Saturday, 3 December 2011

.......ನಿನ್ನ ಹೆಸರೇನೆ?

ದಿನಕ್ಕೊಮ್ಮೆ ನಾಕು ನಿಮಿಷ ನೋಡಿ
ದಿನವೆಲ್ಲ ನೆನೆವಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?

ಕಲ್ಪನೆಗೂ ಮೀರಿದ ಚೆಲುವಿರಲು
ನಿನ್ನೆದುರು ನುಡಿಯದಂತೆ ಮಾಡಿದೆಯಲ್ಲೇ
ನಿನ್ನ ಹೆಸರೇನೆ?

ನಿನ್ನ ಮೊಗದಿಂದ, ನಗುವಿನಿಂದ
ಚಂದಿರನ ನೆನೆಯದಂತೆ ಮಾಡಿದೆಯಲ್ಲೇ      
ನಿನ್ನ ಹೆಸರೇನೆ?

ಚೊಚ್ಚಲ ನೋಟದಲ್ಲೇ ನನ್ನೆದೆಗೆ
ಪ್ರೇಮ ಬಾಣ ಚುಚ್ಚಿದೆಯಲ್ಲೇ
ನಿನ್ನ ಹೆಸರೇನೆ?
 

1 ಜನ ಸ್ಪಂದಿಸಿರುವರು:

sunaath said...

ಬಹಳ ದಿನಗಳ ನಂತರ ಅಂತರ್ವಾಣಿಯನ್ನು ಕೇಳುತ್ತಿದ್ದೇವೆ? ಹೀಗೇಕೆ, ಗುರೂ?
ಕವನ ಸುಂದರವಾಗಿದೆ, ಅರ್ಥಗರ್ಭಿತವಾಗಿದೆ.