Thursday, 17 April 2008

ಒಮ್ಮೆಯಾದರೂ.....

ನನ್ನ ಕಣ್ಣು ಹೇಳಿತು,
ನಿನ್ನ ಕಣ್ಣು ನನ್ನ ನೋಡುತಿರುವುದೆಂದು
ಕಂಡ ಮೇಲೂ ಸುಮ್ಮನಿರುವುದೇ?
ಒಮ್ಮೆಯಾದರು ನೋಡಿ ನಗಬಾರದೇ?

ನನ್ನ ಮನಸು ಹೇಳಿತು
ನಿನ್ನ ಮನಸಲ್ಲಿ ನಾನು ನಲೆಸಿರುವುದೆಂದು
ತಿಳಿದ ಮೇಲೂ ಸುಮ್ಮನಿರುವುದೇ?
ಒಮ್ಮೆಯಾದರು ನೋಡಿ ನಗಬಾರದೇ?

ನನ್ನಾಸೆ ನಿನ್ನಲ್ಲಿದೆಯೋ?
ನಿನ್ನಾಸೆ ನನ್ನಲ್ಲೋ?
ಇದನರಿಯುವ ಕಾತರ
ಒಮ್ಮೆ ನಕ್ಕು, ನುಡಿಬಾರದೇ?


3 ಜನ ಸ್ಪಂದಿಸಿರುವರು:

Sudi said...

ತುಂಬ ಚೆನ್ನಾಗಿದೆ.. ನನ್ನ ನೆನಪುಗಳನ್ನ ಪುನಃ ಚಿಗುರಿಸಿತು ನಿನ್ನ ಈ ಕವನ

maddy said...

this one is cute...
chennagide jay..

Anonymous said...

ಪ್ರೀತಿ ಇದ್ದಾಗ ಮನುಷ್ಯನ ಪಂಚೇದ್ರಿಯಗಳೆಲ್ಲವು ತುಂಬಾನೆ ಮುಗ್ಧತೆ ಇಂದ ಕೆಲಸ ಮಾಡುತ್ತೆ ಹ್ಹೆ ಹೆಹ್ಹೆ !

ಎಲ್ಲಿದ್ದಾರೆ ನಿಮ್ಮ ಆಸೆ ಹಾ ?

ಚೆನ್ನಾಗಿದೆ ಕವಿತೆ.