ಬೆಕ್ಕಿಗೆ ಕೋಪ ಬಂದಿದೆ
ಹಾಲು ಮೊಸರು ಕಾಣದೆ
ಇನ್ನೂ ಕೋಪ ಬಂದಿದೆ
ಇಲಿಗಳು ಕಣ್ಣಿಗೆ ಬೀಳದೆ!
ಸದ್ದಿಲ್ಲದೆ ಬರುವುದು ಸದಾ
ಎಣಿಸದೆ ರಾತ್ರಿ ಹಗಲು
ಹತ್ತಾರು ಮನೆಗಳು ಇದಕ್ಕಿದೆ
ಹಾಲು ಮೊಸರು ಸವಿಯಲು
ಗಿಡ್ದ ದೇಹ, ದೊಡ್ಡ ದನಿ
ಕಣ್ಣಿನೊಳಗಿದೆ ಕನಿ!
ಬಿಡುವಿಲ್ಲದ ಮಿಯಾವಿಗೆ
ಕೊಡುತ್ತಿದ್ದೇನೆ ಕಿವಿ!
[ ಇದು "ಶಿಶುವಾಣಿ" ವಿಭಾಗದಲ್ಲಿನ ಎರಡನೆ ಕವನ]
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
13 ಜನ ಸ್ಪಂದಿಸಿರುವರು:
perfect ಬಾಲವಾಡಿ ಗೀತೆ !
ಮುದ್ದಾದ ಹಾಡು.
ಅಂತರ್ವಾಣಿ....
ಬಾಲ್ಯದಲ್ಲಿ ಓದಿದ "ಬೆಕ್ಕೆ..ಬೆಕ್ಕೆ" ಹಾಡು ನೆನಪಾಯಿತು...
ಈಗೆಲ್ಲ ಫ಼್ರಿಜ್, ಇಟಾಲಿಯನ್ ಕಿಚನ್ ಬಂದಿದ್ದರಿಂದ ಬೆಕ್ಕಿಗೆ
ಸಹಜವಾಗಿ ಕೋಪ ಬಂದಿರಬಹುದು..!
ಚಂದದ ಕವನಕ್ಕಾಗಿ
ಅಭಿನಂದನೆಗಳು...
ಲಕ್ಷ್ಮಿ, ಸುನಾಥಂಕಲ್
ವಂದನೆಗಳು
ಪ್ರಕಾಶಣ್ಣ,
ಬಾಲ್ಯದಿನಗಳ ನೆನಪು ಸದಾ ಕಾಡುತ್ತೆ. ಅದಕ್ಕೆ ಆಗೊಮ್ಮೆ ಈಗೊಮ್ಮೆ ಈ ರೀತಿ ಕವನಗಳು ಬರಿತೀನಿ.
ವಂದನೆಗಳು
nice one..
ಸುಧಿ,
welcome back.. :)
ಪರ್ವಾಗಿಲ್ವೆ? ಈಗ ಕನಸಲ್ಲಿ ಬೆಕ್ಕು-ಇಲಿ ಬರ್ತಾ ಇವೆ!
:) ಅದಿತಿಗೆ ಹೇಳಿಕೊಡುವೆ. ಕೇಳಲು ಬನ್ನಿ ಒಮ್ಮೆ ಮನೆಗೆ.. :)
ಹರಿ,
ಈ ಬೆಕ್ಕು ಕನಸಲ್ಲಿ ಬಂದಿಲ್ಲ. ಇನ್ನೊಂದು update ಅಂದರೆ ಈ ನಡುವೆ ಕನಸು ನೆನಪಿಟ್ಟಿಕೊಳ್ಳಲು ಆಗುತ್ತಿಲ್ಲ. ಒಂದು ತರಹ ಒಳ್ಳೇದು.
ತೇಜು ಅಕ್ಕ,
ಪುಟ್ಟಿ ಬಾಯಲ್ಲಿ ಕೇಳುವ ಆಸೆ ಆಗಿದೆ. ಅವಳು ಕಲಿತ ತಕ್ಷಣ ಬರುವೆ.
chennagiththu...
haageye aa miyaavina photo haakiddare innu chennagiththu:)
naanu maarjaala priya:)
"ನನಗೂ ಕೋಪ ಬಂದಿದೆ...
ಅಮ್ಮ ಮನೆಯಲ್ಲಿ ಕಾಣದೆ...
ಮನ ಊರಿಗೋಗೋಣ ಅನ್ನುತ್ತಿದೆ..."..
ನೋಡ್ರೀ ನನ್ ಬಾಲವಾಡಿ ಗೀತೆ ಹಹಹ..ತುಂಬಾ ಮುಗ್ಧವಾಗಿ ಬರೇತೀರ.
-ಚಿತ್ರಾ
ಸುಧೇಶ್,
ಬೆಕ್ಕಿನ ಚಿತ್ರ ಬೇಡವೆಂದು ಹಾಕಲಿಲ್ಲ.
ಚಿತ್ರಾ,
ನಿಮ್ಮ ಕವನ ಕೂಡ ಚೆನ್ನಾಗಿದೆ. ಪ್ರಯತ್ನ ಮಾಡಿ ಚೆನ್ನಾಗಿ ಬರೆಯುತ್ತೀರ.
ಜಯಶಂಕರ್,
ಇದನ್ನು ಕವನ ಅಂತ ಹೇಳೋದಿಲ್ಲ...ಒಂದು ಮುದ್ದಾದ ಹಾಡು ಅನ್ನುತ್ತೇನೆ...
Post a Comment