ನನ್ನ ಮ್ಯಾನೇಜರ್, "ಶಂಕ್ರಾ ನೀ ಬೇಗನೆ ಬಾರೋ...." ಅಂತ ಕಲ್ಯಾಣಿ ರಾಗದಲ್ಲಿ ಹಾಡುತ್ತಿದ್ದ ಹಾಗೆ ನಾನು ಎರಡನೆ ಬಾರಿ ಫಿನ್ ಲ್ಯಾಂಡಿಗೆ ಹಾರ ಬೇಕಾಯಿತು. ಆಗಸ್ಟ್ ೧೧, ೨೦೦೭
ಮಾರ್ಚ್ ೨೦೦೭ರಲ್ಲಿ ಬೆಂಗಳೂರಿಗೆ ಬಂದು, ಇಲ್ಲಿಯೇ ಕೆಲಸ ನಿರ್ವಹಿಸುತ್ತಾಯಿದ್ದೆ. ಅನೇಕ ರೀತಿಯಾದ ಕಷ್ಟಗಳು ಇದ್ದವು. ಹಾಗೂ ಹೀಗೂ Design & development ಆಯ್ತು. ಇದನ್ನು Integration ಮಾಡ ಬೇಕಿತ್ತು. ನಾನು ಹಲವಾರು ದಿನ ಪ್ರಯತ್ನ ಪಟ್ಟೆ. ಆದರೆ ಆಗಲಿಲ್ಲ. ದಿನಕ್ಕೆ ಹತ್ತಾರು ವಿ-ಅಂಚೆಗಳು, ಫೋನ್ ಕಾಲುಗಳು ನಡೆದರೂ ಏನೂ ಪ್ರಯೋಜನವಾಗಲಿಲ್ಲ. ಆಗ ಯಾರ್ಕ್ಕೊ ನನ್ನನ್ನು ಪುನಃ ಫಿನ್ ಲ್ಯಾಂಡಿಗೆ ಕರೆಸಿಕೊಳ್ಳಲು ನಿರ್ಧಾರ ಮಾಡಿ, ಅದರ ವ್ಯವಸ್ಥೆ ಮಾಡಿಕೊ ಅಂದರು. ಎರಡು ವಾರ ಬರಬೇಕು ಎಂದು ಹೇಳಿದರು. ನಾನು ವೀಸಾ ಅರ್ಜಿ ಹಾಕಿ, ಬೆಂಗಳೂರು - ದೆಹಲಿ, ದೆಹಲಿ - ಹೆಲ್ಸಿಂಕಿ, ಹೆಲ್ಸಿಂಕಿ - ತಾಂಪರೆ ಗೆ ಟಿಕೆಟ್ ಕಾದಿರಿಸಿದೆ. ಆಮೇಲೆ ಅದೇಕೋ ಮನಸ್ಸು ಬದಲಿಸಿ, ಒಂದು ವಾರ ಸಾಕು ಎಂದು ಹೇಳಿದರು. ನಾನು ಅವರಿಗೆ ಹೋಟೆಲ್ ಕಾದಿರಿಸಿ ಎಂದು ಕೇಳಿಕೊಂಡೆ. ಸ್ವಲ್ಪ ಹೊತ್ತಿನಲ್ಲೇ ಹೊಟೆಲಿನ ಕಾದಿರಿಸಿದ ವಿ-ಅಂಚೆಯನ್ನು ಕಳುಹಿಸಿದರು. Scandic Tampere City ಎಂಬ ಹೋಟೆಲು. ಈ ಬಾರಿ ನಾನೊಬ್ಬನೆ ಹೋಗ ಬೇಕಿತ್ತು. ತೆರೋಗೆ ನಾನು ಬರುವ ವಿಚಾರವನ್ನು ಯಾರ್ಕ್ಕೊ ಹೇಳಿದ್ದರಿಂದ, ತೆರೋ ನನಗಾಗಿ ಹೊಟೆಲಿನಿಂದ ಕಚೇರಿಗೆ ಬರುವ ದಾರಿಯನ್ನು ಹೇಳಿದ್ದರು. ಅಲ್ಲದೆ ಕಚೇರಿಯ ಒಂದು ಚಿತ್ರವನ್ನೂ ಸಹ ಕಳುಹಿಸಿ ಕೊಟ್ಟಿದ್ದರು. ಅವರ ದೂರವಾಣಿ ಸಂಖ್ಯೆಯನ್ನೂ ಕೊಟ್ಟರು ತಿಳಿಯದೇ ಇದ್ದಲ್ಲಿ ಕರೆ ಕೊಡು ಎಂದರು.
ನಾನು ಹಿಂದಿನ ಸಲದಂತೆ MTR ತಿನಿಸುಗಳನ್ನು ತೆಗೆದುಕೊಂಡಿದ್ದೆ. ಒಂದು ವಾರದ ಮಟ್ಟಿಗೆ ಆದ್ದರಿಂದ ನಾನು ನಳ ಮಹಾರಾಜನನ್ನು ಆವಾಹನೆ ಮಾಡಲಿಲ್ಲ. ಅಪ್ಪ ಟ್ಯಾಕ್ಸಿಗೆ ಹೇಳಿದ್ದರು. ಹಿಂದಿನ ಬಾರಿ ಬಂದಿದ್ದ Ambassador ಈ ಬರಿಯೂ ಬಂತು. ಅದರಿಂದ ವಿಮಾನ ನಿಲ್ದಾಣ ತಲುಪಿದೆವು. ಸ್ವಲ್ಪ ಹೊತ್ತು ಅಪ್ಪ ಅಮ್ಮರೊಂದಿಗೆ ಮಾತಾಡಿ, Boarding Pass ತೆಗೆದು ಕೊಂಡು Security Checkಗೆ ಹೋದೆ. ಅಲ್ಲಿ ನಟ ಅವಿನಾಶ್ ಅವರನ್ನು ನೋಡಿ, ಮಾತಾಡಿಸಿದೆ. ನನ್ನ ಮುಂದೆಯೇ ಅವರಿದ್ದರು. ಹಸ್ತಲಾಘವ ಆದ ಮೇಲೆ ಬೇರೇನು ಮಾತಾಡಲು ನನಗೆ ತೋಚಲಿಲ್ಲ. ಅವರ ಜಾಗದಲ್ಲಿ ನಮ್ಮ ಗುರು ವಿಷ್ಣು ಇದ್ದಿದ್ದರೆ ಅದರ ಮಜಾನೇ ಬೇರೆ!..
ಈ ಬಾರಿ ನಾನು ಕಿಂಗ್ ಫಿಷರ್ ನಲ್ಲಿ ದೆಹಲಿಗೆ ಹೋಗಿದ್ದು. ಅಲ್ಲಿ ಪುರುಷ ಏರ್ ಹೋಸ್ಟ್ ಇರುವುದು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ಗೊತ್ತು! ಅಲ್ಲಿಯ ಕೆಂಪು ಹುಡುಗಿಯರು ತಂಪು ಪಾನೀಯ ಕೊಟ್ಟಾಗ ಕುಡಿಯೋ ಮಜಾನೇ ಬೇರೆ..ಆದರೆ ಅವರ ಭಾಷೆ ಯಾವರೀತಿವಿರುತ್ತದೆ ಎಂದರೆ, ನನ್ನಂತಹ ಅಲ್ಪ ಆಂಗ್ಲ ಭಾಷೆ ತಿಳಿದವರಿಗೆ ಮೊದಲ ಬಾರಿಗೆ ಅರ್ಥವಾಗದು. ಎರಡು ಮೂರು ಬಾರಿ ಕೇಳ ಬೇಕು.. ಏನಮ್ಮ ಹೇಳಿದ್ದು ನೀನು? ಅಂತ. ಕಿಂಗ್ ಫಿಷರ್ನಲ್ಲಿ ಒಬ್ಬರಿಗೊಂದು ಟಿ.ವಿ. ಕೊಟ್ಟಿರುತ್ತಾರೆ. ಕೆಲವು ಚಾನೆಲ್ಲುಗಳು ಹಾಗು ರೇಡಿಯೋ ಕೂಡ ಬರುತ್ತಿತ್ತು. ನಾನು ಶಾಸ್ತ್ರೀಯ ಸಂಗೀತ ಕೇಳುತ್ತಾ ಪ್ರಯಾಣ ಮುಗಿಸಿದೆ.
ದೆಹಲಿಯಲ್ಲಿ ಇಳಿದು ಅಲ್ಲಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪುವುದು ನನಗೆ ಅನುಭವವಿದ್ದರಿಂದ ಎಲ್ಲೂ ಕಷ್ಟವಾಗಲಿಲ್ಲ. ನಂತರ ಹೆಲ್ಸಿಂಕಿಗೆ Boarding Pass ತೆಗೆದು ಕೊಳ್ಳುವಾಗ, ಆಕೆ ನಿಮ್ಮ Final Destination ಎಲ್ಲಿ ಎಂದು ಕೇಳಿದರು. ನಾನು ತಾಂಪರೆ ಎಂದೆ. ಅದರ ಟಿಕೆಟ್ ನನ್ನಿಂದ ಪಡೆದು ಕೊಂಡು, ಹಲ್ಸಿಂಕಿ - ತಾಂಪರೆಗೂ ಸಹ Boarding Pass ಕೊಟ್ಟರು. ದೆಹಲಿಯಿಂದ ಹೆಲ್ಸಿಂಕಿಗೆ ಪ್ರಯಾಣ ಬೆಳಸಿದೆ. ಅಲ್ಲಿ ಸೇರಿದಾಗ ಸಮಯ ೭.೩೦ -೮ ಇರಬೇಕು. ಹಿಂದ ಬಾರಿಯಂತೆ ನನ್ನ ಒಬ್ಬ ಅಧಿಕಾರಿ ಪ್ರಶ್ನಿಸಿದ, ಟಿಕೆಟ್ ಗಳನ್ನು ಪರಿಶೀಲಿಸಿ ಮುಂದೆ ಸಾಗಲು ಬಿಟ್ಟ. Immigration ಬಳಿ ಸ್ವಲ್ಪ ಕಿರಿಕಿರಿ ಮಾಡಿದರು. ನನ್ನ ಪಾಸ್ಪೋರ್ಟ್ ಹೆಸರು ಹಾಗು ಟಿಕೆಟಿನಲ್ಲಿದ್ದ ಹೆಸರು ಸ್ವಲ್ಪ ವ್ಯತ್ಯಾಸವಿತ್ತು. ನಮ್ಮ ಊರಿನ ಹೆಸರು ಮೊದಲಿತ್ತು ಪಾಸ್ಪೋರ್ಟಿನಲ್ಲಿ. ಆದರೆ ಈ ಸಂಸ್ಥೆಗೆ ಸೇರಿದಾಗ ನನ್ನ ಊರಿನ ಹೆಸರನ್ನು ಕೊನೆಗೆ ಹಾಗಿದ್ದರು. ಮೀಸೆ ತೆಗೆದಿದಾಗಿನ ಚಿತ್ರವನ್ನು ಪಾಸ್ಪೋರ್ಟಿನಲ್ಲಿ ಹಾಕಿದ್ದೆ. ಆಮೇಲೆ ನನ್ನ ಮುಗ್ಧಮೊಗ ನೋಡಿ ಎಲ್ಲಿಗೆ ಹೋಗುತ್ತಾಯಿದ್ದೀಯ ಅಂತ ಕೇಳಿದರು. ತಾಂಪರೆಯೆಂದೆ. By Aircraft? ಎಂದರು... Yes ಎಂದೆ. Domestic ನಿಲ್ದಾಣಕ್ಕೆ ಹೇಗೆ ಹೋಗಬೇಕು ಎಂದು ಕೇಳಿದೆ. ಆತ ದಾರಿ ತೋರಿಸಿದ.
ಅಲ್ಲಿ ಡೊಮೆಸ್ಟಿಕ್ ಏರ್ ಪೋರ್ಟಿಗೆ ಹೋದೆ. ಅಲ್ಲೆಲ್ಲೂ ನನ್ನ ಕಣ್ಣಿಗೆ ದೂರವಾಣಿ ಕಾಣಲಿಲ್ಲ. ಅಲ್ಲೊಬ್ಬರನ್ನು ಕೇಳಲು, International Airport ಹೋಗಬೇಕು ಎಂದರು. ಪುನಃ ಅಲ್ಲಿಯವರೆಗು ನನ್ನ ಆಸ್ತಿಗಳನ್ನು ಎಳೆದು ಕೊಂಡು ಹೋಗಿ, ಮನೆಗೆ ಫೋನು ಮಾಡಿದೆ. ನಂತರ Fresh ಆದೆ. ಸಮಯ ಸುಮಾರು ೮.೩೦ ಇರಬೇಕು. ನನ್ನ ತಾಂಪರೆಯ ವಿಮಾನ ಇದ್ದದ್ದು ಮಧ್ಯಾಹ್ನ ೧.೩೦ ಕ್ಕೆ. ಅಲ್ಲಿಯವರೆಗೂ ಸಮಯ ಕಳೆಯ ಬೇಕಿತ್ತು. ಸರಿಯಾದ ನಿದ್ದೆ ಇಲ್ಲದ ಕಾರಣ, ಮಲಗಲು ಪ್ರಯತ್ನ ಮಾಡಿದೆ. ಅದಕ್ಕಾಗಿ ಮೊದಲಿಗೆ ೯.೩೦ ಕೆ Alarm ಇಟ್ಟುಕೊಂಡೆ. ಆದರೂ ಅದೇಕೋ ನಿದ್ದೆ ಬಾರಲಿಲ್ಲ. ಲಗ್ಗೇಜು ಕಳ್ಳತನವಾಗಬಹುದೇನೋ ಎಂಬ ಭಯ ಒಂದೆಡೆ, ವಿಪರೀತ ನಿದ್ರಿಸಿ, ತಾಂಪರೆ ವಿಮಾನ ತಪ್ಪಿಹೋಗ ಬಹುದೇನೋ ಎಂಬು ಆತಂಕ ಮತ್ತೊಂದೆಡೆ.
ಹೊಟ್ಟೆ ಹಸಿವು ಸ್ವಲ್ಪವಿತ್ತು. ಅಲ್ಲಿದ್ದ ಒಂದು ಅಂಗಡಿಗೆ, Biscuits ತೆಗೆದು ಕೊಳ್ಳೋಣವೆಂದು ಹೋದೆ. ಆಕೆಗೆ ಅದನ್ನು ಕೇಳಿದೆ. ತಿಳಯದವಳಂತೆ ಆಡಿದಳು. ಅದಕ್ಕೆ Cookies ಅಂತ ಕೇಳಿದೆ. ಗೊತ್ತಿಲ್ಲ ಅಂದಳು. ನಾನೇ ಹೋಗಿ ಜಾಲಾಡಿ ಒಂದು ಪ್ಯಾಕ್ ತೆಗೆದುಕೊಂಡು ಬಂದೆ. ಮೊದಲನೆಯದನ್ನು ತಿಂದು.. ನಾಯಿಗೆ ಹಾಕೋ ಬಿಸ್ಕತ್ತು ತಂದು ಬಿಟ್ಟಿದ್ದೀನಾ ಅಂತ ನೋಡಿದೆ. ಅಲ್ಲೇಲ್ಲೂ ನಾಯಿಯ ಚಿತ್ರವಿರಲಿಲ್ಲ. ಹಾಗಾಗಿ ಇದು ಮನುಷ್ಯರು ತಿನ್ನ ಬಹುದೆಂದು ನಿರ್ಧರಿಸಿದೆ. ಆದರೆ ರುಚಿ.... ಕೇಳ ಬೇಡಿ. ಏನೇನು ಪದಾರ್ಥ ಹಾಕಿದ್ದಾರೆ ಎಂದು ನೋಡಿದೆ. ೩ ಅಕ್ಷರದ ಒಂದು ಪದ ಕಾಣಿಸಿತು್, "Egg".
ಅಲ್ಲಿಯೇ ಹೀಗೆ ಸಮಯ ಕಳೆದೆ. ತಾಂಪರೆಗೆ ಸಂಬಂಧಿಸಿದ ಪುಸ್ತಕವನ್ನು ಓದುತ್ತಾಯಿದ್ದೆ. ಅಲ್ಲಿಂದ ಮಧ್ಯಾಹ್ನ ವಿಮಾನ ಹಾರುವ ಮುಂಚೆ, ನನ್ನ ಸೀಟ್ ನಂಬರ್ ಕೊಟ್ಟಿರಲಿಲ್ಲ. ಅದನ್ನು ಅಲ್ಲಿಯ Finnair Counter ಬಳಿ ಕೇಳಿದೆ. ಅದಕ್ಕೆ ಆಕೆ, ಎಲ್ಲಿ ಬೇಕಾದರೂ ಹೋಗಿ ಕುಳಿತುಕೊ ಅಂದಳು. ವಿಮಾನ ತುಂಬಾ ಚಿಕ್ಕದಿತ್ತು. ಅದರ ರೆಕ್ಕೆಗಳು ಬೇರೆ ವಿನ್ಯಾಸದ್ದು. ಕೇವಲ ೬೦-೭೦ ಜನ ಕೂರಬಹುದಾದಂತಹ ವಿಮಾನ. ಇದರಲ್ಲಿ ಹೆಚ್ಚಿನ ಪ್ರಯಾಣಿಕರು ಇರಲಿಲ್ಲ. ವಿಮಾನದಲ್ಲಿ ತಿನ್ನಲು ಒಂದು Chocolate ಕೊಟ್ಟಿದ್ದರು. ವಿಮಾನದ ಹಾರಾಟದಲ್ಲಿ ಅನೇಕ ಬೆಟ್ಟಗಳು, ಕೊಳಗಳು ಕಂಡಿತು. ತಾಂಪರೆಗೆ ಕೇವಲ ೨೦ ನಿಮಿಷದ ಹಾರಾಟ ಮಾತ್ರವೇ ಆಗಿತ್ತು. ಇಪ್ಪತ್ತು ನಿಮಿಷದ ಹಾರಾಟಕ್ಕೆ ಬೆಳಿಗ್ಗೆಯಿಂದ ಕುಳಿತು, ಸಮಯ ವ್ಯರ್ಥ ಮಾಡಿದೆ ಅನಿಸಿತು.
ತಾಂಪರೆಯಲ್ಲಿ ಲಗ್ಗೇಜನ್ನು ತೆಗೆದುಕೊಂಡು ಟ್ಯಾಕ್ಸಿಯೊಂದನ್ನು ಹುಡುಕಿ, Hotel Scandic Tampere City ಗೆ ಕರೆದುಕೊಂಡು ಹೋಗು ಎಂದೆ. ಆತ ನನ್ನ ಆಸ್ತಿಯನ್ನು ಡಿಕ್ಕಿಯಲ್ಲಿ ಹಾಕಿ, ಸ್ವಲ್ಪ ಸಮಯದಲ್ಲೇ ಹೊಟೆಲಿಗೆ ತಲುಪಿಸಿದ. ತಾಂಪರೆಯಲ್ಲಿ ಆಗ ಚಳಿ ಇರಲಿಲ್ಲ. ಸಾಮಾನ್ಯ ಹವಾಮಾನವಿತ್ತು. ನಾನು ಹೋಟೆಲ್ ಸೇರಿದ ಮೇಲೆ ಸ್ವಲ್ಪ ಹೊತ್ತು ವಿಶ್ರಾಂತಿ ತೆಗೆದು ಕೊಂಡು, ನನ್ನ ಆಫೀಸನ್ನು ನೋಡಿಕೊಂಡು ಬರಲು ಹೊರಟೆ. ಅಲ್ಲಿದ್ದ ತಾಂಪರೆಯ ನಕ್ಷೆಯನ್ನು ತೆಗೆದು ಕೊಂಡು ಹೊರಟೆ. ಹೊಟೆಲಿನ ಎದುರುಗಡೆಯೇ ಅಲ್ಲಿಯ ರೈಲು ನಿಲ್ದಾಣವಿತ್ತು. ಹೋಗುವ ದಾರಿಯಲ್ಲಿ ಒಂದು ಹಳೇ ಚರ್ಚು ಇತ್ತು. ಅದರ ಹತ್ತಿರದಲ್ಲೇ ಬಸ್ ನಿಲ್ದಾಣವಿತ್ತು. ಅದರ ಬಳಿಯೇ ನಮ್ಮ ಕಚೇರಿಯಿತ್ತು. ನಮ್ಮ ಕಚೇರಿಯ ನಾಮ ಫಲಕ್ಕಕಾಗಿ ಹುಡುಕಿದೆ ಆದರೆ ಸಿಗಲಿಲ್ಲ. ತೆರೋ ತೋರಿಸಿದ ಚಿತ್ರವೇನೊ ಇದೇ ಆಗಿತ್ತು. ಆದರೆ ನಾಮ ಫಲಕ ಇಲ್ಲ. ಸರಿ ನಾಳೆ ಬಂದು ನೋಡಿದರಾಯಿತು ಎಂದು ಪುನಃ ಹಿಂದಿರುಗಿದೆ. ಇಷ್ಟು ಹೊತ್ತಿಗೆ ಸಂಜೆ ಆರು. ಸ್ವಲ್ಪ ಸಿಹಿ ಹಾಗು ಖಾರ ತಿನಿಸುಗಳನ್ನು ತಿಂದು, ಟಿ.ವಿ.ಯನ್ನು ನೋಡುತ್ತಾಯಿದ್ದೆ. ೭.೩೦ಕ್ಕೆ ಊಟ ಮಾಡಿ ಮಲಗಿದೆ.
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
16 ಜನ ಸ್ಪಂದಿಸಿರುವರು:
ಜಯ್.. ಸಖತ್ತಾಗಿದೆ ಮೊಟ್ಟೆ ತಿಂದಿದ್ದು ;-) ಮುಂದೆ ಏನೇನು ಹೊಟ್ಟೆಗೆ ಹೋಗುತ್ತೆ ಅಂತ ಕುತೂಹಲ..
ಶಂಕ್ರಾ ನೀ ಬೇಗನೇ ಬರಿಯೋ.. ಮುಂದಿನ ಪೋಸ್ಟ್ ನ.. ಅಂತ ನಾನು ಹಾಡಿದ್ರೆ ಹೇಗಿರುತ್ತೆ??
JS thumbha chennagidhe nimma pravasa kathana..sagali haage..mundina baghakke kadiruva..
-Lilly.
super agi bardidira.. odhi kushi aythu.. mundina partge waiting..
ಜಯಶಂಕರ್,
ಮತ್ತೆ ಶುರುವಾಯಿತಲ್ಲ ನಿಮ್ಮ ಪ್ರಯಾಣ!! ನಿಮ್ಮ ಲೇಖನದ ಗಮ್ಮತ್ತಿರುವುದೇ ಈ ರೀತಿಯ ಪ್ರವಾಸ ಕಥನದಲ್ಲಿ...ಏಕೆಂದರೆ ನೀವು ಇಂಚಿಂಚು ವಿವರಿಸುತ್ತಾ ಹೇಳುವುದರಿಂದ ನಾವೇ ಪ್ರವಾಸ ಹೋಗಿಬಂದಂಗಾಗುತ್ತದೆ.... ಕೊನೆಗೂ ಎಗ್ ತಿಂದಿರಲ್ಲ...ರಾತ್ರಿ ಊಟ ಏನು ಮಾಡಿದಿರಿ...?
ಅಲ್ಲಿಯ domestic airport ಸಹ ನಮ್ಮ ವಿಮಾನನಿಲ್ದಾಣಗಳ ಹಾಗೇ ಇವೆ ಅಂತಾಯ್ತಲ್ಲಾ!
ಹರಿ,
ನಿಮ್ಮ ಹಾಡು ಕೇಳಿ ಆನಂದವಾಯಿತು. ನೀವು ಹಾಡಿರೋದು ಯಾವ ರಾಗದಲ್ಲಿದೆ?
ಲಿಲ್ಲಿ,
ವಂದನೆಗಳು...
ಗುರುರಾಜ,
ವಂದನೆಗಳು...
ಶಿವಣ್ಣ,
ಚಿಕ್ಕವಯಸ್ಸಿನಿಂದ.. ಕೇಕ್ ತಿಂದು ಅಭ್ಯಾಸವಿತ್ತು. ಹಾಗಾಗಿ ಏನು ಅನಿಸಲಿಲ್ಲ. ಊಟಕ್ಕೆ ಇತ್ತಲ್ಲ MTR..
ಸುನಾಥಂಕಲ್,
೫ ನಿಮಿಷದ ನಡಿಗೆ...
ನೀವು ಬರ್ದಿರೋ ರಾಗದಲ್ಲೇ ಇದೆ.. continuation ಅಷ್ಟೇ...
ಅಂತರ್ವಾಣಿ...
ನಿಮ್ಮ ಪ್ರವಾಸ ಕಥನದ ಕಥನ..
ತುಂಬಾ ಚೆನ್ನಾಗಿರುತ್ತದೆ..
ಸೂಕ್ಷ್ಮತೆಯಿಂದ ಪ್ರತಿಯೋದನ್ನು ನೀವು ಬರೆಯುವದಿದೆಯಲ್ಲ..
ಅದು ಸೂಪರ್..!
ನಾನು ಲಂಡನ್ ನಲ್ಲಿದ್ದಾಗ ಸುಮಾರು ನಾಲ್ಕೈದು ತಿಂಗಳು
ಬೆಳಿಗ್ಗೆ ತಿಂಡಿಗೆ ಬ್ರೆಡ್,ಜಾಮ್, ಚೀಸ್ ಮಾಡ್ಕೊತ್ತಿದ್ದೆ..
ಚೀಸ್ ಸಸ್ಯಾಹಾರಿಯೇ ಎಂದು ಶಾಪ್ ನವರಿಂದ ಖಾತ್ರಿ ಪಡಿಸಿಕೊಂಡಿದ್ದೆ..
ಒಂದುದಿನ ಚೀಸ್ ಪ್ಯಾಕೆಟ್ ಸೂಕ್ಷ್ಮವಾಗಿ ಗಮನಿಸಿದಾಗ ಅದರಲ್ಲಿ ಬರೆದಿತ್ತು
"ಕಾಫ್" ಅಂತ..!
ನಿಮ್ಮ ಮುಂದಿನ ಕಂತು ಕಾಯುತ್ತಿರುವೆ..
ಚಂದದ ಕಥನಕ್ಕೆ ಅಭಿನಂದನೆಗಳು..
ತುಂಬಾ ಸುಂದರವಾಗಿದೆ ನಿಮ್ಮ ಪ್ರವಾಸ ಕಥನ. ಹೀಗೆಯೇ ಬರೆಯುತ್ತಿರಿ.
ಅಭಿನಂದನೆಗಳು.
ಪುನಃ ಶುರು ಆಯ್ತಾ ನಿಮ್ಮ ಚೆಕಿನ್ ಸೆಕ್ಯೂರಿಟಿ ಚೆಕ್ ಇತ್ಯಾದಿ ?
ಹೋಟಲ್ ಹೆಸರು, ಕಿಂಗ್ ಫಿಷರ್, ಜ್ಯೂಸು, ಒಬ್ರಿಗೊಂದು ಟೀವಿ, ಶಾಸ್ತ್ರೀಯ ಸಂಗೀತ, ಇಮ್ಮಿಗ್ರೇಶನ್, ಬಿಸ್ಕತ್ತು..... ????
ಕಟ್ಟೆ ಶಂಕ್ರ
ಹರಿ,
ಜುಗಲ್ ಬಂದಿಗೆ Ready ನಾ?
ಪ್ರಕಾಶಣ್ಣ,
ನಿಮಗೂ ಇಂತಹ ಅನುಭವವಾಗಿತ್ತೇ? ಅಯ್ಯೋ!
ಡಾ! ಗುರು,
ವಂದನೆಗಳು
ಶಂಕ್ರಣ್ಣ,
ಮತ್ತೆ ಶುರು ಮಾಡಿದೆ... :)
ಹೋ....
ಮತ್ತೆ ಶುರುವಾಯ್ತು ಫಿನ್ ಲ್ಯಾ೦ಡ್ ಕಥನ. ಇನ್ನಷ್ಟು ವಿಷಯಗಳನ್ನು ಹೇಳಿ... ನಾನ೦ತೂ ಒ೦ದೇ ಒ೦ದೂ ಲೇಖನವನ್ನೂ ತಪ್ಪಿಸೊಲ್ಲ:)
ನಿಮ್ಮ ಬ್ಲಾಗ್ ನಾನು ಓದಲು ಪ್ರಾರ೦ಬಿಸಿದ್ದೇ ನಿಮ್ಮ ಹಿ೦ದಿನ ಫಿನ್ ಲ್ಯಾ೦ಡ್ ಕಥನದ ಮೂಲಕ:)
Jaya Avare..tumba sogaasagide nimma prayanada tayaari, vivarane..elaavoo chennaagide.
Sunil Mallenahalli
sudhEsh haagu sunil,
thnx
ahha..moTTe tindraa ? gange li hogi muLugu haakade ad yaav dhairyada mEle vaapas bandhri benglur ge ? :P eegindeegle hogi...gange li moor mulugu haaki, paapoham paapa karmaaham heLkondu, kapaaLakke hoDkondu...sorry keLkondu, aamele benglure ge baratakkaddu :)
exam ide nange naaLe, odtidde...adakke comp kade mukha haakilla. sorry for the delay in reading your post!
ಓ ಲಕ್ಷ್ಮಕ್ಕ,
ಗಂಗೆ ಗೆ ಹೋಗಿ ಮೂರು ಮುಳುಗು ಹಾಕಿದ್ರೆ, ಏಳು ಜನ್ಮದ ಪಾಪ ಹೋಗುತ್ತೋ ಇಲ್ವೋ ಗೊತ್ತಿಲ್ಲ, ಆದ್ರೆ ಏಳೇಳು ಜನ್ಮಕ್ಕೂ ವಾಸಿ ಆಗದ ಚರ್ಮರೋಗ ಬರೋದಂತೂ ಗ್ಯಾರಂಟಿ.
ಕಟ್ಟೆ ಶಂಕ್ರ
Post a Comment