Wednesday, 9 April 2008

ಮೂರು ಪದಗಳು

ಕವನ ರಚಿಸುವ ಹಂಬಲ
ಆವರಿಸಿತು ಮನದ ಮೂಲೆಗೆ.
ಚಿತ್ತವದು ಚಂಚಲ!
ಭಾವನೆಗಳ ಹೇಳಲು
ಯಾವೊಂದು ಪದವು ಸಿಗಲಿಲ್ಲ!
ಅತ್ತ ಇತ್ತ ಅಲೆದಾಡಿದೆ! ದಣಿದೆ!

ಲೇಖನಿ ಕರದಲ್ಲಿ ಹಿಡಿದಿದ್ದರೂ
ಹಾಳೆಯು ಕಣ್ಮುಂದೆ ಹರಡಿದ್ದರೂ
ಮನಕ್ಕೆ ಕವಿದಿತ್ತು ಮಂಪರು!
ಭಾವನೆಗಳ ಹೇಳಿಕೊಳ್ಳಲು
ಪದಗಳ ಹುಡುಕಿದರೂ
ಗಮನಕ್ಕೆ ಬಂದದ್ದು ಕೇವಲ ಮೂರು!

ಮೂಡಣದ ಚಂದ್ರನ ವರ್ಣಿಸಲೇ?
ಪಡುವಣದ ಸೂರ್ಯನ ಬಣ್ಣಿಸಲೇ? ಇಬ್ಬರ
ನಡುವಿನ ನೀಲಿ ಸೀರೆಯ
ಹೊದಿಸಲೇ ಹಾಳೆಯ ಮೇಲೆ?

ಪದಗಳಿಲ್ಲದಿರೆ ಏನು? ಮನದ
ಕದವ ತೆರೆದು ನೋಡು ನೀನು
ರವಿ, ಶಶಿ, ಆಗಸವೆಲ್ಲಾ ಮಾಯವಾಗಿ,
ನೆಲೆಸಿವೆ ಕವನದಲ್ಲಿ ಪದಗಳಾಗಿ!

4 ಜನ ಸ್ಪಂದಿಸಿರುವರು:

Anonymous said...

ಏನೆಂದು ವರ್ಣಿಸಲಿ ಈ ಯುವ ಕವಿಯು
ರಚಿಸಿಹ ಅಮೋಘವಾದ ಕವಿತೆಯ
ಸಲುವಾಗಿ?????
ಪದಗಳೇ ಹೊರಡುತಿಲ್ಲ ಎನಗೆ
ಮನಕ್ಕೆ ಮುದ ನೀಡಿತು ಎಂಬಷ್ಟೆ ಹೇಳ ಬಲ್ಲೆ ....

Sudi said...

nice one jay.. chennagi bardiddiya..

maddy said...

tumba chennagide jay...
padagala balake sookta vaagide

Lakshmi Shashidhar Chaitanya said...

hmm....barli aadaShTu bEga yaaraadru kada taTTikoMDu..chennagide baraha.