ಜಯಶಂಕರ್ ! ಜಯಶಂಕರ್ !! ಜಯಶಂಕರ್ !!!
’ಪ್ರಮಾಣ ಮಾಡಿ.’
"ಸತ್ಯವನ್ನೇ ಬರೆಯುತ್ತಿದ್ದೇನೆ. ಸತ್ಯವನ್ನು ಬಿಟ್ಟು ಬೇರೇನನ್ನು ಬರೆಯುವುದಿಲ್ಲ. ನಾನು ಬರೆಯುವುದೆಲ್ಲಾ ಸತ್ಯ."
ಈ ಲೇಖನದ ಶೀರ್ಷಿಕೆ ನೋಡಿದಾಗ ವಿಚಿತ್ರ ಅನ್ನಿಸ್ತಾ? ಇದಕ್ಕೆ ಮುಂಚೆ ಎಲ್ಲಿಯಾದರು ಕೇಳಿದ್ದೀರಾ ಈ "ಬೆಮಿ" ಪದ?. ತಾಳಿ ..ನಿಘಂಟು ಹುಡುಕಿದರೂ ಏನೂ ಪ್ರಯೋಜನವಿಲ್ಲ. ನಾನೆ ಹೇಳ್ತೀನಿ ಇರಿ. ಬೆಮಿ ಗೆ, ಪ್ರಾಸ ಹುಡುಕಿದಾಗ ಸಿಗೋದೇ "ಪ್ರೇಮಿ". ನಾನು ಯಾವ ವಿಷಯದ ಬಗ್ಗೆ ಬರೀತಾಯಿದ್ದೀನಿ ಅಂತ ತಿಳೀತಾ ನಿಮಗೆ?... ಸರಿ, ತುಂಬಾ ಸಂತೋಷ .
ಅಂತು ಇಂತು February ಮಾಸ ಬಂದೇ ಬಿಟ್ಟಿತು. ಈ ತಿಂಗಳಲ್ಲಿ, ಅನೇಕರ ಗಮನ ಸರಿಯಾಗಿ ಮಧ್ಯ ಭಾಗ, ಅಂದರೆ 14 ನೇ ತಾರೀಖಿನ ಕಡೆ ಹೋಗುತ್ತೆ. ಏಕೆ ಅದು ಅಂತ ನಾನು ಹೇಳಬೇಕಾಗಿಲ್ಲ. ಯಾಕೆ February ನಲ್ಲಿ 14 ಅನ್ನು ಹೊರತು ಪಡಿಸಿ ಬೇರೆ ಯಾವುದೇ ತಾರೀಖು ಇಲ್ವಾ?
ಈ ಮಾಸ ನನ್ನ ಜೀವನವನ್ನು ಬದಲಿಸಿತು. ಸರಿಯಾದ ದಿನಾಂಕ ನೆನಪಿಲ್ಲ....ಏಕೆಂದರೆ ಅದು 14 ಅಂತು ಆಗಿರ್ಲಿಲ್ಲ! ಇನ್ನು ನನ್ನ ಕಥೆಯನ್ನು, Mega Serial ಥರ ಎಳೆಯೋದಿಲ್ಲ. ಸರಿ ಈಗ Flashbackಗೆ ಹೋಗೋಣಾ....?
ನಾನು ಈಗ ವಿಷ್ಣುವರ್ಧನ್ ಸ್ಟೈಲ್ ನಲ್ಲಿ --"ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ" ಅಂತ ಹಾಡಿಕೊಂಡು ಪ್ರಾರಂಭ ಮಾಡ್ತಾಯಿದ್ದೀನಿ. ನಿಮ್ಮ ಮುಂದೆ ಈಗ ಒಂದು ಪ್ರಶ್ನೆ ಇಡುತ್ತೀನಿ. ನಾನು ಕೊನೆಯಲ್ಲಿ ಏನು ಹಾಡ್ತೀನಿ ಅಂತ ಈಗಲೇ ಊಹೆ ಮಾಡಿ ನೋಡೋಣ..? ನಿಮ್ಮ ಉತ್ತರ ಸರಿಯಾಗಿದ್ದರೆ ನಿಮಗೊಂದು ಬಹುಮಾನ ನನ್ನಿಂದ!
ಸುಮಾರು ಎರಡು ವರ್ಷದ ಹಿಂದೆ,.... 2006ನಲ್ಲಿ ನಡೆದ ಸತ್ಯ ಘಟನೆ. ಆರಾಮಾಗಿ ನನ್ನ ಕೆಲ್ಸ ಮಾಡ್ಕೊಂಡು ಇದ್ದೆ. ಏಕಾದ್ರು ಬಂದಳೋ ಅವಳು... ಯಾರು ಅಂದರೆ ನನ್ನ ಸಹೋದ್ಯೋಗಿ. ಏನ್ಮಾಡಿದ್ಲು ಅಂತ ಕೇಳ್ತೀರಾ?... ಹೇಳ್ತೀನಿ ಇರಿ. ಏನಂದರೆ ಅವಳು ನನ್ನ Orkut ಗೆ ಕರೆತಂದಳು. ನಾನು orkutಗೆ ಬರ್ತಾಯಿರಲಿಲ್ಲ. ಆಗ ಅವಳು, ’ಬಾ.. ಚೆನ್ನಾಗಿರುತ್ತೆ... ನಿನ್ನ ಎಲ್ಲಾ ಹಳೇ ಸ್ನೇಹಿತರು ಸಿಗುವರು. ಹೊಸಬರ ಪರಿಚಯವಾಗುವುದು’ ಎಂದಳು. ಸರಿ ಏನಿರಬಹುದು ಅದರಲ್ಲಿ ಅಂತ ಅವಳ profile ಇಂದ ನೋಡಿದೆ. ಅದನ್ನು ನೋಡಿ ನಾನು ಹೇಳಿದ ಮೊದಲ ಮಾತು "ಇದು Matrimonial Community ಥರಯಿದೆ. ನನಗೆ ಬೇಡಮ್ಮ ". ನಂತರ ಅನೇಕ communities ಗಳು ಇದ್ದವು. ಅಲ್ಲಿ post ಆಗುತ್ತಿದ್ದ ವಿಷಯಗಳು ಹಿಡಿಸಿದವು. ತಕ್ಷಣ..’ಆಯ್ತಮ್ಮ... ನನ್ಗೆ invitation ಕಳ್ಸು’ ಅಂದೆ. ಅಲ್ಲಿ ನಾನು ಸದಸ್ಯನಾದೆ. ಇಲ್ಲಿಗೆ ಬಂದ ಮೇಲೆ ನನಗೆ ಜ್ಞಾಪಕ ಆಗಿದ್ದು, "ಆಗೋದೆಲ್ಲಾ ಒಳ್ಳೇದಕ್ಕೆ "ಅನ್ನುವ ದಾಸರ ಪದ. ತಕ್ಷಣ ನನ್ನ ಜೊತೆ ಹೆಚ್ಚಾಗಿ ಬೆರೆಯುತಿದ್ದ ಮಿತ್ರರಿಗೂ ಹೇಳಿದೆ. ಅವರುಗಳು ಸೇರಿದರು. ದಿನದಿಂದ ದಿನಕ್ಕೆ ಸ್ನೇಹಿತರ ಸಂಖ್ಯೆಯಲ್ಲಿ ಏರಿಕೆ, Communitiesಗಳ ಸಂಖ್ಯೆಯಲ್ಲೂ ವಿಪರೀತ ಏರಿಕೆ ಕಂಡಿತು. ಕನ್ನಡಿಗನಾದ ನಾನು "ಕನ್ನಡ" communityಯಲ್ಲಿ ವಿಪರೀತವಾಗಿ ತೊಡಗಿದ್ದೆ. ಅಲ್ಲಿ ಆಗಲೆ ಕೆಲವರು "ಅಂತ್ಯಾಕ್ಷರಿ", "ಉದ್ದ ದಾರ" ಇತ್ಯಾದಿ ಆಟಗಳನ್ನು ತಪ್ಪದೇ ಆಡುತ್ತಿದ್ದರು. ಅವರೊಂದಿಗೆ ನಾನು ಸೇರಿದೆ. ಅಲ್ಲಿ ಶುರುವಾದದ್ದು ಈ ಬೆಮಿ ವಿಷಯ. ಅಲ್ಲಿಂದ ಹಿಡಿದು ಇಲ್ಲಿವರೆಗೂ... ಈ ಬೆಮಿ ಬಿಡ್ತಾಯಿಲ್ಲ ನನ್ನ. ಈ ಬೆಮಿ ರಹಸ್ಯ ಏನು ಅಂದರೆ..... "ಬೆರಳಂಚಿನ ಮಿತ್ರರು". ಅನೇಕ ದಿನಗಳ ಆಟದ ಬಳಿಕ ಅವರುಗಳಿಗೆ, ಬೆಮಿ ಗಾಗಿ ಕೋರಿಕೆ ಪತ್ರ ಕಳುಹಿಸಿದೆ. ಅದು ಅಂಗೀಕಾರವಾದಾಗ ಸಂತೋಷ ಪಟ್ಟೆ. ಇದನ್ನು ಓದುತ್ತಾಯಿರೋ ನೀವು ಸಹ ನನ್ನ ಬೆಮಿ ಆಗಿರ್ಬಹುದು ಅಲ್ವಾ?
ಈ ಎರಡು ವರ್ಷದಲ್ಲಿ ನನ್ನ ಜೀವನದಲ್ಲಿ ಬಂದ ಬೆಮಿ ಬಗ್ಗೆ ಈ ಲೇಖನ. ಹಾಗೆಯೇ ನನ್ನ ಸಹಪಾಠಿಗಳಿಗೂ ಇದು ಅನ್ವಯ... ಏಕೆಂದರೆ... ಈಗ ಅವರುಗಳು ಸಹ ಬೆಮಿ ಗಳಾಗಿದ್ದರೆ.
This is dedicated to all of you.
ಆ "ಕನ್ನಡಿಗರು" ನನ್ನ ಬೆಮಿ ಆದ ನಂತರ ಕೆಲವು ದಿನ ನಮ್ಮ ಮೊದಲು ಸಂಭಾಷಣೆಗಳು ಹೀಗೆ ಪ್ರಾರಂಭ ಆದ್ವು.
ನಾನು: namaskara hEgideera?
b: Hi...enri samachara
ಈಗಂತು....
"ಕನ್ನಡ"ಅಲ್ಲದೆ ಬೇರೆ communities ಗಳಿಂದಾನೂ ಕೂಡ ನನಗೆ ಬೆಮಿ ಸಿಕ್ಕರು. ನನ್ ಗುರು Dr. ವಿಷ್ಣುವರ್ಧನ್ ( ಜೋರಾಗಿ ಶಿಳ್ಳೆ ಹೊಡೀತಾಯಿದ್ದೇನೆ.... ಕೇಳಿಸ್ತಾಯಿದೆಯ ?)ರಲ್ಲು ನನ್ ಆಪ್ತಮಿತ್ರ ಸಿಕ್ಕಿದ ;-) ಆತನೊಡನೆ ಮಾತು ಎಂದು ಮರೆಯಲಾರದಂತಹದ್ದು.
"ರಾಜನ್-ನಾಗೇಂದ್ರ " community (ಅವರ ಹಾಡುಗಳಿಗೆ....ತಲೆ ದೂಕಿಸ್ತಾಯಿದ್ದೀನಿ.... ಕಣ್ಸ್ತಾಯಿದ್ದೀಯ...?)
"ಕನ್ನಡ ಕವಿಗಳ"community ಇಂದಾನು ಕೆಲವರು(ಅವರ ಕವನಕ್ಕೆ Fan ಆದೆ.. ಗೊತ್ತಿದ್ದೀಯಾ?).
ಹೀಗೇ ಹೇಳುತ್ತಾ ಹೋದರೆ ಹನುಮಂತನ ಬಾಲದಂತಾಗುತ್ತೆ.
Orkut ಅಲ್ಲದೇ ಬೇರೆ Forumಗಳಲ್ಲು ನಾನು ಭಾಗವಹಿಸಿದೆ. (kannadigaru.com), ಅಲ್ಲು ಬೆಮಿ ಪರಿಚಯವಾಯಿತು. ಅಲ್ಲಿ ನನ್ನ ಕವನಗಳನ್ನು ಪೊಸ್ಟ್ ಮಾಡೊ ಅವಕಾಶ ಒದಗಿದಾಗ ಮಾಡಿದೆ. ಅಲ್ಲಿ ನನಗೆ ಹಿರಿಯ ಬೆಮಿ ಇಂದ ಅನೇಕ ಸಲಹೆಗಳು ಸಿಕ್ಕಿತು. ನನ್ನ ಕವನಕ್ಕೆ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದವರು ಅನೇಕರು. ನನ್ನ ಲೇಖನ "ಕನಸು" ಓದಿ ಹೊಟ್ಟೆ ಹುಣ್ಣಾಗೋವರ್ಗು ನಕ್ಕಿರೋರು ಉಂಟು. ಈಗಲೂ ಕೆಲವರು ಅದರ ಚರ್ಚೆ ಮಾಡ್ತಾಯಿರ್ತಾರೆ.
ಕವನ, ಕಥೆ ಬರೆಯುವುದರಲ್ಲಿ ನಿಪುಣರಾಗಿದ್ದ ಬೆಮಿ, ತಮಗೆ ’ಬರೆಯೋಕೆ ಬರೋದಿಲ್ಲ’ ಅಂತ ಇದ್ದರು, ಆನಂತರ ಅನೇಕ ರೀತಿಯಾದ ಕವನಗಳನ್ನು ಬರೆದದ್ದು ಅವರಿಗೆ ಈಗ ನೆನಪಾಗುತ್ತೆ. ಕವನದ ಜೊತೆ ಅದ್ಭುತವಾಗಿ ಚಿತ್ರ ಬಿಡಿಸೊರು ಅವರು. ಚಿತ್ರ ನಟಿಯೊಬ್ಬರ ಚಿತ್ರ ಅಂತು ನನ್ favourite :-)
ನನ್ ಬೆಮಿ ಅನೇಕ ಬಾರಿ ನನ್ನು ತಪ್ಪುಗಳನ್ನು ತಿದ್ದಿದ್ದಾರೆ. "ಹೀಗೆ ಬರೆದರೆ ಅರ್ಥ ಸರಿಯಾಗೋದಿಲ್ಲ, ಅಲ್ಲಿ ಸ್ವಲ್ಪ ಸರಿ ಮಾಡಿ". ಬೇರೊಬ್ಬರು, ರಜೆಗೆಂದು ಭಾರತಕ್ಕೆ ಬಂದಾಗ, ನನ್ನೊಂದಿಗೆ ದೂರವಾಣಿಯಲ್ಲಿ ಮಾತಾಡಿದ್ದಾರೆ. ಬರೀ ಸುಖ ಅಲ್ಲದೇ ಅವರ ದುಃಖವನ್ನು ಕೂಡ ನನ್ನೊಂದಿಗೆ ಹಂಚಿಕೊಂಡ ಬೆಮಿ ಇದ್ದಾರೆ. ಪ್ರತಿ ದಿನ ಹಾಸ್ಯಮಯ ಸಂದೇಶವನ್ನು ಕಳ್ಸೋರು ಇದ್ದಾರೆ. ಇತ್ತೀಚೆಗೆ FM Rainbowನಲ್ಲಿ ಪ್ರಸಾರವಾದ ನನ್ನ ಹೆಸರನ್ನು ಕೇಳಿದ ತಕ್ಷಣ ಕರೆ ಕೊಟ್ಟ ಬೆಮಿ ಇದ್ದಾರೆ. ಪ್ರತಿದಿನ ತಪ್ಪದೇ ಗುಡ್ ಮಾರ್ನಿಂಗ್, ಗುಡ್ ಈವೆನಿಂಗ್ ಹೇಳೋರು ಇದ್ದಾರೆ.
-------------
-------------
b: Hi
-------------
-------------
-------------
-------------
-------------
-------------
-------------
-------------
-------------
n:Hi Hegiddeera?
-------------
ಸರಿ, ಈಗ Flashback ಮುಗೀತು. ಈಗ ನೀವು ಊಹೆ ಮಾಡಿರೋ ಹಾಡು ಇದೇನಾ ಅಂತ, ಪರೀಕ್ಷಿಸಿಕೊಳ್ಳಿ. ಸರಿಯಾಗಿದ್ದಲ್ಲಿ ನನಗೆ ತಿಳಿಸಿ, ಬಹುಮಾನ ನಿಮ್ಮದಾಗಿಸಿಕೊಳ್ಳಿ.
ಮಾಮರವೆಲ್ಲೋ...
ಕೋಗಿಲೆ ಎಲ್ಲೋ...
ಏನೀ ಸ್ನೇಹಾ ಸಂಬಂಧ...
ಎಲ್ಲಿಯದೋ ಈ ಅನುಬಂಧ...
ನಾನು ಹೇಳೋದನ್ನೆಲ್ಲಾ ಹೇಳಿಯಾಯಿತು, ಬರೆದದ್ದೂ ಆಯಿತು. ಈಗ ನಿಮ್ಮ chance. ನಿಮ್ಮ ಅನಿಸಿಕೆಗನ್ನು ನೀವು ತಪ್ಪದೇ ತಿಳಿಸಿ. ತಿಳಿಸ್ತೀರಾ ಅಲ್ವಾ?
12 ಜನ ಸ್ಪಂದಿಸಿರುವರು:
ಆತ್ಮೀಯ ಜಯ್,
ನಿನ್ನ ನಿನಪುಗಳ ಮೆರವಣಿಗೆಯನ್ನ ನಿಮ್ಮ ಬ್ಲಾಗ್ ನಲ್ಲಿ ಬಹಳ ಸೊಗಸಾಗಿ ಮುನ್ನಡೆಸಿದ್ದಿರಿ. ಓದುತಿದ್ದ ಹಾಗೆ ಒಳ್ಳೆಯ ಅನುಭವ ವಾಯಿತು. ನಿಜ, ಜಗತಿನ ಯಾವುದೊ ಮೂಲೆಯಲ್ಲಿರುವವರು ಅಕ್ಕ ಪಕ್ಕದ ಊರಿನವರು, ಮನೆಯ ಹತ್ತಿರದಲ್ಲೇ ಇರುವವರು, ಬೆರಳಂಚಿನ ಮಿತ್ರರಾಗುವ ಪ್ರಕ್ರಿಯೆ ಒಂದು ಅದ್ಭುತ.
ದೈಹಿಕವಾಗಿ ಪರಸ್ಪರ ನೋಡದಿದ್ದರೂ ಮಾನಸಿಕವಾಗಿ ಭಾವನೆಗಳೇ ಮಾತನಾಡಿ ಕೊಳ್ಳುತ್ತವೆ ಅದರ ಆನಂದವೇ ಬೇರೆ.
ಇಂಥಹ ನೂರಾರು ಬಣ್ಣ ಗಳ ಮಧ್ಯೆ ನನ್ನ ನೆನಪಿನ ಓಕುಳಿ ಕೂಡ ಸೇರಿರುವುದು ಸಂತಸ.
ಶುಭವಾಗಲಿ
ಮಧು.
ತುಂಬಾ ಧನ್ಯವದಗಳು ಜಯಶಂಕರ್ ನನ್ನನ್ನೂ ನಿಮ್ಮ ’ಬೆಮಿ’ ಗುಂಪಿಗೆ ಸೇರಿಸಿಕೊಂಡಿದ್ದಕ್ಕೆ. ಪರವಗಿಲ್ಲಾ ರೀ.. ಸಣ್ಣ ಕತೆ ಓದುತ್ತಾ ಇರಿ.. ದೊಡ್ಡ ಕತೆ ಓದಲು interest ಬರತ್ತೆ ಅಂದೆ, ಆದ್ರೆ ನೀವು ದೊಡ್ಡ ಕತೆನೇ ಬರೆದು ಬಿಟ್ರಿ!;-) ಚೆನ್ನಾಗಿದೆ ಬೆಮಿ.
hmmm...hosa padagaLanna kanDu hiDiyOdanna yaavaaginda shuru maaDidiri ? irli...arthapoornavaagide pada. lekhanavU ashte...chennagi mooDi bandide. bemi gaLu innu hechhaagali anta haaraisuttene.
ಜಯ್ ಮಾಸ್ತಾಗಿದೆ ಕಣೋ ....
ನಿನ್ ಬೆಮಿ ..... ಸಕತ್ತಾಗೀ ಬರ್ದಿದ್ದೀಯಾ ..
ಬೆಮಿ ಆವ್ರು ತುಂಬಾ ಸ್ಪೆಶಲ್ ಅಲ್ಲ್ವ
Keep it up buddy...
ಸುಧಿ,
ಬೆಮಿ ಗಳು ತುಂಬಾ ಸ್ಪೆಶಲ್ಲೆ.
hey jaya...
thnks man...tumba santosha aaithu...nimma feb spl lekhana sooper agi ide...and i also luv wat u wrote abt me...naanu yavaglu nimma aptamitra ne...c..thts why we became frnds thru vishnu's community in orkut...ind ge banda takshna nimmana meet madathini...
forever frnd...for ever fun...
--Sri
:)
ಮಾಮರವೆಲ್ಲೋ...
ಕೋಗಿಲೆ ಎಲ್ಲೋ...
ಏನೀ ಸ್ನೇಹಾ ಸಂಬಂಧ...
ಎಲ್ಲಿಯದೋ ಈ ಅನುಬಂಧ...
ohhhhhhhhhhoooooo ishtu udda article besh besh nimge dodda articles odhoke bore alva?
mathe naavu hegri isht udda artcle odhodu?
sari bEmigaLAbagge superaagi bardiddira with renovated dailogues.
well written!9/10 marks kotre hege ? worth worth .
Waah JS enri court scene tharane start madidhiralla nimma "ಬೆಮಿ (February Special)" :):)
Tadavagi comment madta idini nimma kshame erali.
Modalu nimmanna orkutghe karedhukondu banda aa gelathighe nanna vandanegalanna thilisibidi.
Yakandre allighe bandha nantara neevu k.comghe bandri, nanna parichaya saha aythalva? adake :)
Nimma "ಬೆಮಿ (February Special)" nalli nanu nanna sambhashane seridhe,edakintha bere bhagya beke?
ಬೆಮಿ galanna nenpinalli ittukonda haghe, avara sambhashanegalanna saha bhadravagi irisikondidiri good good.
Nija JS
ಮಾಮರವೆಲ್ಲೋ...
ಕೋಗಿಲೆ ಎಲ್ಲೋ...
ಏನೀ ಸ್ನೇಹಾ ಸಂಬಂಧ...
ಎಲ್ಲಿಯದೋ ಈ ಅನುಬಂಧ...
Sada kaala erali namma anubhandha.
Good Work.Keep it up!
With best wishes
Lilly
HAAY JAY...,
SAKKAT KANRI....,
hai....,
sakkat jay...., tumbane kushi kodtu....
ನಿಮ್ಮ ಕೆಲವು ಸಂಭಾಷಣೆಗಳನ್ನು ನೋಡಿ ನಗು ಬಂತು... ಇಂಥದ್ದೇ ಕೆಲವು ಸಂಭಾಷಣೆಗಳಲ್ಲಿ ನಾನೂ ನನ್ನ ಬೆಮಿಗಳ ಜೊತೆ ಭಾಗಿಯಾಗಿದ್ದೇನೆ. ಚೆನ್ನಾಗಿ ಬರೆದಿದ್ದೀರಿ.
ಅಂಬಿಗ,
ಧನ್ಯವಾದಗಳು
Post a Comment