Monday, 6 October, 2008

ಕನಸಲ್ಲು ನಿನ್ನ ರೂಪ -- ಈ ಮನದಲ್ಲಿ ತರಲು ತಾಪ!

ನನ್ನ ಪರಿಸ್ಥಿತಿಗೆ ಹೊಂದುವಂತಹ ಶೀರ್ಷಿಕೆ ಕೊಟ್ಟ ನನ್ನ ಆರ್. ಎನ್. ಜಯಗೋಪಾಲರಿಗೆ ವಂದಿಸುತ್ತ, ನಿಮಗೆಲ್ಲರಿಗೂ ಮತ್ತೆ ಸ್ವಾಗತ ನನ್ನ ಕನಸಿನ ಬಗ್ಗೆ ಕೇಳೋದಕ್ಕೆ.

ಆರು ತಿಂಗಳ ಹಿಂದೆ ನನ್ನ ಕನಸನ್ನು ನಿಮ್ಮೊಂದಿಗೆ ಹಂಚಿ ಕೊಂಡಿದ್ದೆ ( Mall @ Malleshwara.) ಈಗ ಮತ್ತೆ ಬಂತು ಕಾಲ ನನ್ನದೊಂದು ಕನಸನ್ನು ಹೇಳಲು.

ಇತ್ತೀಚೆಗೆ ಕೆಲಸ ಬಹಳಯಿದೆ ಅಂತ ಕೆಲವರಿಗೆ ಹೇಳಿದ್ದೆ. ಪ್ರತಿ ದಿನ ನಾನು ಮನೆ ತಲುಪುವ ವೇಳೆಗೆ ರಾತ್ರಿ ೧೦.೩೦ ಆಗಿರುತ್ತೆ. ಬಂದ ಮೇಲೆ ಮಮ್ಮು ಆಮೇಲೆ ತಾಚಿ. ರಾತ್ರಿ ಕನಸಲ್ಲಿ ಈಗ ಯಾರು ಬರ ಬಹುದು ಸ್ವಲ್ಪ ಯೋಚನೆ ಮಾಡಿ........?

ಹಿಂದಿ ಚಿತ್ರ ತಾರೆಯರು ಅಂತ ಊಹಿಸಿದ್ದೀರಾ? No Chances.... ನನಗೆ ಹಿಂದಿಯಲ್ಲಿ ಗೊತ್ತಿರೋರು ಕೇವಲ ನಾಕು ಮಂದಿ. ಅವರ್ಯಾರೂ ಬಂದಿಲ್ಲ. ಇನ್ನು ಕನ್ನಡ ತಾರೆಯರು ಅಂತೀರಾ? ಅವರೂ ಇಲ್ಲ ಬಿಡಿ. ಹೆಚ್ಚಾಗಿ ಸಿನಿಮಾ ನೋಡೋನಲ್ಲ ನಾನು. ಹಾಗಾದರೆ ಯಾರು ಬಂದಾರು....? ನಮ್ಮ Manager, Team Lead ಅಂತೀರ ಅವರೂ ಬರೋದಿಲ್ಲ.

ನನ್ನ ಕನಸಲ್ಲಿ ಬಂದದ್ದು ನಾನು ಮತ್ತೆ ನನ್ನ ಕೆಲಸ! ಅದೇನೋ ೯ ರಿಂದ ೮ ರ ವರೆಗೆ ಕೆಲಸ ಮಾಡಿ, ಸದ್ಯ ಮನೆ ತಲುಪಿದನಲ್ಲಾ ಅಂತ ನಿದ್ದ ಮಾಡಿದರೆ.. ಕನಸಲ್ಲೆಲಾ ನಾನು computer ಕುಟ್ಟುತ್ತಿರುವ ಹಾಗೆ, ಬೆಳಿಗ್ಗೆ ನನಗೆ ವಹಿಸಿದ ಕೆಲಸವನ್ನು ಮಾಡುತ್ತಿರುವ ಹಾಗೆ ಕನಸು ಕಾಣುತ್ತೀನಿ. ಇದು ಒಂದು ದಿನ ಬಂದರೆ ಪರವಾಗಿಲ್ಲ. ಆದರೆ ಬೇರೇ ಕನಸುಗಳಂತೆ ಇದು ಪ್ರತಿ ರಾತ್ರಿ ಬರುತ್ತೆ. ಕನಸಲ್ಲೂ ನಾನು ಕೆಲಸ ನಿರ್ವಹಿಸುತ್ತಿರುವ ಹಾಗೆ ಅನ್ನಿಸುತ್ತೆ. ನಮ್ಮ Client ಹಾಗು company ನನಗೆ ಹೆಚ್ಚು ಸಂಬಳ ಕೊಡ ಬೇಕು. ಯಾಕೆಂದರೆ ಮನೇಲೂ ಅವರ ಕೆಲಸ ಮಾಡುತ್ತೀನಲ್ಲ ಅದಕ್ಕೆ. (ನಗಲಿಲ್ವಾ ನೀವು?... ಅಯ್ಯೋ ಜೋಕ್ ಮಾಡಿದೆ ರೀ ನಾನು.. ಸ್ವಲ್ಪ ನಕ್ಕು ಬಿಡಿ....). ಇನ್ನೂ ಕೆಲಸ ಮುಗಿದಿರೋದಿಲ್ಲ ಅಷ್ಟರಲ್ಲಿ ಅಮ್ಮ ಆಫೀಸಿಗೆ ಬರುತ್ತಾರೆ. ಆಗ ನಾನು, "ಇಲ್ಲಿಯಾಕೆ ಬಂದ್ಯಮ್ಮ?" ಅಂತ ಕೇಳಿದಾಗ ಅವರು ಕೊಡುವ ಉತ್ತರ "೬.೧೫ ಆಯ್ತು ಏಳೋ ಬೇಗಾ... ಹೋಗಲ್ವಾ ಆಫೀಸಿಗೆ????". ಎಚ್ಚರವಾದ ಮೇಲೆ ಅಬ್ಬಬ್ಬಾ ಅಂದರೆ ೩ ಗಂಟೆ ಆರಾಮಾಗಿರುತ್ತೇನೆ ಆಮೇಲೆ ಮತ್ತೆ ಕೆಲಸ....

ಇಷ್ಟೇ ಆಗಿದಿದ್ದರೆ ಸುಮ್ಮನಿರುತ್ತಿದ್ದೆ. ನಿನ್ನೆ ರಾತ್ರಿ ನನಗೆ ಇವನೆಲ್ಲಾ ಬ್ಲಾಗಿನಲ್ಲಿ ಬರೆಯುವ ಹಾಗೆಯೇ ಕನಸಾಯ್ತು. ಅದಕ್ಕೆ ಕಡೇ ಪಕ್ಷ ಇದಾದರೂ ನನಸಾಗಲಿ ಎಂದು ಬರೆದೆ.

ಇನ್ನೊಂದು ವಿಷಯ ನೆನಪಾಯ್ತು ಈಗ. ನಾನು PUC ವ್ಯಾಸಂಗ ಮಾಡುವಾಗ ಪ್ರತಿ ರಾತ್ರಿ, Physics ಹಾಗು Chemistry Experiments ಮಾಡುತ್ತಾಯಿದ್ದೆ. BE ಓದುತ್ತಿರುವಾಗಲೂ ಅಷ್ಟೇ, IC ಗಳನ್ನೆಲಾ ಜೋಡಿಸಿ ಏನೋ experiments ಮಾಡಿಕೊಳ್ಳುತ್ತಾಯಿದ್ದೆ. ಹಾಳದ Experimentಗಳು ಕನಸಲ್ಲೂ ಸರಿಯಾದ Output ಬರುತ್ತಾಯಿರಲಿಲ್ಲ!

ರಾತ್ರಿ ಹೊತ್ತು ನನ್ನ ಜೊತೆ ಮಾತಾಡುವ ಬೆಮಿ ಗಳಿಗೆ ಹೇಳುತ್ತಾಯಿರುತ್ತೇನೆ.. "ನನಗೆ Good Night ಮಾತ್ರ wish ಮಾಡಿ. ಅದರ ಜೊತೆಗೆ Sweet Dreams ಅಂತ ದಯವಿಟ್ಟೂ Wish ಮಾಡಬೇಡಿ." ಅದರೂ ಕೆಲವರು ಇದನ್ನು ಮರೆತಿರುತ್ತಾರೆ. "sweet dreams... sweeeetest Dreams " ಅಂತೆಲ್ಲಾ ಹೇಳ್ತಾರೆ. ಆ ರಾತ್ರಿ ನನಗೋ "ಯಾವಾಗ ಹಲ್ಲು ಮುರಿಯುತ್ತೇ", "ಯಾವ ಮಾಲಿನಲ್ಲಿ ಹೋಗಿ ಚಿಂದಿ ಬಟ್ಟೇ ಖರೀದಿಸುತ್ತೇನೋ" ಹೀಗೆ ಅವೆಲ್ಲಾ ನೆನೆಪಾಗುತ್ತೆ. ಕೆಲವೊಮ್ಮೆ ಅಂತೂ ನಿದ್ದೆ ಮಾಡಲೋ ಬೇಡವೋ ಅನ್ನಿಸುತ್ತೆ. ನಿದ್ದ ಮಾಡಿದಾಗಲೂ ಭಯ ನನಗೆ!

ಇದರಿಂದ ನಾನು ನಿಮ್ಮನ್ನು ಕೇಳಿ ಕೊಳ್ಳುವುದು ಏನೆಂದರೆ, ನೀವು ಇನ್ನು ಮುಂದೆ "May all your dreams come true!" ಅಂತ ದಯವಿಟ್ಟೂ ಹಾರೈಸದಿರಿ. ನಾನು ಈ ರೀತಿ ಕನಸು ಕಂಡಿರುತ್ತೇನೆ. ನಿಮ್ಮ ಬಾಯಿ ಹಾರೈಕೆಯಿಂದ ಅದು ನನಸಾದರೇ... ನಾನು ಹಲ್ಲು ಮುರಿದ ಮುದುಕನಾಗಿ ಮಲ್ಲೇಶ್ವರದಲ್ಲಿ ಚಿಂದಿ ಬಟ್ಟೆ ಹಾಕಿ ಕೊಂಡು ಓಡಾಡುತ್ತಾಯಿರುತ್ತೇನೆ... ಇಲ್ಲ ಇಲ್ಲ... ೨೪ ಗಂಟೆನೂ Computer ಕುಟ್ಟುತ್ತಾ ಕೆಲಸ ಮಾಡುತ್ತಾಯಿರುತ್ತೇನೆ. ಬ್ಲಾಗಿಗೂ ಸಮಯ ಕೊಡೋಕೆ ಆಗೋದಿಲ್ಲ. ಆಮೇಲೆ ನಿದ್ದ ಯಾವಾಗ ಮಾಡಲಿ ನಾನು?

ಬೇರೆಯವರಿಗೆ "May all your dreams come true!" ಅಂತ ಹಾರೈಸುವ ಮೊದಲು ಒಂದು ಸಲ ಯೋಚನೆ ಮಾಡಿರಿ. ಅವರಿಗೆ ಏನಾದರು ಈ ರೀತಿಯಾದ ಕನಸಾಗಿದೆಯೇ ಎಂದು ಕೇಳಿ, Confirm ಆದ ಮೇಲೆ ಹಾರೈಸಿ. ನನಗೆ ಮಾತ್ರ ಹಾರೈಸ ಬೇಡಿ.

ಕಡೇದಾಗಿ ಅಂತರ್ವಾಣಿ ಹೇಳೋದು,

ಕಾಯಕವೇ ಕೈಲಾಸ
ಅಂದರು ಆಗ ಬಸವಣ್ಣ
ಕಾಯಕದಲ್ಲೇ ವಾಸ
ಅಂದನು ಈಗ ಶಂಕ್ರಣ್ಣ

ಮತ್ತೆ ಒಳ್ಳೆ ಕನಸು ಬಂದಾಗ ಬರೆಯುತ್ತೇನೆ.

14 ಜನ ಸ್ಪಂದಿಸಿರುವರು:

Lakshmi Shashidhar Chaitanya said...

hmm...[:-)]

Parisarapremi said...

ಕನಸುಗಳು ಹೀಗೇನೇ.. ಅರ್ಥಾನೇ ಆಗಲ್ಲ. ನಂಗೆ ದೇವ್ರಾಣೇಗೂ ನಿಮ್ಮೀ ಆರ್ಟಿಕಲ್ಲು ಅರ್ಥಾನೇ ಆಗ್ಲಿಲ್ಲ. ಒಳ್ಳೇ ಕನಸು.

Unknown said...

hehehehe JS nimma "kanasallu ninna roopa-e manadalli taralu taapa" super agidhe.
Nimghe GNSD helodralli nanu oblu ond sari neevu helidri SD beda antha amele nanu yavaglu GNSD inda SD remove madodhe agidhe nanna kelsa :D
Neevu kelsadalli thumbhane concentrate madta idira anisuthe, adake kansallu nimmanna adhu bidtha ella ;)
Nice writing keep on write :0

MAY ALL UR ......COME TRUE :) :)

(wishes andhe JS bere enu alla)

ಅಂತರ್ವಾಣಿ said...

Thnx ree lilly :)
anthu free maaDikonDu blog visit maaDiddera... bari nodidre aagatta? bandirodakke sakshi beku ree..

Unknown said...

Waah sakshi bere beka nimghe??Neevu baredirodella odhi nakku nakku hotte hunagtha erodhu nanghe. adake nimghe shikshe kodbeku alva? hegidhe sakshighe shikshe?? edara bhaghenu enadru bariri. :)

maddy said...

nimmage ishtavada kanasugalashte eederali endu ashisuttene..
baraha chennagide

Sushma Sindhu said...

ಹಾಯ್,
ಈ dialogue ಬಗ್ಗೆ ನಾನು ಬಹಳಷ್ಟು ಬಾರಿ ಯೋಚಿಸುತ್ತಿರುತ್ತೇನೆ.
'May all your dreams come true' ಎ೦ದು ನನಗೆ ಯಾರಾದರೂ ಎ೦ದರೆ ನಾನು ಊರಿಗೂ ಸಲ್ಲದೇ ಕಾಡಿಗೂ ಹೋಗದೇ ಯಾವುದಾದರೂ outerspace ನಲ್ಲಿ ಸದ್ಯಕ್ಕೆ ಯಾರಿಗೂ ಬೇಡವಾದ, but ಎಲ್ಲರಿಗೂ ಅವಶ್ಯಕ ಎ೦ದು ನನ್ನ 'ಅ೦ತರ್ವಾಣಿ'ಗನಿಸಿದ ವಿಷಯ ಹುಡುಕುತ್ತಾ..!!!
ಉಪ್.. ಜೀವನ ಹೀಗಾಗಿಬಿಡುತ್ತೆ.. :-)

ಅಂತರ್ವಾಣಿ said...

ಸುಷ್ಮ ಅವರೆ,
ಈ ಪೋಸ್ಟ್ ಆದ ಮೇಲೆ ನನಗೆ "Sweet Dreams" ಹಾರೈಸೋರು ಕಡಿಮೆಯಾಗಿದ್ದಾರೆ.

Harisha - ಹರೀಶ said...

ಅಲ್ರೀ ಸಿಹಿಗನಸುಗಳು ಅಂದ್ರೆ ಕೇವಲ ಒಳ್ಳೆಯ ಕನಸುಗಳು ಬೀಳಲಿ ಅಂತ ಅರ್ಥ.. ಅದ್ಯಾಕೆ ಬೇಡ ಅಂತೀರ?

ಅಂತರ್ವಾಣಿ said...

ಅಂಬಿಗ,
ನೀವೆಲ್ಲಾ ಸಿಹಿಗನಸು ಅಂತೀರ. ಆದರೆ ನನಗೆ ವಿಚಿತ್ರ ಕನಸೇ ಬೀಳುತ್ತವೆ.

Harisha - ಹರೀಶ said...

ಅದು ನಿಮ್ಮ ಕರ್ಮ!

ಅಂತರ್ವಾಣಿ said...

ನಗೋದು ನಗಿಸೋದು ಧರ್ಮ
ಈ ರೀತಿ ಕನಸು ಕಂಡರೆ ಕರ್ಮ

Harisha - ಹರೀಶ said...

ತಿಳೀಬೇಕು ಇದರ ಮರ್ಮ
ಇಲ್ದಿದ್ರೆ ಕಷ್ಟ ಪರಮ!!

ಚಿತ್ರಾ ಸಂತೋಷ್ said...

ನನ್ ತಮ್ಮ ನಿಮ್ ಥರಾನೇ..ಕನಸಲ್ಲಿ ಮಾತಾಡೋನು. ರಾತ್ರಿಯಡೀ ಕಸ್ಟಮರ್ ಜೊತೆ ಮಾತಾಡ್ತಾ ಇರ್ತಾನೆ..ನಾನು ಪಕ್ಕದಲ್ಲಿ ಮಲಗಿದ್ದ ಅವನಿಗೆ ದಿನಾ ಮಾತಾಡುವಾಗಲೂ ಒಂದು ಒದೆ ಕೊಡ್ತಾ ಇದ್ದೆ..ಪಾಪ! ಈಗ ಕಡಿಮೆ ಆಗಿದೆ...
-ಚಿತ್ರಾ