ಎಲ್ಲರಂತೆ ನಾನು ಉಸಿರಾಡುತ್ತಿದ್ದೆ
ಎಂದು ಉಸಿರಾಟ ನಿಂತಿತೋ ತಿಳಿಯದಾದೆ!
ದಾಹ! ಎಂದಾಗ ನೀರಿಟ್ಟರು
ದೇಹ, ಹೆಣವಾದಾಗ ಕಣ್ಣೀರಿಟ್ಟರು!
ಹಸಿವೆಂದಾಗ ಮಣೆ ಹಾಕಿ, ತಟ್ಟೆ ಇಟ್ಟರು
ಅಸು ನೀಗಿದಾಗ ಚಾಪೆ ಹಾಸಿ, ಬಟ್ಟೆ ಹೊದಿಸಿದರು!
ಹುಟ್ಟಿದ ದಿನದಂದು ಆರತಿ ಎತ್ತಿದರು ಹಲವಾರು ಮಂದಿ
ಚಟ್ಟವ ಏರಿದ ದಿನವಿಂದು, ಎತ್ತಿದರು ನಾಲ್ಕು ಮಂದಿ!
ಮದುವೆಯ ಮೆರವಣಿಗೆಯೆಂದು ಇದ್ದರು ಅನೇಕರು
ಮಸಣಕ್ಕೆ ಮೆರವಣಿಗೆಯಿಂದು, ಇದ್ದಾರೆ ಕೆಲವರು!
ಸುತನು ಕೊಳ್ಳಿ ಇಟ್ಟನು
ಸತ್ತವನು ಬರಲಾರನೆಂದು ಹೊರಟನು!
ಬುವಿಯ ಮೇಲೆ ಬೂದಿಯಾದೆನು
ಬೂದಿಯು ಗಂಗೆಯ ಪಾಲಾಯಿತು!
ಹಿಂದೆ, ದೇಹವು ಚೆಲುವಿನ ಬೀಡಾಗಿತ್ತು
ಇಂದು, ಮಸಣದ ಎಲುಬಿನ ಗೂಡಾಗಿದೆ!
ವಿ.ಸೂ: ತಿಂಗಳ ಹಿಂದೆ, ಕುವೆಂಪುರವರ ಕವನ ಓದಿದಾಗ ೨ ಸಾಲುಗಳು ಮನಕ್ಕೆ ತುಂಬಾ ಇಷ್ಟವಾಗಿತ್ತು. ಅದರ ಪ್ರಭಾವದಿಂದ ಬರೆದ ಕವನವಿದು. ಆ ಸಾಲುಗಳನ್ನು ಸ್ವಲ್ಪ ಬದಲಿಸಿ ನನ್ನ ಕವನದ ಕೊನೆ ಸಾಲುಗಳಾಗಿಸಿದೆ. ಅದರ ಮೂಲ:
"ಇಂದೀ ದೇಹವು ಚೆಲುವಿನ ಬೀಡು
ಮುಂದಿದು ಮಸಣದ ಎಲುಬಿನ ಗೂಡು"
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
5 ಜನ ಸ್ಪಂದಿಸಿರುವರು:
nice man,,,, very well related the happyness moments n things wil be there in the event of death.. its the real fact.. till then just njoy maadi iro jeevnana .. keep blogging...
Gmail?Shankar,
Tumba Arthavattada Kavana.. tumba Istavayithu. Keep it up!
Thumbha chennagi baredidiri JS.Heghe bareyutha iri.
ಕವಿಯ ಕಲ್ಪನೆಗೆ ಸಾಟಿ ಮತ್ತೊಂದು ಇಲ್ಲ ಅನ್ನೋಕೆ ಇದು ಒಂದು ಪುಟ್ಟ ಉದಾಹರಣೆ.
ಕವಿ ಕಾಣದ್ದು ಏನಿದೆ ಅಲ್ವಾ ???
ಎಲ್ಲ ನಿಮ್ಮ ಕವಿ ಮನದಲ್ಲೇ ಉದ್ಭವವಾಗಿ ಪದಗಳಲ್ಲಿ ಹೆಣವನ್ನು ಮಾತಾಡಿಸೋ ಪ್ರಯತ್ನ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ .
idee jeevanada thathvave illide...
kavana adbhuva vaagide..
Madhu
Post a Comment