ಹಿಂದೊಂದು ದಿನದಂದು
ನೀನಾಡಿದ ನುಡಿಯೊಂದು
ಬಯಸದೇ ಯಾವ ಕೆಡುಕನ್ನು
ಬೆಸೆಯಿತು ಈ ಸಂಬಂಧವನ್ನು
ಅಪರಿಚಿತ ನಾ
ಅಪರಿಚಿತೆ ನೀ
ಸ್ನೇಹ ಕೋಟೆಗೆ ಪಾಯವ
ಕಟ್ಟಿದವಳು ನೀ
ಮೌನ ರಾಜ ನಾ,
ಮೌನ ಗೌರಿ ನೀ
ಭದ್ರ ಸ್ನೇಹ ಕೋಟೆಯ
ಕಟ್ಟಿದೆವು ಕೂಡಿ
ಬಿರುಗಾಳಿ ಬೀಸಲಿ
ಭೂಕಂಪವಾಗಲಿ
ಸುಭದ್ರ ನಾವಿಬ್ಬರೂ
ಆ ಸ್ನೇಹ ಕೋಟೆಯಲಿ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
7 ಜನ ಸ್ಪಂದಿಸಿರುವರು:
nice one buddy
ಹ್ಮ್ಮ್....ಕೋಟೆ ಗಟ್ಟಿಯಾಗುರುವ ಹಾಗೆ ಕಾಣತ್ತೆ. ಹೀಗೆ ಇರಲಿ.
ಚೆನ್ನಾಗಿದೆ:)
Olleya prayathna nimmadu..sneha koTe kavana tumba chenaagi muDi bandide..nimage olitaagali.
jOman haagu sunil dhanyavaadagaLu :)
ಶಂಕರ್
ನಿಮ್ಮ ಈ ಸ್ನೇಹಕೋಟೆಗೆಂದೂ ಬಿರುಕು ಬೀಳದಿರಲಿ. ಒಳ್ಳೆಯ ಕವನ. ಮತ್ತಷ್ಟು ಬರಲಿ.
"ಬಿರುಗಾಳಿ ಬೀಸಲಿ
ಭೂಕಂಪವಾಗಲಿ
ಸುಭದ್ರ ನಾವಿಬ್ಬರೂ
ಆ ಸ್ನೇಹ ಕೋಟೆಯಲಿ.."
ಸ್ನೇಹಕೋಟೆ ಸುಭದ್ರವಾಗೇ ಇರಲಿ..ಶುಭಹಾರೈಕೆ.
-ಚಿತ್ರಾ
Post a Comment