Monday, 19 January 2009

ಕನ್ನಡಿಯೊಳಗಿನ ಗಂಟು!

ಕನ್ನಡಿ ತೋರುತಿಹ ಪ್ರತಿಬಿಂಬ ನಿನ್ನದೆ
ಕಣ್ಣು ನೋಡುತಿಹ ಪ್ರತಿ ನೋಟವೂ ನಿನ್ನದೆ

ಪ್ರತಿಬಿಂಬವ ಹಿಡಿದರೆ ನಿನ್ನ ಗಲ್ಲ ಹಿಡಿದಂತಲ್ಲ!
ಪ್ರತಿಬಿಂಬವ ಚುಂಬಿಸಿದರೆ ನಿನ್ನ ತುಟಿ ಸಿಹಿಯಾದಂತಲ್ಲ!
ಪ್ರತಿಬಿಂಬವ ಅಪ್ಪಿದರೆ ನೀ ನನ್ನವಳೆಂದಲ್ಲ
ಪುಷ್ಪವೃಷ್ಟಿಯ ಹರಿಸಿದರೆ ನಿನ್ನ ಪೂಜಿಸಿದಂತಲ್ಲ

ಪ್ರತಿಬಿಂಬಕ್ಕೆ ಸೀರೆ ಉಡಿಸಲಾದೀತೆ?
ಪ್ರತಿಬಿಂಬದ ಹಣೆ ಸಿಂಗರಿಸಲಾದೀತೆ?
ಪ್ರತಿಬಿಂಬಕ್ಕೆ ಜಡೆ ಹೆಣೆಯಲಾದೀತೆ?
ಪ್ರತಿಬಿಂಬಕ್ಕೆ ಹೂವ ಮುಡಿಸಲಾದೀತೆ?

ಭ್ರಮೆಯ ಲೋಕದಲ್ಲಿದ್ದವನು ನಾನು
ನೈಜ ಲೋಕದ ವಿಚಾರ ಹೇಳಬೇಕಿನ್ನು
ನನಗೂ ನಿನಗೂ ಎಲ್ಲಿಯ ನಂಟು
ನೀನೊಂದು ಕನ್ನಡಿಯೊಳಗಿನ ಗಂಟು!

14 ಜನ ಸ್ಪಂದಿಸಿರುವರು:

shivu.k said...

ಜಯಶಂಕರ್,

ಕವನ ಪ್ರಭುದ್ಧವಾಗಿದೆ....ಕವನದಲ್ಲಿ ಪದಗಳ ಪ್ರಯೋಗ ನನಗೆ ಇಷ್ಟವಾಯಿತು....ಕೊನೆಯ ಎರಡು ಸಾಲುಗಳು ಚೆನ್ನಾಗಿ ಮುಗಿಸಿದ್ದೀರಿ.....ಮುಂದುವರಿಸಿ.....

Lakshmi Shashidhar Chaitanya said...

aahaa.....kavana superru..aadre kannadiyoLagina gamTu anno badalu nIvu aa "partibimba" kke mUru gantu haakiddidre namgella bitti oota siktittu....

Ittigecement said...

ಅಂತರ್ವಾಣಿ...

ಎಲ್ಲಿ ಹೋಗಿದ್ದೀರಿ ಇಷ್ಟು ದಿನ...?

ನಿರಾಸೆಯ ಭಾವ ಕವನದಲ್ಲಿ ...
ಬಲು ಚಂದವಾಗಿ ವ್ಯಕ್ತವಾಗಿದೆ...
ಪದಗಳ ಜೋಡಣೆ, ಭಾವಾರ್ಥ ಚೆನ್ನಾಗಿ ಬಿಂಬಿತವಾಗಿದೆ...

ಅಭಿನಂದನೆಗಳು..

sunaath said...

ಜಯಶಂಕರ,
ಸೊಗಸಾದ ಭಾವನೆಯು ಸೊಗಸಾಗಿ ಕವನವಾಗಿದೆ.
ಕನ್ನಡಿಯೊಳಗಿನ ಗಂಟು ನಿಮ್ಮ ಕೈಯಲ್ಲಿಯ ನಂಟಾಗಲಿ ಎಂದು ಹಾರೈಸುತ್ತೇನೆ.

ತೇಜಸ್ವಿನಿ ಹೆಗಡೆ said...

ಶಂಕರ್,

ಯಾರ್ರೀ ಆ ಪ್ರತಿಬಿಂಬ? ಲಕ್ಷ್ಮೀ ಹೇಳಿದಾಂಗೆ ಮಾಡಿದ್ರೆ ಒಳ್ಳೇದಿತ್ತು ನೋಡಿ..:) ಕವನ ನಿಜಕ್ಕೂ ಚೆನ್ನಾಗಿ ಮೂಡಿದೆ. ಜೊತೆಗೆ ಆ ಪ್ರತಿಬಿಂಬ(ಳ) ಫೋಟೋ ಕುಡಾ ಹಾಕಿದ್ದಿದ್ರೆ ಮತ್ತೂ ಚೆನ್ನಾಗಿತ್ತು..:)

Harisha - ಹರೀಶ said...

I second Lakshmi...
ಎರಡನೇ ಸೊಲ್ಲಿನಲ್ಲಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೂ ಉತ್ತರ.. ಯೆಸ್ಸು!

ಅಂತರ್ವಾಣಿ said...

ಶಿವಣ್ಣ,
ವಂದನೆಗಳು.

ಲಕ್ಷ್ಮಿ,
"ಬಿಟ್ಟಿ ಊಟ" ಬೇಕಿದ್ದರೆ ಬಾ ಕೊಡಿಸ್ತೀನಿ ಆದರೆ ಪ್ರತಿಬಿಂಬದ ವಿಷಯಕ್ಕೆ ಬರಬೇಡ...

ಪ್ರಕಾಶಣ್ಣ,
ವಂದನೆಗಳು.

ಸುನಾಥಂಕಲ್,
ನಿಮ್ಮ ಹಾರೈಕೆ ವ್ಯರ್ಥವಾಗಿದೆ..

ತೇಜು ಅಕ್ಕ,
ನೀವೊಬ್ಬರೆ ಆ ಪ್ರತಿಬಿಂಬದ ಚಿತ್ರ ಕೇಳಿದ್ದು... ಸಮಯ ಸಿಕ್ಕಾಗ ತೋರಿಸ್ತೀನಿ. ಲಕ್ಶ್ಮಿ ಹೇಳಿದ ಹಾಗೆ ಮಾಡಲು ಆಗೋದಿಲ್ಲ. ಅದು ಕನ್ನಡಿಯೊಳಗಿನ ಗಂಟು..

ಹರೀಶ್,
ಇಲ್ಲ... ಪ್ರತಿಬಿಂಬ ಸಿಗೋದಿಲ್ಲ.


ಎಲ್ಲಾರಿಗೂ,
ಇಷ್ಟೆಲ್ಲಾ ಆದಮೇಲೆ ಇದು ಚಿತ್ರ[Figure]ಕವನ ಅನ್ನೋದು ಮತ್ತೆ ಬಿಡಿಸಿ ಹೇಳ ಬೇಕಿಲ್ಲ ಅಲ್ವಾ?

ಚಿತ್ರಾ ಸಂತೋಷ್ said...

ನಿರಾಶೆಯ ಭಾವಗಳು 'ಪ್ರತಿಬಿಂಬ'ಗಳಾಗಿವೆ.
ಯಾರು ಶಿವ ಕನ್ನಡಿಯೊಳಗಿನ ಗಂಟು..ನಂಗೊಂಚುರು ಮಾಹಿತಿ ಕೊಡ್ರೀ.
-ಚಿತ್ರಾ

ಸುಧೇಶ್ ಶೆಟ್ಟಿ said...

Kavana sogasaagiththu....
sheershike ishta aayithu... naanu sannavaniruvaaga DD yalli e hesarina serial baruththa iththu...kavana adannu nenapisithu....

haagiddare yaavaaga oota haakisuthideeri.... nannannu kareyalu mareyabedi:)

ಅಂತರ್ವಾಣಿ said...

ಚಿತ್ರಾ,
ನಿಮಗೆ ಫೋಟೋ ತೋರಿಸ್ತೀನಿ...ಗೊತ್ತುಂಟಾ...

ಸುಧೇಶ್,
ನಾನೂ ಕೂಡ ಆ ಹೆಸರಿನ ಧಾರಾವಾಹಿ ನೋಡಿತ್ತಿದ್ದೆ.
ಅಂದಹಾಗೆ ಊಟ ಸದ್ಯಕಿಲ್ಲ...

maddy said...

awesome jay...
chennagi barediddeeri...

bahala dinagalaytu ee kade bandu... nice to see this poem..

Madhu

ಅಂತರ್ವಾಣಿ said...

ಮಧು,
ವಂದನೆಗಳು.
ಆಗಾಗೆ ಬಿಡುವು ಮಾಡಿಕೊಂಡು ಬನ್ನಿ

ಸಾಗರದಾಚೆಯ ಇಂಚರ said...

Wonderful, keep writing

ಅಂತರ್ವಾಣಿ said...

ಡಾ| ಗುರುಮೂರ್ತಿ ಅವರೆ,
ಸ್ವಾಗತ ಅಂತರ್ವಾಣಿಗೆ.

ವಂದನೆಗಳು ನಿಮ್ಮ ಸ್ಪಂದನಕ್ಕೆ.

ಬರುತ್ತಾಯಿರಿ.