ಬಿಳಿ ಬಂಡೆಯಿಂದ ಉದ್ಭವಿಸಿದ ಕಪ್ಪು ಝರಿ
ಸಹಸ್ರಾರು ರಂಧ್ರಗಳ ಕೊರೆದು ಹರಿಯುತಿದೆ
ಸೂರ್ಯನ ಪ್ರತಿಬಿಂಬವ ತೋರಿಸುವ ಕಪ್ಪು ಝರಿ
ಅಲೆ ಅಲೆಯಾಗಿ ಕರದ ಮೇಲೆ ಹರಿಯುತಿದೆ.
ಇಂದುಮುಖಿಯ ಹಿಂದಿರುವ ಕಪ್ಪು ಝರಿ
ತಂಗಾಳಿಗೆ ತೂರಾಡುತಿದೆ
ತನು ಮನವ ತಂಪುಗೊಳಿಸುವ ಕಪ್ಪು ಝರಿ
ನಯಾಗರಕ್ಕೆ ಸವಾಲೊಡ್ಡಿದೆ!
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
16 years ago

10 ಜನ ಸ್ಪಂದಿಸಿರುವರು:
ಜಯಶಂಕರ್,
ಕವನ ಚೆನ್ನಾಗಿದೆ....ಉದ್ದ ಕೂದಲಿನ ಮೇಲಿನ ಕವಿ ಕಲ್ಪನೆ ಚೆನ್ನಾಗಿದೆ......
ಮನಸ್ಸಿಗೆ ಮುದ ನೀಡುವ ಕಪ್ಪು ಝರಿ!
ತೆರೆ ತೆರೆಯಾಗಿ ನೀ ಹರಿ, ಹರಿ!
ಜಯಶಂಕರ, ಕಪ್ಪು ಝರಿ ಎನ್ನುವ ಶೀರ್ಷಿಕೆ ನೋಡಿದಾಗ ಅಚ್ಚರಿಯಾಗಿತ್ತು. ಕವನ ಓದುತ್ತಿದ್ದಂತೆ ಅರ್ಥ ಹೊಳೆದು ಖುಶಿಯಾಯಿತು.
ಚೆನ್ನಾಗಿದೆ. ಇಷ್ಟವಾಯಿತು..
ಶಿವಣ್ಣ ಹಾಗು ಸುನಾಥಂಕಲ್,
ವಂದನೆಗಳು
ಕೋಗಿಲೆ,
ಅಂತರ್ವಾಣಿ ಕೇಳಿದ್ದಕ್ಕೆ ಧನ್ಯವಾದಗಳು. ಮತ್ತೆ ಮತ್ತೆ ಬನ್ನಿ.
ಎಷ್ಟು ಚೆನ್ನಾಗಿ ಬರಿತೇನ್ರೀ...
-ಚಿತ್ರಾ
ಜಯಶಂಕರ್...
ಇತ್ತೀಚೆಗೆ ಪಕ್ಕಾ ಕವಿಗಳಾಗ ಹೊರಟಿದ್ದೀರಿ..!
ಚೆನ್ನಾಗಿದೆ ..
ಕವನ ಇಷ್ಟವಾಯಿತು...
ಚಿತ್ರಾ ಹಾಗು ಪ್ರಕಾಶಣ್ಣ,
ವಂದನೆಗಳು
ಪ್ರಕಾಶಣ್ಣ,
ಯಾವ ರೀತಿ "ಪಕ್ಕಾ ಕವಿ" ಆಗ ಹೊರಟಿದ್ದೀನಿ ಅಂತ ಸ್ವಲ್ಪ ಹೇಳಿ.
ಕಲ್ಪನೆ ಚೆನ್ನಾಗಿದೆ. ಕವನ ಕೂಡಾ.
chennagi haridubandide ಕಪ್ಪು ಝರಿ
ಯಾರವಳು?
Post a Comment