(ಇದು ಯಾವ ಸಂದರ್ಭದಲ್ಲಿ ಬರೆದೆ ಅಂತ ನನಗೆ ಮತ್ತು ನನ್ನ ಈ ಸ್ಥಿತಿಗೆ ಕಾರಣವಾದವರಿಗೆ ಗೊತ್ತು.)
ಒಬ್ಬನೆ ಮಾತಾಡಿದೆ
ಇನ್ನೊಬ್ಬ ಜೊತೆಗಿಲ್ಲದೆ
ಒಬ್ಬನೆ ಮಾತಾಡಿದೆ!
ನಾ ಬಯಸಿದ ಜೀವ
ಸನಿಹ ಬಾರದಿರಲು
ಒಬ್ಬನೆ ಮಾತಾಡಿದೆ!
ಕಲ್ಲ ಬೆಂಚ ಮೇಲೆ ಕೂತು
ಕಾಯುವಲ್ಲಿ ಸುಖವಿಲ್ಲದೆ
ಒಬ್ಬನೆ ಮಾತಾಡಿದೆ!
ಉಸಿರುಸಿರು ಎಣಿಸುತ
ಹಸಿರೆಲೆಯ ವೀಕ್ಷಿಸುತ
ಒಬ್ಬನೆ ಮಾತಾಡಿದೆ!
ನೀ ಬಳಿಗೆ ಬಂದಾಗ
ಬೇಸರ ಸರಿದಾಗ
ಹಿಗ್ಗುತ ಮಾತಾಡಿದೆ!
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
8 ಜನ ಸ್ಪಂದಿಸಿರುವರು:
ತುಂಬಾ ಚೆನ್ನಾಗೇ ಒಬ್ಬನೇ ಮಾತಾಡ್ತೀಯ ಅಂತ ಅಯಿತು ಬಿಡು...
ಚೆನ್ನಾಗಿ ಬರ್ದಿದ್ದೀಯ ನಾ ನಿನ್ನ ಹತ್ತಿರ ಹೇಳಿದ ಹಾಗೆ ಈ ಕವನ ಬೆಸ್ಟ್ ಮ್ಯಾಚು ಎಲ್ಲಿ ಅಂತ ಗೊತ್ತಲ್ಲ್ವ ಹೆಹೆಹೆಹೆ :)
ಶಂಕರ್,
ತುಂಬಾ ಮೆಚ್ಚುಗೆಯಾದ ಕವನ. ಬರೆಯುತ್ತಿರಿ.
ಜಯಶಂಕರ್,
ನಿಮ್ಮ ಬ್ಲಾಗ್ ಪೂರ್ಣ ಸುತ್ತಿ ಬಂದೆ. ಸುಂದರ ಅನುಭವ ನೀಡಿತು. ’ಮೆಲೋಡಿಯಸ್ ಮೋಹನ’ ಲೇಖನ ಮೋಹನ ರಾಗ ಆಲಿಸಿದಷ್ಟೇ ಖುಷಿ ನೀಡಿತು. ಆಗಾಗ ಅಂತರ್ವಾಣಿಗೆ ಲಗ್ಗೆ ಇಡುವೆ.
ಒಬ್ಬರೇ ಇದ್ದಾಗಲೇ ಕವನ ಹುಟ್ಟೋದು.
ತ್ರಿವೇಣಿಯವರೆ,
ಬಹಳ ಸಂತೋಷವಾಯಿತು ನನ್ನ ಅಂತರ್ವಾಣಿ ಕೇಳಿದ್ದಕ್ಕೆ.
ನಿಮ್ಮ ಪ್ರೋತ್ಸಾಹ ಹೀಗೇ ಇರಲಿ.
ಸುನಾಥ ಅವರೆ,
೧೦೦ ಪ್ರತಿಷತ ನಿಜ. ಒಂಟಿತನದಲ್ಲಿ ಕವನ ಹುಟ್ಟೋದು.
tumba chennagide... jay..
ontitana haage.. sikkapatte kaadutte nammanna!
oho...neevu shuru maadira obbare maataaDOdu ? haa ? welcome to the gang ! [gang hesru enu anta gottalla ? ;-) by the way... sakhattagide kavana !
wowwwwwwwwww a grt imagination is there illi alva? ssss
masolage obObre maathadkondaga eno onthara thaLamaLa,aNananda aaguthe.
chennagide nimma maathugaLu
Post a Comment