Saturday, 21 February, 2009

100 Not Out

ಇದು ನನ್ನ ನೂರನೆ ಪೋಸ್ಟ್!
ನನ್ನ ಪ್ರೋತ್ಸಾಹಿಸುತ್ತಿರುವ ನಿಮ್ಮೆಲ್ಲರಿಗೂ ವಂದನೆಗಳು. ಈ ಬಾರಿಯ ವಿಶೇಷವೇನೆಂದರೆ ಏನೂ ವಿಶೇಷವಿಲ್ಲ!

Flashback:

೨೦ನೇ ಪೋಸ್ಟಿಗೆ - ಬ್ಲಾಗಿನ ಟೈಟಲ್ ಇಷ್ಟವಾಗಿರಲಿಲ್ಲ ಹಾಗಾಗಿ "ಅಂತರ್ವಾಣಿ" ಅಂತ ನಾಮಕರಣ.
೫೦ನೇ ಪೋಸ್ಟಿಗೆ - ನನ್ನ ಫೋಟೊ ಚೆನ್ನಾಗಿರಲಿಲ್ಲ ಹಾಗಾಗಿ "ಅಂತರ್ವಾಣಿ ಲೋಗೋ" ಹಾಗು ಟೆಂಪ್ಲೇಟ್ ಬದಲಾವಣೆ.
೭೫ನೆ ಪೋಸ್ಟಿಗೆ - ಲೋಗೋ ತುಂಬಾ ಇಷ್ಟವಾಗಿ ಹೋಗಿತ್ತು ಆದ್ದರಿಂದ ಟೆಂಪ್ಲೇಟ್ ಮಾತ್ರ ಬದಲಾವಣೆ (ಈಗಿರುವ ಟೆಂಪ್ಲೇಟ್)
೧೦೦ನೇ ಪೋಸ್ಟಿಗೆ - ಈಗ ಟೆಂಪ್ಲೇಟೂ ಇಷ್ಟವಾಗಿದೆ ಹಾಗಾಗಿ ಏನೂ ಬದಲಾವಣೆಯಿಲ್ಲ.

ನನಗೆ ಕವನಗಳಲ್ಲಿ ಹೆಚ್ಚು ಒಲವು. ಕಾರಣ ಬೇಕಾದಷ್ಟು ಇವೆ.
೧) ಓದಲು ಹೆಚ್ಚು ಸಮಯ ಬೇಕಿಲ್ಲ
೨) ರಾಗ ಹಾಕಿ ಕೊಂಡು ಹಾಡ ಬಹುದು
೩) ಚೆಂದದ ಪದಗಳನ್ನು ಓದುವುದೇ ಆನಂದ
೪) ಪುಟಗಟ್ಟಲೆ ಬರೆಯುವುದನ್ನು ಕೆಲವೇ ಪದಗಳಲ್ಲಿ ಹೇಳ ಬಹುದು
೫) ಛಂದಸ್ಸಿನಲ್ಲಿ ಬರೆದರಂತೂ ಓದಲು ಆನಂದ.

ಇದುವರೆಗು ೬೧ ಕವನಗಳನ್ನು ಪೋಸ್ಟ್ ಮಾಡಿದ್ದೇನೆ. ಆ ೬೧ರಲ್ಲಿ ಕೇವಲ ೧೭ "ಪ್ರಣಯವಾಣಿ" (Romantic) ಕವನಗಳು. ನಾನು ಪ್ರಣಯವಾಣಿ ಬರೆಯುವ ಪ್ರಯತ್ನ ಮಾಡುತ್ತಿಲ್ಲ. ಆದರೂ ಕೆಲವು ಸಮಯ "ಪರಿಸ್ಠಿತಿ"ಗೆ ಸೋತು ಒಂದರ ಹಿಂದೊಂದು ಬರೆದು ಬಿಡುತ್ತೇನೆ.
ಕನ್ನಡಿಯೊಳಗಿನ ಗಂಟು, ಮರುಳು ಮಾತುಗಳು, ಮಕಾರದ ಮಾನಿನಿಯರು, ಯಾಕೆ ಹೀಗೆ, ಯಾರಿಗಾಗಿ ಇದು ?, ಅಪ್ಸರೆ ಇತ್ಯಾದಿ.

ಪ್ರೊ! ಕೆ.ಎಸ್.ನಿಸಾರ್ ಅಹ್ಮದ್ಅವರ ಒಂದು ಕವನದ ಸಾಲುಗಳನ್ನು ಇಲ್ಲಿ ಹೇಳ ಬಯಸುತ್ತೇನೆ

ನಿನ್ನ ನೆನಪು ಕಾಡದಂತೆ
ಕವನ ಕಟ್ಟಿ ಹಾಡದಂತೆ

ತಡೆ
ದೆ ನಾನು ನನ್ನನೆ

[ರಾಜಕುಮಾರ್ ಭಾರತಿ ಅವರ ಕಂಠದಲ್ಲಿ ಈ ಹಾಡನ್ನು ಕೇಳಿದಾಗ ಸ್ವಪ್ನ ಲೋಕದಲ್ಲೇ ಇದ್ದೆ]

ಇದುವರೆಗೂ ಬರೆದ ಕವನಗಳಲ್ಲಿ ಒಂದು ಅಪೂರ್ಣವಾದ ಕವನವಿದೆ! ಆ ಕವನ ಬರೆಯುವಾಗ ಅದೆಷ್ಟೋ ಬಾರಿ ಕಂಬನಿ ಒರೆಸಿ ಕೊಳ್ಳುತ್ತಿದ್ದೆ. ಕವನವನ್ನು ಪೂರ್ಣಗೊಳಿಸಲು ಆಗುತ್ತಿಲ್ಲ ಎಂದಲ್ಲ, ಆ ಕವನದ ನಾಯಕನ ಸ್ಥಿತಿ ಕುರಿತು ಯೋಚಿಸುತ್ತಾ.

ಆ ಕವನ ಇಲ್ಲಿದೆ.
[ಈ ಕವನದ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ... ಹೇಗೆ ಪೂರ್ಣಗೊಳಿಸಲಿ ಎಂದು ಸಲಹೆ ನೀಡಿ]

18 ಜನ ಸ್ಪಂದಿಸಿರುವರು:

Sudi said...

ಏನೂ ವಿಶೇಷವಿಲ್ಲ!!!! antane istondu bardiddeeya.... :)

Sudi said...

ಏನೂ ವಿಶೇಷವಿಲ್ಲ!!!!! anta heline istondu bardiddeeyaaa... gud gud :) :)

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿ..

ನಾನು ಬ್ಲಾಗ್ ಶುರು ಮಾಡಿದಾಗ ಪ್ರತಿಕ್ರಿಯೆ ಬರೆದು..

ಪ್ರೋತ್ಸಾಹ ಕೊಟ್ಟ ಅಂತರ್ವಾಣಿಗೆ ನನ್ನ ನಮನಗಳು..

ನೀವು ಬರೆಯುವ "ಪೋಸ್ಟ್" ಸಾವಿರ ..ಲಕ್ಷವಾಗಲಿ..

ನಿಮ್ಮ ಪ್ರವಾಸ ಕಥನ ಬಹಳ ಇಷ್ಟವಾಗುತ್ತದೆ..

ನನಗೆ ಹಾಗೇ ಬರೆಯಲು ಬರುವದಿಲ್ಲವಲ್ಲ..

ಹೊಟ್ಟೆ ಉರಿಯೂ ಇದೆ..


ಡಬಲ್ ಸೆಂಚುರಿಗೆ ಕಾಯುವೆ..

ಅಭಿನಂದನೆಗಳು..
ಜಯಶಂಕರ್...

shivu said...

ಜಯಶಂಕರ್,

ನೂರನೇ ಪೋಸ್ಟಿಗೆ ಅಭಿನಂದನೆಗಳು...

ನಿಮ್ಮ ಕವನವನ್ನು ನಾನು ಈ ರೀತಿ ಪೂರ್ತಿಗೊಳಿಸಲು ಪ್ರಯತ್ನಿಸಿದ್ದೇನೆ...ಇಷ್ಟವಾದರೆ ಉಪಯೋಗಿಸಿ...ಇಲ್ಲದಿದ್ದಲ್ಲಿ ಕ.ಬು ಗೆ ಹಾಕಿ...

ತಮ್ಮ ಅದು..ನಾನು ಉತ್ತರಿಸಲಾರೆ ಕೆಲವು ಬಣ್ಣ...
ತಮ್ಮ ಅದು...ನಿನ್ನ ಪ್ರೀತಿಯ ಮಾತಿನ ಬಣ್ಣ
ತಮ್ಮ ಅದು...ನಿನ್ನ ಕುತೂಹಲ ತುಂಬಿದ ಪ್ರಶ್ನೆಯ ಬಣ್ಣ.

ತಮ್ಮ ಅದು...ನಿನ್ನ ಪ್ರಶ್ನೆ ಎಂಬ ಪ್ರಶ್ನೆಗಳ ಬಣ್ಣ..

ತಮ್ಮ ಅದು ..ನಾನು ಉತ್ತರಿಸಬೇಕೆಂದರೂ ಉತ್ತರಿಸಲಾಗದ ಬಣ್ಣ.....!!

ತೇಜಸ್ವಿನಿ ಹೆಗಡೆ- said...

ಶಂಕರ್,

ಹಾರ್ದಿಕ ಶುಭಾಶಯಗಳು. ದಿನೇ ದಿನೇ ಅಂತರ್ವಾಣಿ ಗಾಢವಾಗಿ ತನ್ನ ಅಚ್ಚನ್ನು ಮೂಡಿಸುತ್ತಿದೆ. ತುಂಬಾ ಸಂತೋಷವಾಯಿತು. ನಿಮ್ಮ ಅರ್ಧ(ರ್ಥ)ಪೂರ್ಣಕವನದ ಕೊನೆ ನನಗೂ ಹೊಳೆಯಲಿಲ್ಲ. ಆದರೆ ಬಲು ಸುಂದರವಾಗಿದೆ. ಹೀಗೇ ಬರೆಯುತ್ತಿರಿ. ಅಂತರ್ವಾಣಿಯ ಪಯಣ ಸಾಗುತ್ತಿರಲಿ...

ಬಿಸಿಲ ಹನಿ said...

Hello Shivashankar,
Happy to know that you have successfully completed the 100th posting. keep writing. All the best. Sorry, due to some problem with kannada fonts I wrote in english.

Lakshmi S said...

congratulations and all the best.nange kavana baryakke baralla...ashtella talent maintain maadilla naanu...aa kavanakke nangu saha en heLbeku tochtilla..so no comments on that.

ಅಂತರ್ವಾಣಿ said...

ellarigu vandanegaLu :)

shivaNNa,
kavanakke kone koTri santosha.. aadare naanu adakke kone irabaardu antha yochane maaDidde.. kaaraNa.. kuruDanige baNNada artha maaDisoke asaadhya!

udaya avare,
hesarinalli enide? neevu hEge karedaru santosha...

ಶ್ರೀಧರ ರಾಜು said...

Congratulations and all the besht Shankra... :-) heege naDeeli ninna akshara daasoha ;-)

ಅಂತರ್ವಾಣಿ said...

ಥ್ಯಾಂಕ್ಸ್ ರಾಜು, ಆದರೆ ಅಕ್ಷರ ದಾಸೋಹ ಪದ ಸರಿಯಿಲ್ಲ ಅನ್ನಿಸುತ್ತಿದೆ.

Gururaja said...

congrats for the century.. centuriesgala century barisi antha haraisuthene..

ಚಿತ್ರಾ ಕರ್ಕೇರಾ said...

ಜಯಶಂಕರ್ 'ಶತಕ' ಬಾರಿಸಿದ್ದಕ್ಕೆ ಪ್ರೀತಿಯ ಅಭಿನಂದನೆಗಳು. ಇನ್ನಷ್ಟು ಬರೆಯಿರಿ...ಶುಭಾಶಯಗಳು.
"ಈ ಬಾರಿಯ ವಿಶೇಷವೇನೆಂದರೆ ಏನೂ ವಿಶೇಷವಿಲ್ಲ!" ಓದುಗರನ್ನು ತಲೆತಿನ್ನೋ ಕೆಲಸ ಮಾಡಿದ್ದಕ್ಕೆ ನಾನು ಟೂಊಊಊ....!

-ಚಿತ್ರಾ

ಅಂತರ್ವಾಣಿ said...

ಗುರು,
ನಿಮ್ಮ ಹಾರೈಕೆಗೆ ವಂದನೆಗಳು

ಚಿತ್ರಾ,
ಥ್ಯಾಂಕ್ಸ್..

ಟೂ ಟೂ ಟೂ ಬೇಡಮ್ಮ
ಸೇ ಸೇ ಸೇ ಹೇಳಮ್ಮ

Strightforward said...

ಎನು ವಿಶೇಷ ವಿಲ್ಲ ಅಂತ ತುಂಬಾನೆ ಹೇಳಿದ್ದಿರಾ. anyway ನೂರನೇ ಲೇಖನಕ್ಕೆ ಇದು ನಿಲ್ಲದೆ ನಿರ0ತರವಾಗಿ ಸಾಗಲಿ.

ಸುನಿಲ್ ಮಲ್ಲೇನಹಳ್ಳಿ / Sunil Mallenahalli said...

Jaya Avare..

nimma noorane lekhana/kavanakke nimage hrudayaoorvaka abhinandanegalu..hige saagali nimma saahitya yaana.......

Sunil

ಅಂತರ್ವಾಣಿ said...

Mr Straight Fwd,
swaagatha..nanna blog ge.

vandanegaLu

Suni,
thnx :)

ಸುಧೇಶ್ ಶೆಟ್ಟಿ said...

ಸೆ೦ಚುರಿ ಬಾರಿಸಿದ್ದಕ್ಕೆ ಶುಭಾಶಯಗಳು.

ವಿಶೇಷವಾಗಿತ್ತು ಲೇಖನ. ಬರವಣಿಗೆ ಸಾಗುತ್ತಲಿರಲಿ ಹೀಗೆಯೇ....

ಇನ್ನು ಹೆಚ್ಚು ಹೆಚ್ಚು ಕವನಗಳು ಮೂಡಿಬರಲಿ.

ಅಂತರ್ವಾಣಿ said...

thnx sudhesh.. :)