Thursday, 6 November, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಶನಿವಾರದ ಅಲೆದಾಟ

ಹಿಂದಿನ ಭಾಗ ಇಲ್ಲಿದೆ

ಶನಿವಾರ ನಮಗೆ ಅತಿಯಾದ ಉತ್ಸಾಹವಿತ್ತು. ಏಕೆಂದರೆ ಅದು ನಮ್ಮ ಕೊನೆಯ ವಾರಾಂತ್ಯ. ಇನ್ನೆರಡು ರಾತ್ರಿಗಳನ್ನು ಕಳೆದರೆ, ನಾವು ದೆಹಲಿಗೆ ಹಾರುವ ವಿಮಾನದೊಳಗೆ ಕೂರ ಬಹುದಾಗಿತ್ತು. ಯಾರ್ಕ್ಕೊ ಹೇಳಿದಂತೆ ಕೆಲವು ತಾಣಗಳನ್ನು ನೋಡಲು ಹೋದೆವು. ಹೊಟೆಲಿನ ಪಕ್ಕದ ರಸ್ತೆಯಲ್ಲಿ ಸಾಗುತ್ತಾಯಿದ್ದೆವು. ನಾವು ರಸ್ತೆ ದಾಟುವ ಸಮಯ ಬಂದಾಗ ಆಕಡೆಯಿಂದ ಒಂದು ಕಾರ್ ಬರುತ್ತಾಯಿತ್ತು. ನಾವು ಸುಮ್ಮನೆ ನಿಂತೆವು. ಆಗ ಆ ಕಾರಿನಲ್ಲಿದ್ದವರು, ಕಾರನ್ನು ನಿಲ್ಲಿಸಿದರು. ನಾವು ಅವನು ಸಾಗಲಿ ಎಂದು ಸುಮ್ಮನಿದ್ದರೆ, ಆತ ನಮಗೆ ಕೈ ಸನ್ನೆ ಮಾಡಿ, "ನೀವು ಮೊದಲು ಹೋಗಿ" ಎಂದನು. ಇದನ್ನು ನೋಡಿ ನನಗೆ ಅತೀಯಾದ ಆಶ್ಚರ್ಯವಾಯಿತು. ಭಾರತದಲ್ಲಿ ನಮಗೆ ಕಾರಿನಲ್ಲಿ ಓಡಾಡೋರು ಯಾರು ತಾನೆ ನಿಲ್ಲಿಸಿ, "ನೀವು ಮೊದಲು ಹೋಗಿ" ಎನ್ನುತ್ತಾರೆ? ಈ ಕಾರಿನ ಅನುಭವ ಒಮ್ಮೆ ಮಾತ್ರವಾದದ್ದಲ್ಲ. ಅನೇಕ ಬಾರಿ ಹೀಗಾಗಿದೆ.


ನಾವು chocolates ಖರೀದಿಸಲು ಒಂದು ಮಾಲಿಗೆ ಹೋಗುತ್ತಾಯಿದ್ದೆವು. ಆಗ ಅಲ್ಲಿಯ ವಾತಾವರಣದಲ್ಲಿ ಮಂಜಿನ ಪ್ರಮಾಣ ಕಡಿಮೆಯಾಗಿತ್ತು. ಕೆಲವು ದಿನಗಳಲ್ಲಿ +೪ C ಗೂ ಉಷ್ಣಾಂಶವಿರುತ್ತಿತ್ತು. ಹಾಗಾಗಿ ಅಲ್ಲಲ್ಲಿ ಹಸಿರು ಕಾಣಿಸುತ್ತಾಯಿತ್ತು. ನಮ್ಮ ಎರಡನೆ ವಾರದಲ್ಲಿ ಬಿಳಿ ಮರಳಿದ್ದ ಪ್ರದೇಶದಲ್ಲೇ ಈಗ ಹುಲ್ಲು ಕಾಣಲಾರಂಭಿಸಿತು.
ನಾವು ಆ ಮಾಲಿನಲ್ಲಿ ಅನೇಕ ಸಮಯ ಕಳೆದು, chocolatesಗಳನ್ನು ಕೊಂಡೆವು. ನಂತರ ಹೆಲ್ಸಿಂಕಿಯ ಬಸ್ ನಿಲ್ದಾಣದಲ್ಲಿ ಹಾಗು ರೈಲು ನಿಲ್ದಾಣದಲ್ಲಿ ತಿರುಗಾಡಲು ಹೋಗುವಾಗ ದಾರಿಯಲ್ಲಿ ನಮ್ಮ ಕಣ್ಣಿಗೆ ಬಿದ್ದ ದೃಶ್ಯವಿದು. ಒಬ್ಬ ನಿರುದ್ಯೋಗಿ, ತನ್ನ ಗಿಟಾರನ್ನು ಹಿಡಿದು ಸಂಗೀತ ನುಡಿಸುತ್ತಾಯಿದ್ದ. ಆತನಿಗೆ ಅಲ್ಲಿಯ ಜನರು ಹಣ ಸಹಾಯ ಮಾಡುತ್ತಾಯಿದ್ದರು. ಈತನ ಹಾಗೆ ಇನ್ನು ಅದೆಷ್ಟೋ ಜನರ ಜೀವನದ ಅಲ್ಪ ಭಾರವನ್ನು ಅಲ್ಲಿಯ ಸರ್ಕಾರ ಹೊತ್ತಿದೆ. ನಿರುದ್ಯೋಗಿಗಳಿಗೆ ಸರ್ಕಾರವು ಮಾಸಿಕ ೫೦೦ Euroಗಳನ್ನು ನೀಡುತ್ತದೆ.

ನಾವು ಬಸ್ ನಿಲ್ದಾಣಕ್ಕೆ ಹೋಗಿ, ಅಲ್ಲಿ ಫೋಟೋಗಳನ್ನು ತೆಗೆದು ಕಾಲ ಕಳೆಯುತ್ತಾಯಿದ್ದೆವು. ರೈಲು ನಿಲ್ದಾಣದಲ್ಲಿ ತಿರುಗಾಡುತ್ತಾಯಿದ್ದಾಗ ನಮ್ಮ ಕಣ್ಣಿಗೆ ಬಿದ್ದದ್ದು "Namaskaar" (ಭಾರತದ ಹೊಟೆಲ್) ನಾವು ಅಲ್ಲಿಗೇನು ಭೇಟಿ ನೀಡಲಿಲ್ಲ.

ಬಸ್ ನಿಲ್ದಾಣದ ಎದುರು, Skating ಆಡುತ್ತಾಯಿದ್ದ ಮಂದಿಯನ್ನು ನೋಡಿ ಸ್ವಲ್ಪ ಹೊತ್ತು ಕಳೆದೆವು. ಅಲ್ಲಿ ಎಲ್ಲಾ ವಯಸ್ಸಿನವರಿದ್ದರು. ಕೆಲವು ಚಿಕ್ಕ ಮಕ್ಕಳು ಅತ್ಯುತ್ಸಾಹದಿಂದ ಆಡುತ್ತಾಯಿದ್ದರೆ ಇನ್ನು ಕೆಲವರು ಭಯಗೊಂಡಿದ್ದರು. ಅಲ್ಲಿಂದ ನಾವು Metro ಸಾರಿಗೆ ನಿಲ್ದಾಣಕ್ಕೆ ಸಾಗಿದೆವು. Metro complex ಒಳಗೆ ನಿಲ್ದಾಣಕ್ಕೆ ತಲುಪುವ ಮುನ್ನ ಅನೇಕ ಅಂಗಡಿಗಳು ಇದ್ದವು. ಎಲ್ಲಾ ಅಂಗಡಿಗಳ ಮಧ್ಯೆ ಇದೂ ಸಹ ಇತ್ತು.
ಇದರೊಳಗೆ ಪ್ರವೇಶಿಸಿದೆವು ಏನಾದರು ಕೊಳ್ಳ ಬಹುದೇ ಎಂದು. ಆದರೆ ನಮಗೆ ಅಲ್ಲಿದ್ದ ವಸ್ತುಗಳೆಲ್ಲಾ ದುಬಾರಿ ಎನಿಸಿತು. ಭಾರತದಲ್ಲಿ ೧೦- ೨೦ ರೂಗಳಿಗೆ ಸಿಗುವ ವಸ್ತುಗಳನ್ನೇ ಇಲ್ಲಿ ೫ Euro, ೮ Euroಗೆ ಮಾರಾಟ ಮಾಡುತ್ತಾಯಿದ್ದರು. ಅಲ್ಲಿಗೆ ಹೋಗಿ ಭಾರತದ ಮುಖಗಳನ್ನು ನೋಡಿ ಹಿಂದಿರುಗಿದೆವು. ಅಷ್ಟರಲ್ಲಿ ಹೊಟ್ಟೆ ಹಸಿದು, ಅಲ್ಲಿದ್ದ ಒಂದು ಹೊಟೆಲಿಗೆ ಹೋದೆವು. ಅಲ್ಲಿ ತಿನ್ನೋಕೆ ಏನಾದರೂ ಸರಿ, ಸಸ್ಯಾಹಾರ ಸಿಕ್ಕರೆ ಸಾಕು ಎಂದಿದ್ದೆ. ಹೋಟೆಲಿನವನಿಗೆ, ಸಸ್ಯಾಹಾರ ತಿನಿಸು ಏನಿದೆ ಎಂದು ಕೇಳಿದೆ. ಆಗ ಅಲ್ಲಿದ್ದ ಒಂದು ತಿನಿಸನ್ನು ತೋರಿಸಿದ. ಇನ್ನೊಮ್ಮೆ ಕೇಳಿದೆ ಇದು ಸಸ್ಯಾಹಾರ ತಾನೆ? ಎಂದು. ಅದಕ್ಕೆ ಅವನು ಹೌದು ಎಂದ. ಅದರ ಹೆಸರನ್ನೂ ಕೇಳದೆ, ಅದರ ದರವನ್ನೂ ನೋಡದೆ, "ಅದನ್ನೇ ಒಂದು ಪ್ಲೇಟ್ ಕೋಡು" ಎಂದೆ. ಅದರ ದರ ೮ - ೯ Euro ಇತ್ತು ಅಂತ ನನ ಜ್ಞಾಪಕ. ಅನ್ನ, ಸಾಂಬರು, ಅದರ ಮಧ್ಯದಲ್ಲಿ ಬೊಂಡವನ್ನು ಹೋಲುವಂತಿದ್ದ ಒಂದು ತಿನಿಸಿತ್ತು. ಅಲ್ಪ ಸ್ವಲ್ಪ ತಿಂದು, ಅಲ್ಲಿಂದ ಹೊರಟೆವು.

Metroವು ಭೂಮಿಗಿಂತ ಸಾಕಷ್ಟು ತೆಳ ಭಾಗದಲ್ಲಿ ಇತ್ತು. ತಲುಪಿದ ಮೇಲೆ ಎಷ್ಟು ಆಳಕ್ಕೆ ಇಳಿದೆವೆಂದರೆ:

ಅಲ್ಲಿ ಪ್ರತಿ ೨ ನಿಮಿಷಕ್ಕೆ ಒಂದು ಮೆಟ್ರೋ ರೈಲು ಬರುತ್ತಾಯಿತ್ತು. ನಿಲ್ದಾಣದಲ್ಲಿ ಸಮೂದಿಸುತ್ತಾಯಿದ್ದ ಸಮಯಕ್ಕೆ ಸರಿಯಾಗಿಯೇ ಬರುತ್ತಾಯಿತ್ತು. ಬಂದ ತಕ್ಷಣವೇ ಅದರ ಬಾಗಿಲು ತೆಗೆದು, ೧೫-೨೦ ಸೆಕೆಂಡಿನೊಳಗೆ ಶಬ್ದ ಮಾಡಿ, ಬಾಗಿಲನ್ನು ಮುಚ್ಚಿ, ಮುಂದೆ ಸಾಗುತ್ತಾಯಿತ್ತು. ಆ ಮೆಟ್ರೋದ ಚಾಲಕರ ಪೈಕಿ ಹೆಂಗಸರೂ ಇದ್ದರು.

ಮೆಟ್ರೋದಿಂದ ಹೊರ ಬಂದಾಗ, ಕೆಲವು ಪೋಲೀಸರು ಒಬ್ಬ ಕಳ್ಳನನ್ನು ಹಿಡಿಯುವ ದೃಶ್ಯ ನೋಡಿದೆವು. ಅಲ್ಲಿ ಏನಾಗುತ್ತಾಯಿದೆ ಎನ್ನುವಷ್ಟರಲ್ಲಿ ಕಳ್ಳನನ್ನು ಹಿಡಿದು ಕೊಂಡು ಹೋಗಿ ಬಿಟ್ಟರು. ನನ್ನ ಮೊಬೈಲಿಗೆ ಕೆಲಸವೇ ಸಿಗಲಿಲ್ಲ! ನಂತರ ಅಲ್ಲಿಯ ನಗರದ ಮತ್ತಷ್ಟು ಪ್ರವಾಸಿ ತಾಣದ ಬಗ್ಗೆ ಹೆಲ್ಸಿಂಕಿಯ ಟೂರ್ ಪುಸ್ತಕದಿಂದ ನೋಡಿದೆವು. ಹತ್ತಿರದಲ್ಲೆ ಪೋಸ್ಟ್ ಆಫೀಸ್ ಇತ್ತು. ಅಲ್ಲಿಗೆ ಹೋದೆವು. ಕೋಶಿಯು "ತನ್ನವರಿಗೆ" ಬೇಕೆಂದು ಕೆಲವು Stamps ಹಾಗು ಗ್ರೀಟಿಂಗ್ ಕಾರ್ಡ್ ಖರೀದಿಸಿದ. ನನಗೆ Stampಗಳಲ್ಲಿ ಆಸಕ್ತಿಯಿರಲಿಲ್ಲ. ನನಗೆ ಹೆಲ್ಸಿಂಕಿಗೆ ಬಂದ ಮೇಲಂತೂ ಪ್ರತಿ ಗಂಟೆಗೊಮ್ಮೆ ಉಷ್ಣಾಂಶ ನೋಡುವುದು ರೂಢಿಯಾಗಿತ್ತು. ಕಚೇರಿಗೆ ಬಂದೊಡನೆ, http://weather.yahoo.com ಕ್ಲಿಕ್ಕಿಸಿ, ತಕ್ಷಣದ ಉಷ್ಣಾಂಶ ತಿಳಿಯುತ್ತಾಯಿದ್ದೆ. ಹಾಗಾಗಿ ಅಲ್ಲೊಂದು ಉಷ್ಣಮಾಪಕ ಖರೀದಿಸೋಕೆ ಮುಂದಾದೆ. ಎರಡು ಬೇರೆ ಬೇರೆ ವಿನ್ಯಾಸದ ಉಷ್ಣಮಾಪಕವನ್ನು ಗಮನಿಸಿದೆ. ಎರಡರಲ್ಲೂ ಒಂದೇ ಸಮನಾದ ಉಷ್ಣಾಂಶವಿರಲಿಲ್ಲ! ಯಾವುದು ಸರಿ ಇವುಗಳಲ್ಲಿ ಅಂತ ತಿಳಿಯದೆ ಅದನ್ನು ಖರೀದಿಸುವ ಆಸೆ ಬಿಟ್ಟೆ!

ಮುಂದೆ ನಮ್ಮ ಪಟ್ಟಿಯಲ್ಲಿದ್ದದ್ದು "Kamppi". ಈ ಪ್ರದೇಶವು ಬಸ್ ನಿಲ್ದಾಣಕ್ಕೂ ನಮ್ಮ ಹೋಟೆಲಿಗೂ ಮಧ್ಯ ದಾರಿಯಲ್ಲಿ ಇದೆ. ಇಲ್ಲೂ ನಾವು ಏನನ್ನೂ ಖರೀದಿಸದೆ ಸಾಗುತ್ತಾಯಿದ್ದೆವು. ಆಗ ಅಲ್ಲಿ ಕೆಲವರು ವಿವಿಧ ರೀತಿಯ ಆಟಗಳನ್ನು ಆಡುತ್ತಾಯಿದ್ದರು. ಅದನ್ನು ನೋಡಿಕೊಂಡು ಕಾಲ ಕಳೆದೆವು. ನಾವು ಕಡೆಯ ಮಹಡಿ ಹತ್ತಿದಾಗ ಜನರು ಗುಂಪು ಅವರತ್ತ ಸಾಗುವಂತೆ ಮಾಡಿತು. ವಿಪರೀತ ಕಿರುಚಾಟವಿತ್ತು. ಆಗ ಅಲ್ಲಿ ಫ್ಯಾಶನ್ ಶೋ ನಡಿಯುತ್ತಾಯಿತ್ತು. ಅಂಗನೆಯರು ಬೆಕ್ಕಿನ ನಡಿಗೆಯಲ್ಲಿ ಬಂದು ಹೋಗುತ್ತಾಯಿದ್ದರು. ಅಲ್ಲಿದ್ದವರ ಕ್ಯಾಮರ ಹಾಗು ಮೊಬೈಲಿಗೆ ಕೆಲಸ ಹೆಚ್ಚಾಗಿತ್ತು. ಒಂದು ಅದ್ಭುತವಾದ ಫ್ಯಾಶನ್ ಶೋ ನೋಡಿದೆ. ನಂತರ ಅಲ್ಲಿ ಕುಣಿತವೂ ಇತ್ತು. ಎಲ್ಲದರ ವಿಡಿಯೋ ಮುಂದಿನ ಪೋಸ್ಟ್ ಗಳಲ್ಲಿ ಹಾಕುತ್ತೇನೆ. ಇದನ್ನು ಮುಗಿಸಿಕೊಂಡು ಹೊಟೆಲಿಗೆ ಬಂದು ನನ್ನ Packing ಶುರು ಮಾಡಿದೆ. ಆ ರಾತ್ರಿ "Terminator" ಸಿನೆಮಾ ನೋಡಿದ ನೆನೆಪು.

15 ಜನ ಸ್ಪಂದಿಸಿರುವರು:

sunaath said...

ಓಹೋ, ಅಲ್ಲೂ ಸಹ ನಮ್ಮಲ್ಲಿಯಂತೆಯೇ ಹಗಲುಗಳ್ಳರು ಇರುತ್ತಾರೆ ಅಂತಾಯಿತಲ್ಲ! ಈ ವಿಷಯದಲ್ಲಿ ಎಲ್ಲ ದೇಶಗಳೂ ಒಂದೇ?

shivu.k said...

ಈ ಮುಂದುವರಿದ ಭಾಗವನ್ನು ಓದುತ್ತಿದ್ದರೆ ನನಗೆ ಅಲ್ಲಿನ ಚಳಿ ವಾತಾವರಣದ Feel ಆಗುತ್ತಿತ್ತು. ಅಲ್ಲಿನ ಮೆಟ್ರೋ ರೈಲಿನ ಬಗ್ಗೆ ಇನ್ನಷ್ಟು ಬರೆಯಿರಿ!

ಅಂತರ್ವಾಣಿ said...

ಅಂಕಲ್,
ಕಳ್ಳರೂ ಎಲ್ಲಾ ಕಡೆ ಇದ್ದೇ ಇರುತ್ತಾರೆ. ಅಲ್ಲಿಯ ಪೋಲೀಸಿನವರು ಅವನ ಬೆನ್ನು ಮೇಲೆ ಮಾಡಿ ಮಲಗಿಸಿ ಬೇಡಿ ಹಾಕುತ್ತಿದ್ದ ದೃಶ್ಯ ನೋಡಿದೆ. ಆದರೆ ನಮ್ಮ ದೇಶದಲ್ಲಿ ಕಳ್ಳನನ್ನು ಹೇಗಿ ಹಿಡಿಯುತ್ತಾರೋ ಇನ್ನೂ ನನ್ನ ಕಣ್ಣಿಗೆ ಬಿದ್ದಿಲ್ಲ.

ಶಿವು ಅವರೆ,
ಮುಂದಿನ ಪೋಸ್ಟ್ ನಲ್ಲಿ ಅದರ ಅನುಭವ ಬರೆಯುತ್ತಾಯಿದ್ದೀನಿ.
ಹಾಗು ಅದರೊಂದಿಗೆ ಫೋಟೋ, ವೀಡಿಯೋ ನಿರೀಕ್ಷಿಸಿ...

Lakshmi Shashidhar Chaitanya said...

ahaa...nange dil chahtaa hai movie nenpaaytu nim ee post nodi. waiting for the video.

Ittigecement said...

ತುಂಬಾ ಚೆನ್ನಾಗಿ ಬರೆಯುತ್ತೀರಿ. ಮುಂದಿನ ಕಂತಿಗಾಗಿ ಎದುರು ನೋಡುತ್ತಿದ್ದೇನೆ.. ಧನ್ಯವಾದಗಳು

ತೇಜಸ್ವಿನಿ ಹೆಗಡೆ said...

ಚಿತ್ರಗಳೆಲ್ಲಾ ಚೆನ್ನಾಗಿವೆ. ಮತ್ತಷ್ಟು ವಿವರಣೆಗಳು ಹಾಗೂ ಚಿತ್ರಗಳನ್ನು ಹಾಕಿದರೆ ಚೆನ್ನ. ಅಂದಹಾಗೆ "Terminator Part-2 and Part-3" ತುಂಬಾ ಚೆನ್ನಾಗಿವೆ ನೋಡಿ :)

ಅಂತರ್ವಾಣಿ said...

ಪ್ರಕಾಶ್,
ಧನ್ಯವಾದಗಳು...

ತೇಜಸ್ವಿನಿ ಅವರೆ,
ಮುಂದಿನ ಪೋಸ್ಟ್ ಗಳಲ್ಲಿ ಆಲ್ಬಂನ್ನೇ ಹಾಕುತ್ತೀನಿ ಹಾಗು ಹೆಚ್ಚು ವಿವರಿಸಲು ಪ್ರಯತ್ನ ಮಾಡುತ್ತೇನೆ.

Shankar Prasad ಶಂಕರ ಪ್ರಸಾದ said...

ನಮಸ್ಕಾರ,
ನಿಮ್ಮ ಪ್ರವಾಸ ಕಥನ ಬರೆಯುವ ಶೈಲಿ ನನಗೆ ಇಷ್ಟ ಆಗ್ಲಿಲ್ಲಾ ಸಾರ್.
ತುಂಬಾ ಎಳೆದ ಹಾಗೆ ಅನ್ಸುತ್ತೆ. ಅಲ್ಲಿ ಕೂತೆ, ಇಲ್ಲಿ ನಿಂತೇ, ಹೀಗೆ ತಿಂದೆ, ಅದು ಕುಡಿದೆ, ಇದೆಲ್ಲ ಬೇಡಾ ಸಾರ್. ಚೊಕ್ಕವಾಗಿ ಯಾವುದನ್ನು ಹೇಳಬೇಕೋ ಅದನ್ನು ಸಂಕ್ಷಿಪ್ತವಾಗಿ ಬರೆಯಿರಿ. ನಾನು ನಿಮ್ಮ ಫಿನ್ಲ್ಯಾಂಡ್ ಪ್ರವಾಸದ ಕಥನ ಪೂರ್ಣವಾಗಿ ಓದಿದೆ. ಮೊದಲನೆ 4-5 ಭಾಗಗಳು ತುಂಬಾ ಎಳೆದಂತೆ ಭಾಸವಾಯ್ತು. ಇವತ್ತಿನ ದಿನದಲ್ಲಿ ಆಲ್ಮೋಸ್ಟ್ ಎಲ್ಲರಿಗೂ ಯುರೋಪ್, ಅಮೇರಿಕಾ ಗಳ ಪರಿಚಯ ಇರತ್ತೆ.

ಕಟ್ಟೆ ಶಂಕ್ರ

ಅಂತರ್ವಾಣಿ said...

ನಮಸ್ಕಾರ ಶಂಕ್ರರವರೆ,

ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು.

ನಿಜ. ನನಗೂ ಕೆಲವು ಕಡೆ ಎಳೆದ ಹಾಗೆ ಅನಿಸಿತು. ಬಹಳ ದೊಡ್ದದಾಗಿ ಬರೆದು ಅದನ್ನು ಕತ್ತರಿಸಿ ನಂತರವೇ ಪೋಸ್ಟ್ ಮಾಡುತ್ತಾಯಿದ್ದೀನಿ. ಚೊಕ್ಕದಾಗಿ ಬರೆಯಲು ಹೋಗಿ ನನ್ನ ಚಿಕ್ಕ ಅನುಭವಗಳನ್ನು ಮರೆತರೆ ಅದು ನನಗೇ ನಷ್ಟ! "ನಿಂತೆ, ಕೂತೆ, ತಿಂದೆ, ಕುಡಿದೆ" ಈ ಭಾಗಗಳಲ್ಲಿ ಕತ್ತರಿಸ ಬಹುದು ಅನಿಸಿತು. ಆದರೆ ಮಿಕ್ಕ ಕೆಲವು ವಿಚಾರಗಳನ್ನು ನಾನು ಬಿಡುವಹಾಗಿಲ್ಲ.
ಎಲ್ಲರಿಗೂ ಯುರೋಪ್, ಅಮೇರಿಕಾದ ಪರಿಚಯವಿರುತ್ತೆ ಅನ್ನುವ ಮಾತನ್ನು ನಾನು ಒಪ್ಪೋದಿಲ್ಲ. ಈ ಬ್ಲಾಗ್ ಲೋಕದಲ್ಲಿ ಬರೀ Software Techie ಗಳೇ ಇಲ್ಲ.

Shankar Prasad ಶಂಕರ ಪ್ರಸಾದ said...

ಸಾರ್, ನಾನು ಎಲ್ಲರಿಗೂ ಯುರೋಪ್ ಅಮೇರಿಕಾ ಗೊತ್ತಿದೆ ಅನ್ಲಿಲ್ಲ. ಆಲ್ಮೋಸ್ಟ್ ಎಲ್ಲರಿಗೂ ಗೊತ್ತಿದೆ ಅಂದಿದ್ದು. ಏನೇ ಆಗ್ಲಿ, ಅಭಿಪ್ರಾಯವನ್ನು ಸ್ವಾಗತಿಸಿದ್ದಕ್ಕೆ ಧನ್ಯವಾದಗಳು.

ಕಟ್ಟೆ ಶಂಕ್ರ

Shankar Prasad ಶಂಕರ ಪ್ರಸಾದ said...

ನಾನು ಸಾಫ್ಟವೇರ್ ಟೆಕಿ ಅಲ್ಲಾ, ನಾನೊಬ್ಬ ಮೆಕಾನಿಕಲ್ ಎಂಜಿನಿಯರ್. ಎಂಜಿನಿಯರ್ ಕೂಡಾ ಅಲ್ಲಾ, ಡಿಪ್ಲೋಮಾ ಹೋಲ್ಡರ್. :)

ಅಂತರ್ವಾಣಿ said...

ಶಂಕ್ರ ಅವರೆ,
ನಾನು ಎಲ್ಲಾ ರೀತಿಯಾದ ಅಭಿಪ್ರಾಯ ಸ್ವಾಗತಿಸುತ್ತೀನಿ :)

Harisha - ಹರೀಶ said...

>> ಅದ್ಭುತವಾದ ಫ್ಯಾಶನ್ ಶೋ ನೋಡಿದೆ

ಹೌದಾ!! ಮತ್ತೆ ಅದರ ಬಗ್ಗೆ ಬರೆದೇ ಇಲ್ಲ!! ;-)

ಅಂತರ್ವಾಣಿ said...

ಹರೀಶ್,
ಫ್ಯಾಶನ್ ಶೋ ಇಲ್ಲಿದೆ

Harisha - ಹರೀಶ said...

ನೋಡಿದೆ.. ಕೊಂಡಿ ನೀಡಿದ್ದಕ್ಕೆ ಧನ್ಯವಾದಗಳು