Sunday 13 July, 2008

ನಲ್ಲೆಯ ನೆನಪು

ಮಲ್ಲಿಗೆ ಹೂವ ಮುಡಿದ ನಲ್ಲೆ
ಕರದಿ ಹಿಡಿದು ಕಬ್ಬಿನ ಜಲ್ಲೆ
ಮೆಲ್ಲಗೆ ಹೆಜ್ಜೆ ಇಟ್ಟಾಗ ನಲ್ಲೆ
ಕರ ರಚಿಸಿತು ಕಬ್ಬವನಲ್ಲೆ!

ನೀ ಕುಣಿಯಲು ನೀರು ಹರಿಯಿತು
ನೀ ಮುನಿಯಲು ನೀರು ಬತ್ತಿತು
ನೀ ಶಾಂತಳಾಗಿ ಶಿವನ ಧ್ಯಾನಿಸೆ
ನೀರು ತುಂಬಿತು ನದಿಯೊಳು

ನಿನ್ನ ನೆನಪು ಕಾಡಲು
ಚಿಕ್ಕದೆನಿಸಿತು ಕಡಲು
ನೀನು ನಗೆಯ ಬೀರಲು
ಚಂದ್ರನಿಲ್ಲದೆ ಬೆಳದಿಂಗಳು!

7 ಜನ ಸ್ಪಂದಿಸಿರುವರು:

Sudi said...

nalleya nenapu tumba complicated aagide pa..

ತೇಜಸ್ವಿನಿ ಹೆಗಡೆ said...

ಶಂಕರ್,

ನೆನಪು-ಕನಸುಗಳ ನಡುವೆ ಓಲಾಡುವ ಕವನ ತುಂಬಾ ಮೆಚ್ಚುಗೆಯಾಯಿತು. ಕೊನೆಯ ಸಾಲುಗಳು ಇನ್ನೂ ಇಷ್ಟವಾದವು. ಬರೆಯುತ್ತಿರಿ.

Anonymous said...

ತುಂಬಾ ಸೊಗಸಾಗಿದೆ ನಲ್ಲೆಯ ನೆನಪು ಕೊನೆಯ ಎರಡು ಸಾಲುಗಳಲ್ಲಿನ ಕಲ್ಪನೆ ಅತ್ಯದ್ಭುತವಾಗಿದೆ.

sunaath said...

ನೆನಪೇ ಬೆಳದಿಂಗಳನ್ನು ಕಾಣಿಸಿದರೆ,ನನಸು ಏನನ್ನು ಕಾಣಿಸುವದೊ?

Lakshmi Shashidhar Chaitanya said...

last stanza ultimate aagide. sikk sikkaapatte super kavana.

maddy said...

chennagi barediddiri..
ishtavaayitu... :)

ಚಿತ್ರಾ ಸಂತೋಷ್ said...

ನೆನಪುಗಳೇ ಹಾಗೇ..ಮನಸ್ಸು, ಲೇಖನಿಗೆ ಕೆಲ್ಸ ಕೊಡ್ತಾವೆ..ಅಲ್ಲವೇ?
-ಚಿತ್ರಾ