ಒಲವಿನ ಉಡುಗೊರೆ ಕೊಡಲೇನು,
ರೆಡ್ ಫಾಂಟ್ ದಿ ಬರೆದೆನು ಇದ ನಾನು.....
ಬತ್ತಿದ ನನ್ನ ಮನವೆಂಬ ಹೊಲದಲಿ
ಒಲವಿನ ಬೀಜ ಬಿತ್ತಿದೆ.
ಅಂಜಿದ ನನ್ನ ಅಂತರಂಗವೆಂಬ ಕಡಲಲಿ
ಅನುರಾಗದ ಅಲೆ ಎಬ್ಬಿಸಿದೆ.
ಘೋರವಾದ ನನ್ನ ಬುದ್ಧಿಯೆಂಬ ಕಾರಿರುಳಲಿ
ಕರುಣೆಯ ಕಿರಣ ಸೋಕಿಸಿದೆ.
ಬರಡಾದ ನನ್ನ ಮತಿಯೆಂಬ ಮರುಭೂಮಿಯಲಿ
ಮಮತೆಯ ಮಳೆ ಸುರಿಸಿದೆ.
ನಾದವಿರದ ನನ್ನ ಚಿತ್ತವೆಂಬ ಶಿಲೆಯಲಿ
ಸಂಪ್ರೀತಿಯ ಸಂಗೀತ ನುಡಿಸಿದೆ.
Saturday, 23 February 2008
ಯಾರಿಗಾಗಿ ಇದು...?
Posted By ಅಂತರ್ವಾಣಿ at 3:04 pm 6 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ಪ್ರಣಯವಾಣಿ (Romantic )
Wednesday, 20 February 2008
ಗಡ್ಡ, ಮೀಸೆ ಜೊತೆ.....ಮಾತುಕತೆ
ರವಿವಾರದ ರವಿ, ತನ್ನ ಕಾರ್ಯ ಪ್ರಾರಂಭಿಸಿ ಬಿಟ್ಟಿದ್ದಾನೆ. ಆತನ ರಶ್ಮಿ, ನಮ್ಮ ಮನೆಯೊಳಗೆ ಪ್ರವೇಶಿಸಿದೆ. ಆದರೂ ನಾನಿನ್ನೂ ಹಾಸಿಗೆಯಿಂದ ಎದ್ದಿಲ್ಲ. ಅಮ್ಮ, ಕೈಯಲ್ಲಿ ಒಂದು ಲೋಟ ಬಿಸಿ ಬಿಸಿ ಕಾಫಿ ಹಿಡಿದು, ನನ್ನ ಕೋಣೆಗೆ ಪ್ರವೇಶಿಸಿದ್ದಾರೆ. " ಜಯು ! ಎದ್ದೇಳೋ. ಕಾಫಿ ಆರೋಗುತ್ತೆ". ನನ್ನಿಂದ ಏನು ಉತ್ತರ ಸಿಗೋದಿಲ್ಲ. ಇನ್ನೊಮ್ಮೆ ಕೂಗುತ್ತಾರೆ.."ಶಂಕರಾ..! ಬೇಗ ಏಳೋ. ರಾತ್ರಿ ೧೨ ಘಂಟೆಗೋ, ೧ ಘಂಟೆಗೋ ಮಲಗಿರುತ್ತೀಯ. ಈಗ ಎಚ್ಚರ ಆಗಲ್ಲ. ಬೇಗ ಏಳು. ನೋಡು ಕಾಫಿ ತಂದೀದ್ದೀನಿ". ಆಗಲೂ ಏನು ಉತ್ತರ ಸಿಗಲ್ಲ. ಆಗ ಹಾಲ್ ನಿಂದ್ ಅಪ್ಪನ ಧ್ವನಿ, "ಮಗೂ! ಎದ್ದೇಳು. ಪೇಪರ್ನಲ್ಲಿ ನೋಡು, ನಿನ್ ವಿಷ್ಣು ಫೊಟೋ ಬಂದಿದೆ". ಅತ್ತಕಡೆ ಟೇಪ್ರೆಕಾರ್ಡರ್ ಯಾವುದಾದರು ಒಂದು ಭಕ್ತಿಗೀತೆ ಹಾಡ್ತಾಯಿರುತ್ತೆ. ಆ ಭಕ್ತಿಗೀತೆಯನ್ನು ಮನಸಲ್ಲೇ ಹಾಡ್ತ ಇರ್ತೀನಿ, ಹಾಸಿಗೆ ಮೇಲೆ ಉರುಳಾಡ್ತಾ ಇರ್ತೀನಿ.. .. ಆದ್ರೆ.. ಈ ಲೋಕದಲ್ಲಿ ಇರೋದಿಲ್ಲ. ಅಮ್ಮ ಈಗ, "ಮಗೂ! ಈಗ ಏಳ್ತೀಯೋ ಇಲ್ವೊ?".. ತಕ್ಷಣ ಎದ್ದು, ದೇವರ ಫೊಟೋ ಮೊದಲು ನೋಡದೇ.. ಅಮ್ಮನ ಮುಖ ನೋಡುತ್ತೀನಿ. ಆಮೇಲೆ ಮುಖ ತೊಳೆದು ಬಂದು, ಉದಯವಾಣಿಯಲ್ಲಿ ಬರುವ ಚಲನ ಚಿತ್ರ ಮಾಹಿತಿಯ ಪುಟ ತೆಗೆದು, ಕಾಫಿ ಕುಡಿಯುತ್ತಾ ಓದುತ್ತೀನಿ. ಕಾಫಿ ಕುಡಿದ ಮೇಲೆ, ಮೈನ್ ಶೀಟ್ ನೋಡುತ್ತೀನಿ. ಆಮೇಲೆ ವಿಜಯ ಕರ್ನಾಟಕದ ಹಾಳೆಗಳನ್ನು ತಿರುವು ಮುರುವು ಮಾಡುತ್ತೇನೆ. ಅಷ್ಟು ಹೊತ್ತಿಗೆ ಅಮ್ಮ, ಕೈಯಲ್ಲಿ ಹರಳೆಣ್ಣೆಯನ್ನು ತಂದು, ತಲೆಗೆ ಹಚ್ಚಿ ಬಿಡುತ್ತಾರೆ. ಆಮೇಲೆ ಅಪ್ಪ ಹೇಳ್ತಾರೆ, " ನನ್ನ ಶೇವಿಂಗ್ ಆಯ್ತು, ನೀನ್ ಹೋಗಿ ಮಾಡ್ಕೊ". ಆಗ ನನ್ನ ಗಡ್ಡದ ಮೇಲೆ ಕೈ ಇಟ್ಕೊಂಡು, "ಎನಪ್ಪಾ! ಹೋದವಾರವಷ್ಟೇ ಮಾಡ್ಕೊಂಡಿದ್ದೆ. ಈ ವಾರಾನೂ ಮಾಡ್ಕೊಬೇಕಾ"? ಅಪ್ಪನಿಂದ ಹಿತನುಡಿಗಳು ಕೇಳಿ ಬರುತ್ತೆ. ಆ ಕಡೆಯಿಂದ ಅಮ್ಮನೂ ಶುರುಹಚ್ಚಿಕೊಳ್ತಾರೆ. ಆಗ ಅಮ್ಮನ ಸಮಾಧಾನಕ್ಕೆ.." ಅಮ್ಮ, ಇವತ್ತು ಅಮಾವಾಸ್ಯೆ .. ಶೇವಿಂಗ್ ಮಾಡ್ಕೊಬಾರದು". ಅಮ್ಮ ಹೇಳ್ತಾರೆ, "ತುಂಬಾ ಹಿಂದೇನೆ ಅಮಾವಾಸ್ಯೆ ಕಳೆದೋಗಿದೆ ". ತಕ್ಷಣ, "ಸರಿ ಮಾಡ್ಕೋತೀನಿ" ಎಂದು ಹೇಳಿ, ಹಾಗೂ ಹೀಗೂ ಕಷ್ಟ ಪಟ್ಟು ಹೋಗ್ತೀನಿ ಶೇವಿಂಗ್ ಮಾಡೋಕೆ. ಕೈಯಲ್ಲಿ ರೇಜ಼ರ್ ಹಿಡಿಡು.. ಕೇಳ್ತೀನಿ,
"ಮುಖದ ಮೇಲಿನ ಗಡ್ಡ, ಮೀಸೆ
ಹೇಳಿ ನಿಮ್ಮ ಕೊನೆಯ ಆಸೆ".
ಆಗ ಅವು ಹೇಳ್ತಾವೆ,
"ಅಣ್ಣಾ, ಒಂದು ವಾರದಿಂದ ಒಟ್ಟಿಗೆ ಇದ್ದೇವೆ. ಈಗ ನಿನ್ನ ಬಿಟ್ಟು ಹೋಗೋಕೆ ಮನಸ್ಸಾಗ್ತಾಯಿಲ್ಲ. ನಾವು ಇಲ್ಲೇ ಇರ್ತೀವಿ."
"ನೀವಿಲ್ಲಿ ಇರೋಕೆ ಆಗಲ್ಲ.. ಅಪ್ಪ, ಅಮ್ಮ ನನ್ ಸುಮ್ನೆ ಬಿಡೋದಿಲ್ಲ".
ಅವರಲ್ಲಿ ತುಂಬಾ ಚುರುಕಾದ ಮೀಸೆ ಹೇಳ್ತಾನೆ, "ಒಂದ ಸೊಗಸಾದ ಹಾಡಿದೆ ನಿನಗೆ ಗೊತ್ತಾ ?"
"ಯಾವುದು?"
"ಯುವಕನ ಅಂದದ ಮೊಗಕೆ
ಮೀಸೆ ಭೂಷಣ.
ನಿನ್ನೀ ಅಂದದ (?) ಮೊಗಕೆ
ನಾನೇ ಭೂಷಣ".
"ಹು ಕಣೋ.. ನಾನು ಇದನ್ನು ಓದಿದ್ದೆ ಆದರೆ ನೀನು ಹಾಡು ಕಟ್ಟಿ ಹೇಳಿದ್ದೀಯ ಅಷ್ಟೆ. ಸರಿ. ನಿನ್ನ ಸುಮ್ನೆ ಬಿಟ್ಟುಬಿಡುತ್ತೀನಿ. ಲೊ! ದಡ್ಡ.... ನನ್ ಗಡ್ಡ, ನಿನ್ನ ತೆಗೆದುಬಿಡುತ್ತೀನಿ ಕಣೋ".
" ಅಣ್ಣಾ, ಆ ಬ್ಲೇಡ್ ನನ್ಗೆ ಚುಚ್ಚಿದರೆ, ಗಾಯ ಆಗೋದು ನನಗಲ್ಲ, ನಿನಗೆ! ರಕ್ತ ಬರೋದು ನನ್ಗಲ್ಲ ನಿನ್ಗೆ!..ಅದಕ್ಕೆ ನನ್ನೂ ಸುಮ್ನೆ ಬಿಟ್ಟಿ ಬಿಡೋ."
"ಲೋ! ಒಂದು ವಾರ ಸುಮ್ನೆ ಬಿಟ್ಟಿದ್ನಲ್ಲಾ, ಅದಕ್ಕೆ ಸಂತಸ ಪಡು. ಏನೋ ದಿನಾ ಬೆಳಿಗ್ಗೆ ಎದ್ದು ಆಫೀಸಿಗೆ ಹೊಗೋದೆ ಕಷ್ಟ.. ಸಮಯ ಇರೋದಿಲ್ಲ ಅಂತಾನೆ ತಾನೆ ಒಂದು ದಿನ ನಿಮಗೆ ಅಂತ ಮೀಸಲು ಇಟ್ಟಿದ್ದೀನಿ. ಜಾಸ್ತಿ ಹಠ ಮಾಡಬೇಡ. ಸುಮ್ನೆ ಇರು."
"ಅಣ್ಣಾ ! ಈಗ ತೆಗಿತ್ತಾಯಿದ್ದೀಯ, ಸರಿ ತೆಗಿ.. ಆದ್ರೆ ಒಂದು ವಿಷಯ ಜ್ಞಾಪಕದಲ್ಲಿ ಇಟ್ಕೋ, ನಾನು ಮತ್ತೆ ಮತ್ತೆ ಹುಟ್ಟಿ ಬರ್ತೀನಿ...".
"ಬಾರೋ ಪರ್ವಾಗಿಲ್ಲ. ಮತ್ತೆ ತೆಗೆದು ಹಾಕ್ತೀನಿ. ನೀನು ನನ್ ಜೊತೆ ಇದ್ದರೆ ಅಪ್ಪ, ಅಮ್ಮ ಸಖತ್ತಾಗಿ ಬಯುತ್ತಾಯಿರ್ತಾರೆ. ನೀನು ಇರ ಬೇಡ. ದಟ್ಸ್ ಬೆಟರ್.."
ಇಷ್ಟು ಸಂಭಾಷಣೆ ಆದ್ಮೇಲೆ, ಕೆಲ ಸಮಯದ ಬಳಿಕ, ಗಡ್ಡ, ಪಾಪ ಹೊರಟು ಹೋಗುತ್ತೆ. ಮೀಸೆ ಅಂತು ಕಿಲ ಕಿಲ ಅಂತ ನಗುತ್ತಾ ಇರುತ್ತೆ. ಆದ್ರೆ ಅದಕ್ಕೂ ಸ್ವಲ್ಪ ಕತ್ತರಿ ಪ್ರಯೋಗ ಮಾಡ್ತೀನಿ.. ಆದರು ಬೇಜಾರಾಗಲ್ಲ ಅದಕ್ಕೆ.
ಅಬ್ಬಾ!!! ಮುಗಿತಪ್ಪ ಈ ಕಷ್ಟ. ಇನ್ನು ಒಂದು ವಾರದ ಮಟ್ಟಿಗೆ ಏನೂ ತಲೆ ನೋವು ಇಲ್ಲ.. !!
Posted By ಅಂತರ್ವಾಣಿ at 10:31 pm 5 ಜನ ಸ್ಪಂದಿಸಿರುವರು
Saturday, 16 February 2008
ರವಿ - ಕವಿ
ಕಾಣಲು ಬಂದಿರುವೆ
ಕವಿಯೇ ನಿನ್ನ ಹೃದಯ
ಕಾಣುತ ನಿಂತಿರುವೆ!
ತಿಳಿಗೆಂಪು ವರ್ಣಾಧರನೇ..
ನಿನ್ನ ಕಾಂತಿಗೆ ಸಾಟಿಯೇ?
ನಿನ್ನ ಕಲ್ಪನೆಗೆ ಸಾಟಿಯೇ ?
ರವಿಯ ರಥದ ಮೆರವಣಿಗೆ
ಕಣ್ಣಿಗೆ ಹಿತವು
ಕವಿಯ ಕವನ ಬರವಣಿಗೆ
ಮನಸ್ಸಿಗೆ ಹಿತವು
ಇಳೆಯನ್ನು ವರ್ಷವಿಡೀ ಪ್ರದಕ್ಷಿಸಿ
ರವಿ ಕಾಣದ್ದನ್ನು,
ಇಲ್ಲೇ ಹರ್ಷದಿಂದ ರಚಿಸಿ
ಕವಿ ಕಂಡನು
Posted By ಅಂತರ್ವಾಣಿ at 7:24 pm 4 ಜನ ಸ್ಪಂದಿಸಿರುವರು
ವಿಭಾಗ: ಕವನಗಳು, ವಿಶೇಷ ಕವನಗಳು
ಅಂತರ್ವಾಣಿ
ನನ್ನ ಬ್ಲಾಗ್ ಶೀರ್ಷಿಕೆ ಬಗ್ಗೆ ನಾಲ್ಕು ಸಾಲು.
ಹೇಳುವೆನು ನನ್ನೀ ಅಂತರ್ವಾಣಿಯ,
ಕೇಳಿದರು ಸರಿ, ಕೇಳದಿದ್ದರೂ ಸರಿ.
ಬರೆಯುವೆನು ನನ್ನೀ ಚೇತನವಿರುವವರಗೂ,
ಓದಿದರು ಸರಿ, ಓದದಿದ್ದರೂ ಸರಿ.
Posted By ಅಂತರ್ವಾಣಿ at 7:09 pm 3 ಜನ ಸ್ಪಂದಿಸಿರುವರು
ವಿಭಾಗ: ಕವನಗಳು
Sunday, 3 February 2008
ಬೆಮಿ (February Special)
ಜಯಶಂಕರ್ ! ಜಯಶಂಕರ್ !! ಜಯಶಂಕರ್ !!!
’ಪ್ರಮಾಣ ಮಾಡಿ.’
"ಸತ್ಯವನ್ನೇ ಬರೆಯುತ್ತಿದ್ದೇನೆ. ಸತ್ಯವನ್ನು ಬಿಟ್ಟು ಬೇರೇನನ್ನು ಬರೆಯುವುದಿಲ್ಲ. ನಾನು ಬರೆಯುವುದೆಲ್ಲಾ ಸತ್ಯ."
ಈ ಲೇಖನದ ಶೀರ್ಷಿಕೆ ನೋಡಿದಾಗ ವಿಚಿತ್ರ ಅನ್ನಿಸ್ತಾ? ಇದಕ್ಕೆ ಮುಂಚೆ ಎಲ್ಲಿಯಾದರು ಕೇಳಿದ್ದೀರಾ ಈ "ಬೆಮಿ" ಪದ?. ತಾಳಿ ..ನಿಘಂಟು ಹುಡುಕಿದರೂ ಏನೂ ಪ್ರಯೋಜನವಿಲ್ಲ. ನಾನೆ ಹೇಳ್ತೀನಿ ಇರಿ. ಬೆಮಿ ಗೆ, ಪ್ರಾಸ ಹುಡುಕಿದಾಗ ಸಿಗೋದೇ "ಪ್ರೇಮಿ". ನಾನು ಯಾವ ವಿಷಯದ ಬಗ್ಗೆ ಬರೀತಾಯಿದ್ದೀನಿ ಅಂತ ತಿಳೀತಾ ನಿಮಗೆ?... ಸರಿ, ತುಂಬಾ ಸಂತೋಷ .
ಅಂತು ಇಂತು February ಮಾಸ ಬಂದೇ ಬಿಟ್ಟಿತು. ಈ ತಿಂಗಳಲ್ಲಿ, ಅನೇಕರ ಗಮನ ಸರಿಯಾಗಿ ಮಧ್ಯ ಭಾಗ, ಅಂದರೆ 14 ನೇ ತಾರೀಖಿನ ಕಡೆ ಹೋಗುತ್ತೆ. ಏಕೆ ಅದು ಅಂತ ನಾನು ಹೇಳಬೇಕಾಗಿಲ್ಲ. ಯಾಕೆ February ನಲ್ಲಿ 14 ಅನ್ನು ಹೊರತು ಪಡಿಸಿ ಬೇರೆ ಯಾವುದೇ ತಾರೀಖು ಇಲ್ವಾ?
ಈ ಮಾಸ ನನ್ನ ಜೀವನವನ್ನು ಬದಲಿಸಿತು. ಸರಿಯಾದ ದಿನಾಂಕ ನೆನಪಿಲ್ಲ....ಏಕೆಂದರೆ ಅದು 14 ಅಂತು ಆಗಿರ್ಲಿಲ್ಲ! ಇನ್ನು ನನ್ನ ಕಥೆಯನ್ನು, Mega Serial ಥರ ಎಳೆಯೋದಿಲ್ಲ. ಸರಿ ಈಗ Flashbackಗೆ ಹೋಗೋಣಾ....?
ನಾನು ಈಗ ವಿಷ್ಣುವರ್ಧನ್ ಸ್ಟೈಲ್ ನಲ್ಲಿ --"ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ" ಅಂತ ಹಾಡಿಕೊಂಡು ಪ್ರಾರಂಭ ಮಾಡ್ತಾಯಿದ್ದೀನಿ. ನಿಮ್ಮ ಮುಂದೆ ಈಗ ಒಂದು ಪ್ರಶ್ನೆ ಇಡುತ್ತೀನಿ. ನಾನು ಕೊನೆಯಲ್ಲಿ ಏನು ಹಾಡ್ತೀನಿ ಅಂತ ಈಗಲೇ ಊಹೆ ಮಾಡಿ ನೋಡೋಣ..? ನಿಮ್ಮ ಉತ್ತರ ಸರಿಯಾಗಿದ್ದರೆ ನಿಮಗೊಂದು ಬಹುಮಾನ ನನ್ನಿಂದ!
ಸುಮಾರು ಎರಡು ವರ್ಷದ ಹಿಂದೆ,.... 2006ನಲ್ಲಿ ನಡೆದ ಸತ್ಯ ಘಟನೆ. ಆರಾಮಾಗಿ ನನ್ನ ಕೆಲ್ಸ ಮಾಡ್ಕೊಂಡು ಇದ್ದೆ. ಏಕಾದ್ರು ಬಂದಳೋ ಅವಳು... ಯಾರು ಅಂದರೆ ನನ್ನ ಸಹೋದ್ಯೋಗಿ. ಏನ್ಮಾಡಿದ್ಲು ಅಂತ ಕೇಳ್ತೀರಾ?... ಹೇಳ್ತೀನಿ ಇರಿ. ಏನಂದರೆ ಅವಳು ನನ್ನ Orkut ಗೆ ಕರೆತಂದಳು. ನಾನು orkutಗೆ ಬರ್ತಾಯಿರಲಿಲ್ಲ. ಆಗ ಅವಳು, ’ಬಾ.. ಚೆನ್ನಾಗಿರುತ್ತೆ... ನಿನ್ನ ಎಲ್ಲಾ ಹಳೇ ಸ್ನೇಹಿತರು ಸಿಗುವರು. ಹೊಸಬರ ಪರಿಚಯವಾಗುವುದು’ ಎಂದಳು. ಸರಿ ಏನಿರಬಹುದು ಅದರಲ್ಲಿ ಅಂತ ಅವಳ profile ಇಂದ ನೋಡಿದೆ. ಅದನ್ನು ನೋಡಿ ನಾನು ಹೇಳಿದ ಮೊದಲ ಮಾತು "ಇದು Matrimonial Community ಥರಯಿದೆ. ನನಗೆ ಬೇಡಮ್ಮ ". ನಂತರ ಅನೇಕ communities ಗಳು ಇದ್ದವು. ಅಲ್ಲಿ post ಆಗುತ್ತಿದ್ದ ವಿಷಯಗಳು ಹಿಡಿಸಿದವು. ತಕ್ಷಣ..’ಆಯ್ತಮ್ಮ... ನನ್ಗೆ invitation ಕಳ್ಸು’ ಅಂದೆ. ಅಲ್ಲಿ ನಾನು ಸದಸ್ಯನಾದೆ. ಇಲ್ಲಿಗೆ ಬಂದ ಮೇಲೆ ನನಗೆ ಜ್ಞಾಪಕ ಆಗಿದ್ದು, "ಆಗೋದೆಲ್ಲಾ ಒಳ್ಳೇದಕ್ಕೆ "ಅನ್ನುವ ದಾಸರ ಪದ. ತಕ್ಷಣ ನನ್ನ ಜೊತೆ ಹೆಚ್ಚಾಗಿ ಬೆರೆಯುತಿದ್ದ ಮಿತ್ರರಿಗೂ ಹೇಳಿದೆ. ಅವರುಗಳು ಸೇರಿದರು. ದಿನದಿಂದ ದಿನಕ್ಕೆ ಸ್ನೇಹಿತರ ಸಂಖ್ಯೆಯಲ್ಲಿ ಏರಿಕೆ, Communitiesಗಳ ಸಂಖ್ಯೆಯಲ್ಲೂ ವಿಪರೀತ ಏರಿಕೆ ಕಂಡಿತು. ಕನ್ನಡಿಗನಾದ ನಾನು "ಕನ್ನಡ" communityಯಲ್ಲಿ ವಿಪರೀತವಾಗಿ ತೊಡಗಿದ್ದೆ. ಅಲ್ಲಿ ಆಗಲೆ ಕೆಲವರು "ಅಂತ್ಯಾಕ್ಷರಿ", "ಉದ್ದ ದಾರ" ಇತ್ಯಾದಿ ಆಟಗಳನ್ನು ತಪ್ಪದೇ ಆಡುತ್ತಿದ್ದರು. ಅವರೊಂದಿಗೆ ನಾನು ಸೇರಿದೆ. ಅಲ್ಲಿ ಶುರುವಾದದ್ದು ಈ ಬೆಮಿ ವಿಷಯ. ಅಲ್ಲಿಂದ ಹಿಡಿದು ಇಲ್ಲಿವರೆಗೂ... ಈ ಬೆಮಿ ಬಿಡ್ತಾಯಿಲ್ಲ ನನ್ನ. ಈ ಬೆಮಿ ರಹಸ್ಯ ಏನು ಅಂದರೆ..... "ಬೆರಳಂಚಿನ ಮಿತ್ರರು". ಅನೇಕ ದಿನಗಳ ಆಟದ ಬಳಿಕ ಅವರುಗಳಿಗೆ, ಬೆಮಿ ಗಾಗಿ ಕೋರಿಕೆ ಪತ್ರ ಕಳುಹಿಸಿದೆ. ಅದು ಅಂಗೀಕಾರವಾದಾಗ ಸಂತೋಷ ಪಟ್ಟೆ. ಇದನ್ನು ಓದುತ್ತಾಯಿರೋ ನೀವು ಸಹ ನನ್ನ ಬೆಮಿ ಆಗಿರ್ಬಹುದು ಅಲ್ವಾ?
ಈ ಎರಡು ವರ್ಷದಲ್ಲಿ ನನ್ನ ಜೀವನದಲ್ಲಿ ಬಂದ ಬೆಮಿ ಬಗ್ಗೆ ಈ ಲೇಖನ. ಹಾಗೆಯೇ ನನ್ನ ಸಹಪಾಠಿಗಳಿಗೂ ಇದು ಅನ್ವಯ... ಏಕೆಂದರೆ... ಈಗ ಅವರುಗಳು ಸಹ ಬೆಮಿ ಗಳಾಗಿದ್ದರೆ.
This is dedicated to all of you.
ಆ "ಕನ್ನಡಿಗರು" ನನ್ನ ಬೆಮಿ ಆದ ನಂತರ ಕೆಲವು ದಿನ ನಮ್ಮ ಮೊದಲು ಸಂಭಾಷಣೆಗಳು ಹೀಗೆ ಪ್ರಾರಂಭ ಆದ್ವು.
ನಾನು: namaskara hEgideera?
b: Hi...enri samachara
ಈಗಂತು....
"ಕನ್ನಡ"ಅಲ್ಲದೆ ಬೇರೆ communities ಗಳಿಂದಾನೂ ಕೂಡ ನನಗೆ ಬೆಮಿ ಸಿಕ್ಕರು. ನನ್ ಗುರು Dr. ವಿಷ್ಣುವರ್ಧನ್ ( ಜೋರಾಗಿ ಶಿಳ್ಳೆ ಹೊಡೀತಾಯಿದ್ದೇನೆ.... ಕೇಳಿಸ್ತಾಯಿದೆಯ ?)ರಲ್ಲು ನನ್ ಆಪ್ತಮಿತ್ರ ಸಿಕ್ಕಿದ ;-) ಆತನೊಡನೆ ಮಾತು ಎಂದು ಮರೆಯಲಾರದಂತಹದ್ದು.
"ರಾಜನ್-ನಾಗೇಂದ್ರ " community (ಅವರ ಹಾಡುಗಳಿಗೆ....ತಲೆ ದೂಕಿಸ್ತಾಯಿದ್ದೀನಿ.... ಕಣ್ಸ್ತಾಯಿದ್ದೀಯ...?)
"ಕನ್ನಡ ಕವಿಗಳ"community ಇಂದಾನು ಕೆಲವರು(ಅವರ ಕವನಕ್ಕೆ Fan ಆದೆ.. ಗೊತ್ತಿದ್ದೀಯಾ?).
ಹೀಗೇ ಹೇಳುತ್ತಾ ಹೋದರೆ ಹನುಮಂತನ ಬಾಲದಂತಾಗುತ್ತೆ.
Orkut ಅಲ್ಲದೇ ಬೇರೆ Forumಗಳಲ್ಲು ನಾನು ಭಾಗವಹಿಸಿದೆ. (kannadigaru.com), ಅಲ್ಲು ಬೆಮಿ ಪರಿಚಯವಾಯಿತು. ಅಲ್ಲಿ ನನ್ನ ಕವನಗಳನ್ನು ಪೊಸ್ಟ್ ಮಾಡೊ ಅವಕಾಶ ಒದಗಿದಾಗ ಮಾಡಿದೆ. ಅಲ್ಲಿ ನನಗೆ ಹಿರಿಯ ಬೆಮಿ ಇಂದ ಅನೇಕ ಸಲಹೆಗಳು ಸಿಕ್ಕಿತು. ನನ್ನ ಕವನಕ್ಕೆ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸಿದವರು ಅನೇಕರು. ನನ್ನ ಲೇಖನ "ಕನಸು" ಓದಿ ಹೊಟ್ಟೆ ಹುಣ್ಣಾಗೋವರ್ಗು ನಕ್ಕಿರೋರು ಉಂಟು. ಈಗಲೂ ಕೆಲವರು ಅದರ ಚರ್ಚೆ ಮಾಡ್ತಾಯಿರ್ತಾರೆ.
ಕವನ, ಕಥೆ ಬರೆಯುವುದರಲ್ಲಿ ನಿಪುಣರಾಗಿದ್ದ ಬೆಮಿ, ತಮಗೆ ’ಬರೆಯೋಕೆ ಬರೋದಿಲ್ಲ’ ಅಂತ ಇದ್ದರು, ಆನಂತರ ಅನೇಕ ರೀತಿಯಾದ ಕವನಗಳನ್ನು ಬರೆದದ್ದು ಅವರಿಗೆ ಈಗ ನೆನಪಾಗುತ್ತೆ. ಕವನದ ಜೊತೆ ಅದ್ಭುತವಾಗಿ ಚಿತ್ರ ಬಿಡಿಸೊರು ಅವರು. ಚಿತ್ರ ನಟಿಯೊಬ್ಬರ ಚಿತ್ರ ಅಂತು ನನ್ favourite :-)
ನನ್ ಬೆಮಿ ಅನೇಕ ಬಾರಿ ನನ್ನು ತಪ್ಪುಗಳನ್ನು ತಿದ್ದಿದ್ದಾರೆ. "ಹೀಗೆ ಬರೆದರೆ ಅರ್ಥ ಸರಿಯಾಗೋದಿಲ್ಲ, ಅಲ್ಲಿ ಸ್ವಲ್ಪ ಸರಿ ಮಾಡಿ". ಬೇರೊಬ್ಬರು, ರಜೆಗೆಂದು ಭಾರತಕ್ಕೆ ಬಂದಾಗ, ನನ್ನೊಂದಿಗೆ ದೂರವಾಣಿಯಲ್ಲಿ ಮಾತಾಡಿದ್ದಾರೆ. ಬರೀ ಸುಖ ಅಲ್ಲದೇ ಅವರ ದುಃಖವನ್ನು ಕೂಡ ನನ್ನೊಂದಿಗೆ ಹಂಚಿಕೊಂಡ ಬೆಮಿ ಇದ್ದಾರೆ. ಪ್ರತಿ ದಿನ ಹಾಸ್ಯಮಯ ಸಂದೇಶವನ್ನು ಕಳ್ಸೋರು ಇದ್ದಾರೆ. ಇತ್ತೀಚೆಗೆ FM Rainbowನಲ್ಲಿ ಪ್ರಸಾರವಾದ ನನ್ನ ಹೆಸರನ್ನು ಕೇಳಿದ ತಕ್ಷಣ ಕರೆ ಕೊಟ್ಟ ಬೆಮಿ ಇದ್ದಾರೆ. ಪ್ರತಿದಿನ ತಪ್ಪದೇ ಗುಡ್ ಮಾರ್ನಿಂಗ್, ಗುಡ್ ಈವೆನಿಂಗ್ ಹೇಳೋರು ಇದ್ದಾರೆ.
-------------
-------------
b: Hi
-------------
-------------
-------------
-------------
-------------
-------------
-------------
-------------
-------------
n:Hi Hegiddeera?
-------------
ಸರಿ, ಈಗ Flashback ಮುಗೀತು. ಈಗ ನೀವು ಊಹೆ ಮಾಡಿರೋ ಹಾಡು ಇದೇನಾ ಅಂತ, ಪರೀಕ್ಷಿಸಿಕೊಳ್ಳಿ. ಸರಿಯಾಗಿದ್ದಲ್ಲಿ ನನಗೆ ತಿಳಿಸಿ, ಬಹುಮಾನ ನಿಮ್ಮದಾಗಿಸಿಕೊಳ್ಳಿ.
ಮಾಮರವೆಲ್ಲೋ...
ಕೋಗಿಲೆ ಎಲ್ಲೋ...
ಏನೀ ಸ್ನೇಹಾ ಸಂಬಂಧ...
ಎಲ್ಲಿಯದೋ ಈ ಅನುಬಂಧ...
ನಾನು ಹೇಳೋದನ್ನೆಲ್ಲಾ ಹೇಳಿಯಾಯಿತು, ಬರೆದದ್ದೂ ಆಯಿತು. ಈಗ ನಿಮ್ಮ chance. ನಿಮ್ಮ ಅನಿಸಿಕೆಗನ್ನು ನೀವು ತಪ್ಪದೇ ತಿಳಿಸಿ. ತಿಳಿಸ್ತೀರಾ ಅಲ್ವಾ?
Posted By ಅಂತರ್ವಾಣಿ at 6:54 pm 12 ಜನ ಸ್ಪಂದಿಸಿರುವರು
ವಿಭಾಗ: ಲೇಖನಗಳು
Friday, 1 February 2008
Traffic ಮಾಮ
ಹಾದು ಹೋಗೋ ಗಾಡಿಗೆಲ್ಲಾ
Nightಅಲ್ಲಂತೂ ನಿದ್ದೆ ಕೆಡ್ಸ್ಕೊಂಡ್
ನಶಾ ಇಳ್ಸಿರ್ತಾನೆ!
ಟ್ರಾಫಿಕ್ ರೂಲ್ಸು ಗೊತ್ತಿಲ್ಲದಿದ್ದರಂತೂ
Posted By ಅಂತರ್ವಾಣಿ at 11:10 pm 9 ಜನ ಸ್ಪಂದಿಸಿರುವರು
ವಿಭಾಗ: ಕವನಗಳು