ವಿಧ ವಿಧವಾದ ನಿರೀಕ್ಷೆಗಳೇತಕೆ?
ವಿಧಾತನು ಅದನ್ನು ವಿರೋಧಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ಪರಿ ಪರಿಯ ನಿರೀಕ್ಷೆಗಳೇಕೆ ಮನದಲ್ಲಿ?
ಹರಿಯು ಅದನ್ನು ಹುಸಿಯಾಗಿಸಬಲ್ಲ
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ನಿರೀಕ್ಷೆಗಳಿಗಿಡು ಪೂರ್ಣವಿರಾಮ
ಈಡೇರದಿರೆ ಅವು, ಚಿತ್ತ ನಿರ್ನಾಮ!
ನಿರೀಕ್ಷೆಗಳೇ ಬೇಸರದ ಮೂಲ ಅಗ್ರಜ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
13 ಜನ ಸ್ಪಂದಿಸಿರುವರು:
ಜಯಶಂಕರ,
ನಿಮ್ಮ ಕವನ ಚಂದವಾಗಿದ್ದರೂ ಸಹ, ಅದರ ಆಶಯವನ್ನು ನಾನು ಒಪ್ಪಲಾರೆ. ನಿರೀಕ್ಷೆಯೇ ಇಲ್ಲದ ಬಾಳು ಸಪ್ಪೆಯಾದೀತು.
ಅಂತರ್ವಾಣಿ....
ಅಹಾ..!
ಎಷ್ಟು ಸರಳ ಶಬ್ಧಗಳಲ್ಲಿ..
ಚಂದದ ಪದಗಳಲ್ಲಿ..
ನಿರೀಕ್ಷೆಗಳ ಕವನ ...
ಸಮರ್ಥವಾಗಿ ಸೆರೆ ಹಿಡಿದಿದ್ದೀರಿ...
ಅಭಿನಂದನೆಗಳು...
Adke shankar naan heLodu...
"Expect the Unexpected" :-)
baduku sundaravaagirutte...
ಜಯಶಂಕರ್,
ನಿರೀಕ್ಷೆಯ ಬಗ್ಗೆ ನಿಮ್ಮ ಕವನ ಚೆನ್ನಾಗಿದೆ...ಇದನ್ನೋದಿದ ಮೇಲೆ "ನೀರೀಕ್ಷೆಗಳು" ಶೀರ್ಷಿಕೆಯ ಕವನವೊಂದು ನನ್ನ ಖಜಾನೆಯಲ್ಲಿದೆ...ಅದನ್ನು ಹೊರತೆಗೆಯುತ್ತೇನೆ...ಮುಂದೆಂದಾದರೂ ಬ್ಲಾಗಿಗೆ ಹಾಕುತ್ತೇನೆ....
ಸುನಾಥಂಕಲ್,
ಎಲ್ಲ ನಿರೀಕ್ಷೆಗಳು ಬೇಸರ ತರದೇ ಇರಬಹುದು. ಆದರೆ ನನ್ನ ನಿರೀಕ್ಷೆಗಳು ಈಡೇರದೆ ಇದ್ದಾಗ ಬರೆದ ಕವನ.
ಪ್ರಕಾಶಣ್ಣ,
ಥ್ಯಾಂಕ್ಸ್
ರಾಜು
ನಿಜ ನಿನ್ನ ಮಾತು
ಶಿವಣ್ಣ
ನಿಮ್ಮ ಬ್ಲಾಗಿಗೆ ಹಾಕಿ, ಓದುವೆ.
JS nimma kavana thumba chennagi moodi bandidhe..
-Lilly.
ಶಂಕರ್,
ತುಂಬಾ ಸುಂದರವಾಗಿದೆ ನಿಮ್ಮ ಅಗ್ರಜ. :) ನಿರೀಕ್ಷೆಗಳಿರುವುದು ತಪ್ಪಲ್ಲ. ನಿರೀಕ್ಷೆಯನ್ನು ನಿರೀಕ್ಷಿಸದಿರುವುದು ನಮ್ಮ ನಿಯಂತ್ರಣದಲ್ಲೂ ಇಲ್ಲ. ಆದರೆ ನಾವು ನಿರೀಕ್ಷಿಸಿದ್ದು ಆಗಲೇಬೇಕೆಂಬ ಹಠ, ಆಕಾಂಕ್ಷೆ ಅತಿಯಾಗಿರಬಾರದು ಅಷ್ಟೇ. ನಿರೀಕ್ಷೆಯೊಡನೆ ಬಂದದ್ದನ್ನು ಸ್ವೀಕರಿಸುವ ನಿರ್ಲಿಪ್ತತೆಯೂ ಆದಷ್ಟು ಜೊತೆಗಿದ್ದರೆ ನಿರಾಸೆಯಂತೂ ಖಂಡಿತ ಆಗದು ನೋಡಿ.. ಏನಂತೀರಿ? :)
ಜೇ...
ನಿಮ್ಮ ಕವನಗಳ ಚೌಕಟ್ಟು ತು೦ಬಾ ಚೆನ್ನಾಗಿರುತ್ತದೆ. ಕಡಿಮೆ ಪದಗಳಲ್ಲಿ ಕವನದ ಭಾವವನ್ನು ಸಮರ್ಥವಾಗಿ ಸೆರೆಹಿಡಿಯುವ ರೀತಿ ನಿಜಕ್ಕೋ ಚೆನ್ನ.
ನನ್ನದು ಸುನಾಥ್ ಅ೦ಕಲ್ ಅವರದೇ ಅಭಿಪ್ರಾಯ. ನಿರೀಕ್ಷೆಗಳನ್ನು ಇಟ್ಟುಕೊ೦ಡಾಗಲೇ ಆ ನಿರೀಕ್ಷೆ ನಿಜವಾದಾಗ ಎ೦ಜಾಯ್ ಮಾಡಲಾಗುವುದು.... ನನ್ನ ಅಭಿಪ್ರಾಯ ಅಷ್ಟೆ. ನೀವು ಕವನದಲ್ಲಿ ಹೇಳಿರುವುದು ಸಾರ್ವತ್ರಿಕ ಸತ್ಯ:)
ಬದುಕೊಂದು ನಿರೀಕ್ಷೆಗಳ ಆಗರ.ಅದೇ ಇಲ್ಲವಾದರೆ ಬದ್ಕು ನೀರಸವಾಗೋದಿಲ್ವೆ?
ಉದಯ ಇಟಗಿ
ಈಗೇನಾಯಿತು ಅಗ್ರಜ?
ಲಿಲ್ಲಿ,
ಆಗಾಗ ಬಂದು ಸಾಕ್ಷಿ ಇಡುತ್ತಿದ್ದೀರ.. ವಂದನೆಗಳು.
ತೇಜು ಅಕ್ಕ,
ನಾನು ಹೇಳ ಬಯಸಿದ್ದು.. ನೀವು ಹೇಳಿದ್ದೀರ.. :)
ಸುಧೇಶ್,
ನಿಮ್ಮ ಮಾತಿಗೆ ವಂದನೆಗಳು
ಉದಯ ಅವರೆ,
ನಿರೀಕ್ಷೆಗಳು ಮಿತಿ ಮೀರಬಾರದು ಎನ್ನುವ ರೀತಿ ಬರೆದ ಕವನ.
ಹರೀಶ್,
ನಿರೀಕ್ಷೆಗಳಿಂದ ಮನಸ್ಸು ಹಾಳಾದಾಗ ಬರೆದದ್ದು ಇದು. ಈಗ ಸಮಯ ಸಿಕ್ಕಿತೆಂದು ಹಾಕಿದ್ದೇನೆ.
I understand, aadre nirikshegalillade badukilla annodannu neevu yochne maadbeku alvaa ? nirikshe hege besarada mulavO, adu namma mundina hejjege spoortiyaagatte. ella perception.
haa nimma maathu nija...
chennagide!
Post a Comment