Thursday, 5 June 2008

ಮಲೆಯಲ್ಲೊಂದು ಮಾಣಿಕ್ಯ!

[ ವಿಶ್ವ ಪರಿಸರ ದಿನಕ್ಕೆ, ಪರಿಸರಕ್ಕೊಂದು ಉಡುಗೊರೆ.]

ಕುಂಚದಿಂದ ಚಿತ್ರಿಸಿದೆ ನಿನ್ನಂದವ
ಇಂದ್ರಲೋಕದೆಡೆಗೆ ಹಾರಿಸಿತು ಮಾರುತ!
ಮಲೆಯೊಂದು ತಡೆಯಿತು ಹಾರಾಟವ,
ನಿನ್ನಂದವಿರಲಿ ಭೂಮಿಗೆ ಎನ್ನುತ!

ಬಾನಾಡಿಗಳಿಗೆ ಹೊಸ ಒಡನಾಡಿ ಸಿಗಲು
ಹಾರಾಡಿ, ಕುಣಿದಾಡಿ, ಸ್ವಾಗತಿಸಿದವು.
ಮಲೆಯ ನಡುವೆ ನೆಲೆಸಲು,
ಚಂದದ ಗೂಡೊಂದ ಕಟ್ಟಿದವು

ಸುರಿವ ಮಳೆಗೆ ನೆನೆಯದೆ
ಸುಡುವ ಬಿಸಿಲಿಗೆ ಮಾಸದೆ
ಕಾಲ ಕಾಲಕ್ಕೂ ಚಿತ್ರವಿರುವಂತೆ
ಕಾಪಾಡುವ ಕಾಯಕ ಬಾನಡಿಗಳದಂತೆ!

ಹೊಂಬಿಸಿಲು ತುಂಬಿಸುವುದು ಮೆರುಗು
ಪ್ರಕೃತಿ ಜೊತೆಗೂಡಿಸುವುದು ಸೊಬಗು!
ಮಲೆಯ ನಡುವೆಯೊಂದು ಮಾಣಿಕ್ಯ!
ಪ್ರಕೃತಿಯೊಂದಿಗೆ ಚಿತ್ರ ಐಕ್ಯ!

[ಹಿಂದಿನ ವರ್ಷದ ಉಡುಗೊರೆ ಇಲ್ಲಿದೆ]

5 ಜನ ಸ್ಪಂದಿಸಿರುವರು:

maddy said...

ee kavana bahala chennagi moodide jay...
olle koduge..

sunaath said...

"ಪ್ರಕೃತಿಯೊಂದಿಗೆ ಚಿತ್ರ ಐಕ್ಯ"!
ತುಂಬಾ ಸುಂದರವಾದ ಭಾವ.

ತೇಜಸ್ವಿನಿ ಹೆಗಡೆ said...

ಶಂಕರ್,

ನಿಮ್ಮ ಈ ವರೆಗಿನ ಕವನಗಳಲ್ಲೇ ಅತ್ಯುತ್ತಮ ಕವನವಿದೆನ್ನ ಬಹುದು. ತುಂಬಾ ಚೆನ್ನಾಗಿದೆ...ಪ್ರಕೃತಿಯೊಂದಿಗೆ ಚಿತ್ರ ಐಕ್ಯ!

Parisarapremi said...

ಸರಳವಾಗಿ ಸೊಗಸಾಗಿದೆ.. :-)

Lakshmi Shashidhar Chaitanya said...

ಒಳ್ಳೇ ಕವನ...ಕಡೆಯ stanza ಮನೋಜ್ಞ.