Monday 28 July, 2008

ಎರಡು ಬೊಂಬೆಗಳು

ಕದಲದೆ ಕೂತಿವೆ ಎರಡು ಬೊಂಬೆಗಳು
ಕಣ್ಣೀರು ಸುರಿಸುತ್ತಿವೆ ಎರಡು ಕಣ್ಣುಗಳು
ಕನಸಿನಲೋಕದಲ್ಲಿ ವಿಹರಿಸುತ್ತಿವೆ ಬೊಂಬೆಗಳು
ಈ ನೋಟವ ನೋಡಿವೆ ಹಲವು ಕಣ್ಣುಗಳು.

ಜೀವನದ ಕನಸ ಹೊತ್ತ ಬೊಂಬೆಗಳು
ಪಡೆದವು ಮತ್ತೆರಡು ಬೊಂಬೆಗಳು
ಎರಡು ನಾವೆಯ ಪಯಣದಿ
ಬೊಂಬೆಗಳಾದವು ಕಣ್ಣುಗಳು

ಬೆಳೆದ ಬೊಂಬೆಗಳು ಕದಲದೆ ಕೂತು
ಕಣ್ಣೀರ ತರಿಸಿದವು ಕಣ್ಣುಗಳಲ್ಲಿ.
ಭಗವಂತನ ನಿಯಮದಂತೆ
ಬೊಂಬೆಗಳೇ ಕಣ್ಣುಗಳು, ಕಣ್ಣುಗಳೇ ಬೊಂಬೆಗಳು!

4 ಜನ ಸ್ಪಂದಿಸಿರುವರು:

sunaath said...

ಜಯಶಂಕರ,
ಬೊಂಬೆಯಾಟವಯ್ಯಾ,ಈ ಜಗವು ಬೊಂಬೆಯಾಟವಯ್ಯಾ!
ಬೊಂಬೆಗಳ ಪ್ರತಿಮೆಯನ್ನು ಸುಂದರವಾಗಿ ಬಳಸಿಕೊಂಡಿದ್ದೀರಿ.
ಅಭಿನಂದನೆಗಳು.

ತೇಜಸ್ವಿನಿ ಹೆಗಡೆ said...

ಬೊಂಬೆಗಳಷ್ಟೇ ಮುದ್ದಾದ ಕವನ. ಜೀವನ ಸತ್ಯವನ್ನು ಹೇಳುತ್ತಿವೆ.

maddy said...

kannanne bombe indu bimbisiruva pari sari ide..

good one..

Lakshmi Shashidhar Chaitanya said...

hmm....roopakaalankaarada samartha baLake. sakhattaagide.