Friday, 9 May 2008

ಮನಸಿಗೆ ಆಘಾತ!

[ಕನ್ನಡಪ್ರಭ.ಕಾಂ ನಲ್ಲಿ ಪ್ರಕಟಿತ]

ಮೌನ ಮರೆತೆ ನಿನ್ನ ನೋಡಲು
ನೇಹ ಪಡೆದೆ ನಿನ್ನ ಒಲಿಸಲು
ಮಾತು ಮರೆತೆ ನೀ ಮಾತಾಡಲು
ಮಾರ್ಗ ತೋರಿದೆ ನಾ ಪ್ರೀತಿಸಲು

ನಿದ್ದೆ ಮಾಡದೆ ಕಳೆದೆ ರಾತ್ರಿಗಳ
ಸುದ್ದಿ ಮುಟ್ಟಿಸಿದೆ ಬರೆದು ಪತ್ರಗಳ
ನಿನ್ನ ಮೆಚ್ಚಿಸಿದೆ ಹಾಡಿ ಗೀತೆಗಳ
ನಿನ್ನ ಇಚ್ಛೆಗೆ ಗೀಚಿದೆ ಚಿತ್ರಗಳ

ಒಲಿದ ಹುಡುಗಿ ಸಿಗದಾದೆ ಏಕೆ?
ಬಾಳಿಗೆ ಒಡೆದ ಹಾಲಾದೆ ಏಕೆ?
ಪೊಳ್ಳು ಪ್ರೀತಿಯಿದು ಎಂದರಿತೆ ಏಕೆ?
ಕೊಳ್ಳಿ ಇಟ್ಟೆಯಾ ಪ್ರೀತಿ ಸೌಧಕೆ?

ಮನವು ಧಗ ಧಗ ಉರಿದರೂ
ನಿನ್ನ ದೂಷಿಸುವ ಮನಸಿಲ್ಲ
ತನುವು ಪದೇ ಪದೇ ಬೇಡಿದರೂ
ನಿನ್ನ ಬಯಸುವ ಇಚ್ಛೆಯಿಲ್ಲ.

10 ಜನ ಸ್ಪಂದಿಸಿರುವರು:

Unknown said...

Wow! Super JS.
ನಿದ್ದೆ ಮಾಡದೆ ಕಳೆದೆ ರಾತ್ರಿಗಳ
ಸುದ್ದಿ ಮುಟ್ಟಿಸಿದೆ ಬರೆದು ಪತ್ರಗಳ
ನಿನ್ನ ಮೆಚ್ಚಿಸಿದೆ ಹಾಡಿ ಗೀತೆಗಳ
ನಿನ್ನ ಇಚ್ಛೆಗೆ ಗೀಚಿದೆ ಚಿತ್ರಗಳ

E salu nange thumbhane ishta aythu.Good work JS.

Anonymous said...

ಕಮೆಂಟಾಥೀತ ! ನಾವು ಕೆಲವೊಮ್ಮೆ ಎಲ್ಲವನ್ನು ಮರೆತು ನಮಗೆ ಇಷ್ಟವಾದವರ ನೋಡುತ್ತಾ ಕಲ್ಪನಾ ಲೋಕಕ್ಕೆ ಪಯಣಿಸಿರ್ತಿವಿ. ನಮ್ಮನ್ನ ನಮ್ಮ ಹಾಗು ಹೋಗುಗಳನ್ನ ಪ್ರತಿಸಮಯದಲ್ಲೂ ನೋಡ್ತಾನೆ ಇರ್ತಾರೆ ಅನ್ನೋ ಪರಿವು ಕೂಡಾ ಇರೋಲ್ಲ !
ಮೊದಲ ನಾಲ್ಕು ಸಾಲುಗಳು ತುಂಬಾನೆ ಇಷ್ಟ ಆಯ್ತು ಮತ್ತು ಕೊನೆಯ ಎರಡು ಸಾಲುಗಳಲ್ಲಂತು ನಿಮ್ಮ ದುಗುಡ ಹೆಚ್ಚಾಗಿ ಕಾಣುತ್ತೆ.

maddy said...

olle padya... tumba ishta aitu..

forceful praasada agathya ee kavanakke bekiralilla...

instictive prasa bandre tumba olledu...idana nimma koneya saalugalali kanabahudu...
unlike 1st three parts.

ತೇಜಸ್ವಿನಿ ಹೆಗಡೆ said...

ಶಂಕರ್,

ಮನಮಿಡಿಯುವ ಕವನ!

ಬಾನಾಡಿ said...

ಅದ್ಭುತ ಪ್ರಾಸಗಳನ್ನು ಒಲಿಸಿಕೊಂಡು ಬರೆದ ಕವನ.
"ಅಂಧಕಾರದಲ್ಲಿ ಅನಿವಾರ್ಯವಾಗಿ ಅಲೆಯುತ್ತಿರುವ, ಅನುರಾಗವನ್ನು ಅರಸುತ್ತಿರುವ ಅವಿವೇಕಿ"ಯ ಕಾಮೆಂಟ್ ಬಗ್ಗೆ ಸ್ವಲ್ಪ ಯೋಚಿಸಿ. ತೇಜಸ್ವಿನಿಯವರು ಆಡಿದ್ದು ಎರಡೇ ಪದ. ಮತ್ತೊಮ್ಮೆ ಯೋಚಿಸಬೇಕು.
ಪ್ರೀತಿಯ ಉತ್ಕಟತೆಯನ್ನು ಅರಿಯದಿದ್ದರೆ ನಿಮ್ಮ ಕವನವನ್ನು ಯಾರೂ ಅರಿಯರು. ಬರೆಯುತ್ತಿರಿ. ಆಗಾಗ ಬರುತ್ತಿರುವ ನಮಗೆ ನಿಮ್ಮ ಕವನ ಸುಧೆಯಲ್ಲಿ ಮೀಯುವ ಅವಕಾಶ ಸಿಗಲಿ. ನಿಮ್ಮ ಅಂತರ್ವಾಣಿ ಕಾವ್ಯದ ಕಡಲಾಗಲಿ.
ಅಭಿನಂದನೆಗಳು.
ಬಾನಾಡಿ

ತೇಜಸ್ವಿನಿ ಹೆಗಡೆ said...

ಬಾನಾಡಿಯವರೆ,

"ತೇಜಸ್ವಿನಿಯವರು ಆಡಿದ್ದು ಎರಡೇ ಪದ. ಮತ್ತೊಮ್ಮೆ ಯೋಚಿಸಬೇಕು". ಈ ಮಾತಿನರ್ಥವಾಗಲಿಲ್ಲ.. ಯಾರು ಯೋಚಿಸಬೇಕು ಎಂದು?! ;-)

ವಿ.ರಾ.ಹೆ. said...

ನಮಸ್ಕಾರ ಅಂತರ್ವಾಣಿ,

ಎರಡನೇ ಸಾಲಿನಲ್ಲಿ ’ನೇಹ’ ಎಂಬ ಪದದ ಅರ್ಥವೇನು?

ಅಂತರ್ವಾಣಿ said...

ನಮಸ್ಕಾರ ವಿಕಾಸ್ ಹೆಗಡೆ ಅವರೆ,

"ನೇಹ" ಎಂದರೆ ಸ್ನೇಹ

ವಿ.ರಾ.ಹೆ. said...

ಒಹ್, ಥ್ಯಾಂಕ್ಸ್...

Sridhar Raju said...

ನಿದ್ದೆ ಮಾಡದೆ ಕಳೆದೆ ರಾತ್ರಿಗಳ
ಸುದ್ದಿ ಮುಟ್ಟಿಸಿದೆ ಬರೆದು ಪತ್ರಗಳ
ನಿನ್ನ ಮೆಚ್ಚಿಸಿದೆ ಹಾಡಿ ಗೀತೆಗಳ
ನಿನ್ನ ಇಚ್ಛೆಗೆ ಗೀಚಿದೆ ಚಿತ್ರಗಳ
ee melin lines thumba ishTa aaythu ...sikkaapaTTe chennag express maadidya... :-)