Saturday, 26 April 2008

ಅಗ್ರಜಾನುಭವ



ಕಸಗುಡಿಸುವನೆಂದು ಕಸದಂತೆ ಕಾಣಬೇಡ;
ಅವನಲ್ಲಿಯು ಇರುವನು ಕೈಲಾಸ ವಾಸಿಯು !
ಎಲ್ಲರಿಗು ಗೌರವ ನೀಡು -ಅಗ್ರಜ
____

ದುರದೃಷ್ಟವೆಂದು ಚಿಂತಿಸಬೇಡ,
ಅದೃಷ್ಟವು ನಿನ್ನೆಡೆಗೆ ಬರುವವರೆಗು
ಕಾಯುವ ತಾಳ್ಮೆಯು ನಿನಗಿರಲಿ -ಅಗ್ರಜ
____

ಮಾವು, ಬೇವು ಉಗಾದಿಗೆ,
ನೋವು ನಲಿವು ದಿನ ನಿತ್ಯಕೆ
ಸಾವು ಪ್ರತಿಯೊಂದು ಜೀವಿಗೆ - ಅಗ್ರಜ
____

ಗುಣವಂತನಿಗೆ ಎಲ್ಲೆಡೆ ಮನ್ನಣೆ.
ಸದ್ಗುಣವಿಲ್ಲದವ ಕೇವಲ ಚರ್ಮದಿಂದ
ಮುಚ್ಚಿರುವ ಮಾಂಸದ ಮುದ್ದೆ - ಅಗ್ರಜ

2 ಜನ ಸ್ಪಂದಿಸಿರುವರು:

Anonymous said...

ನಿಮ್ಮ ಅನುಭವಗಳನ್ನು ಚುಟುಕಿನ ರೀತಿಯಲ್ಲಿ ಬರೆಯ ಹೊರಟಿರೋದು ತುಂಬಾನೆ ಸಂತೋಷದ ವಿಷಯ .ಇನ್ನು ಹೆಚ್ಚೆಚ್ಚು ನಿಮ್ಮ ಅನುಭವಗಳ ಸಂಗ್ರಹವನ್ನು ಮಾಡಿ .

ಇತಿ ಸಹ್ಯೆ,
ಪು..

maddy said...

great going...

agrajanubhava agra vagi irali...