Saturday 31 March 2012

ಪಂಜರದಿಂದ ಪ್ರಪಂಚಕ್ಕೆ!

ಕುಳಿತಿದ್ದೆವು ನಾವು, ತಿಳಿಯದೆ ಅನ್ಯ ಪ್ರಪಂಚ
ಸಾಕಿದ್ದರು ನಮ್ಮ, ತೋರದೆ ಕರುಣೆ ಕೊಂಚ

ಕೋಮಲವಾದ ಕರಗಳಲ್ಲಿ ಸೇರಿದಾಗಲೂ ನಾವು
ತಿಳಿದಿದ್ದೆವೂ ಇನ್ನು ಮುಂದೂ ನಮಗೆ ಬೇವು

ಸಹೃದಯದ ಪೋರಿಗೆ ತಿಳಿಯಿತಾದರೂ ಹೇಗೆ
ಈ ಪ್ರಣಯ ಹಕ್ಕಿಗಳ ಪ್ರತಿದಿನದ ಬೇಗೆ?

ಉಡುಗೊರೆಯಾಗಿ ಕೊಡುತ್ತಾ ನಮ್ಮನ್ನು,
ಬಿಡುಗಡೆ ಮಾಡಿಸಿದಳು... ಪಂಜರದಿಂದ ಪ್ರಪಂಚಕ್ಕೆ!

1 ಜನ ಸ್ಪಂದಿಸಿರುವರು:

sunaath said...

ಪಂಜರದಿಂದ ಪ್ರಪಂಚಕ್ಕೆ ಬಂದ ನಿಮಗೆ ಅಭಿನಂದನೆಗಳು!