Wednesday 12 November, 2008

ಫಿನ್ ಲ್ಯಾಂಡಿಗೆ ಪ್ರವಾಸ (೧) - ಭಾನುವಾರದ ಬೀಟ್

ಹಿಂದಿನ ಭಾಗ

ಭಾನುವಾರ ಸುಮನ್ ಮನೆಗೆ ಹೋಗುವುದು ನಿರ್ಧಾರವಾಗಿತ್ತು. ಹಿಂದಿನ ದಿನ ಮೆಟ್ರೋ ನಿಲ್ದಾಣಕ್ಕೆ ಹೋಗಿದ್ದರಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡುವ ಆಸೆಯಾಯಿತು. ನಮ್ಮ ಹೊಟೆಲಿನಿಂದ ಬಸ್ ನಿಲ್ದಾಣಕ್ಕೆ ಹೆಚ್ಚೆಂದರೆ ೧೦ ನಿಮಿಷಗಳ ಕಾಲ್ನಡಿಗೆ. ಅದರ ಬದಲು ರೈಲಿನಲ್ಲಿ ಹೋಗೋಣವೆಂದು ನಮ್ಮ ಹೊಟೆಲಿಗೆ ಸಮೀಪದಲ್ಲಿದ್ದ ನಿಲ್ದಾಣಕ್ಕೆ (Rauhalahti) ಹೋದೆವು. ಮೊದಲಿಗೆ ಅಲ್ಲಿಯ Ticket machine ಇಂದ ಟಿಕೆಟ್ ಪಡೆದು ಸುಮಾರು ಆಳಕ್ಕೆ ಇಳಿದೆವು. ನಂತರ ನಗರ ಬಸ್ ನಿಲ್ದಾಣಕ್ಕೆ ಹೋಗುವ ರೈಲನ್ನು ಏರಿದೆವು. ಹೊರಗಿನಿಂದ ಮೆಟ್ರೋದ ಚಿತ್ರ ಇದು.
ಮೆಟ್ರೋ ರೈಲು ಅದೆಷ್ಟು ವೇಗವಾಗಿ ಚಲಿಸಿತೆಂದರೆ,

ಮೆಟ್ರೋ ರೈಲಿನ ಆಸನಗಳಲ್ಲಿ Cushion ಇರಲಿಲ್ಲ.ಈ ಚಿತ್ರದಲ್ಲಿ ಗಮನಿಸಿ ಹಸಿರು ಅಕ್ಷರದ ಫಲಕವಿದೆ. ಅದು ಮುಂಬರುವ ನಿಲ್ದಾಣವನ್ನು ಸೂಚಿಸುತ್ತದೆ.

ಅದರೊಳಗೆ ಹೆಚ್ಚಿನ ಸಮಯ ಕಳೆಯಲೇ ಇಲ್ಲ. ಅಷ್ಟರಲ್ಲಿ ನಾವು ನಗರದ ಬಸ್ ನಿಲ್ದಾಣದ ಬಳಿ ಇದ್ದ ಮೆಟ್ರೋ ನಿಲ್ದಾಣದಲ್ಲಿ ಇಳಿದೆವು. ಆನಂತರ ನಗರದ ಬಸ್ ನಿಲ್ದಾಣದಲ್ಲಿ ಸಾರಿಗೆ ಸಂಸ್ಥೆಯವರು ಅಲ್ಲಿಯ ಬಸ್ ಸಮಯ ಹಾಗು ಮಾಹಿತಿಗಳನ್ನು ಸೂಚಿಸಲು ಒಂದು computer ಇಟ್ಟಿದ್ದರು. ಅದರೊಂದಿಗೆ ಸ್ವಲ್ಪ ಹೊತ್ತು ಕಳೆದು, ನಾವು ಹತ್ತ ಬೇಕಿದ್ದ ಬಸ್ಸಿನ ಬಳಿ ಬಂದೆವು. ನಂತರ ಬಸ್ಸನ್ನು ಹತ್ತಿ ನಮ್ಮ ಬಳಿಯಿದ್ದ ಟಿಕೆಟನ್ನು ತೋರಿಸಿದೆವು. ನಂತರ ಮುಂದಿನ ಸಾಲಿನಲ್ಲೇ ಕುಳಿತು, ನಮ್ಮ ನಿಲ್ದಾಣದ ಹೆಸರನ್ನು ಹೇಳಿ, ಅದು ಬಂದೊಡನೆ ನಮಗೆ ತಿಳಿಸುವುದಾಗಿ ಕೇಳಿಕೊಂಡೆವು. ಈ ಬಸ್ ಹೋದ ದಾರಿಯಲ್ಲೇ ನಮಗೆ ಕಾಣಿಸಿದ್ದು ಹೆಲ್ಸಿಂಕಿಯ ಸೆನೆಟ್. ಸುತ್ತ ಮುತ್ತಲಿನ ಪರಿಸರವನ್ನು ವೀಕ್ಷಿಸುತ ನಮ್ಮ ನಿಲ್ದಾಣಕ್ಕೆ ತಲುಪಿದೆವು. ಅಲ್ಲಿಂದ ಸುಮನ್ ಮನೆ ಹುಡುಕುವ ಕೆಲಸ ನಮ್ಮದಾಗಿತ್ತು. ಅಲ್ಲಿ ಸಿಕ್ಕವರೊಬ್ಬರನ್ನು ನಮ್ಮ ಬಳಿಯಿದ್ದ ಚೀಟಿಯನ್ನು ತೋರಿಸಿ ವಿಳಾಸವನ್ನು ಕೇಳಿದೆವು. ಅವರಿಗೆ ಆಂಗ್ಲ ಭಾಷೆ ಬಾರದ ಕಾರಣ ತಮ್ಮ ಭಾಷೆಯಲ್ಲಿ ಏನನ್ನೂ ಹೇಳಿ ಹೊರಟು ಹೋದರು. ಈ ವಿಳಾಸ ಗೊತ್ತಿಲ್ಲ ಅಂತಲೋ ಅಥವಾ ಆಂಗ್ಲ ಭಾಷೆ ತಿಳಿಯದು ಅಂತಲೋ ಹೇಳಿರುತ್ತಾರೆ ಅಂತ ಹೇಳಬಲ್ಲೆ. ನಾವು ಸ್ವಲ್ಪ ಮುಂದೆ ಸಾಗಿದೊಡನೆ ಸುಮನ್ ವಿಳಾಸ ಸಿಕ್ಕಿತು. ಆತ ನಮ್ಮನ್ನು ಆದರದಿಂದ ಸ್ವಾಗತಿಸಿದನು. ಎಲ್ಲಾ ಉಭಯ ಕುಶಲೋಪರಿ ಮುಗಿದ ನಂತರ ನಮಗೆ ತಿನ್ನಲು ಚಿಪ್ಸನ್ನು ಹಾಗು ಕುಡಿಯಲು ಜ್ಯೂಸನ್ನು ಕೊಟ್ಟನು.

ಹಾಗೆ ಮಾತಾಡುತ್ತಾ, ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಹಸಿವು ಅದನ್ನು ಜ್ಞಾಪಿಸ ಬೇಕಾಯಿತು. ನಂತರ ಅಡುಗೆ ಮಾಡಲು ಸುಮನ್ ಹೊರಟನು. ಆಗ ನನ್ನನ್ನು ಪ್ರಶ್ನಿಸಿದ, "ನೀನು ಮಾಂಸಾಹಾರ ತಿನ್ನುತ್ತೀಯಾ ಇಲ್ವಾ?" ಎಂದು. ನಾನು ಸಸ್ಯಾಹಾರಿಯೆಂದು ಹೇಳಿದೆ. ಆಗ ಆತ ಮೊದಲು ದಾಲು ಹಾಗು ಅನ್ನವನ್ನು ತಯಾರಿಸಿದನು. ದಾಲಿಗೆ ಬೆಳ್ಳುಳ್ಳಿಯನ್ನೂ ಹಾಕಿದ್ದ. ನನಗೆ ಬೆಳ್ಳುಳ್ಳಿ ಸೇರುವುದಿಲ್ಲವೆಂದು ಆತನಿಗೆ ಗೊತ್ತಿರಲಿಲ್ಲ. ನಂತರ ಅವರಿಬ್ಬರಿಗೆ ಚಿಕನ್ನ್ ತಯಾರಿಸಿದ. ನನಗೆ ಈ ಬೆಳ್ಳುಳ್ಳಿ ದಾಲ್ ಅಷ್ಟೇನು ಇಷ್ಟವಾಗಲಿಲ್ಲ. :( ಆದರೂ ಅವನ ಮನಸ್ಸಿಗೆ ನೋವು ಮಾಡ ಬಾರದೆಂದು ಹಾಗೆ ತಿಂದೆನು. ನಮ್ಮ ಊಟವಾದ ಮೇಲೆ ಸ್ವಲ್ಪ ಹೊತ್ತು ಮಾತಾಡಿ ನಾವು ಹೊರಡಲನುವಾದೆವು. ನಂತರ ಆತ ನಮ್ಮನ್ನು ಬಸ್ ನಿಲ್ದಾಣದವರೆಗೂ ಬಿಟ್ಟನು. ನಾವು Espoo ಇಂದ ಹೆಲ್ಸಿಂಕಿಗೆ ಬಂದೆವು. ಆನಂತರ ಮತ್ತೊಮ್ಮೆ ಮೆಟ್ರೋ ಹತ್ತುವ ಆಸೆಯಾಯುತು. ಹೇಗೂ ೧ ಗಂಟೆವರೆಗೂ ಟಿಕೆಟಿನ ಅವಧಿಯಿತ್ತು. ಅಲ್ಲಿಂದ Itäkeskus shopping centreಗೆ ಹೊದೆವು. ಅಲ್ಲಿದ್ದ ಊಷ್ಣಮಾಪಕದಲ್ಲಿ ನಮ್ಮ ಕಣ್ಣಿಗೆ ಆಶ್ಚರ್ಯ ತುವಂತಹ ದೃಶ್ಯ ಕಂಡಿತು. ಉಷ್ಣಾಂಶವು +೭ C ಇತ್ತು! ಆ ದಿನ ಭಾನುವಾರವಾದ್ದರಿಂದ ಕೆಲವೇ ಅಂಗಡಿಗಳು ಮಾತ್ರ ತೆರೆದಿತ್ತು. ಅಲ್ಲಿ ಅಲೆದಾಡಿ ನಂತರ ನೇರವಾಗಿ Rauhalahtiಗೆ ಬಂದಿಳಿದೆವು. ಅಲ್ಲಿ ಸುತ್ತಾಡಿ, ನಮ್ಮ ಹೊಟೆಲಿನ ಮುಂದಿನ ಸಮುದ್ರಕ್ಕೆ ಬಂದು ಕೆಲವು ಫೋಟೋಗಳನು ತೆಗೆದೆವು.
ಊಷ್ಣಾಂಶ ಹೆಚ್ಚಿರೋದಕ್ಕೆ ಇದೇ ಸಾಕ್ಷಿ! ಇಷ್ಟೆಲ್ಲಾ ಆದ ಮೇಲೆ, ಹೊಟೆಲಿಗೆ ಬಂದ ಇನ್ನುಳಿದ ಪ್ಯಾಕಿಂಗ್ ಕೆಲಸ ಮುಗಿಸಿದೆ. ಆನಂತರ ನಮ್ಮ ರಾತ್ರಿಯ ಭೋಜನ ಮಾಡಿದೆವು. ನಾವು ತಂದಿದ್ದ MTR ಪದಾರ್ಥಗಳು, Maggi, ಸಿಹಿ, ಹಾಗು ಖಾರದ ಪದಾರ್ಥಗಳು ಅಂದಿನ ದಿನಕ್ಕೆ ಎಷ್ಟು ಬೇಕೋ ಅಷ್ಟೇ ಇತ್ತು.

ಮತ್ತಷ್ಟು ವಿಚಾರಗಳು:

ಅಲ್ಲಿ ಸತತ Snowfall ಇದ್ದಿದ್ದರಿಂದ ನಾವು ಓಡಾಡುವಾಗ ಜಾಗರೂಕರಾಗಿರ ಬೇಕಿತ್ತು. ಅಲ್ಲಿಯ ನೆಲ ತುಂಬಾ ಜಾರುವಂತಿತ್ತು. ನನ್ನ ಜಾಗರೂಕತೆಯಿಂದ ಅಲ್ಲಿ ಒಮ್ಮೆಯೂ ಜಾರಿ ಬೀಳಲಿಲ್ಲ!

ಪ್ರತಿದಿನ ಬೆಳಿಗ್ಗೆ ಅಲ್ಲಿ ಬಿದ್ದಿದ್ದ ಮಂಜನ್ನು ಎತ್ತುವ ಕೆಲಸ ನಡೆಯುತ್ತಲೇ ಇತ್ತು. ಅದಕ್ಕಾಗಿ ಕೆಲವರನ್ನು ಸರ್ಕಾರ ನೇಮಿಸಿರುತ್ತಾರೆ.

ನಾವು ಹೊಟೆಲಿನಲ್ಲಿ ಬಹಳ ದಿನಗಳಿಂದ ಇದ್ದಿದ್ದರಿಂದ ಅಲ್ಲಿಯ Waiters ಗಳಿಗೆ ನಮ್ಮ ಮುಖ ಪರಿಚಯವಿತ್ತು. ಆದ್ದರಿಂದ ಒಂದು ದಿನ ನಮ್ಮ ಬಳಿ ಬಂದು"ನೀವು ಬಹಳ ದಿನಗಳಿಂದ ಇಲ್ಲಿದ್ದೀರ. ನಿಮ್ಮಿಂದ ಏನಾದರು ಸಲಹೆ ಸೂಚನೆ ಪಡೆಯ ಬೇಕೆಂಬ ಹೆಬ್ಬಯಕೆ ನಮ್ಮದಾಗಿದೆ" ಅಂತ ಹೇಳಿ, Feedback Form ಕೊಟ್ಟು, ಅದನ್ನು ಭರ್ತಿ ಮಾಡಿಯೆಂದು ಹೇಳಿದಳು. ನಾವು ಅದನ್ನು ಭರ್ತಿ ಮಾಡಿದೆವು. ಅವರ ಪೈಕಿ ಕೆಲವರು ವೃದ್ಧೆಯರೂ ಇದ್ದರು. ಕೆಲವರು ಹದಿ ಹರೆಯರೂ ಇದ್ದರು.

ಇದು ಮುಖ್ಯವಾದ ಘಟನೆ. ಪ್ರತಿಸಲವೂ ನನ್ನ ರೂಮಿನ ಬಾಗಿಲು ತೆಗೆಯುವಾಗ ತಪ್ಪದೆ Shock ಹೊಡೆಸಿಕೊಳ್ಳುತ್ತಾಯಿದ್ದೆ. ಅಪರೂಪಕ್ಕೆ Shock ಹೊಡೆಯದೇ ಇದ್ದಲ್ಲಿ ನನಗೆ ಆಶ್ಚರ್ಯವಾಗುತ್ತಿತ್ತು! ಅದರಿಂದ ತಪ್ಪಿಸಿಕೊಳ್ಳಲು ಮೊದ ಮೊದಲು ನಿಧಾನವಾಗಿ ಬಾಗಿಲ ಹ್ಯಾಂಡಲ್ಲನ್ನು ಮುಟ್ಟುತ್ತಿದ್ದೆ ಆದರೂ Shock ಪ್ರಮಾಣ ಎಂದಿನಂತೆಯೇ ಇರುತ್ತಿತ್ತು. ಇದಕ್ಕಾಗಿ ನಾನು ಬಾಗಿಲು ತೆಗೆಯಲು ಕೆಲವೊಮ್ಮೆ Gloves ಬಳಸುತ್ತಾಯಿದ್ದೆ.


ಪ್ರತಿ ನಿತ್ಯವೂ ನನ್ನ ರೂಮನ್ನು ಸ್ವಚ್ಛಗೊಳಿಸುತ್ತಾಯಿದ್ದರು. ಮಡಿಸದೇ ಇದ್ದ ಹೊದಿಕೆಗಳು ಮಡಿಸಿದಂತಿರುತ್ತಿತ್ತು.

ನಮಗೆ ಒದಗಿಸಿದ "Mini Bar" ನಲ್ಲಿ "ಬಾಟಲ್ಲು"ಗಳ ಜೊತೆಗೆ ನಾನು ಕುಡಿಯ ಬಹುದಾದಂತಹ ಬಾಟಲ್ಲುಗಳೂ ಇದ್ದವು. ಅಲ್ಲದೆ Chocolates ಇದ್ದವು. ಯಾವುದನ್ನೂ ಉಪಯೋಗಿಸಲಿಲ್ಲ.

ಕಚೇರಿಯಲ್ಲಿ, ಒಂದು Fridge ಇತ್ತು. ಅಲ್ಲಿಯ ಜನರು ಅವರು ತಂದ ತಿನಿಸುಗಳನ್ನು ಅದರೊಳಗೆ ಇಡುತ್ತಿದ್ದರು. ನಮಗದು ತಿಳಿಯದೆ ಒಂದು ದಿನ ಯಾರೋ ತಂದಿಟ್ಟಿದ್ದ ಪೈನಾಪಲ್ ಜ್ಯೂಸನ್ನು ಕುಡಿದು ಬಿಟ್ಟಿದ್ದೆವು. ಇದನ್ನು ನೆನೆಸಿಕೊಂಡರೆ ಘೋರವಾದ ಪಾಪ ಮಾಡಿದೆವೇನೋ ಅನಿಸುತ್ತದೆ.

ಅಲ್ಲಿಯ Otto (ATM) ನಲ್ಲಿ ಒಮ್ಮೆ ೨೦ Euroಗಳನ್ನು withdraw ಮಾಡಿದ್ದೆ. ಹೆಚ್ಚಿನ ದುಡ್ಡಿನ ಅವಶ್ಯಕತೆ ಇರಲಿಲ್ಲ. ಇಲ್ಲಿಗೆ ಬರುವ ಮುಂಚೆಯೇ ಸ್ವಲ್ಪ ಹಣ ಇತ್ತು. ಅಲ್ಲದೆ ಅಲ್ಲಿ ಎಲ್ಲಾ ಕಡೆಯಲ್ಲೂ Card!

ಕಚೇರಿಯಲ್ಲಿ ಪ್ರತಿದಿನವೂ ತಪ್ಪದೇ ಹಣ್ಣುಗಳನ್ನು ತರಿಸುತ್ತಿದ್ದರು. ನಾನೂ ಕೂಡ ತಪ್ಪದೆ ಆಪಲ್, ಬಾಳೆಹಣ್ಣು, ಆರೆಂಜ್ ಹಣ್ಣುಗಳನ್ನು ತಿನ್ನುತ್ತಾ Suomi ಭಾಷೆಯ ಪತ್ರಿಕೆಗಳನ್ನು ನೋಡುತ್ತಾಯಿದ್ದೆ. ಒಂದು Oven 40 Euros, Camera 210 Euros, 1 Shirt 25 Euro, ಇತ್ಯಾದಿಗಳು. ನಮ್ಮ ಕಚೇರಿಯಲ್ಲಿ TV ಸಹ ಇತ್ತು.

ಅಲ್ಲಿಯ Tramನಲ್ಲಿ ಪ್ರಯಾಣ ಮಾಡಬೇಕು ಅನಿಸಿತ್ತು ಆದರೆ ಆಗಲಿಲ್ಲ.


ಅಲ್ಲಿಯ ರಸ್ತೆ ದಾಟುವಾಗ, ಹಸಿರು ದೀಪವಿದ್ದಾಗಲೇ ದಾಟುತ್ತಾಯಿದ್ದೆವು. ಒಮ್ಮೆ ನಾವು ಬಹಳ ಕಾಲ ನಿಂತಿದ್ದರೂ ಹಸಿರು ದೀಪವು ಹತ್ತಿರಲಿಲ್ಲ. ಆಗ ಅಲ್ಲಿಯ ಕಾರ್ ಸವಾರನೊಬ್ಬ ನಮಗೆ ಕೈ ಸನ್ನೆ ಮಾಡಿ, ಅಲ್ಲಿದ್ದ ಒಂದು Switch ಒತ್ತಲು ಹೇಳಿದ. ಆನಂತರ ನಮಗೆ ಶೀಘ್ರವಾಗಿ ಹಸಿರು ದೀಪ ಹತ್ತಿ, ರಸ್ತೆ ದಾಟಿದೆವು.


ಈ ಚಿತ್ರದ ಎಡ ಭಾಗದಲ್ಲಿ ಗಮನಿಸಿದರೆ ಸೈಕಲ್ ಚಿತ್ರವಿದೆ. ಇಲ್ಲಿ Footpath ಮೇಲೆ ಸೈಕಲ್ ಹೋಗುವ ಪಥ ಕೂಡ ಇದೆ.

ಅಲ್ಲಿಯ ಪ್ರತಿಯೊಂದು ಹೊಟೆಲು, ಕಚೇರಿ, ಮನೆಗಳಲ್ಲಿ ಸರ್ವದಾ ಬಿಸಿ ನೀರು ಇರುತ್ತದೆ. ಅದಲ್ಲದೆ ಪ್ರತಿಯೊಂದು ಕೋಣೆಯಲ್ಲೂ Room Heater ಇರುತ್ತದೆ. ಇದರಿಂದ ರೂಮೊಳಗಿನ ಉಷ್ಣಾಂಶವು ೨೫ರ ಆಸು ಪಾಸು ಇರುತ್ತಿತ್ತು. ಈ ಅನುಭವವೇ
"ಹೊಟೆಲ್
ಒಳಗೂ, office ಒಳಗೂ
ಕಾಲಿಟ್ಟರೆ ಸಾಕು
ಬದುಕುವುದು ನನ್ನ ಜೀವ " ಈ ಸಾಲುಗಳಾಗಿ ಬಂದಿದೆ.

10 ಜನ ಸ್ಪಂದಿಸಿರುವರು:

Lakshmi Shashidhar Chaitanya said...

metro video load aagtilla...check maadi pa.

sakhat anubhavagalu nimdu finland nalli...innondh hatt hadnaidh sarti hogi baruva haagaagali. :-)

shivu.k said...

ನಿಮ್ಮ ಫಿನ್ ಲ್ಯಾಂಡ್ ದಿನಚರಿ ನಾನು ತಪ್ಪದೇ ಓದುತ್ತೇನೆ. ನೀವೇಳುವುದೆಲ್ಲಾ ದಿನಚರಿಗೆ ಸೀಮಿತವಾಗಿದೆ. ಇದರ ಜೊತೆಗೆ ನಿಮ್ಮ ಹಾಗೂ ನಿಮ್ಮ ಸಹಚರರ ಅಲ್ಲಿನ ಜನರ ಕೆಲವು ತರಲೇ ತಾಪತ್ರಯಗಳು ಇತ್ಯಾದಿಗಳನ್ನು ಹೇಳಿದರೆ ನಮಗೂ ಸ್ವಲ್ಪ ಗೊತ್ತಾಗುತ್ತದೆ, ಪ್ರಯತ್ನಿಸಿ.

ಅಂತರ್ವಾಣಿ said...

ಮೆಟ್ರೋ ವೀಡಿಯೋ ಲೋಡ್ ಆಗುತ್ತೆ ಮಾ.

ಅಂತರ್ವಾಣಿ said...

ಶಿವು ಅವರೆ,
ಧನ್ಯವಾದಗಳು.

ನನ್ನ ಫಿನ್ ಲ್ಯಾಂಡಿನ ಸಹೋದ್ಯೋಗಿಯ ಮಾತನಾಡುವ ಶೈಲಿಯನ್ನೂ,ಅವರ ಸಹಾಯಕ ಗುಣವನ್ನೂ ಕೆಲವು ಕಡೆ ಬರೆದಿದ್ದೇನೆ.ನೀವು ನಿರೀಕ್ಷಿಸುತ್ತಿರುವ ತರಲೆ ತಾಪತ್ರಯಗಳು ಯಾವುದನ್ನು ನಾನು ಅನುಭವಿಸಿದಂತಿಲ್ಲ. ಇದ್ದಿದ್ದರೆ ಬ್ಲಾಗಿನಲ್ಲಿ ಮರೆಯದೆ ಬರೆದಿರುತ್ತಿದ್ದೆ.

sunaath said...

ಓದುತ್ತಾ ಇದ್ದರೆ, ನಾನೇ ಫಿನ್‌ಲ್ಯಾಂಡಿನಲ್ಲಿ ಇದ್ದಂತೆ ಭಾಸವಾಗುತ್ತದೆ.

ಅಂತರ್ವಾಣಿ said...

ಅಂಕಲ್,
ಧನ್ಯವಾದಗಳು :-)
ನೀವು ಫಿನ್ ಲ್ಯಾಂಡ್ ಚಳಿ ಕವನ ಓದಿದ್ದೀರಾ?

Ittigecement said...

ಫಿನ್ಲ್ಯಾಂಡ್ ಗೆ ಒಮ್ಮೆ ಹೋಗಿಬರೋಣ ಅನ್ನಿಸ್ತಾ ಇದೆ.. ಚಂದವಾಗಿ ವಿವರಿಸಿದ್ದೀರಿ. ನಾನೊಬ್ಬನೆ ಅಲ್ಲ ನನ್ನ ಮಡದಿ ಕೂಡ ಧನ್ಯವಾದ ತಿಳಿಸಿದ್ದಾರೆ...

ಅಂತರ್ವಾಣಿ said...

ಪ್ರಕಾಶ್ ಅವರೆ,
ನಿಮಗೆ ಹಾಗು ನಿಮ ಶ್ರೀಮತಿಯವರಿಗೆ ನನ್ನ ಧನ್ಯವಾದಗಳು :)

ಫಿನ್ ಲ್ಯಾಂಡಿಗೆ ಹೋಗಿ ಬನ್ನಿ ಒಳ್ಳೆ ಜಾಗ.
First cleanest country - Finland
Land of thousand Lakes - Finland

Harisha - ಹರೀಶ said...

ಎಲ್ಲವನ್ನೂ ಚೆನ್ನಾಗಿ ವಿವರಿಸಿದ್ದೀರಿ.. ಎಲ್ಲಾ ಭಾಗಗಳೂ ಇಷ್ಟವಾದವು..

ಅಂತರ್ವಾಣಿ said...

ಹರೀಶ್,
ವಂದನೆಗಳು :)