ಯಾವ ಚೆಲುವ ಬರುತ್ತಾನೋ
ಈ ಚೆಲುವೆಯ ನೋಡಲು?
ಯಾವ ಸುರನು ಬರುತ್ತಾನೋ
ಈ ದೇವತೆಯ ಪಡೆಯಲು?
ಎಲ್ಲೂ ಕಾಣದ ಮೂಗುತಿ ಸುಂದರಿ
ಇಲ್ಲೇ ಇಹಳು ಮೇನಕೆ ಸೋದರಿ!
ಕಣ್ಣ ಸನ್ನೆಯಲೆ ಮಾತು ಬೆಳೆಯಿತು
ತುಟಿಯು ಅದರುತ ಮುತ್ತ ಬಯಸಿತು!
ನಿನ್ನ ದನಿಯ ಕೇಳಲು
ಚಡಪಡಿಸಿತು ಅವನ ಕಿವಿ
ನಿನ್ನ ಕುರಿತು ಗೀಚುತ
ಅವನಾದನು ಕವಿ!
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
10 ಜನ ಸ್ಪಂದಿಸಿರುವರು:
ಪ್ರೇಮ ಭಾವ...
ಅಂದವಾಗಿ
ಚಿತ್ರಿಸಿದ್ದೀರಿ...
ಅಹಾ! ತುಂಬಾ ಚೆಲುವಾದ ಕವನ. ಕವನದ ಹಾರೈಕೆ ಈಡೇರಲಿ
ಎಂದು ಅಪೇಕ್ಷಿಸುತ್ತೇನೆ.
ಸಾನಿಯಾ ಮಿರ್ಜಾ ಬಗ್ಗೆ ಬರೆದಿದ್ದೀರೇನು ಈ ಕವನವನ್ನು? :)
ಚೆನ್ನಾಗಿದೆ...
jayashankar,
kavana super agidhe...
ಪ್ರಣಯವಾಣಿ ಚೆನ್ನಾಗಿದೆ.... !
ಯಾರು ಆ ಚೆಲುವೆ? ಎಲ್ಲವೂ ನಿಗೂಢ:)
ಶಂಕರ್,
ಕವನ ಚೆನ್ನಾಗಿ ಮೂಡಿ ಬಂದಿದೆ. ಜೊತೆಗೆ ಆ ಸುಂದರಿಯ ಫೋಟೋ ಕೂಡಾ ಹಾಕಿದ್ದಿದ್ದರೆ ಮತ್ತೂ ಚೆನ್ನಾಗಿರುತ್ತಿತ್ತು ನೋಡಿ..:)
ಸ್ಪಂದನೆಗೆ ವಂದನೆಗಳು :)
ಸುಧೇಶ್, ಸಾನಿಯಾ ಬಗ್ಗೆ ಬರೆದದ್ದ ಅಲ್ಲ. ಬೇರೆಯವರರ ಬಗ್ಗೆ ಬರೆದದ್ದು. ನನ್ನ ಅ(ದುರ)ದೃಷ್ಟವೋ ಅವಳ ನಿಶ್ಚಿತಾರ್ಥದ ದಿನವೇ ಪೋಸ್ಟ್ ಮಾಡಿದೆ.
ತೇಜು ಅಕ್ಕ,
ಅವಳ ಫೋಟೋ ಇಲ್ಲ. ಎಲ್ಲವೂ ಕಲ್ಪನೆ!
ಬಲು ಪಸಂದಾಗಿದೆ ಕಣ್ಲಾ ಈ ಕವನ :)
ಯಾರು ಅದು.. ನಿನ್ನ ಕವಿ ಮಾಡಿದ್ದು?
i liked this poem so much n i would like to read ur all poems..n even i like 2 write poem but still learner so once read my poem also..
http://kirti-neenunannjeeva.blogspot.com/.. support me to improve.
Post a Comment