Saturday 20 July 2013

ನಿನ್ನೊಳಗಿರಲು ನಾ ಯಾರೇ...?

ನೀರೊಳಗಿರಲು ನಾ ಮೀನೇ?
ಚಿಪ್ಪೊಳಗಿರಲು ನಾ ಮುತ್ತೇ?
ಗೂಡೊಳಗಿರಲು ನಾ ಜೇನೇ ?
ನಿನ್ನೊಳಗಿರಲು ನಾ ಯಾರೇ?

ಹೂವೊಳಗಿರಲು ನಾ ಕಂಪೇ?
ಹಣ್ಣೊಳಗಿರಲು ನಾ ರುಚಿಯೇ?
ಅದಿರೊಳಗಿರಲು ನಾ ಹೊನ್ನೇ?
ನಿನ್ನೊಳಗಿರಲು ನಾ ಯಾರೇ?

ಮುಗಿಲಲಿರಲು ನಾ ರವಿಯೇ?
ಜಯದೊಳಿರಲು ನಾ ನಗುವೇ?
ಭಂಡಾರದೊಳಿರಲು ನಾ ಸಿರಿಯೇ?
ನಿನ್ನೊಳಗಿರಲು ನಾ ಯಾರೇ?

2 ಜನ ಸ್ಪಂದಿಸಿರುವರು:

sunaath said...

ಜಯಶಂಕರರೆ,
ಇಷ್ಟು ದಿನ ಎಲ್ಲಿ ಗುಪ್ತರಾಗಿದ್ದಿರಿ? ಇರಲಿ, ಈಗ ಸುಂದರವಾದ ಕವನದೊಡನೆ ಪ್ರಕಟವಾಗಿದ್ದೀರಿ ಎನ್ನುವುದೇ ಒಂದು ಸಂತಸ. ಬರೆಯುತ್ತಾ ಇರಿ.

ತೇಜಸ್ವಿನಿ ಹೆಗಡೆ said...

ಐಶ್ವರ್ಯದೊಳಗಿರಲು ನಾ "ಶ್ರೀ" ಯೇ? ಎಂದು ಬರೆದಿದ್ದರೆ ಸರಿಯಾಗುತ್ತಿತ್ತು ನೋಡಿ :) ಚೆನ್ನಾಗಿದೆ ಕವಿತೆ...