Thursday, 16 October, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಸುಓಮೆನ್ಲಿನ್ನ ಕೋಟೆ

ಹಿಂದಿನ ಭಾಗ ಇಲ್ಲಿದೆ

ಕಳೆದ ಪೋಸ್ಟಿನಲ್ಲಿ ಕೋಟೆಗೆ ಹೋಗಿದ್ವಿ ಎಂದು ಹೇಳಿದ್ದೆ. ಆ ಕೋಟೆ ಹೇಗಿರುತ್ತೆ ಅಂತ ಸುನಾಥ್ ಅಂಕಲ್ ಕೇಳಿದ್ದರು. ಅದರ ಬಗ್ಗೆ ಈಗ ಇಲ್ಲಿ ಹೇಳುತ್ತೇನೆ.

ನಾವು Ferry ಒಳಗೆ ಕೂತು, ಐಸ್ ಗೆಡ್ಡೆಯ ಮೇಲೆ (ಸಮುದ್ರದ ನೀರು ಗೆಡ್ಡೆಯಾಗಿತ್ತು), ಸಾಗಿ ೧೦-೧೫ ನಿಮಿಷಗಳಲ್ಲಿ ಆ ಕೋಟೆಗೆ ತಲುಪಿದೆವು. ಹವ್ಯಾಸಕ್ಕೆ ಫೋಟೋಗಳನ್ನು ತೆಗೆಯುವವನು ನಾನು. ಹಾಗಾಗಿ ಆ ಗೆಡ್ಡೆಯನ್ನು ಸೆರೆ ಹಿಡಿಯುವು ಕೆಲಸದಲ್ಲಿ ನನಗೆ ತುಂಬಾ ಖುಶಿಕೊಡುತ್ತಾಯಿತ್ತು. ನಾವು ಆ ಕೋಟೆಯ ಹತ್ತಿರ ಹೋಗಿ ಇಳಿದೆವು. ನಮ್ಮಂದಿಗೆ ಅನೇಕ ಪ್ರವಾಸಿಗರು, ಅಲ್ಲಿಯ ಜನರೂ ಇದ್ದರು. ಅಲ್ಲಿಂದ ಮುಂದೆ ಸಾಗಿ ಹೆಬ್ಬಾಗಿಲ ಬಳಿ ಹೋದೆವು. ಅಲ್ಲಿ ಪ್ರವೇಶಕ್ಕೆ ಯಾವುದೇ ಶುಲ್ಕವಿರಲಿಲ್ಲ. ಹೆಬ್ಬಾಗಿಲನ್ನು ನೋಡಿ ನನಗೆ ಮೊದಲು ಜ್ಞಾಪಕವಾದದ್ದು ನಾನು ಓದಿದ್ದ ಸರ್ಕಾರಿ ಜ್ಯೂನಿಯರ ಕಾಲೇಜು.
ಇಲ್ಲಿಂದ ಸಾಗಿ ಮುಂದೆ ಹೋಗುತ್ತಲೇ ಕಣ್ಣಿಗೆ ಬಿದ್ದದ್ದು "ಬಿಳಿ ಮರಳು" (ಎಲ್ಲಾ ಕಡೆ ಐಸ್ ಐಸ್... ವೆರಿ ವೆರಿ ನೈಸ್!). ಈ ಕೋಟೆಗೆ ೨೫೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ ಹಾಗು ಇದನ್ನು UNESCO ದವರು World's Heritage List ನಲ್ಲಿ ದಾಖಲಾಯಿಸಿದ್ದಾರೆ. ಇದನ್ನು ಮಿಲಿಟರಿಯವರು ಉಪಯೋಗಿಸುತ್ತಾಯಿದ್ದರಂತೆ. ಇದರೊಳಗೆ ಒಂದು ಚರ್ಚ್ ಇತ್ತು. ಅದರ ಬಯಲಲ್ಲಿ ಮಕ್ಕಳು ಆಟವಾಡುತ್ತಾಯಿದ್ದರು. ಇದರ ಜೊತೆಗೆ ಚಳಿ ಅನ್ನೋ ಮಹಾ ಶತ್ರು ನಮ್ಮೊಂದಿಗೆ ಇದ್ದ! ನಾವು ಉಳಿದವರನ್ನು ಹಿಂಬಾಲಿಸಿ ಹೋದಂತೆ ಸ್ವಲ್ಪ ನಾನು ಹೊಟೆಲಿನಿಂದ ಹೊರಟಾಗ ಹೊಳೆದ ಸಾಲಿಗೆ ತಕ್ಕಂತೆ ಇಲ್ಲೊಂದು ಚಿತ್ರ ಸಿಕ್ಕಿತು.

"ಸೂರ್ಯನಿದ್ದರೂ ಇಲ್ಲಿ
ತುಂಬಾ ತುಂಬಾ ಚಳಿ"


ಸುಮಾರು ದೂರ ಹೋದ ಮೇಲೆ ಒಂದು ವಸ್ತು ಸಂಗ್ರಹಾಲಯವಿತ್ತು. ಅಲ್ಲೂ ಅಷ್ಟೆ ಪ್ರವೇಶಕ್ಕೆ ಶುಲ್ಕವಿರಲಿಲ್ಲ. ಆ ಸಂಗ್ರಹಾಲಯ, ಈ ಕೋಟೆಗೆ ಸಂಬಂಧಿಸಿದ ವಿಷಯಗಳು ಹಾಗು ಚಿತ್ರಣಗಳಿಂದ ತುಂಬಿ ಕೊಂಡು ಅದ್ಭುತವಾಗಿತ್ತು. ಎಲ್ಲಾ ಚಿತ್ರವನ್ನು ನೋಡಿ, ಅಲ್ಲಿಂದ ಹೊರಟೆವು. ಮುಂದೆ ನಮ್ಮ ಕಣ್ಣಿಗೆ ಬಿದ್ದದ್ದು, ಅಲ್ಲಿ ೧೮೦೦, ೧೮೫೦ ಯ ಕಾಲದಲ್ಲಿ ನಿರ್ಮಿಸಿದ ಅನೇಕ ಕಟ್ಟಡಗಳು.
ಒಂದೆರಡು ಚಿತ್ರಗಳು...ಆ ಎಲ್ಲಾ ವಿಷಯಗಳ ಬಗ್ಗೆ ಬರೆಯಲು ನನ್ನ ನೆನಪಿನ ಶಕ್ತಿ ಅಡ್ಡಿ ಪಡಿಸುತ್ತಾಯಿದೆ. ಒಂದೂವರೆ ವರ್ಷದ ಹಿಂದಿನ ದಿನಗಳನ್ನು ನೆನಪಿಸಿಕೊಳ್ಳೋದು ತುಂಬಾ ಕಷ್ಟ. ಆಗ ನನಗೆ ಪ್ರವಾಸ ಕಥನ ಬರೆಯಬೇಕೆಂಬ ಆಸೆ ಇರಲಿಲ್ಲ.

ಹೆಚ್ಚಿನ ಮಾಹಿತಿಗೆ: ಸುಓಮೆನ್ಲಿನ್ನ ಕೋಟೆ

6 ಜನ ಸ್ಪಂದಿಸಿರುವರು:

ತೇಜಸ್ವಿನಿ ಹೆಗಡೆ said...

ಶಂಕರ್,
ಮೊದಲಿಗೆ ಬ್ಲಾಗ್ ತುಂಬಾ ಸುಂದರವಾಗಿ ಬದಲಾಗಿದೆ :) ಫಿನ್‌ ಲ್ಯಾಂಡ್ ಪ್ರವಾಸಕಥನ ಸರಾಗವಾಗಿ ಓದಿಸಿಕೊಂಡು ಹೋಯಿತು. ಚಿತ್ರಗಳೆಲ್ಲಾ ತುಂಬಾ ಸುಂದರವಾಗಿವೆ. ನೀವು ಸ್ವಲ್ಪ ಬಿಳಿಮರಳನ್ನು ಜೊತೆಗೆ ತರಬೇಕಿತ್ತು :)

Lakshmi Shashidhar Chaitanya said...

sakhaataagide chitragaLu... nenapisikondu detail aagi pravaasa kathana bariri... waiting for more :)

sunaath said...

ಜಯಶಂಕರ,
ಕೋಟೆಯ ಬಗೆಗೆ ವಿವರ ಹಾಗು ಫೋಟೊಗಳನ್ನು ಕೊಟ್ಟಿದ್ದಕ್ಕಾಗಿ ಧನ್ಯವಾದಗಳು.
-ಸುನಾಥ ಕಾಕಾ

shivu.k said...

ಶಂಕರ್ ಸಾರ್,
ನಿಮ್ಮ ಫಿನ್ ಲ್ಯಾಂಡಿನ ಪ್ರವಾಸ ಕಥನ ಚೆನ್ನಾಗಿದೆ. ನೀವು ತೆಗೆದ ಚಿತ್ರಗಳೆಲ್ಲಾ ಚೆನ್ನಾಗಿದೆ. ನನಗೊಂದು ಕೊರತೆ ಎನಿಸಿದ್ದೇನೆಂದರೆ, ನೀವು ಅಲ್ಲಿನ ಜನರ ಜೊತೆ ಬೆರೆತಾಗ ಅವರ ವಿಚಿತ್ರ ವರ್ತನೆಗಳ ಬಗ್ಗೆ ಬರೆದಾಗ ನಮಗೂ ಮಜವೆನಿಸಬಹುದು.[ಏಕೆಂದರೆ ಅವರಿಗೆ ನಮ್ಮ ವರ್ತನೆ ವಿಚಿತ್ರವೆನಿಸುವಂತೆ, ಅವರ ವರ್ತನೆಯೂ ನಮಗೆ ವಿಚಿತ್ರವೆನಿಸುತ್ತದೆ ಅಲ್ಲವೆ !] ಮುಂದಿನ ಬಾರಿ ಪ್ರಯತ್ನಿಸಿ !
ಶಿವು.ಕೆ
ಆಹಾಂ! ನನ್ನ ಬ್ಲಾಗಿನಲ್ಲಿ ಒಂದಷ್ಟು ದೇವರಾಯನ ದುರ್ಗದ ಮಿಂಚುಗಳಿವೆ ಬನ್ನಿ.

ಅಂತರ್ವಾಣಿ said...

ಶಿವು ಅವ್ರೆ,
ಧನ್ಯವಾದಗಳು.

ಮುಂದಿನ ಲೇಖನಗಳಲ್ಲಿ ಅಲ್ಲಿಯ ಜನರ ವರ್ತನೆಗಳ ಬಗೆ ಬರೆಯುತ್ತಾಯಿದ್ದೇನೆ.

Harisha - ಹರೀಶ said...

>> ಈ ಕೋಟೆಗೆ ೨೫೦ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದೆ

ಅಷ್ಟೇನಾಽಽ..

ನಮ್ ದೇಶದಲ್ಲಿ ಅದರ ಹತ್ತರಷ್ಟು ವರ್ಷಗಳ ಇತಿಹಾಸವಿರುವ ಕಟ್ಟಡ/ಪ್ರದೇಶಗಳನ್ನೇ ಕೇಳುವವರಿಲ್ಲ :-( ವಿಪರ್ಯಾಸ!