Sunday 4 January, 2009

ನಾನು ಸತ್ತ ಮೇಲೆ

ಬಹಳ ದಿನಗಳ ಹಿಂದೆ ನನಗೆ ವಿಪರೀತ ಜ್ವರವಿತ್ತು. ಆ ರಾತ್ರಿ ನಾನು ಮಲಗಿದೆ. ಮುಂಜಾನೆಯ ರವಿಯನ್ನು ನೋಡುತ್ತೇನೋ ಇಲ್ಲವೋ ಅನ್ನಿಸಿತ್ತು. ಇದ್ದಕ್ಕಿದ್ದ ಹಾಗೆ ನನ್ನ ದೇಹದ ತಾಪಮಾನ ಹೆಚ್ಚಾಗಿ ನಾನು ಸತ್ತು ಹೋದೆ!

ನನ್ನ ಸಂಸ್ಕಾರಕ್ಕೆ ಮನೆಯವರು ಸಿದ್ಧತೆ ನಡೆಸುತ್ತಿದ್ದದ್ದು ನನಗೆ ಗೊತ್ತಾಗುತ್ತಿತ್ತು. ಗೆಳೆಯರು, ಬಂಧು ಬಳಗದವರೆಲ್ಲರೂ ಸೇರಿದ್ದರು. ಅವರ ಕಂಬನಿಯು ನನಗೆ ಕಾಣುತ್ತಿತ್ತು. ನನ್ನ ಬಗ್ಗೆ ಆಡುತ್ತಿದ್ದ ಒಳ್ಳೆ ಮಾತುಗಳು ಕೇಳಿಸುತ್ತಾಯಿತ್ತು. ಅವರಿಗೆ ಸಮಾಧಾನ ಹೇಳ ಬೇಕೆಂದೆನಿಸಿತು. ಆದರೆ ನಾನು ಹೆಣ! ಹೇಗೆ ಮಾತನಾಡಲು ಸಾಧ್ಯ?

ಮಸಣದ ಕಡೆಗೆ ನನ್ನ ಹೊತ್ತಿಕೊಂಡು ಹೋದರು. ಇದೆಲ್ಲಾ ನನಗೆ ಗೊತ್ತಾಗುತ್ತಿತ್ತು. ನಾನು ನನ್ನಲ್ಲೇ ಹೇಳಿಕೊಂಡೆನು "ನಾನು ಸತ್ತಿರೋದು ನಿಜ. ಆದರೂ ನಾನು ಸಾಮಾನ್ಯರಂತೆ ಇದ್ದೀನಲ್ಲ. ಹೋ!...ಬಹುಶಃ ಮೊದಲ ಬಾರಿ ಸತ್ತಿದ್ದರಿಂದ ಈ ರೀತಿ ಎಲ್ಲವೂ ತಿಳಿಯುತ್ತಿದೆ" ಎಂದು ಸಮಾಧಾನ ಮಾಡಿಕೊಂಡೆ. ಅಗ್ನಿ ಸ್ಪರ್ಶ ಮಾಡುವುನ್ನು ನಾನು ತಡೆಯಲೇ ಇಲ್ಲ. ಅಗ್ನಿ ನನ್ನ ಸುಟ್ಟಾಗ ಎಷ್ಟರ ಮಟ್ಟಿಗೆ ಬಿಸಿಯಾಗಬಹುದು? ಅಂತ ಯೋಚನೆ ಮಾಡುತ್ತಾಯಿದ್ದೆ. ಬೇಗ ಸುಟ್ಟು ನನ್ನ ಬೂದಿ ಮಾಡಿದರೆ ಸಾಕಪ್ಪ... ಈ ಪ್ರಪಂಚದ ಋಣ ತೀರಿತೆಂದು ಆರಾಮವಾಗಿರ ಬಹುದು ಅಂತ ಯೋಚಿಸುತ್ತಿದ್ದೆ. ಅಗ್ನಿಯು ನನ್ನ ದಹಿಸುತ್ತಾಯಿದ್ದ. ನನ್ನ ಬೆನ್ನಿಗೆ ಅದರ ಅರಿವಾಗುತ್ತಾಯಿತ್ತು. ಆದರೂ ಕಿರುಚಲಿಲ್ಲ. ಅಗ್ನಿಗೆ ನನ್ನ ಮುಖವನ್ನು ಸುಡುವ ಆಸೆಯಾಯಿತು. ಆ ಕೆಲಸವನ್ನು ಪ್ರಾರಂಭಿಸಿದ. ಅವನ ಶಾಖ ಈಗ ವಿಪರೀತವಿತ್ತು. ನನ್ನ ಹೆಣಕ್ಕೆ ಅದನ್ನು ತಡೆಯಲು ಶಕ್ತಿಯಿರಲಿಲ್ಲ! ಚಿತೆಯಿಂದ ಎದ್ದು ಬಿಡ ಬೇಕು ಅಂತ ಅನ್ನಿಸಿತು. ಆದರೆ ನನ್ನನ್ನು ಕಟ್ಟಿಗೆಗಳಿಂದ ಮುಚ್ಚಿದ್ದರಿಂದ ಸ್ವಲ್ಪ ಕಷ್ಟವಾಯಿತು. ಅಗ್ನಿಯ ಶಾಖಕ್ಕಿಂತ ಎದ್ದು ಓಡುವುದು ಉತ್ತಮೆವೆಂದು ಹೇಗೋ ಕಷ್ಟ ಪಟ್ಟು ಚಿತೆಯಿಂದ ಎದ್ದು ನೋಡಿದರೆ.. ನನ್ನ ಮುಖಕ್ಕೆ ಸೂರ್ಯನ ಕಿರಣಗಳು ಚುಂಬಿಸುತ್ತಾಯಿದ್ದವು. ಆಮೇಲೆ ಗೊತ್ತಾಗಿದ್ದು ಅವು ಕಟ್ಟಿಗೆಗಳಲ್ಲ.. ಕಂಬಳಿಗಳು! ಜ್ವರ ಬಂದಿರಲಿಲ್ಲ.. ಕಂಬಳಿಯ ಶಾಖಕ್ಕೆ ಮೈ ಬಿಸಿಯಾಗಿತ್ತು.

15 ಜನ ಸ್ಪಂದಿಸಿರುವರು:

Lakshmi Shashidhar Chaitanya said...

:) :) sikkaapatte kanasu kaaNtidiri....en samachaara ? ;-)

Ittigecement said...

ಅಂತರ್ವಾಣಿ....

ಈ ವಿಚಾರ ಕನಸಿನಲ್ಲೂ ಮಾಡಬೇಡಿ...

ಬಂದಾಗ ಬರುತ್ತದೆ... ನಮ್ಮ ಕೈಯಲ್ಲಿ ಇಲ್ಲ...

ನಿಮಗೆ ಇನ್ನೂ ಸಣ್ಣ ವಯಸ್ಸು...

ಇನ್ನೂ ಜಗತ್ತಿನಲ್ಲಿ ನೋಡುವದು ಬಹಳ ಇದೆ...

ಲೇಖನ ಚೆನ್ನಾಗಿದೆ..
ಧನ್ಯವಾದಗಳು...

sunaath said...

ಇಷ್ಟು ಬೇಗನೇ, ಇಂಥಾ ಕನಸು, ಕಲ್ಪನೆ ಯಾಕ್ರಿ?
ಸ್ವರ್ಗದ ಅಪ್ಸರೆಯರ ಕನಸು ಕಾಣ್ರಪ್ಪಾ!

ಅಂತರ್ವಾಣಿ said...

ಮಾ,
ಕನಸು ಕಾಣೋದು ನನ್ನ ಕೈಲಿಲ್ಲ...

ಪ್ರಕಾಶಣ್ಣ,

ಸಾವನ್ನು ಬಯಸುವರಾರು?

ಸುನಾಥಂಕಲ್,

ಹಿಂದೆ ಅಪ್ಸರೆಯರೂ ಬಂದಿದ್ದರು...

ಆಗ ಬರೆದ ಕವನ:

ಬರೆಯದಾದೆ ಮನದಲ್ಲಿ ಮೂಡಿದ ಭಾವನೆಗಳ
ಮರೆಯದಾದೆ ಇರುಳಲ್ಲಿ ನಾ ಕಂಡ ಕನಸುಗಳ
ನೀಲಾಕಾಶದಿ ತೇಲಿ ಬಂದ ಅಪ್ಸರೆ!
ಮರಳಿ ನೀ ಬಾರೆ! ಮರಳಿ ನೀ ಬಾರೆ!
ಬರೆಯುವೆ ನನ್ನಲ್ಲಾದ ಭಾವನೆಗಳ

ಶ್ವೇತ ವಸ್ತ್ರ ಧರಿಸಿ,
ಕೈ ಬೀಸಿ ಕರೆದೆ.
ನಿನ್ನ ಬಳಿ ಸೇರುವ ಮೊದಲೇ
ಎಲ್ಲಿ ಮಾಯವಾದೆ?
ನಿನ್ನನ್ವೇಷಣೆಯ ವ್ರತ
ಕೈಗೊಳ್ಳುವೆ ಇಂದೆ.

Harisha - ಹರೀಶ said...

ಈ ಕನಸಿಗೆ ಯಾರು ಕಾರಣ?

ಸತ್ತ ಹಾಗೆ ಕನಸು ಬೀಳೋದು ಒಳ್ಳೇದು ಅಂತಾರೆ..

ಸವಿ ಸವಿ ಕನಸು.. ಬೀಳಲಿ ಕನಸು...

Sushma Sindhu said...

ಹಾಯ್,
ನಿಜವಾಗ್ಲೂ ಈ ಕನಸು ಬಂದಾಗ ಎಂಥಾ ಅನುಭವವಾಗಿರಬುಹುದು ಅಂಥ ನನಗೆ exactly feel ಆಗ್ತಿದೆ. ನನಗೆ ಜ್ವರ ಬಂದಿರೋ time ನಲ್ಲೆ ಈ ಕನಸು ಓದಿದ್ದಾಯ್ತು. ಒಳ್ಳೆ coincidence :)

shivu.k said...

ಜಯಶಂಕರ್,

ಇತ್ತೀಚೆಗೆ ನಿಮಗ್ಯಾಕೆ ಇಂಥ ಕನಸು ಬೀಳುತ್ತವೋ ನಾಕಾಣೆ. ಬಹುಶಃ ನಿಮ್ಮ ಆಲೋಚನಾ ದೃಷ್ಠಿ ಸದಾಕಾಲ ಇಂಥ ಯೋಚನೆಗಳಲ್ಲಿ ಮುಳುಗುವುದರಿಂದ ನಿಮಗಿದು ಕನಸಿನಲ್ಲೂ ಕಾಡುತ್ತವೆ...ದಯವಿಟ್ಟು ಮುಂದೆ ಇಂಥವನೆಲ್ಲಾ ಬಿಟ್ಟು....ಹೊಸ ವಿಚಾರಗಳ ತೆವಲು ಹಚ್ಚಿಸಿಕೊಳ್ಳೀ....ನನ್ನ ಅನಿಸಿಕೆಯಂತೆ ಸದ್ಯಕ್ಕೆ ಸುಂದರ ಹುಡುಗಿಯರನ್ನು ಹೆಚ್ಚೆಚ್ಚು ನೋಡಿ...ಅದರಿಂದ ಕೊನೆ ಪಕ್ಷ ಅವರೇ ಕನಸಿನಲ್ಲೂ ಅವೇ ಬರಬಹುದು.....ಬೆಸ್ಟ್ ಅಫ್ ಲಕ್.......

Sushma Sindhu said...

ಹಾಯ್,
ಮತ್ತೊಮ್ಮೆ ನಿಮ್ಮ ಕನಸನ್ನೋದಲು ಬಂದೆ. ನಿಮಗೆ ಬ೦ದ ಕನಸಿಗೆ ಕಾರಣ (ಜ್ವರ) ನಿಮಗೇ ತಿಳಿದಿರುವುದರಿ೦ದ ಈ ಕನಸಿನ ಬಗೆಗೆ ಹೆಚ್ಚಿಗೆ ಹೇಳಲಾರದೇನೋ. ಆದರೆ ನಮಗೆ ಬ೦ದ ಕನಸುಗಳ ಪ್ರತಿ ವಸ್ತುವನ್ನೂ 'ಸ೦ಜ್ಞೆ' ಗಳೆ೦ದು ಪರಿಗಣಿಸಿ ಅವುಗಳ ಮೂಲಕ ಕನಸಿನ ತಿರುಳನ್ನವಲೋಕಿಸುವ ಯತ್ನವನ್ನು ನಾನು ಸಾಕಷ್ಟು ಗಮನಿಸಿದ್ದೇನೆ. ಕನಸಿನ ಹಿ೦ದಿರುವ ವಿಜ್ಞಾನವೇ ಚಮತ್ಕಾರದಿ೦ದ ಕೂಡಿದ್ದು. ಏನೇ ಇರಲಿ ನೀವು ಈ ಕನಸನ್ನು ತು೦ಬಾ ಸರಳವಾಗಿ 'ಕನಸು-ಕನಸು' ಎ೦ದಷ್ಟೇ ಪರಿಗಣಿಸಿ ವಿವರಿಸಿರುವುದು ಮೆಚ್ಚಬೇಕಾದ ವಿಷಯ. ಅದರ ಮೂಲ, ಕಾರಣ, ಪ್ರಭಾವ ಯಾವುದನ್ನೋ ಪರಿಗಣಿಸಿ, ಕೆದಕುವ ಬದಲು ಹೀಗೆ ಅದನ್ನು ಒಮ್ಮೆ ಬರೆದು ನಿರಾಳವಾಗುವುದು ಸರಳ-ಸು೦ದರ ಆಲೋಚನೆ(ಪರಿಹಾರ?) ಎ೦ಬುದು ನನ್ನ ಭಾವನೆ.
~ಸುಷ್ಮ

ಸುಧೇಶ್ ಶೆಟ್ಟಿ said...

hosa varusha kanasina varusha endu yenaadaroo bhavishyavaani baredideya nodi antharvaaniyavare:)

ಚಿತ್ರಾ ಸಂತೋಷ್ said...

ಎಂಥ ಮಾರಾಯ್ರೆ..ಒಳ್ಲೇ ಕನಸು ಬೀಳಲಿ ಅಂಥ ಬೇಡ್ಕೊಳ್ಳಿ..ನಾನಂದ್ರೆ ಒಳ್ಳೆ ಹುಡುಗನ ಕನಸು ಬೀಳಲಿ ಅಂತ ಬೇಡ್ಕೋತಾ ಇದ್ದೇ..ನೀವು ನೋಡಿದ್ರೆ ಸಾಯೋದು..ಮೊಬೈಲು ಮರೆಯೋದು ಅದನ್ನೇ ಕನಸು ಕಾಣ್ತೀರಲ್ಲಾ. ನೋಡ್ರೀ ಇವತ್ತಿನಿಂದ ವಿಭಿನ್ನ ಕನಸು ಕಾಣಕ್ಕೆ ಶುರುಮಾಡಿ.
-ಪ್ರೀತಿಯಿಂದ,
ಚಿತ್ರಾ

ತೇಜಸ್ವಿನಿ ಹೆಗಡೆ said...

ಶಂಕರ್ ಯಾಕ್ರೀ ನಿಮ್ಗೆ ಇಂಥ ಕನಸುಗಳೇ ಬೀಳುತ್ತವೆ? ಪರವಾಗಿಲ್ಲ ಬಿಡಿ.. ಇಂತಹ ಕೆಟ್ಟ ಕನಸುಗಳು ಬಿದ್ದಷ್ಟೂ ನಮ್ಮ ಆಯಸ್ಸು ಜಾಸ್ತಿಯಾಗುತ್ತದೆಂದು ಅಜ್ಜಿ ಹೇಳ್ತಾ ಇದ್ರು :)

ಬಿಸಿಲ ಹನಿ said...

:)ನಿಮ್ಮ ಸಾವಿನ ಕಲ್ಪನೆ ಅದ್ಭುತವಾಗಿದೆ.

Unknown said...

Hehehehe entha kansu kandidhira JS neevu..satthamele en en anubhava agutho nan kaane..adre nimma kansina anubhava odhi heeghe agbahudeno antha matra anisthu..:)
Chennagi baredidira..barithane iri..

-Lilly.

Veena DhanuGowda said...

abbba, Satamelle istyella agtava?
adana nenskondre ome yede jal anuthe
innome itara kanasu kanbedi

ಅಂತರ್ವಾಣಿ said...

ವೀಣಾ ಅವರೆ,
ಸತ್ತ ಮೇಲೆ ಇಷ್ಟೆಲ್ಲಾ ಆಗುತ್ತೋ ಇಲ್ಲವೋ ನಮಗೇನು ಗೊತ್ತಾಗುತ್ತೆ? ನನಗೆ ಬಿದ್ದ ಕನಸನ್ನು ಇಲ್ಲಿ ಬರೆದಿದ್ದೀನಿ ಅಷ್ಟೆ.
ನಾನು ಬೇಕು ಅಂತ ಕನಸು ಕಾಣೋದಿಲ್ಲ. ಅವಷ್ಟಕ್ಕೆ ಅವೇ ಬರುತ್ತವೆ.