ಬಾಳ ದೋಣಿಯ ಅಂಬಿಗ ಶ್ರೀ ಹರೀಶ್, ಭಾಮಿನಿ ಷಟ್ಪದಿಯಲ್ಲೊಂದು ಕವನ ರಚಿಸುವಂತೆ ಹುಳ ಬಿಟ್ಟು, ಭಾಮಿನಿಯ ಕುರಿತು ಮಾಹಿತಿ ಕೊಟ್ಟು, ಈ ಕೆಲಸಕ್ಕೆ ಕೈ ಹಾಕುವಂತೆ ಮಾಡಿದ್ದಕ್ಕೆ ವಂದನೆಗಳನ್ನು ಹೇಳುತ್ತೇನೆ.
ಸದ್ಯದ ನನ್ನ ಪರಿಸ್ಥಿತಿಯನ್ನು ಭಾಮಿನಿಯಲ್ಲೇ ಹೇಳುತ್ತಾಯಿದ್ದೀನಿ.
ಮನದಿ ಭಾಮಿನಿಯ ಆಸೆಯಿಟ್ಟ
ಬಾನ ನೋಡುತ ಯೋಚಿಸಿದೆ ನಾ
ಜೇನಿನ ನುಡಿಗಳು ಸಿಗುವ ಕಾಯಕ ನಡೆದಿದೆ ಈಗ
ಕಾನನದಿ, ಪರಿಸರದಿ ಹುಡುಕಿಹೆ
ಅನವರತ ಮನಸನ್ನು ಕೆದಕಿಹೆ
ನನಗೆ ತಿಳಿಯದ ಶಕ್ತಿ ಬರೆಸಿಹ ಮೊದಲ ಕವನವಿದು
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
16 ಜನ ಸ್ಪಂದಿಸಿರುವರು:
ಅಂತರ್ವಾಣಿ...
ಇತ್ತೀಚೆಗೆ "ಆಂತರ್ಯದಿಂದಲೇ " ಬರೆಯುತ್ತಿದ್ದೀರಿ"
ಬಹಳ ಖುಷಿಯಾಗುತ್ತದೆ...
ಹೀಗೆಯೆ ಮುಂದುವರೆಯಲಿ...
ಅಭಿನಂದನೆಗಳು...
ಜಯಶಂಕರ್,
ನಿಮ್ಮ ಪ್ರಯೋಗ ಮತ್ತು ಪ್ರಯತ್ನ ಮೆಚ್ಚುವಂಥಹುದು....ಅದಕ್ಕಿಂತ ಈ ವಿಚಾರದಲ್ಲಿ ನಿಮ್ಮ ಬರೆಯಬೇಕೆನ್ನುವ ಕುತೂಹಲ ನನಗೆ ಇಷ್ಟವಾಯಿತು...ಮುಂದಿನ ಕವನಕ್ಕೆ all the best!
:) nice.
ಚೆನ್ನಾಗಿತ್ತು. ಮರೆತು ಹೋಗಿದ್ದ ಭಾಮಿನಿ ಷಟ್ಪದಿಯನ್ನು ನೆನಪಿಸಿದ್ದಕ್ಕೆ ಥ್ಯಾ೦ಕ್ಸ್. ಸಮಯ ಸಿಕ್ಕಾಗ ಇದಕ್ಕೆ ಮಾತ್ರಾಗಣಗಳನ್ನು ಜೋಡಿಸಿ ಭಾಮಿನಿಯನ್ನೊಮ್ಮೆ ನೆನಪಿಗೆ ತ೦ದು ಕೊಳ್ಳುತ್ತೇನೆ.
ನಿಮ್ಮ ಪ್ರಯೋಗ ಹೀಗೆ ಮು೦ದುವರಿಯಲಿ ಜೇ...
ಅನುದಿನವು ಭಾಮಿನಿಯ ಸಂಗವು
ನಿಮಗೆ ಆಗಲಿ ಎಂದು ಹರಸುವೆ
ವನವನದಿ ಸಂಚರಿಸಿ ಪಡೆಯಿರಿ ಸಕಲ ಸುಖಗಳನು
ಮನಕೆ ಮೋದವ ನೀಡುವಂತಹ
ಸನುಮತದ ಷಟ್ಪದಿಯರಿವರು
ಶರ, ಕುಸುಮ, ಭೋಗ, ಭಾಮಿನಿ, ವಾರ್ಧಕಾದಿಗಳು.
All the best, ಜಯಶಂಕರ
ಅಂತರ್ವಾಣಿ ದಿನೇ ದಿನೇ ತುಂಬಾ ಅಂತರಂಗಕ್ಕೆ ಹತ್ತಿರವಾಗುತ್ತಿದೆ..:) ನಿಮ್ಮ ಪ್ರಯತ್ನ ನಿಜಕ್ಕೂ ಮೆಚ್ಚತಕ್ಕದ್ದು. ಮುಂದುವರಿಸಿ.
ಚೆನ್ನಾಗಿದೆ... :)
ಎಲ್ಲರಿಗೂ
ವಂದನೆಗಳು
ಸುನಾಥಂಕಲ್,
ಸೂಪರ್ ಕವನ.
ರಾಘವ ಶರ್ಮ ಅವರೆ,
ಸ್ವಾಗತ ಅಂತರ್ವಾಣಿ ಕೇಳಲು.
ನಿಮ್ಮ ಸ್ಪಂದನೆಗೆ
ನನ್ನ ವಂದನೆಗಳು
ಹುಳ ಬಿಟ್ಟಿದ್ದು ನಾನಾದರೂ ಹುಳವನ್ನು ಪೋಷಿಸಿ, ಬೆಳೆಸಿದ್ದು ನೀವೇ ಅಲ್ವಾ? ನಾನು ಸುಮ್ಮನೆ ಮಾತಿಗೆ ಹೇಳಿದ್ದನ್ನೇ ಸೀರಿಯಸ್ಸಾಗಿ ತೆಗೆದುಕೊಂಡು ಇಷ್ಟು ಚಂದದ ಪದ್ಯವನ್ನು ನಮಗೆ ನೀಡಿದ್ದಕ್ಕೆ ಧನ್ಯವಾದಗಳು :-)
ಅಂದ ಹಾಗೆ ಟೆಂಪ್ಲೇಟ್ ಸಖತ್ತಾಗಿದೆ :-)
ಅಂಬಿಗ,
ಹುಳವನ್ನು ಪೋಷಿಸಲು ಬೇಕಾದ Envt ಕೊಟ್ಟಿದ್ದು ನೀವೆ.
ಟೆಂಪ್ಲೇಟ್ ಮೆಚ್ಚಿಕೊಂಡಿದ್ದಕೆ ವಂದನೆಗಳು.
ಜಯಶಂಕರನಿಗೆ ಜಯವಾಗಲೀ...ಮೊದಲ 'ಭಾಮಿನಿ'ಯಲ್ಲೇ ಎಲ್ಲರನ್ನು ಗೆದ್ದುಬಿಟ್ಟಿದ್ದೀರಿ. ನಾನೂ ಭಾಮಿನಿ ಷಟ್ಬದಿ ಮಾತ್ರಾಗಣಗಳ ಕುರಿತು ಯೋಚನೆ ಮಾಡ್ತಾ ಇದ್ದೀನಿ..ಮನೆಯಲ್ಲಿ ಹೋಗಿ ನೋಡಿ ಬಂದು ನಿಮ್ಮ ಪದ್ಯಕ್ಕೆ ಹೊಂದಿಸಿನೋಡಬೇಕು ಹಿಹಿಹಿ. ಶುಹಾರೈಕೆಹಳು
-ಚಿತ್ರಾ
ಚಿತ್ರಾ ಪ್ರಯತ್ನಿಸಿ... ಆಮೇಲೆ ಪೋಸ್ಟ್ ಮಾಡಿ ನಾನು ಓದುವೆ
ಸರ್ ಕ್ವ್ನ್ ಚೆನ್ನಾಗಿದೆ. ಮೂರನೇ ಸಾಲಿನಲ್ಲಿ,ಈಗಿರುವಂತೆ ಓದಿಕೊಂಡರೆ, ಒಂದು ಜಗಣ (ಲಘು ಗುರು ಲಘು)ಬರುತ್ತದೆ. ಲಘುವಿನಿಂದ ಆರಂಭವಾಗುವ ಗಣ (ಉದಾ ಜಗಣ) ಬರುವಂತಿಲ್ಲ. ಆದರೆ ಇದೊಂದು ದೋಷವಲ್ಲ. ನನ್ನ ಪದ್ಯಗಳಲ್ಲೂ ಒಂದೆರಡು ಕಡೆ ಈಗಾಗಿದೆ. ಜೊತೆಗೆ ಪದದ ಕೊನೆಯಕ್ಷರದಿಂದ ಪ್ರಾರಂಭವಾಗುವಂತೆ ಹೊಸಗಣ ಬಂದರೆ ಲಯಕ್ಕೆ ಅಡಚಣೆಯುಂಟಾಗುತ್ತದೆ.
'ಜೇನಿ|ನ ನುಡಿಗ|ಳು ಸಿಗು|"ವ ಕಾಯ"|ಕ ನಡೆ|ದಿದೆ ಈ|ಗ' ಎಂಬುದರ ಬದಲಿಗೆ 'ಜೇನ |ನುಡಿಗಳು| ಸಿಗುವ |ಸೂಚನೆ |ಕಾಣು|ತಿದೆ ಈ|ಗ' ಎಂದು ಮಾಡಿಕೊಳ್ಳಬಹುದು.
ಡಾ| ಸತ್ಯನಾರಾಯಣ ಅವರೇ, ಎಲ್ಲಿ ಜಗಣ ಬರಬಾರದು ಎಂದು ಸ್ವಲ್ಪ ವಿವರಿಸುವಿರಾ? ಇದಲ್ಲದೇ ಮತ್ತೇನಾದರೂ ನಿಬಂಧನೆಗಳಿವೆಯೇ?
ಮಾನ್ಯರೇ ಛಂದಸ್ಸಿನಲ್ಲಿ ಏಕ ಲಗುವಿನಿಂದ ಆರಂಭವಾಗುವ ಗಣಗಳ ತಾಳದ ನಡೆಗೆ ಅಡಚಣೆಯುನ್ನುಂಟು ಮಾಡುತ್ತವೆ. ಉದಾಹರಣೆಗೆ ಕದಂಬ ಅಥವಾ ಕುಮಾರ ಎಂಬವುಗಳು ಜಗಣಕ್ಕೆ ಉದಾಹರಣೆ. ಮೊದಲ ಅಕ್ಷರ ಲಗುವಾಗಿದ್ದು ಎರಡನೆಯದು ಗುರುವಾಗಿದ್ದರೆ ಮೊದಲ ಅಕ್ಷರದ ಮೇಲೆ ಒತ್ತು ಬೀಳುವುದೇ ಇಲ್ಲ; ಆದರೆ ಎರಡನೆ ಅಕ್ಷರಗಳ ಮೇಲೆ ಹೆಚ್ಚಿನ ಒತ್ತು ಬೀಳುತ್ತದೆ. ಪರಿಣಾಮ ಮೊಲದ ಅಕ್ಷರ ಕೇಳಿಸುವುದಿಲ್ಲ. ಕುಮಾರವ್ಯಾಸನು ಹಾಡಿದನೆಂದರೆ ಎಂಬ ಪ್ರಯೋಗವನ್ನು ಮತ್ತೆ ಹಾಡಿ ಹಾಡಿ ನೋಡಿ. ಈ ತರದ ಉದಾಹರಣೆಗಳು ಮಹಾಕವಿಗಳ ರಚನೆಯಲ್ಲೂ ಅಪರೂಪಕ್ಕೆ ಕಂಡು ಬರುತ್ತವೆ. ಆದ್ದರಿಂದ ಛಂದೋಪಾಧ್ಯಾಯರು ಅದನ್ನೊಂದು ದೋಷವಲ್ಲ ಎನ್ನುತ್ತಾರೆ.
satyanaranyana avare,
vaMdanegaLu. doubt clarify maaDiddake.
Post a Comment