ಬರಲಿಲ್ಲ ಅದೃಷ್ಟ ಕದ ತಟ್ಟಿ
ಈಡೇರಲಿಲ್ಲ ಮನದಾಸೆ
ಬಾಳಿಗಾಯಿತು ಅಡ್ಡ ಪಟ್ಟಿ.
ಯಾವ ಮಾಯದಾಟ ತಿಳಿದಿದೆಯೋ ದೇವರಿಗೆ
ದಾಳವಾಗಿ ಅವನು,
ಕಾಯಿಯಾಗಿ ನಾನು
ಕೂಡಿ ಆಡುತಿರುವೆವು
ಜೀವನದ ಆಟ
ದಾಳದ ಗರದಂತೆ ನಡೆಯುವುದು ನಿರ್ಜೀವ ಕಾಯಿ
ದಾಳವೇ ನಿರ್ಧರಿಸುವುದು ಅದರ ಸ್ಥಿತಿ
ಕಾಯಿಗಿಲ್ಲ ಅನುಮತಿ.
ಹಣ್ಣಾಗುವ ಕಾಲದಲ್ಲಿ ಬೀಳದು ಬೇಕಾದ ಗರ,
ಬರುವುದು ಹಿಂದೆ ಬೇರೊಂದು ಕಾಯಿ
ಆಗುವುದು ಆಟದಲ್ಲಿ ಅಪಸ್ವರ
ಪುನಃ ಪ್ರಾರಂಭಿಸಬೇಕು ಆಟ ಮೊದಲಿನಿಂದ
ಕಾಯಿಯನ್ನು ಹಣ್ಣುಮಾಡುವ ಆಸೆಯಿಂದ
ಬಂದರೆ ಅದೃಷ್ಟ ಕದ ತಟ್ಟಿ
ಕಾಯಿಯಾಗುವುದು ಹಣ್ಣು
ಆ ದಿನ ಬರಲೆಂದು
ಕಾದಿರುವ ಕಾಯಿ ನಾನು
ದಾಳದ ಗರ ನನ್ನ ಪರವಾಗಲಿ
ಜಯವು ನನಗೆ ಸಿಗಲಿ
2 ಜನ ಸ್ಪಂದಿಸಿರುವರು:
ನಿಮ್ಮ ಹೆಸರಲ್ಲೇ ಜಯ ಇರುವಾಗ ದುರದೃಷ್ಟ ಏನು ಬಂತು ?
ತುಂಬಾ ಅರ್ಥಪೂರ್ಣವಾಗಿದೆ !
ದಾಳದ ಗರದಂತೆ ನಡೆಯುವುದು ನಿರ್ಜೀವ ಕಾಯಿ
ದಾಳವೇ ನಿರ್ಧರಿಸುವುದು ಅದರ ಸ್ಥಿತಿ
ಕಾಯಿಗಿಲ್ಲ ಅನುಮತಿ
ನುಡಿಸಲು ನೀನು ನುಡಿವೆನು ನಾನು
ನಾನೊಂದು ಬೊಂಬೆಯು, ನೀ ಸೂತ್ರಧಾರಿ..
ಈ ಹಾಡಿನ ಸಾಲನ್ನು ನೆನಪಿಸುವಂತಿದೆ. ಬಲು ಚೆನ್ನಾಗಿದೆ ಕವನ.
Post a Comment