Tuesday, 23 February 2010

ಫಿನ್ ಲ್ಯಾಂಡಿಗೆ ಪ್ರವಾಸ(೩) - Go Karting..

ನಾಲ್ಕು ಪೋಸ್ಟಿ ನಲ್ಲೂ ಫೋಟೋಗಳನ್ನು ಹಾಕಲು ಮರೆತಿದ್ದೆ. ಕಾರಣ ಮತ್ತೆ ಹೇಳ ಬೇಕಿಲ್ಲ. ಎರಡು ವರ್ಷಗಳಿಂದ ಸಮಯ ಸಿಕ್ಕಾಗೆಲ್ಲಾ ಹೇಳ್ತಾಯಿರ್ತೀನಿ.. "ಸ್ವಲ್ಪ ಮರವು....ವಯಸ್ಸಾಗಿದೆ" ಅಂತ.. ಈ ಸಲ ತೇಜು ಅಕ್ಕ ಜ್ಞಾಪಿಸಿದ್ದರು.
ಈಗ ಮೊದಲ ಪೋಸ್ಟಿನಿಂದ ಬಾಕಿ ಉಳಿದಿದ್ದ ಫೋಟೋಗಳು ಹಾಗು ವಿವರಗಳನ್ನು ಹಾಕುತ್ತಿದ್ದೇನೆ.

 
ಹೆಲ್ಸಿಂಕಿಯ ವಿಮಾನ ನಿಲ್ದಾಣದಿಂದ ತಾಂಪರೆಗೆ ಹೋಗುತ್ತಿರುವಾಗ ಕಂಡ ದೃಶ್ಯ

 ಮನೆಯ ಹತ್ತಿರದ ದೃಶ್ಯ.

  
ಸರೋವರ ನಂ ೧.

ಸ್ಟುಡಿಯೋಗೇ... ಫೋಟೋ!!!

ಬಲ ಭಾಗದ ಗೇಟಿನ ಅಪಾರ್ಟ್ಮೆಂಟಿನಲ್ಲೇ ನಾನು ಇದ್ದದ್ದು.

ಕಷ್ಟ ಪಟ್ಟು ಮಾಡಿಸಿದ ಬಸ್ ಪಾಸ್. ( "ಮಟ್ಕಾ" ಅಂತ ಇದೆ. ಆದರೆ ಅದು "ಪ್ರಯಾಣ" ಅನ್ನುವ ಅರ್ಥ ಸುಯೋಮಿ ಭಾಷೆಯಲ್ಲಿ.)



ರೂಟ್ ನಂ ೧೫. ಸರಿಯಾದ ಸಮಯಕ್ಕೆ ಹಾಜರ್!

-----

ಅಲ್ಲಿಗೆ ಹೋಗಿ ಕೆಲವೇ ದಿನದಲ್ಲಿ ಅಲ್ಲಿಯವರು ಒಂದು ದಿನದ Outingಗೆ ಹೋಗುವ ಸಿದ್ಧತೆ ನಡೆಸಿದ್ದರು. ನನ್ನನ್ನೂ ಆಹ್ವಾನಿಸಿದರು. ನಗರದ ಹೊರವಲದಲ್ಲಿ Go Karting ಹಾಗು ಹೊಟೆಲಿನಲ್ಲಿ  ಸೌನಾ (Finnish Sauna)  ಭಾರಿ ಭೋಜನ, ಮದ್ಯ ಪಾನ ಎಲ್ಲಾ ಇರುತ್ತೆ  ಅಂತ ಕ್ರಿಸ್ಟಾ ಹೇಳಿದ್ದಳು.
ನನಗೂ ಗೋ ಕಾರ್ಟಿಂಗ್ ಹೋವುವ ಆಸೆಯಿತು. ಮಧ್ಯಾಹ್ನ ಊಟದ ನಂತರ ಎಲ್ಲರೂ ಗೋ ಕಾರ್ಟಿಂಗೆ ಹೋದೆವು. ನಗರದಿಂದ ಸುಮಾರು ಅರ್ಧ ಗಂಟೆಯ ಪ್ರಯಾಣದ ನಂತರ ಎಲ್ಲರೂ ಅಲ್ಲಿ ಸೇರಿದೆವು. ಮೊದಲಿಗೆ ನೊಂದಾಯಿಸಲು ಎಲ್ಲರೂ ತಮ್ಮ ಹೆಸರುಗಳನ್ನು ಹೇಳುತ್ತಿದ್ದರು. ನನ್ನ ಸರಿದಿ ಬಂದಾಗ, ತುಂಬಾ ಉತ್ಸಾಹದಿಂದ ಹೆಸರು ಹೇಳಿದೆ. ಅದಕ್ಕ ಅಲ್ಲಿಯವರಿಗೆ ಏನೂ ಅರ್ಥ ಆಗಲಿಲ್ಲ. ಮತ್ತೊಮ್ಮೆ ಏನು ಅಂತ ಕೇಳಿದರು. ಈ ಬಾರಿ ಸ್ವಷ್ಟವಾಗಿ ಅಕ್ಷರಗಳನ್ನು ಹೇಳಿದೆ.. J.... A... Y...A..." ಆಗ ಅವನು ಮತ್ತೊಮ್ಮೆ ನನ್ನ ಮುಖ ನೋಡುತ್ತಿದ್ದ. ಆಗ ನನಗೆ ಅರಿವಾಯಿತು...ಈ ಭಾಷೆಯಲ್ಲಿ "ಜ"ಕಾರವಿಲ್ಲ. ನಾನು "J" ಎಂದರೆ ಅವನಿಗೆ ಹೇಗೆ ಅರ್ಥವಾಗುತ್ತದೆ. ಆಗ ನನ್ನ ಸಹಾಯಕ್ಕೆ ತಪನಿ ಬಂದರು. "ಯಾ ಯಾ " ಅಂತ ಹೇಳಿದಾಗ ಅವನು "ಜಯ" ಅಂತ ಹೆಸರು ನೊಂದಾಯಿಸಿದ. 

ನಂತರ ಅಲ್ಲಿಯ ನಿಯಮಗಳನ್ನು ಒಬ್ಬ ಹೇಳ ತೊಡಗಿದ. ಅದನ್ನು ಕ್ರಿಸ್ಟಾ ನನಗೆ ಆಂಗ್ಲ ಭಾಷೆಯಲ್ಲಿ ಹೇಳುತ್ತಿದ್ದಳು. ಇದಾದ ನಂತರ ಅದಕ್ಕಾಗಿಯೇ ಇರುವ ಉಡುಪುಗಳನ್ನು ಧರಿಸಿ ಎಲ್ಲರೂ ಅವರವರ ಲಕ್ಕಿ ನಂಬರಿನ ಕಾರನ್ನು ಏರಿದರು. ಮೊದಲಿಗೆ Trial ರೌಂಡ್ ಇತ್ತು. ಎರಡು ಲ್ಯಾಪ್ ಆಗುವ ಹೊತ್ತಿಗೆ ನನ್ನ ಕಾರ್ ಕೆಟ್ಟು ಹೋಯಿತು. ಕೂತಿರುವ ಜಾಗದಿಂದ ರಾಜಕಾರಣಿಗಳ ತರಹ ಕೈ ಮೇಲೆತ್ತಿದೆ.  ಉಳಿದ ಚಾಲಕರು ತಮ್ಮ ಕಾರನ್ನು ಸ್ವಲ್ಪ ಹೊತ್ತು ನಿಲ್ಲಿಸಿ, ನಾನು Pavillion ಬಂದ ಮೇಲೆ ಪ್ರಾರಂಭ ಮಾಡಿದರು. 

Trial ಆದ ಮೇಲೆ, ನಿಜವಾದ ಆಟ ಪ್ರಾರಂಭವಾಯಿತು. ನಾನು ಕಡೆಯ ಸ್ಥಾನದಿಂದ ಪ್ರಾರಂಭ ಮಾಡ ಬೇಕಾಯಿತು. ೫-೬ ಲ್ಯಾಪುಗಳು ಹೋಗಿ ಬರ ಬೇಕಾಯಿತು. ನನ್ನ ಕೈಯಲ್ಲಿ (ಕಾಲಲ್ಲಿ) ಆದ ಪ್ರಯತ್ನವನ್ನು ನಾನು ಮಾಡಿ, ಯಾರಿಗೂ ಕೊನೆಯ ಸ್ಥಾನ ಕೊಡದೇ ನಾನೇ ಪಡೆದುಕೊಂಡೆ. ಆದರೆ ಮೊದಲ ಲ್ಯಾಪಿಗಿಂತ ಎರಡನೆಯ ಲ್ಯಾಪು ಸ್ವಲ್ಪ ವೇಗವಾಗಿ ಓಡಿಸಿದೆ.
ಕೊನೆಯದಾಗಿ ಕಾರಿ ಈ ಸ್ಪರ್ಧೆಯಲ್ಲಿ ಗೆದ್ದರು. ಅಲ್ಲಿಂದ ನಾವು ಹೊಟೆಲಿಗೆ ಹೋದೆವು. ಅಲ್ಲಿ ನಾವು ಸೌನಾ ಗೆ ಹೋದೆವು. ಹೊರಗಡೆಯ ಚಳಿಯ ವಾತಾವರಣಕ್ಕೆ ಈ ಸೌನಾ ಅವಶ್ಯಕ. ಅದರೊಳಗೆ ಕುಳಿತಿದ್ದರೆ ಹೊರಗಿನ ಚಳಿ ತಿಳಿಯುವುದಿಲ್ಲ.  ತೆರೋ ತಮ್ಮ ಶೈಲಿಯಲ್ಲಿ ಹೇಳುತ್ತಿದ್ದರು.. "Jay.... you can tell there in ಬಾಂಗಲೂರ್ that you have ವೀಸೀಟೆಡ್ Finnish Sauna. Its famous"

ನಂತರ ಎಲ್ಲರೂ ಊಟಕ್ಕ ಹಾಗು ಪಾನಕ್ಕೆ ಬಂದೆವು. ಎಲ್ಲರೂ ತಮ್ಮ ತಮ್ಮ ಬ್ರಾಂಡಿನ ಪಾನವನ್ನು ತರಿಸಿಕೊಳ್ಳುತ್ತಿದ್ದರು. ವೈಟರ್ ಅಮ್ಮ ನನ್ನ ಹತ್ತಿರ ಬಂದು ಆಶ್ಚರ್ಯ ಪಟ್ಟಳು. ನಾನು ಕೇಳಿದ್ದು ಬೇರೆ ಬ್ರಾಂಡು. "So you don't want alcohol?" ಅಂತ ಪ್ರಶ್ನಿಸಿದ್ದಳು. ಆಲ್ಕೊಹಾಲ್  ಬೇಡಮ್ಮ ಅಂತ ಹೇಳಿ ಕಳುಹಿಸಿದೆ. ನಂತರ ಭೋಜನದ ವಿಷಯ ಬಂದಾಗ ಕೇವರ ಸಸ್ಯಹಾರ ತಿನಿಸು ತಗೊಂಡು ಬಾರಮ್ಮ ಅಂತ ಹೇಳಿದ್ದಕ್ಕೆ ಅವಳು "ಓಕೆ ಯು ಆರ್ ವೆಗ್ಗಿಟೇರಿಯನ್" ಅಂತ ಹೇಳಿ ನನಗಾಗಿ ವೆಗ್ಗಿಟೇರಿಯನ್ ತಂದಳು.  ಇದೆಲ್ಲ ಮುಗಿಸಿ ಅಪಾರ್ಟ್ಮೆಂಟಿಗೆ ಬಂದಾಗ ರಾತ್ರಿ ೧೦.೩೦ ಇರಬೇಕು...

ಹೀಗೆ ನನ್ನ ಟೀಮ್ ಔಂಟಿಗ್ ಮುಗಿಯಿತು.

9 ಜನ ಸ್ಪಂದಿಸಿರುವರು:

ಸುಧೇಶ್ ಶೆಟ್ಟಿ said...

chennagidhe Jay :)

PARAANJAPE K.N. said...

ಫೋಟೋ-ಮಾಹಿತಿ ಚೆನ್ನಾಗಿದೆ. ಸ್ವಾರಸ್ಯಕರವಾಗಿದೆ

PARAANJAPE K.N. said...

ಫೋಟೋ-ಮಾಹಿತಿ ಚೆನ್ನಾಗಿದೆ. ಸ್ವಾರಸ್ಯಕರವಾಗಿದೆ

ತೇಜಸ್ವಿನಿ ಹೆಗಡೆ said...

ಎಲ್ಲಾ ಚಿತ್ರಗಳೂ ಚೆನ್ನಾಗಿವೆ. ಅದರಲ್ಲೂ ಸರೋವರದ ಚಿತ್ರ ತುಂಬಾ ಇಷ್ಟವಾಯಿತು. ಸರೋವರದ ಬೇರೆ ಚಿತ್ರಗಳಿದ್ದರೆ, ಅವುಗಳನ್ನೂ ಹಾಕಿ.

ಸಾಗರದಾಚೆಯ ಇಂಚರ said...

ಸಕತ್ತಾಗಿದೆ ಫೋಟೋ ಸರ್

ಮನದಾಳದಿಂದ............ said...

nice photo sir, car race so funny hha hha hha!!!!!!!

AntharangadaMaathugalu said...

ನಾನು ಈ ದಿನವೇ ನಿಮ್ಮ ಪ್ರವಾಸ ಕಥನ ಓದಿದ್ದು... ಚಿತ್ರಗಳೂ ಮತ್ತು ಮಾಹಿತಿಯೂ ಎರಡೂ ಚೆನ್ನಾಗಿವೆ... ನಾನು ನಿಮ್ಮ ’ಸರ್ವಜ್ಞನ ವಚನಗಳು’ ಜಾಲ ಮಾತ್ರ ಹಿಂಬಾಲಿಸುತ್ತಿದ್ದೆ... ಹಾಗಾಗಿ, ಈ ನಿಮ್ಮ ಮನೆಗೆ ಬಂದಿರಲಿಲ್ಲ.... ನನ್ನ ತಾಣಕ್ಕೂ ನೀವು ಒಮ್ಮೆ ಮಾತ್ರ ಬಂದು ಹೋದಿರಿ ಅಷ್ಟೆ... ಮತ್ತೆ ಬನ್ನಿ....

ಅಂತರ್ವಾಣಿ said...

ಎಲ್ಲಾರಿಗೂ ವಂದನೆಗಳು... :)

V.R.BHAT said...

ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ