದ್ದರು. ನಿಮಗೆ ಯಾವುದ್ ಬೇಕೋ Select ಮಾಡ್ಕೊ ಅಂತ ಹೇಳುತ್ತಾಯಿದ್ದವು. ನಾನು ಮೊದಲಿಗೆ ಹಸಿರು ಸೇಬನ್ನು ತೆಗೆದುಕೊಂಡು ಪಕ್ಕದಲ್ಲೆ ಇದ್ದ ಟೇಬಲ್ಲಿನ ಮೇಲೆ ಕೂತೆ. "ಸೇಬಿದ್ದರೆ ವೈದ್ಯರ ಜೇಬಿಗೆ ಹಣವಿಲ್ಲ!" ("ಸೇಬು ತಿಂದರೆ... ವೈದ್ಯರ ಜೇಬು ತುಂಬಲ್ಲ") ಎಂಬ ಆಂಗ್ಲ ಗಾದೆ ನೆನಪಾಯಿತು. Suomi Newspaper ಹಿಡಿದು ಪುಟಗಳನ್ನು ತಿರುಗಿಸಿ ನೋಡುತ್ತಾಯಿದ್ದೆ... (ಓದೋದಕ್ಕೆ ಆಗಲ್ಲವಲ್ಲಾ ಅದಕ್ಕೆ).


ಆಮೇಲೆ ಒಂದು ಗ್ಲಾಸ್ ಕಾಫಿ ಹೀರಿದ ಮೇಲೆ ಕೆಲಸದ ಕಡೆ ಗಮನ ಕೊಟ್ಟೆ. ಸುಮಾರು ಐದು ಗಂಟೆಗೆ ಎಲ್ಲಾರು ಮನೆಗೆ ಹೊರಟರು. ನಾನಂತೂ Orkut, GTalk ನಲ್ಲಿ ಮುಳುಗಿದ್ದೆ. ಅಲ್ಲಿ ಸಿಕ್ಕವರಿಗೆ ನನ್ನ ಅನುಭವಗಳನ್ನು ಹೇಳುತ್ತಾ ಇದ್ದೆ. ಸ್ವಲ್ಪ ಸಮಯಕ್ಕೆ ನನ್ನ ತಾಯಿ, ತಂದೆ online ಬಂದರು. ಅವರ ಜೊತೆ ಹರಟೆ ಹೊಡೆದು.. ನಮ್ಮ ಹೊಟೆಲಿಗೆ ಹೊರಟೆ.

ಹೊಟೆಲ್ ನಲ್ಲಿ ನಮಗೊಂದು Oven ಇಡಲು ಹೇಳಿದೆವು. ಅದರಂತೆ ಅವರು ತಂದಿಟ್ಟರು. ಅದನ್ನು ನನ್ನ ಸಹೋದ್ಯೋಗಿಯ ರೂಮಿನಲ್ಲಿ ಇಡಲು ಹೇಳಿದೆನು. ತದನಂತರ, Fresh ಆದಮೇಲೆ, ನನ್ನ ರೂಮಿನ ಫೋನ್ ನಂಬರನ್ನು ಹೊಟೆಲಿನ ಸಿಬ್ಬಂದಿಯವರಿಂದ ತಿಳಿದುಕೊಂಡೆ. ಆಮೇಲೆ ನನ್ನ ಮನೆಗೆ ಫೋನು ಹಾಯಿಸಿ ಸ್ವಲ್ಪ ಕಾಲ ಮಾತಾಡಿದೆ. ಆಮೇಲೆ T.Vಯನ್ನು On ಮಾಡಿದೆ. "Welcome Mr Jayashankar!..." ಅಂತ ಪರದೆಯ ಮೇಲೆ ಬಂತು. ಆಮೇಲೆ ಏನೇನು ಚಾನೆಲ್ಲುಗಳು ಬರುತ್ತವೆ ಅಂತ ನೋಡಿದೆ. ಒಂದು Sports ಚಾನೆಲ್ ಇತ್ತು (Euro Sports). ಅದನ್ನು ನೋಡುತ್ತಾಯಿದ್ದೆ. ಸ್ವಲ್ಪ ಸಮಯವಾದ ಮೇಲೆ ಊಟದ ಸಮಯ ಬಂದಿದೆ ಅಂತ ಹೊಟ್ಟೆಯು ಹೇಳಿತು. ನಾನು, ಅಮ್ಮ ಮಾಡಿಕೊಟ್ಟಿದ್ದ ಚಪಾತಿಗಳನ್ನು ಹಿಡಿದು ಅವನ ರೂಮಿಗೆ ಹೋದೆ. ಅದರೊಂದಿಗೆ ಇದ್ದ ಕೆಲವು ತಿನಿಸುಗಳನ್ನೂ ತೆಗೆದುಕೊಂಡು ಹೋಗಿದ್ದೆ. ಅವನಿಗೆ ಅವನ್ನು ಕೊಟ್ಟೆ. ಅವನಿಗೆ ಅದು ತುಂಬಾ ಇಷ್ಟವಾಯಿತು. ಇಬ್ಬರೂ ಎರಡೆರಡು ಚಪಾತಿಗಳನ್ನು ತಿಂದೆವು. ಆಮೇಲೆ ನನ್ನ ರೂಮಿಗೆ ಬಂದು ಬೇಗ ಮಲಗಿದೆ. ಬೆಳಿಗ್ಗೆ ೭ ರಿಂದ ತಿಂಡಿ ಸಿಗುವುದಾಗಿ ಮೊದಲೇ ಹೊಟೆಲ್ಲಿನವರು ನಮಗೆ ಹೇಳಿದ್ದರು. ಅದಕ್ಕೆ ನಾನು ೬ ಕ್ಕೆ alarm set ಮಾಡಿಕೊಂಡು ಮಲಗಿದೆ. ಬೆಳಿಗ್ಗೆ alarm ಹೊಡೆಯಿತು. ಅದನ್ನು off ಮಾಡಿ ಮತ್ತೆ ೨೦ ನಿಮಿಷಗಳ ಕಾಲ ಮಲಗಿದೆ.

ಆಮೇಲೆ ಏಳಲೇ ಬೇಕು ಅಂತ ಎದ್ದು, ಸ್ನಾನವನ್ನು ಮುಗಿಸಿ, ನನ್ನ ಸಹೋದ್ಯೋಗಿಗೆ ಫೋನು ಮಾಡಿದೆ. ಅವನ ಉತ್ತರ ಬರಲಿಲ್ಲ. ಇನ್ನು ಸ್ವಲ್ಪ ಹೊತ್ತು ನಾನು ಟಿ.ವಿ. ನೋಡುತ್ತಾಯಿದ್ದೆ. ಆಮೇಲೆ ಇನ್ನೊಮ್ಮೆ ಅವನಿಗೆ ಫೋನು ಮಾಡಿದೆ. ಅವನು ಹೇಳಿದ, ನನ್ನ breakfast ಆಯ್ತು. ಈಗ ಆಫೀಸಿಗೆ ಹೊರಡುತ್ತಾಯಿದ್ದೇನೆ. ೯ಕ್ಕೆ ಅಲ್ವಾ ಆಫೀಸು ಅಂದೆ. ಅದಕ್ಕೆ ಅವನು ಇಲ್ಲ. ೮ಕ್ಕೆ ಅಂದ.
"ಪರಮಾತ್ಮ! ಎರಡನೇ ದಿನವೇ ಆಫೀಸಿಗೆ ಲೇಟಾಗಿ ಹೋಗುವಂತೆ ಮಾಡಿ ಬಿಟ್ಟೆಯಲ್ಲ?" ಅಂತ ದೇವರನ್ನು ಪ್ರಶ್ನಿಸಿದೆ. ಬೇಗ ಹೋಗಿ ತಿಂಡಿ ತಿಂದು ಬರಬೇಕು ಎಂದು "Breakfast Hall" ಗೆ ಹೋದೆ. ಅದು Buffet ಪದ್ದತಿ. ನಾನು ತಿನ್ನ ಬಹುದಾದ ತಿನಿಸು ಕೆಲವು ಮಾತ್ರ!

ಇಲ್ಲಿ ಕಾಣಿಸುತ್ತಾಯಿವೆಯಲ್ಲಾ.. ಅಷ್ಟೆ ನನ್ನ ತಿನಿಸುಗಳು.
1. Bread + Jam
2. Cornflakes with dry grapes, almonds ಜೊತೆಗೆ ೧ ಲೋಟ ಹಾಲು (maito)
3. 1 glass orange / apple (omena) juice
4. watermelon / orange (ಚಿತ್ರದಲ್ಲಿ ಕಾಣಿಸುತ್ತಾಯಿಲ್ಲ..)
5. Coffee / Tea (Optional)

ಇದಾದ ಮೇಲೆ ಸರ ಸರನೆ ಆಫೀಸಿಗೆ ದೌಡಾಯಿಸಿದೆ. ಯಾರ್ಕ್ಕೊ ಗೆ ಶುಭೋದಯ ಹೇಳಿ, ತಡವಾಗಿ ಬಂದದ್ದಕ್ಕೆ ಕ್ಷಮೆ ಯಾಚಿಸಿದೆ. ಅದಕ್ಕೆ ಆತ, "No Problem" ಅಂದರು. ನಾನು ನನ್ನ ಕೆಲಸದ ಕಡೆ ಗಮನ ಕೊಟ್ಟೆ. ಮಧ್ಯಾಹ್ನ ಊಟಕ್ಕೆ ಇಂದು ಬೇರೆಡೆ ಹೋಗೋಣವೆಂದು ಹೇಳಿದರು. ಅಷ್ಟಲ್ಲದೆ ಅಲ್ಲಿ ಸಸ್ಯಾಹಾರಿ ತಿನಿಸು ಸಿಗುವುದಾಗಿ ಭರವಸೆ ಕೊಟ್ಟರು. ನಾನು ಒಪ್ಪಿಕೊಂಡೆ. ನಾವೆಲ್ಲ ಅಲ್ಲಿಗೆ ಹೋದೆವು. ಇಲ್ಲಿ Self service ಪದ್ದತಿಯಿತ್ತು. ಆದರೆ ಭಾರತದ ಹಾಗಲ್ಲ. ಇಲ್ಲಿ ನಮಗೆ ಬೇಕಾದ ತಿನಿಸುಗಳನ್ನು ತೆಗೆದು ಕೊಂಡು Cash Counter ಗೆ ಹೋಗಿ, ಹಣ ನೀಡ ಬೇಕು. ನಾನು ೧ ಲೋಟ ಹಣ್ಣಿನ ರಸವನ್ನು ತೆಗೆದುಕೊಂಡೆ. ನಂತರ ಅಲ್ಲಿಯ ಸಿಬ್ಬಂದಿಯನ್ನು ಎರಡೆರಡು ಬಾರಿ ಇದು ಸಸ್ಯಾಹಾರ ತಿನಿಸೇ? ಎಂದು ವಿಚಾರಿಸಿ.. ಯಾವುದೋ ೨ ಬಗೆಯ ಪಲ್ಯದ ರೀತಿಯಿದ್ದ ತಿನಿಸುಗಳನ್ನು ಮಾತ್ರ ಹಾಕಿಕೊಳ್ಳಲು ಸಾದ್ಯವಾಯ್ತು. ನನ್ನ ತಟ್ಟೆಯನ್ನು ಗಮನಿಸಿದ ಸೈಕಿ, "ಹಾಆಆಆಆಆಆಆಆಆ. You could find at least this much vegetarian food" ಅಂದರು. ತಟ್ಟೆಯನ್ನು ಟೇಬಲ್ಲಿನ ಮೇಲೆ ಇಟ್ಟಾಗ, ಇಷ್ಟು ತಿಂದರೆ ಸಾಕಾಗುತ್ತಾ? ಅಂತ ಪ್ರಶ್ನಿಸಿಕೊಂಡೆ. ಇರಲಿ ಹೇಗೂ ಸಂಜೆಗೆ ಸೇಬು, ಆರೆಂಜು, ಬಾಳೆಹಣ್ಣು ಸಿಗುತ್ತೆ ಅಂತ ಗೊತ್ತಾದಮೇಲೆ, ತಿನ್ನಲಾಗದಿದ್ದರೂ ಪಲ್ಯಗಳನ್ನು ತಿಂದೆ. ಅದು ಸಸ್ಯಾಹಾರವಾದರೂ ಅಲ್ಲಿಯ ಅಡುಗೆ ಶೈಲಿ ವಿಭಿನ್ನ. ಹಾಗಾಗಿ, ನನ್ನ ತುಟಿಗೆ ಅದು ರುಚಿಸಲಿಲ್ಲ.

ಮತ್ತೆ ಎಂದಿನಂತೆ ಕೆಲಸ, ಕಾಫಿ, Scraps, Chats ಹೀಗೆ ಆಫೀಸಿನಲ್ಲಿ ಕಳೆದೆ.

ಆ ದಿನ ಸಂಜೆ ಹೋಟೆಲ್ಲಿಗೆ ಬಂದ ಮೇಲೆ.. ಸ್ವಲ್ಪ ಹೊತ್ತಾದ ಬಳಿಕ, ಊಟಕ್ಕೆ ಹೊರಟೆ. ಅವನು MTR ಪದಾರ್ಥವನ್ನು ತಿನ್ನೋಣವೆಂದು ಹೇಳಿದ. MTR ಅನ್ನವನ್ನು ಬಿಸಿ ಮಾಡಿಕೊಂಡು ತಿಂದೆವು. ಅದರ ಜೊತೆಗೆ Maggi ಸಹಾ ಇತ್ತು. ಅದಕ್ಕೆ sauce ನಾನು ತಂದಿದ್ದೆ. ಅದನ್ನು ತಂದು ಕೊಟ್ಟೆ. ಅದನ್ನು ತೆಗೆಯಲು Opener ಅವಶ್ಯಕತೆ ಇತ್ತು. ನಾನು ಎಲ್ಲಿಂದ ತರೋದು ಅಂತ ಯೋಚನೆ ಮಾಡುತ್ತಾಯಿರುವಾಗಲೇ.. ಅವನು Fridge ತೆಗೆದ ಅಲ್ಲಿದ್ದ Opener ಸಹಾಯದಿಂದ sauce ಮುಚ್ಚಳ ತೆಗೆದಾಯ್ತು. ನಾನು Fridge ಓಳಗೆ ಇದ್ದ ಬಾಟಲ್ಲುಗಳನ್ನು ನೋಡಿದೆ...ಓಹ್! ಇದು ನನ್ನ Department ಅಲ್ಲ ಅಂತ ಗೊತ್ತಾಯ್ತು. ನಮ್ಮ ಭೋಜನವಾದ ಮೇಲೆ ನಾನು ತಂದಿದ್ದು ತಿನಿಸುಗಳನ್ನು ಕೊಟ್ಟೆ.. ಅದನ್ನು ತಿಂದು ಅವನು ತುಂಬಾ ಚೆನ್ನಾಗಿದೆ ಅಂದ. ನನಗೆ ಸಂತೋಷವಾಯಿತು. ಇನ್ನೊಂದು ತೊಗೋ ಅಂತ ಕೊಟ್ಟೆ. ಅವನೇನು ನಿರಾಕರಿಸಲಿಲ್ಲ.

ಆಮೇಲೆ ನನ್ನ ರೂಮಿಗೆ ಬಂದು Fridge ತೆಗೆದೆ.. ಅದೇ ಬಾಟಲ್ಲುಗಳು. ಅಯ್ಯೋ ರಾಮ!........

ನಾನು ಹಾಗು ಅವನು ಇನ್ನುಮುಂದೆ ಹೊರಗಡೆ ಊಟ ಮಾಡೋದು ಬೇಡ ಅಂತ ತೀರ್ಮಾನಿಸಿದೆವು. ನಂತರ ಮಾರನೆ ದಿನ MTR 2 packetsಗಳನ್ನು ಆಫೀಸಿಗೆ ತೆಗೆದುಕೊಂಡು ಹೋದ್ವಿ. ಅದನ್ನೆ ನಮ್ಮ ಭೋಜನಕ್ಕೆ ತಿಂದೆವು. ಹೀಗೆ ಎಲ್ಲಾ ಕೆಲಸದ ದಿನಗಳು ಸಾಗಿದವು.

ಮುಂದಿನ ಭಾಗದಲ್ಲಿ ವಾರಂತ್ಯದ ವಿಚಾರ....

Friday 22 August, 2008

ಬೇಸರದ ಬೀಡು

ಬೇಸರ ಬೀಡು ಬಿಟ್ಟಿದೆ
ಮನದೊಳಗೆ
ಬೇಸರ ಬೀಡು ಬಿಟ್ಟಿದೆ.
ಕಾಣದೊಂದು ನೋವು ಕಾಡಿದೆ
ಕಾರಣ ನನಗೆ ತಿಳಿಯದೆ
ಕಂಬನಿಧಾರೆ ಹರಿಯುತಿದೆ

ಏಕೆ ಹೀಗಾಯಿತೋ ಇದನಾನರಿಯೆ
ಬಯಕೆಗಳು ಬತ್ತು ಹೋಗಿವೆ!
ಮನಶ್ಶಾಂತಿ ಮಡಿದಿದೆ
ಮನದಲ್ಲಿ ಬೇಸರ ಬೀಡು ಬಿಟ್ಟಿದೆ.

ಎತ್ತ ಕಡೆಯಿಂದ ಹಾರಿ ಬಂದು,
ಅಂತರಂಗವ ಸೇರಿತೋ
ಸತ್ತ ಹಾಗೆ ಮಾಡಿ ನನ್ನ
ಅಂಧಕಾರಕ್ಕೆ ನೂಕಿತೋ

ಹರಿವ ತೊರೆಯಂತೆ ಬೇಸರ ಹರಿಯ ಬಾರದೆ?
ಹರಿಯ ನೆರವಿನಿಂದ ಅಂಧಕಾರಕ್ಕೆ ಮುಕ್ತಿ ಸಿಗಬಾರದೆ?

Thursday 14 August, 2008

ಲಕ್ಷ್ಮಿ.....

ಯಾರೀ ಲಕ್ಷ್ಮಿ?.....
ಕ್ಷೀರಸಮುದ್ರ ರಾಜನ ಮಗಳೇ?
ವಿಷ್ಣುವಿನ ಮಡದಿಯೇ?
ದುಡ್ಡಿನ ದೇವತೆಯೇ? ಅಥವಾ
ಇಂದು ಎಲ್ಲಾರು ಆಚರಿಸುತ್ತಾಯಿರುವ ವರಮಹಾಲಕ್ಷ್ಮಿಯೇ?

ಇದೆಲ್ಲವೂ ಸರಿ. ಆದರೆ ನಾನು ಹೇಳೋ ಲಕ್ಷ್ಮಿ ಇವರ್ಯಾರೂ ಅಲ್ಲ. ನನ್ನ ಬಾಲ್ಯ ಜೀವನದಲ್ಲಿ ಕಂಡವಳು. ನನ್ನ ಕಾಲೇಜು ಜೀವನದಲ್ಲೂ ಇವಳನ್ನು ನೋಡಿದ್ದೇನೆ. ನನ್ನ ವೃತ್ತಿ ಪ್ರಾರಂಭವಾದ ಮೇಲೆ ಅವಳನ್ನು ನೋಡಲು ಆಗಲಿಲ್ಲ. ಅವಳ ಕುರಿತು ಬರೆಯಬೇಕೆಂದು ಇಂದು ಅನ್ನಿಸಿ ಬರೆಯ್ಯುತ್ತಿದ್ದೇನೆ.

ಶನಿವಾರ ನಮ್ಮ ಶಾಲೆ ೧೨.೩೦ಕ್ಕೆ ಮುಗಿಯುತ್ತಾಯಿತ್ತು. ಮನೆಗೆ ಬಂದು ಊಟವಾದ ಮೇಲೆ ನಾನು ಹಾಗು ನನ್ನ ಮಾವನ ಮಗ ಇವಳನ್ನು ನೋಡಲು ಹೋಗುತ್ತಾಯಿದ್ದೆವು. ಒಂದು ಹೆಣ್ಣು... ಎರಡು ಗಂಡು ಎಂದು ಯೋಚನೆ ಮಾಡಬೇಡಿ. ನಮ್ಮ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲೇ ಇವಳಿದ್ದಳು. ಅವಳು ಯಾರೆಂದರೆ.. ಸಿನಿಮಾ ಟೆಂಟು! ಆ ಟೆಂಟಿನಲ್ಲಿ ನಾವು ನೋಡುತ್ತಿದ್ದ ಸಿನಿಮಾಗಳ ಸಂಖ್ಯೆ ನಮಗೇ ನೆನಪಿಲ್ಲ! ಅದನ್ನು ಕರೆಯುತ್ತಾಯಿದ್ದದ್ದು ಲಕ್ಷ್ಮಿ ಟೆಂಟ್.

ಅಲ್ಲಿ ೨.೧೫ ಗೆ ಮ್ಯಾಟಿನಿ ಶೋ ಪ್ರಾರಂಭವಾಗುತ್ತಾಯಿತ್ತು. ನಾವು ೧೫ ನಿಮಿಷಗಳು ಮುಂಚಿತವಾಗಿಯೇ ಅಲ್ಲಿ ಇರುತ್ತಾಯಿದ್ದೆವು. ಆ ಸಾಲಿನಲ್ಲಿ ನಿಂತು, ೫ ರೂಪಾಯಿಯ ಎರಡು ಟಿಕೆಟ್ ಪಡೆದುಕೊಂಡು ಬಂದು ಕಬ್ಬಿಣದ ಚೇರಿನ ಮೇಲೆ, ಫ್ಯಾನಿನ ಕೆಳಗೆ ಕೂರಲು ಸಾಲುಗಳಲ್ಲಿ ಮುನ್ನುಗ್ಗುತ್ತಾಯಿದ್ದೆವು. ಅಲ್ಲಿ ಚಿತ್ರ ನೋಡಲು ಏನೋ ಆನಂದ. ಮಧ್ಯಂತರದಲ್ಲಿ ಹೊರಗಡೆ ಬಂದು, ಸೀಬೇ ಹಣ್ಣು, ತೋತಾಪುರಿ ಮಾವಿನ ಹಣ್ಣು ತಿಂದು, ಮತ್ತೆ ನಮ್ಮ ಸೀಟಲ್ಲಿ ಕುಳಿತು ಚಿತ್ರ ಮುಗಿದ ಮೇಲೆ, ಮನೆಗೆ ಹೋಗಿ, ಮನೆಯವರಿಗೆಲ್ಲಾ ಚಿತ್ರದ ಕಥೆಯನ್ನು ಹೇಳುತ್ತಾಯಿದ್ದೆವು. ನಾವು ಆಗ ೨ ಅಥವಾ ೩ ನೆ ತರಗತಿಯಲ್ಲಿದ್ದೆವು.

ಚಿಕ್ಕ ಮಕ್ಕಳನ್ನು ಸಿನಿಮಾಗೆ ಕಳುಹಿಸಲು ಮನೆಯವರಲ್ಲಿ ಆತಂಕ ಹುಟ್ಟುವುದು ಸಹಜವೇ. ಅದಕ್ಕಾಗಿ ಮೊದಲು ನಮ್ಮಿಬ್ಬರನ್ನೇ ಹೋಗಲು ಬಿಡುತ್ತಿರಲಿಲ್ಲ. ಜೊತೆಗೆ ದೊಡ್ಡವರೊಬ್ಬರು ಬರುತ್ತಿದ್ದರು. ಹೀಗಿದ್ದಾಗ, ಒಮ್ಮೆ ಪ್ರೇಮಲೋಕ ಸಿನಿಮಾದ ಹಾಡುಗಳು ಚಿತ್ರಮಂಜರಿಯಲ್ಲೂ ವೀಕ್ಷಿಸಿ, ಅಂತ್ಯಾಕ್ಷರಿಯಲ್ಲೂ ಹಾಡಿ, ನಮಗೆ ಆ ಸಿನಿಮಾ ನೋಡಲು ಆಸೆ ಅತೀಯಾಗಿತ್ತು. ಆ ಸಿನಿಮಾ ಲಕ್ಶ್ಮಿ ಟೆಂಟಿಗೆ ಬಂದಾಗ ಹೋಗೋಣ ಅಂತ ನಾವಿಬ್ಬರೂ ಮಾತಾಡುತ್ತಾಯಿದ್ದೆವು. ಒಂದು ದಿನ ಆ ಕಾಲ ಕೂಡಿ ಬಂದಿತು. ಶುಕ್ರವಾರದಂದು ಶಾಲೆಗೆ ಹೋಗುವ ದಾರಿಯಲ್ಲಿ ವಾಲ್ಪೋಸ್ಟ್ ನೋಡಿದೆವು. ಪ್ರೇಮಲೋಕ ಸಿನಿಮಾ ಲಕ್ಶ್ಮಿ ಟೆಂಟಿನಲ್ಲಿ!

ಶನಿವಾರದ ಊಟ ಮುಗಿಯುತ್ತಾಯಿದ್ದಂತೆ ಅಮ್ಮನಿಗೆ ನಮ್ಮ ಜೊತೆಗೆ ಬರಲು ಕೇಳಿಕೊಂಡೆವು. ಆದರೆ ಅವರಿಗೆ ತುಂಬಾ ಕೆಲಸ ಇದ್ದುದ್ದರಿಂದ ನಮ್ಮ ಅಜ್ಜಿಯವರನ್ನು ನಮ್ಮ ಜೊತೆಗೆ ಕಳುಹಿಸುವುದಾಗಿ ಹೇಳಿದರು. ಜೂಹಿ ಚಾವ್ಲಾ ಇದ್ದಾಳೆ ಸಿನಿಮಾದಲ್ಲಿ ಹಾಗಾಗಿ ಒಮ್ಮೆಯಾದರೂ ಹೋಗಿ ನೋಡ ಬೇಕು ಎನ್ನುವ ಯೋಚನೆ ನಮಗೆ ಆ ವಯಸ್ಸಿನಲ್ಲಿ ಇರಲಿಲ್ಲ. :). ಇದರ ಜೊತೆಗೆ, "ಸುಂದರ ಯುವಕ ದುಶ್ಯಂತ ರಾಜ ಬೇಟೆಯನಾಡಲು ಬಂದ" ಅಂತ ನಮ್ಮ ಗುರು ವಿಷ್ಣು ಕನ್ನಡ ಪುಸ್ತಕವನ್ನು ಕೆಳಗಿಳಿಸಿ ನನಗೆ ಮುಖ ತೋರಿಸಿದ್ದರು. ಇದನ್ನು ಮರೆಯಲು ಆಗುತ್ತಾ ಹೇಳಿ? ನಾವೇನೋ ಸಿನಿಮಾವನ್ನು ಆನಂದದಿಂದ ನೋಡಿದೆವು. ಆದರೆ ಆ ಸಿನಿಮಾದಲ್ಲಿ ಜೂಹಿಯ ಉಡುಗೆ ಹೇಗಿದೆ ಅಂತಾ ಎಲ್ಲಾರಿಗೂ ಗೊತ್ತೇಯಿದೆ. ಇದನ್ನು ನಮ್ಮಜ್ಜಿಗೆ ನೋಡಲು ಅಸಮಾಧಾನವಿತ್ತು. "ಇದೆಂತಾ ಸಿನಿಮಾ! ಇವಳಿಗೆ ಏನು ಮಾನ ಮರ್ಯಾದೆ ಇಲ್ವಾ? ಚಡ್ದಿ ಹಾಕೊಂಡು ಕುಣಿತಾಳೆ" ಅಂತೆಲ್ಲಾ ಹೇಳುತ್ತಾಯಿದ್ದರು. ನಾವು ಅದರ ಕಡೆಗೆ ಗಮನವೇ ಇಡಲಿಲ್ಲ.

ನಾವಿಬ್ಬರೇ ಅಲ್ಲ. ನಮ್ಮ ಕುಟುಂಬ ವರ್ಗದವರೆಲ್ಲಾ ಕೆಲವೊಮ್ಮೆ ಶನಿವಾರದಂದು ಮನೆಗೆ ಬೀಗಾ ಹಾಕಿ, ಎಲ್ಲಾರೂ ಒಟ್ಟಿಗೆ ಸೆಕೆಂಡ್ ಶೋ ಗೆ ಹೋಗುತ್ತಾಯಿದ್ದೆವು. ಅದು ಸುಮಾರು ೯ಕ್ಕೆ ಇರುತಿತ್ತು. ನಿದ್ದೆ ಕಣ್ಣಂಚಿಗೆ ಬಂದರೂ ಸಿನೆಮಾಗೋಸ್ಕರ ಎಚ್ಚರವಾಗಿರುತ್ತಾಯಿದ್ದೆ.

ನಾನು ಹಾಗು ನನ್ನ ಮಾವನ ಮಗ ಒಂದು ನಿನಿಮಾ ನೋಡಿದೆವು. ಅದರ ಹೆಸರು "ನನಗೂ ಹೆಂಡ್ತಿ ಬೇಕು". ಆ ಶೀರ್ಷಿಕೆ ಹೇಳೋ ಕಾಲ ಆಗ ನಮ್ಮದಾಗಿರಲಿಲ್ಲ! ಈಗ?... ಗೊತ್ತಿಲ್ಲ.. ನಾನಿನ್ನೂ ಚಿಕ್ಕ ಹುಡುಗ... :)

ಆಗೊಮ್ಮೆ ....ಈಗೊಮ್ಮ ಹೀಗೆ ಬಾಲ್ಯ ನೆನಪಾದಾಗ... ಒಂದು ಚೂರು ಏನೋ ಬರ್ಕೊತೀನಿ...

Saturday 9 August, 2008

ನಿರೀಕ್ಷೆ

ನಾನೊಬ್ಬ ಸಂಚಾರಿ
ಕೈಮರವಿಲ್ಲದ ದಾರಿಯಲಿ
ಏಕಾಂಗಿ ಸಂಚಾರಿ.

ಗುರಿ ಮುಟ್ಟುವ ಆಸೆ
ಅತಿಯಾಗಿದೆ ಮನದಲ್ಲಿ.
ಸರಿ ದಾರಿಯ ತೋರುವ
ಜೀವವೊಂದೂ ಇಲ್ಲ ಎದುರಲ್ಲಿ.

ನಡೆದು ನಡೆದು ಬಳಲಿಹೆ
ಸರಿ ದಾರಿಯಾವುದಯ್ಯ?
ನಂಬಿರುವೆ ನಾ ದೇವರನ್ನು
ತೋರಿಯಾನು ದಾರಿಯನು
ಮಾಡಿಯಾನು ಪವಾಡವನ್ನು

Wednesday 6 August, 2008

ನಾನಿದ್ದೆ ಆನೆಯಂತೆ!

ಆನೆಯು ಮರಿಯಾಗಿರುವಾಗಲೇ ಕಾಲಿಗೆ ಸರಪಳಿ ಕಟ್ಟಿರ್ತಾರಂತೆ.. ಎಲ್ಲೂ ಹೋಗಬಾರದು ಅಂತ. ಅದು ವಯಸ್ಸಾದ್ರೂ ಅಷ್ಟೆ ತನಗೆ ಅದನ್ನು ಬಿಡಿಸಲು ಆಗುವುದಿಲ್ಲ ಅಂತ ಕಲ್ಪನೆಯಲ್ಲಿರುತ್ತೆಯಂತೆ. ನಾನು ಅಷ್ಟೆ ಹಾಗೆ ಇದ್ದೆ.

ಏನು ವಿಷಯ ಅಂದ್ರೆ, ನಮ್ಮ ಕಛೇರಿಯಲ್ಲಿ ಬ್ಲಾಗುಗಳನ್ನು ಬ್ಲಾಕ್ ಮಾಡಿದ್ದರು. ಬಹಳ ದಿನಗಳಿಂದ ದಟ್ಸ್ಕನ್ನಡ , ಬಾನುಲಿ.ಕಾಂ ಆದಿಯಾಗಿ ಯಾವೊಂದು ವೆಬ್ ಸೈಟು ಓಪನ್ ಆಗುತ್ತಿರಲಿಲ್ಲ. ಇಂದು ಕೆಲಸವೂ ಹೆಚ್ಚಿರಲಿಲ್ಲ. ಅದಕ್ಕೆ ಹಾಗೆ ಸುಮ್ಮನೆ ಕವನ ಬರೆದೆ. ಏಕೋ ದಟ್ಸ್ಕನ್ನಡ ಓಪನ್ ಆಯ್ತು. ಈಗ ಬ್ಲಾಗನ್ನು ಓಪನ್ ಮಾಡಿದೆ. ನನ್ನ ಆಶ್ಚರ್ಯಕ್ಕೆ ಅದೂ ಓಪನ್ ಆಗಿದೆ. ಆನೆ ವಿಚಾರ ನನ್ನ ಜ್ಞಾಪಕಕ್ಕೆ ಬಂದು ನಾನು ಬರೆದೆ ಅಷ್ಟೆ.

ಮಾನವರೇ ಹಾಗೆ ಎರಡು ಮೂರು ಬಾರಿ ಪ್ರಯತ್ನ ಮಾಡಿದಾಗ ಒಂದು ಕೆಲಸ ಆಗದಿದ್ದಲ್ಲಿ ಮತ್ತೆ ಅದರ ಪ್ರಯತ್ನವನ್ನೇ ಮಾಡುವುದಿಲ್ಲ. ಇದಕ್ಕೆ ಹೊಂದುವಂತೆ ಶಾಲೆದಿನಗಳಲ್ಲಿದ್ದ ಜೇಡ ಹಾಗು ಸೋತ ರಾಜನ ಕಥೆ ನೆನಪಾಗದೆ ಇರುವುದಿಲ್ಲ. ಆದರೆ ನಾನಿಲ್ಲ ಪ್ರತಿದಿನ ಸೈಟು ಓಪನ್ ಮಾಡಲು ಪ್ರಯತ್ನ ಪಟ್ಟರೆ ಕಂಪನಿಯ ನಿಯಮದಂತೆ ಎಲ್ಲಾ ಬ್ಲಾಕಾಗಿರುತ್ತೆ!ಇಂದೇಕೋ ಓಪನ್ ಆಗಿದೆ. ಮುಂದೆಯೂ ಹೀಗೆ ಓಪನ್ ಆದರೆ ಸಂತೋಷ ಇಲ್ಲದಿದ್ದರೂ ಸಂತೋಷ!

Monday 28 July, 2008

ಎರಡು ಬೊಂಬೆಗಳು

ಕದಲದೆ ಕೂತಿವೆ ಎರಡು ಬೊಂಬೆಗಳು
ಕಣ್ಣೀರು ಸುರಿಸುತ್ತಿವೆ ಎರಡು ಕಣ್ಣುಗಳು
ಕನಸಿನಲೋಕದಲ್ಲಿ ವಿಹರಿಸುತ್ತಿವೆ ಬೊಂಬೆಗಳು
ಈ ನೋಟವ ನೋಡಿವೆ ಹಲವು ಕಣ್ಣುಗಳು.

ಜೀವನದ ಕನಸ ಹೊತ್ತ ಬೊಂಬೆಗಳು
ಪಡೆದವು ಮತ್ತೆರಡು ಬೊಂಬೆಗಳು
ಎರಡು ನಾವೆಯ ಪಯಣದಿ
ಬೊಂಬೆಗಳಾದವು ಕಣ್ಣುಗಳು

ಬೆಳೆದ ಬೊಂಬೆಗಳು ಕದಲದೆ ಕೂತು
ಕಣ್ಣೀರ ತರಿಸಿದವು ಕಣ್ಣುಗಳಲ್ಲಿ.
ಭಗವಂತನ ನಿಯಮದಂತೆ
ಬೊಂಬೆಗಳೇ ಕಣ್ಣುಗಳು, ಕಣ್ಣುಗಳೇ ಬೊಂಬೆಗಳು!

Saturday 19 July, 2008

ಸ್ನೇಹ ಕೋಟೆ

ಹಿಂದೊಂದು ದಿನದಂದು
ನೀನಾಡಿದ ನುಡಿಯೊಂದು
ಬಯಸದೇ ಯಾವ ಕೆಡುಕನ್ನು
ಬೆಸೆಯಿತು ಈ ಸಂಬಂಧವನ್ನು

ಅಪರಿಚಿತ ನಾ
ಅಪರಿಚಿತೆ ನೀ
ಸ್ನೇಹ ಕೋಟೆಗೆ ಪಾಯವ
ಕಟ್ಟಿದವಳು ನೀ

ಮೌನ ರಾಜ ನಾ,
ಮೌನ ಗೌರಿ ನೀ
ಭದ್ರ ಸ್ನೇಹ ಕೋಟೆಯ
ಕಟ್ಟಿದೆವು ಕೂಡಿ

ಬಿರುಗಾಳಿ ಬೀಸಲಿ
ಭೂಕಂಪವಾಗಲಿ
ಸುಭದ್ರ ನಾವಿಬ್ಬರೂ
ಆ ಸ್ನೇಹ ಕೋಟೆಯಲಿ

Sunday 13 July, 2008

ನಲ್ಲೆಯ ನೆನಪು

ಮಲ್ಲಿಗೆ ಹೂವ ಮುಡಿದ ನಲ್ಲೆ
ಕರದಿ ಹಿಡಿದು ಕಬ್ಬಿನ ಜಲ್ಲೆ
ಮೆಲ್ಲಗೆ ಹೆಜ್ಜೆ ಇಟ್ಟಾಗ ನಲ್ಲೆ
ಕರ ರಚಿಸಿತು ಕಬ್ಬವನಲ್ಲೆ!

ನೀ ಕುಣಿಯಲು ನೀರು ಹರಿಯಿತು
ನೀ ಮುನಿಯಲು ನೀರು ಬತ್ತಿತು
ನೀ ಶಾಂತಳಾಗಿ ಶಿವನ ಧ್ಯಾನಿಸೆ
ನೀರು ತುಂಬಿತು ನದಿಯೊಳು

ನಿನ್ನ ನೆನಪು ಕಾಡಲು
ಚಿಕ್ಕದೆನಿಸಿತು ಕಡಲು
ನೀನು ನಗೆಯ ಬೀರಲು
ಚಂದ್ರನಿಲ್ಲದೆ ಬೆಳದಿಂಗಳು!

Tuesday 8 July, 2008

ಹಸನ್ಮುಖಿ

ನಿನ್ನ ಕುರಿತು ಬರೆಯಲು ಕೂತೆ
ಪದಗಳ ಮರೆಸಿತು ಆ ನಿನ್ನ ನಗು!
ಏನೂ ಬರೆಯದೆ ನಾ ಸೋತೆ
ಸೋಲನ್ನು ಮರೆಸಿತು ಆ ನಿನ್ನ ನಗು!

ನುಡಿಗಳ ನಡುವೆ ನೀ ನಗುತಿರುವೆ
ನಾಡಿಮಿಡಿತದಲ್ಲೂ ನಗೆ ತುಂಬಿಕೊಂಡಿರುವೆ
ಮಡಿಯದ ಆ ನಗು ಇರಲಿ ನಿನ್ನಲಿ
ಪ್ರತಿ ಕ್ಷಣವು ಹುರುಪು ತರಲಿ ನನ್ನಲಿ

ನಿನ್ನ ನಗುವಿನ ಬಗೆಯ ತಿಳಿಸು
ಅರಿತುಕೊಳ್ಳುವೆ ಅದ ನಾನು
ಮೊಗದಲಿ ನಗುವು ಮನೆಯ ಮಾಡಿರಲು
ಹಸನ್ಮುಖಿಯು ನೀನೆನಲು ತಪ್ಪೇನು?

Friday 27 June, 2008

ಫಿನ್ ಲ್ಯಾಂಡಿಗೆ ಪ್ರವಾಸ - ಮೊದಲನೆ ಬಾರಿ - ಆಫೀಸಿನ ಒಳಗೆ

ಹಿಂದಿನ ಭಾಗ ಇಲ್ಲಿದೆ.

ಆಕೆಗೆ ನಾವು "Good Morning" ಅಂತ ಹೇಳಿದ್ವಿ. ಆಮೇಲೆ, "We are from India. We want to meet Jarkko Heino" ಅಂತ ಹೇಳಿ, ನಮ್ಮ ಬಳಿ ಇದ್ದ ಅವರ ಮೊಬೈಲಿನ ಸಂಖ್ಯೆ ಕೊಟ್ಟೆವು. ಆತನ ಹೆಸರನ್ನು ನೀವು "ಜರ್ಕ್ಕೊ /ಜರ್ಕ್ಕೋ/ಜಾರ್ಕ್ಕೋ" ಎಂದು ಓದಿದ್ದಲ್ಲಿ ಅದು ತಪ್ಪು! Finnish (Suomi) ಭಾಷೆಯಲ್ಲಿ "ಜ"ಕಾರವಿಲ್ಲ. ಅವರು "ಜ" ಜಾಗದಲ್ಲಿ "ಯ/ಯಾ" ಅಂತ ಉಪಯೋಗಿಸುತ್ತಾರೆ. ಹಾಗಾಗಿ ಅವರ ಹೆಸರು "ಯಾರ್ಕ್ಕೊ" ಎಂದು. ಹಾಗದರೆ, ನನ್ನ ಹೆಸರನ್ನು ಹೇಗೆ ಉಚ್ಚರಿಸುತ್ತಾರೋ ಅಂತ ಕಾತುರನಾಗಿದ್ದೆ.

ಆಕೆ ಫೋನು ಹಾಯಿಸಿ, " Moi!....******************************** India*******************" ಅಂತ ಮಾತಾಡಿದಳು. ಹೋ! Indiaದಿಂದ ಯಾರೋ ಇಬ್ಬರು ನಿಮ್ಮನ್ನು ನೋಡಲು ಬಂದಿದ್ದಾರೆ ಎಂದು ಹೇಳಿರ ಬೇಕು ಅಂತ ಗೊತ್ತಾಯ್ತು. ಈ ಸಂಭಾಷಣೆ ನಡೆಯುತ್ತಾಯಿರುವಾಗಲೇ, ಜರ್ಕಿನ್, ಗ್ಲೋವ್ಸ್, ಕೋತಿ ಟೋಪಿ ಕಳಚಿ ಬಿಟ್ಟಿದ್ದೆ...

"Please be seated. He will be coming" ಅಂದಳು. ಆಯ್ತಮ್ಮ ಅಂತ ಕುಳಿತುಕೊಂಡೆ. ಆಫೀಸಿನ ವಾತಾವರಣ ಹೇಗಿದೆ ಅಂತ ನೋಡುತ್ತಾಯಿದ್ದೆ... ಅಷ್ಟರಲ್ಲಿ ಒಬ್ಬ French Beard ಇರುವವನು, Formal wear ನಲ್ಲಿದ್ದವನು ಬಂದಿಳಿದು, ನಮ್ಮ ಹತ್ತಿರ ಬಂದು, "I am Jarkko Heino" ಅಂದ. ನಮ್ಮ ಹೆಸರಿನೊಂದಿಗೆ ಪರಿಚಯ ಮಾಡಿಕೊಂಡ್ವಿ. ನನ್ನ ಹೆಸರನ್ನು ಅವರು, Jaayashankar ಅಂತ ಉಚ್ಚಾರ ಮಾಡಿದರು... ಹೋ! ಪರವಾಗಿಲ್ಲ... ಹೆಸರನ್ನು ಯಾಯಾಶಂಕರ್ ಅಂತ ಹೇಳಲಿಲ್ಲ...

"How was your flight?" "Have you dropped your luggages at the hotel?"
"And was this your first visit outside your country? "how do you feel the weather here?" "whats temperature in baangalore (ಬಾಂಗಲೋರ್) now? ಹೀಗೆ ಅನೇಕ ವಿಚಾರಗಳ ಬಗ್ಗೆ ಕೇಳಿದರು..ನಾನು, "The weather is very bad here. We have never felt the temperature of below +15C. Now we are in -5C. Its new experience " ಅಂತ ಹೇಳಿದೆ.
"Excellent. Now we shall move to our work place" ಅಂತ ಹೇಳಿದರು.

ಲಿಫ್ಟ್ ಬಾಗಿಲು ತೆಗೆದಮೇಲೆ, ಅವರ ಬಳಿ ಇದ್ದ ಒಂದು security keyಯನ್ನು swipe ಮಾಡಿ, 5th Floor ಗುಂಡಿ ಒತ್ತಿದರು. ನಂತರ ನಾವು, ನಮ್ಮ work place ಗೆ ಹೋದ್ವಿ. ಮೊದಲಿಗೆ ನಮ್ಮ ಜರ್ಕಿನನ್ನು ನೇತುಹಾಕಲು ಅಲ್ಲಿ Stand ಇಟ್ಟಿದ್ದರು. ಅಲ್ಲಿ ಜರ್ಕಿನನ್ನು ನೇತುಹಾಕಿದೆವು. ಅಲ್ಲಿ ಆತ ಅಲ್ಲಿದ್ದವರನ್ನು ನಮಗೆ ಪರಿಚಯಿಸಿದರು. ಅಲ್ಲಿದ್ದ ಒಬ್ಬ ವ್ಯಕ್ತಿ, Saiki Tanabe ಅವರನ್ನು ನಾವು ಬೆಂಗಳೂರಿನ ಆಫೀಸಿನಲ್ಲಿ ಭೇಟಿ ಮಾಡಿದ್ದೆವು. "Were you people there when I visited baangalore last time"? ಅಂತ ಕೇಳಿದರು. ಆಗ ನಾನು "Yes. Saiki, We have met you before" ಅಂದ್ವಿ. ಅದಕ್ಕೆ ಅವರು, "ಹಾಆಆಆಆಆಆಆಆಆಆಆಆಆಆಆಆ" ಅಂದರು. ಸ್ವಲ್ಪ ನಗು ಬಂದಿತು.. ಆದರು ನಗಲಿಲ್ಲ. ಇದು ಹೇಗಾಯಿತು ಅಂದರೆ.. ನನಗೆ ವಿಷ್ಣುವರ್ಧನ್ ಪರಿಚಯವಿದೆ.. ಆದರೆ ಅವರಿಗೆ ನಾನು ಯಾರು ಅನ್ನುವುದಿ ತಿಳಿದಿಲ್ಲ.... ಬಹುಶಃ ಅವರು ಕೊಟ್ಟ Autograph, ಅವರಿಗೆ ತೋರಿಸಿದರೆ ನೆನಪಿಗೆ ಬರಬಹುದೇನೋ? ಆಮೇಲೆ ನಮಗೆ ಕೆಲ್ಸ ಮಾಡಲು...PC ಕೊಟ್ಟರು. ನಂತರ ಬನ್ನಿ, ಆಫೀಸಿನಲ್ಲಿ ನೀವು ನೋಡಬೇಕಾದ ಜಾಗಗಳು ಇವೆ ಎಂದು ನಮ್ಮನ್ನು ಕರೆದು ಕೊಂಡು ಹೋದರು.

ಮೊದಲಿಗೆ, ಶೌಚಾಲಯವನ್ನು ತೋರಿಸಿದರು. ನಂತರ ಕಾಫಿ ರೂಮ್ ಅನ್ನು ತೋರಿಸಿದರು. "You can prepare Coffee or Tea by yourself. If you have bought something to eat, you can use this oven" ಅಂದರು. ಅಲ್ಲಿ ನನ್ನ ಕಣ್ಣಿಗೆ ಬಿದ್ದದ್ದು.....ಟೀ ಪಟ್ಟಣಗಳು. ಅವುಗಳಲ್ಲಿ ಹೆಚ್ಚಾಗಿದ್ದವು, Darjeeling ಟೀ. :) ಭಾರತದ ಟೀಗಳಿಗೆ ಇಲ್ಲೂ ಡಿಮ್ಯಾಂಡ್... All over the world Demand !!!!!

ಅಲ್ಲಿಂದ ಹೊರಟ ನಾವು, Key roomಗೆ ಹೋದೆವು. ಅಲ್ಲಿ ನಮಗೆ Access (Security) Key ಕೊಡಿಸಿದರು. ಮತ್ತೆ ನಮ್ಮ ಸ್ಥಾನಕ್ಕೆ ಮರಳಿ ಬಂದೆವು. ಮೊದಲಿಗೆ ನನ್ನ ಆಫೀಸಿನ ಮೈಲ್ ಬಾಕ್ಸನ್ನು ಓಪೆನ್ ಮಾಡಲು Microsoft Outlook Configuration ಮಾಡಿಕೊಂಡೆ. ನಂತರ ನನ್ನ password ಟೈಪ್ ಮಾಡಿದೆ. ಆದರೆ Password ಸರಿ ಇಲ್ಲ ಅಂತ computer ಹೇಳಿತು! ಅದು ಹೇಗೆ ಅಂತ ಇನ್ನೊಮ್ಮೆ ಪ್ರಯತ್ನ ಪಟ್ಟೆ.. ಆದರೂ ಸರಿಯಿಲ್ಲ ಅಂತು!!. ಆಮೇಲೆ ನಾನು ಗಮನಿಸಿದ ವಿಷಯವೇನೆಂದರೆ, ಅಲ್ಲಿಯ Keyboard ವಿನ್ಯಾಸ ಬೇರ ತರಹ ಇದೆ. Suomi ಭಾಷೆಯಲ್ಲಿ ö, ä ಹಾಗು ಇನ್ನು ಅನೇಕ ಅಕ್ಷರಗಳು ಇವೆ. ಹಾಗಾಗಿ ಅವೆಲ್ಲವನ್ನು Keyboard ನಲ್ಲಿ adjust ಮಾಡಿಸೋಕೆ, 1, 2, 3 ಅಂಕಿಗಳು ಜೊತೆಗೆ ನಮ್ಮ keyboard ನಲ್ಲಿ , !,@,# ಇರುವಂತೆ, ಅಲ್ಲಿ ಇದರ ಜೊತೆಗೆ ಬೇರೆ characters ಇದ್ದವು. ನನ್ನ password ನಲ್ಲಿ ಇದ್ದ ಒಂದು special character ಟೈಪು ಮಾಡಲು Shift ಜೊತೆಗೆ ಯಾವುದೋ ಒಂದು ಅಂಕಿಯನ್ನು ಒತ್ತಿದ್ದೆ. ಆದರೆ, ಅದು ಬೇರೆಯೇ character ಆಗಿತ್ತು. ನನಗೆ ಬೇಕಾದ character ಹೇಗೆ ಟೈಪ್ ಮಾಡೋದು ಅಂತ ಗೊತ್ತಾಗಲಿಲ್ಲ. ಅಲ್ಲಿದ್ದ Saiki ಯನ್ನು ಕೇಳಿದೆ. ಅವರು ಅದಕ್ಕೆ, Keyboardನ ಬಲ ಭಾಗದಲ್ಲಿ ಒಂದು key ಒತ್ತಿ ನಿನಗೆ ಬೇಕಾದ ಅಂಕಿ ಒತ್ತು ಆಗ ಮತ್ತೊಂದು character ಟೈಪ್ ಮಾಡ ಬಹುದು ಅಂದರು. ಹಾಗೆ ಮಾಡಿದೆ.. office mailbox ಗೆ login aade.

ನಂತರ, ಗೂಗಲ್ ಗೆ ಲಾಗಿನ್ ಆಗಿ, ನನ್ನ status message ಬದಲಿಸಿದೆ... ಹಾಗು ಅಮ್ಮನ ಜೊತೆ ಸ್ವಲ್ಪ ಚಾಟ್ ಮಾಡಿದೆ. ನಾನು ಫಿನ್ ಲ್ಯಾಂಡಿಗೆ ಬರಬೇಕೆಂದು ತೀರ್ಮಾನವಾದಗಲೇ ಅಪ್ಪ ಹಾಗು ಅಮ್ಮ ನವರಿಗೆ, ಚಾಟ್ ಮಾಡಲು ಹೇಳಿ ಕೊಟ್ಟಿದ್ದೆ. ನಂತರ ಯಾರ್ಕ್ಕೊ ನಮ್ಮನ್ನು ಕರೆದರು. ನಮ್ಮ project ಬಗ್ಗೆ ಮಾಹಿತಿ ಒದಗಿಸಿದರು. ನಮ್ಮ ನಮ್ಮ ಕರ್ತವ್ಯವೇನು ಎಂಬುದರ ಬಗ್ಗೆ ಸೂಕ್ಷ್ಮ ಮಾಹಿತಿ ಒದಗಿಸಿದರು. ಇಷ್ಟೆಲ್ಲಾ ಆಗುವು ಹೊತ್ತಿಗೆ, ಗಂಟೆ 12 ಆಗಿತ್ತು. "hey! lunch time. Are you guys vegetarian?" ಅಂತ ಕೇಳಿದರು. ನಾನು "Yes Jarkko, I am vegetarian" ನನ್ನ ಸಹೋದ್ಯೋಗಿ, "I can manage both" ಅಂದ.

"Saiki.... ***********India ***********" ಯಾರ್ಕ್ಕೊ ಹೇಳಿದರು. ಅದಕ್ಕೆ saiki, "Haaaaaaaaaaaaaaaa! There is one Indian restaurant near by. Shall we go there? I am sure there will be vegetarian food for you.... " ಅಂದರು. ನಾವಿಬ್ಬರೂ ಒಪ್ಪಿದೆವು.

ನಮ್ಮ ಜರ್ಕಿನ್, ಗ್ಲೋವ್ಸ್, ಕೋತಿ ಟೋಪಿ ಹಾಕಿಕೊಂಡೆವು. ಐದನೇ ಮಹಡಿಯಿಂದ ಕೆಳಗೆ ಇಳಿದು, ಭಾರತದ ಭೋಜನಾ ಮಂದಿರದ ಕಡೆಗೆ ಸಾಗಿದೆವು.