Wednesday 2 April, 2008

ಅನ್ನದಾತ ಸುಖೀ ಭವ!


ಈ ಕವನ ಇಲ್ಲಿ ಪ್ರಕಟವಾಗಿದೆ. ಬಾನುಲಿ.ಕಾಂ
ಬಾನುಲಿ ತಂಡಕ್ಕೆ ನನ್ನ ಧನ್ಯವಾದಗಳು

ಬೆಳೆಯ ಕನಸು ಕಾಣುವ ಮುನ್ನ
ಬಿತ್ತಿರ ಬೇಕು ಬೀಜವನ್ನ
ಒಳ್ಳೆಯ ಹೊಲ ಸಿಕ್ಕರೆ ಸಾಕಣ್ಣ
ರೈತರ ಬದುಕು ಸಕ್ಕರೆಯಣ್ಣ !
ಬೇಕಾದದ್ದನ್ನು ಬೆಳೆಯುವರಣ್ಣ!

ಫಲವತ್ತಾದ ಮಣ್ಣು ಸಿಗಲು,
ಫಲವದು ನಿಶ್ಚಿತ!
ವರುಣನ ವರವಿರಲು
ಫಸಲದು ಸುರಕ್ಷಿತ!

ಸಾಲ ಪಡೆದ ರೈತನ ಕಣ್ಣು ನೋಡಲು,
ತರುವುದದು ಆನಂದದ ಸಂಕೇತ!
ಬನ್ನಿ, ಅವನಿಗೊಮ್ಮೆ ಹೇಳುವ,
ಅನ್ನದಾತ ಸುಖೀ ಭವ!

1 ಜನ ಸ್ಪಂದಿಸಿರುವರು:

ಕುಕೂಊ.. said...

ನಿಮ್ಮ ಕವಿತೆ ತುಂಬಾ ಚನ್ನಾಗಿದೆ. ಒಕ್ಕಲಿಗನ ಬದುಕನ್ನು ತುಂಬಾ ಚೆನ್ನಾಗಿ ನಿಮ್ಮ ಕವಿತೆಯಲ್ಲಿ ಬಿಂಬಿಸಿದ್ದೀರ.ರೈತರಬಗ್ಗೆ ನಿಮಗಿರುವ ಕಾಳಜಿ ನಮಗೆ ಖುಷಿ ಕೊಟ್ಟಿತು.
ಈಗೇ ಸಾಗಿರಲಿ ನಿಮ್ಮ ಸಾಹಿತ್ಯ ಕೃಷಿ.
ಹಾರೈಕೆಗಳೊಂದಿಗೆ

ಕುಮಾರಸ್ವಾಮಿ

ನನ್ನ ಈ ಬ್ಲಾಗ್ ನೊಮ್ಮೆ ನೊಡಿ
http://www.gubbacchi-goodu.blogspot.com/