Wednesday 12 December, 2007

ನಾಲ್ಕು ಕಣ್ಣುಗಳು

ನನಗೀಗ ನಾಲ್ಕು ಕಣ್ಣುಗಳು !!!. ಹೀಗೆ ಅಂದಾಗಲೆ ನಿಮ್ಗೆ ಗೊತ್ತಾಗಿರಬೇಕು ನಾನು ಸೋಡಾ ಬುಡ್ಡಿ ಅಂತ ಅಲ್ವ?
ಈಗ ಕೆಲವು ತಿಂಗಳ ಹಿಂದೆ Doctor ನನಗೆ aunty ಒಬ್ಬರನ್ನು ಜೊತೆಗೆ ಕೊಟ್ಟಿದ್ದಾರೆ. ಅದೆ aunty(anti)glare glasses.

ನಾನು ಹುಟ್ಟೋವಾಗ ದೇವರಿಂದ ಪಡೆದದ್ದು ಎರಡು ಕಣ್ಣುಗಳು. ಈಗ ವೈದ್ಯರಿಂದ ಪಡೆದದ್ದು ಮತ್ತೆರಡು ಕಣ್ಣುಗಳು.
ದೇವರಿಂದ ಪಡೆದ ಅಂಗಗಳು, work ಆಗದೆ ಇದ್ದಾಗ ಅಥವ ಅದಕ್ಕೆ updates ಬೇಕಾದಾಗ ನಾವು ವೈದ್ಯರ ಹತ್ತಿರ ಹೋಗಬೇಕು. ಅವರು ಅದಕ್ಕೆ ಸೂಕ್ತವಾದ update ಮಾಡಿ ಪುನಃ ಹಿಂದಿನ ಸ್ಥಿತಿಗೆ ತರುವ ಪ್ರಯತ್ನ ಮಾಡುತ್ತಾರೆ. ಈ ಕೆಲ್ಸಕ್ಕೆ ಅಲ್ವೇ "ವೈದ್ಯೋ ನಾರಾಯಣೋ ಹರಿಃ"ಅನ್ನೋದು.

ದೇವರು ತುಂಬಾ ಕಿಲಾಡಿ. ನಮ್ಮ body partsಗಳಿಗೆಲ್ಲಾ future enhancements ಅಥ್ವಾ updates ಎಲ್ಲಾ ಬೇಕು ಅಂತ ಮುಂಚೆನೆ ಗೊತ್ತಿತ್ತು ಅನ್ಸುತ್ತೆ.., ಅದಕ್ಕೆ ನೋಡಿ ಎಂಥ ಕೆಲಸ ಮಾಡಿದಾನೆ. ನಮ್ಮ ಎರಡು ಕಣ್ಣಿನ ಪಕ್ಕದಲ್ಲಿ ಕಿವಿಗಳನ್ನು ಕೊಟ್ತಿದ್ದಾನೆ. ಆ ಕಿವಿಯ ಮೇಲ್ಭಾಗವನ್ನು ಮುಖಕ್ಕೆ ಅಂಟಿಸದೇ ಬಿಟ್ಟಿದ್ದಾನೆ (ಕೆಲವರ ಕಿವಿಯ ಕೆಳಭಾಗ ಅಂಟಿಕೊಂಡಿರೋದು ನಾನು ಗಮನಿಸಿದ್ದೀನಿ. ನಿಮ್ಮ ಕಿವಿಯ ಕೆಳಭಾಗ ಏನಾಗಿದೆ..??). ಏಕೆಂದರೆ.. ಮತ್ತೆರಡು ಕಣ್ಣುಗಳು ಇಡಲು ಅನುಕೂಲವಾಗಲಿ ಅಂತ.. ಹೌದಲ್ವಾ??

ನಮ್ಮ ಸುತ್ತ ಮುತ್ತ ಪ್ರತಿದಿನಿ ಕನ್ನಡಕ ಹಾಕೋರನ್ನು ನೋಡ್ತೀವಿ, ಅದೇ ರೀತಿ ಕಿವಿ ಕೇಳಿಸದೆ machine ಹಾಕಿಕೊಂಡಿರೋರು ಇರುತ್ತಾರೆ, ಇನ್ನು ಅನೇಕ ರೀತಿಯಾದ ಅಂಗವಿಕಲ ಜನರು ಇರುತ್ತಾರೆ. ಅಂಥಾ ಜನರನ್ನು ಸೋಡು, ಕುರುಡ (ಒಮ್ಮೊಮೆ ಕುಳ್ಡ ಅಂತಾರೆ), ಅಥವ, ಕಿವುಡ, ..ಹೀಗೆ ಅನೇಕ ರೀತಿಯಾಗಿ ಕರೆದು ಅವರಿಗೆ ಗೌರವ ಕೊಡದೇ ಅವಮಾನ ಮಾಡುತ್ತಾರೆ. ಅವರ ಮನಸ್ಸಿನ ನೋವು ಗೊತ್ತಾಗ ಬೇಕಾದರೆ ಆ ಸ್ಥಿತಿಯಲ್ಲಿ ನಿಮ್ಮನ್ನು ನೀವು ಕಲ್ಪನೆ ಮಾಡಿಕೊಳ್ಳಿ.

ಈ ಲೇಖನದಿಂದ ಏನು ಹೇಳೋಕೆ ಬಯಸುತ್ತೇನೆ ಅಂದರೆ, ಯಾರೆ ಆಗಲಿ ಅವರಿಗೆ ಗೌರವ ಕೊಡುವ ಕಾರ್ಯ ನಾವು ಮಾಡಬೇಕು.

0 ಜನ ಸ್ಪಂದಿಸಿರುವರು: