Wednesday, 11 March, 2009

ಫಿನ್ ಲ್ಯಾಂಡಿಗೆ ಪ್ರವಾಸ (೨) - ಊರು ಸುತ್ತಾಟ

ಹಿಂದಿನ ಭಾಗ

ನಾನು ಈ ಬಾರಿ ಹೊಟೆಲಿನ ಸುತ್ತ ಮುತ್ತ ಇದ್ದ ಸ್ಥಳಗಳನ್ನೆ ನೋಡಿದ್ದು.

ಮೊದಲ ದಿನ: ಪುಟ್ ಬಾಲ್ ಮ್ಯಾಚ್:

ನಾನು ಸಂಜೆ ಹೋಟೆಲಿಗೆ ಬಂದ ಮೇಲೆ, ಸ್ವಲ್ಪ Fresh ಆಗಿ, ಊರು ಸುತ್ತಾಡಲು ಹೊರಟೆ. ಹೋಟೆಲಿನ ಹತ್ತಿರದಲ್ಲೇ ಒಂದು ಪ್ರಸಿದ್ಧವಾದ ಚರ್ಚು ಇತ್ತು. ನಮ್ಮ ದೇವಸ್ಥಾನದ ಎದುರು ಗರುಡಗಂಬ ಹೇಗೆ ಇರುತ್ತೋ ಅದೇ ರೀತಿ ಈ ಚರ್ಚಿನ ಮುಂದೂ ಒಂದು ಕಂಬ ಇತ್ತು.
ಇಲ್ಲಿಂದ ನಾನು ಕಚೇರಿಯ ಕಡೆ ಹೋದೆ. ಕೆಲಸಕ್ಕಲ್ಲ , ನಮ್ಮ ಕಚೇರಿಯ ಎದುರುಗಡೆಯೇ ಒಂದು ಫುಟ್ ಬಾಲ್ ಮೈದಾನವಿತ್ತು. ಅಲ್ಲಿ ಸ್ವಲ್ಪ ಹೊತ್ತು ಕಳೆಯೋಣವೆಂದು ಹೋದೆ. ಅಲ್ಲಿಯ ಜನರಿಗೆ ಅದು ಒಂದು ದೊಡ್ಡ ಮನರಂಜನೆ ನಮ್ಮಲ್ಲಿ ಕ್ರಿಕೆಟ್ ಇದ್ದ ಹಾಗೆ!
Stadium Housefull! ಸ್ವಲ್ಪ ಹೊತ್ತು ನಿಂತು ಕೊಂಡೆ ವೀಕ್ಷಿಸಿದೆ.


ಅಲ್ಲಿ ಆಟ ಇನ್ನು ಮುಗಿದಿರಲಿಲ್ಲ ನಾನು ಹೊರಟು ಬಿಟ್ಟೆ ಪಕ್ಕದಲ್ಲೇ ಇದ್ದ "Koskikeskus"ಗೆ. ಹೆಸರು ವಿಚಿತ್ರವಾಗಿದೆ ಅಲ್ವಾ? ಇದು ಅಲ್ಲಿಯ ಒಂದು ಶಾಪಿಂಗ್ ಮಾಲ್! ಅಲ್ಲಿ ಒಳಗಡೆ ಸುತ್ತಾಡಿ ಸ್ವಲ್ಪ ಹಸಿದಿತ್ತು. ಅಲ್ಲಿದ್ದ ಒಂದು ಬೇಕರಿಯಲ್ಲಿ ಹೋಗಿ, ಮೆನು ಕಾರ್ಡ್ ನೋಡಿ, ಮಾವಿನ ಹಣ್ಣಿನ ಜ್ಯೂಸ್ ತೆಗೆದು ಕೊಂಡೆ (Guarantee Pure Veg). ೨-೩ ನಿಮಿಷದಲ್ಲಿ ಅದು ತಯಾರಾಯ್ತು. ಬಿಲ್ ೩.೬೦ ಯೂರೋ ( ೨೦೦ ರೂಗಳು). ಆದರೆ ಜ್ಯೂಸ್ ಸುಮಾರು ೩೦೦ ಮಿ.ಲಿ ಇರ ಬಹುದೇನೋ.. ಹೆಚ್ಚು ಕಡಿಮೆ ಊಟದ ಹಾಗೆ ಆಗಿತ್ತು ಅಷ್ಟು ಕುಡಿದದ್ದು. ಕುಡಿಯುತ್ತಿರುವಾಗಲೇ ಅಲ್ಲಿಗೆ Stan ಬಂದರು. ಹಾಗೆ ಸ್ವಲ್ಪ ಹೊತು ಮಾತಾಡಿದೆ. ಅವರು ಫುಟ್ ಬಾಲ್ ನೋಡಲು ಹೋಗುತ್ತೇನೆಂದು ಹೊರಟರು. ನನಗೆ ಮತ್ತೇನು ನೋಡುವ ಕುತೂಹಲ ಇರಲಿಲ್ಲ ಹೊಟೆಲಿಗೆ ಬಂದು MTR ಊಟ ಮಾಡಿ ಮಲಗಿದೆ.

ಎರಡನೆ ದಿನ ಕಲ್ಲು ರಸ್ತೆಯಲ್ಲಿ ವಾಕ್!

ನಮ್ಮ ಹೋಟೆಲಿನ ಎಡ ಭಾಗದ ರಸ್ತೆಯೇ ಈ ಕಲ್ಲಿನ ರಸ್ತೆ Hämeenkatu. ಬರೀ ಕಲ್ಲಿನಿಂದ ಈ ರಸ್ತೆ ನಿರ್ಮಿಸಿದ್ದಾರೆ. ಟಾರ್ ಇಲ್ಲವೇ ಇಲ್ಲ! ಇದು ಇಲ್ಲಿಯ ಮುಖ್ಯ ರಸ್ತೆ. ರೈಲ್ವೇ ನಿಲ್ದಾಣದಿಂದ ತಾಂಪರೆ ಸಿಟಿಯ "Majestic bus stand"ಗೆ ಹೋಗುವ ದಾರಿ. ಅಲ್ಲಿಯ majestic ಹೆಸರು Keskustori! ಮತ್ತೆ ವಿಚಿತ್ರವಾದ ಹೆಸರು :). ಆ ರ್ರಸ್ತೆಯ ಚಿತ್ರ ನೋಡಿ ಇಲ್ಲಿ:

ಈ ರಸ್ತೆಯಲ್ಲಿ ಹೋಗಿ, majestic ತಲುಪಿದೆ. ಆಗ ಸಮಯ ರಾತ್ರಿ ೭.೩೦ ಇರಬಹುದೇನೋ.. ಇಷ್ಟು ಬೆಳಕು ಇತ್ತು ಅಷ್ಟೆ. ಆಗ ಅಲ್ಲಿ ಸೂರ್ಯಾಸ್ತ ೯.೩೦ ನಂತರದಲ್ಲಿ ಇರುತ್ತಿತ್ತು. ಇದು ನಿಜಕ್ಕು ಹೊಸ ಅನುಭವ. ಭಾರತದಲ್ಲಿ ಸುಮಾರು ೬.೫೦ - ೬.೫೫ ಕ್ಕೂ ಸೂರ್ಯಾಸ್ತವಾಗಿದ್ದು ನೋಡಿದ್ದೆ.
ಇದಾದ ನಂತರ ಹಿಂದಿರುಗಿ ಬಂದು ಬಿಟ್ಟೆ.

ಮೂರನೆ ದಿನ: "ಮತ್ತದೆ ರಸ್ತೆ.. ಅದೇ ವಾಕು,.. ಅದೇ ಏಕಾಂತ...."
ಈ ಹಾಡನ್ನು ಜ್ಞಾಪಿಸಿಕೊಂಡಾಗ ಮನಸ್ಸಿಗೆ ಬರುವವಳೇ ..’ಕಲ್ಯಾಣಿ’.

ನಾನು ಫಿನ್ ಲ್ಯಾಂಡಿನಲ್ಲಿ ಇದ್ದ ಮೇಲೆ ಅಲ್ಲಿಯ Lake ಗಳನ್ನು ತೋರಿಸದಿದ್ದರೆ ನೀವು ನಂಬುವುದೇ ಇಲ್ಲ ನಾನು ಫಿನ್ ಲ್ಯಾಂಡಿಗೆ ಹೋಗಿದ್ದೆ ಅಂತ. ಏಕೆಂದರೆ ಆ ನಾಡನ್ನು "Land of Thousand Lakes" ಅಂತ ಕರೆಯುತ್ತಾರೆ. ಚಿಕ್ಕವಯಸ್ಸಿನಲ್ಲಿ ಸಾಮಾನ್ಯ ಜ್ಞಾನ (General Knowledge) ಪುಸ್ತಕದಲ್ಲಿ ಓದಿದ್ದಾಗ ನಾನು ಕನಸು ಕಂಡಿರಲಿಲ್ಲ ಇಲ್ಲಿಗೆ ಬರುತ್ತೇನೆಂದು.

Keskustori (majestic) ಯ ಸಮೀಪದಲ್ಲೆ ಈ ಜಾಗವಿತ್ತು. ಅಲ್ಲೊಬ್ಬ ವಿದೇಶಿ (ಕೋರಿಯಾ ಅಥವಾ ಜಪಾನ್ ದೇಶದವನು) ಅನೇಕ ಫೋಟೋ ತೆಗಿತಾಯಿದ್ದ. ಭರ್ಜರಿಯಾದ SLR ಕ್ಯಾಮಾರವೇ ಆ ಚಿತ್ರಗಳನ್ನು ಸೆರೆಹಿಡಿಯುತ್ತಿತ್ತು . ಈತನ ಕೈಯಿಂದ ಫೋಟೋ ತೆಗೆಸಿಕೊಳ್ಳ ಬಹುದು ಎಂದು ಅವನ ಬಳಿ ಹೋಗಿ, "ದಯವಿಟ್ಟು ಒಂದು ಫೋಟೋ ತೆಗೆದು ಕೋಡುತ್ತೀರೇನ್ರಿ?" ಅಂತ ಕೇಳಿದೆ. ಅದಕ್ಕೆ ಆತ ನಿಸ್ಸಂಕೋಚವಾಗಿ "ಆಗಲ್ಲ ಕಣ್ರೀ" ಅನ್ನೋದೆ? ಆಮೇಲೆ "ಏನು ಊರಿಗೊಬ್ಬಳೇನಾ (ಒಬ್ಬನೇನಾ) ಪದ್ಮಾವತಿ (ಶ್ರೀನಿವಾಸ)?" ಅಂತ ಅಲ್ಲಿ ಸಿಕ್ಕ ಮತ್ತೊಬ್ಬರನ್ನು ಕೇಳಿದಾಗ ಆತ, ಸರಿ ತೆಗೆದು ಕೊಡುತ್ತೇನೆಂದು ಹೇಳಿ, ಈ ಫೋಟೋ ತೆಗೆದ.

8 ಜನ ಸ್ಪಂದಿಸಿರುವರು:

sunaath said...

ಮತ್ತೆ ಮತ್ತೆ ಕುತೂಹಲ ಕೆರಳಿಸುವ ಮಾಹಿತಿ.
Carry on, ಜಯಪ್ರಕಾಶ!

ಶಂಕರ ಪ್ರಸಾದ said...

ಸ್ವಾಮಿ, ಯೂರೋಪಿಗೆ ಬಂದಾಗ, ಒಂದು ಯೂರೋ ನಾ ಒಂದು ರುಪಾಯಿ ಅಂತಾನೆ ನೋಡಬೇಕು.
ಹೀಗೆ ೩ ಯೂರೋ ಗೆ ನೀವು ೨೦೦ ರೂ ಅಂತಾ ಅನ್ಕೊಂಡು ಕುಡಿದರೆ, ಮಾವಿನಹಣ್ಣಿನ ಜ್ಯೂಸ್ ಕೂಡಾ ಬೇವಿನ ರಸ ಇದ್ದಹಾಗೆ ಇರುತ್ತೆ. ಯಾಕೆ ೧ ಯೂರೋ ನಾ ೧ ರುಪಾಯಿ ಅನ್ಕೊಬೇಕು ಅಂತಾ ಹೇಳ್ತೀನಿ ಕೇಳಿ.
ನೀವು ಅಲ್ಲಿಗೆ ಹೋದಾಗ, ನಿಮಗೆ ರುಪಾಯಲ್ಲಿ ಆಲೋವೆನ್ಸ್ (Allowance) ಕೊಡ್ತಾರೋ ಅಥವಾ ರುಪಾಯಿಯಲ್ಲಿ ಕೊಡ್ತಾರೋ? ಯಾವ ದುಡ್ಡು ಇರುತ್ತೋ ಆ ಲೆಕ್ಕದಲ್ಲಿ ಖರ್ಚು ಮಾಡಬೇಕು. ಈ ಥರ Currency convert ಮಾಡ್ತಾ ಇದ್ರೆ, ದೇವರಾಣೆ ಬದುಕೋಕ್ಕೆ ಆಗಲ್ಲ ಎಲ್ಲಿಯೂ.

ಕಟ್ಟೆ ಶಂಕ್ರ

ತೇಜಸ್ವಿನಿ ಹೆಗಡೆ- said...

ಶಂಕರ್,

"Land of Thousand Lakes" ಅಬ್ಬಾ!! ಇಂತಹ ಸುಂದರ ತಾಣದಲ್ಲಿ ವಿಹರಿಸಿದ ನೀವೇ ಭಾಗ್ಯವಂತರು ಬಿಡಿ. ನನಗೆ ಕೆರೆ, ಕೊಳಗಳೆಂದರೆ ಪಂಚಪ್ರಾಣ. ಮುಂದಿನ ಪೋಸ್ಟ್‌ನಲ್ಲಿ ಆದಷ್ಟು ಕೆರೆಗಳ ಚಿತ್ರಗಳನ್ನು ಹಾಕಬೇಕಾಗಿ ವಿನಂತಿ.

ಸಿಮೆಂಟು ಮರಳಿನ ಮಧ್ಯೆ said...

ಅಂತರ್ವಾಣಿ...

ನಿಮ್ಮ ಪ್ರವಾಸ ಕಥನಗಳು ತುಂಬಾ ಚೆನ್ನಾಗಿರುತ್ತವೆ...

ಈ ಬಾರಿ ಫೋಟೊಗಳು ಮೆರಗು ಕೊಟ್ಟಿವೆ..

ಕಲ್ಲಿನ ರಸ್ತೆ..
ಇಟ್ಟಿಗೆಯಿಂದ ಮಾಡಿದಂತಿದೆ...

ನಿಜವಾ..?

ಚಂದದ ಬರವಣಿಗೆ

ಅಭಿನಂದನೆಗಳು...

ಅಂತರ್ವಾಣಿ said...

ಸುನಾಥಂಕಲ್,
ಮತ್ತೆ ಮತ್ತೆ ನಿರೂಪಿಸುತ್ತಾಯಿದ್ದೀರ...ನಿಮಗೆ ೬೦ ದಾಟಿದೆ ಅಂತ..(ನನ್ನ ಹೆಸರು ತಪ್ಪು ಕರೆದರೂ ಪರವಾಗಿಲ್ಲ.. :))
ತಪ್ಪಲ್ಲೇ ನಿಜ ಬರೆದಿದ್ದೀರ..
Carry on, ಜಯಪ್ರಕಾಶ!-> ಜಯಶoCar

ಶಂಕ್ರಣ್ಣ,
:)

ತೇಜು ಅಕ್ಕ,
ಸಾವಿರ ಕೆರೆ ನೋಡೋ ಸೌಭಾಗ್ಯ ಸಿಗಲಿಲ್ಲ. ಆದರೂ ಅಲ್ಲಿ ಎಲ್ಲಿ ನೋಡಿದರೆ ಅಲ್ಲಿ ಕೆರೆ ಕಾಣುತ್ತೆ. (Google map ನಲ್ಲೂ ಗಮನಿಸಿ)

ಪ್ರಕಾಶಣ್ಣ,
ತುಂಬಾ ಕಾಯಿಸಿಬಿಟ್ಟೆ ಈ ಪೋಸ್ಟಿಗೆ..

ಆ ರಸ್ತೆ ಕಲ್ಲಿಂದಲೇ ಮಾಡಿದ್ದಾರೆ.

ಬಿಸಿಲ ಹನಿ said...

ಜಯಶಂಕರ್ ಅವರೆ,
ಸರೋವರ ನಗರ ಎಂದೇ ಖ್ಯಾತಿ ಪಡೆದ ಫಿನ್ಲ್ಯಾಂಡ್ ಪ್ರವಾಸ ಕಥನ ಸೊಗಸಾಗಿ ಮೂಡಿ ಬಂದಿದೆ.ಮುಂದಿನ ಕಂತುಗಳಿಗಾಗಿ ಕಾಯುತ್ತಿರುತ್ತೇನೆ.

PARAANJAPE K.N. said...

ಜಯಶ೦ಕರ,
ನಮಸ್ಕಾರ, ನಾನು ನಿಮ್ಮ ಬ್ಲಾಗನ್ನು ಮೊದಲಿ೦ದಲೂ ನೋಡುತ್ತಾ ಬ೦ದಿದ್ದೇನೆ. ಚೆನ್ನಾಗಿದೆ. ಪ್ರವಾಸ ಲೇಖನ ಇಷ್ಟವಾಯಿತು. ಫೋಟೋಗಳು ಚೆನ್ನಾಗಿವೆ. ನಾನು ನಿಮ್ಮ ಬ್ಲಾಗನ್ನು ಅನುಸರಿಸುತ್ತಿದ್ದೇನೆ. ನೀವು ನನ್ನ ಬ್ಲಾಗನು ಅನುಸರಿಸಿ, ಭೇಟಿ ಕೊಡುತ್ತಾ ಪ್ರೋತ್ಸಾಹಿಸಿದಲ್ಲಿ ಸ೦ತೋಷವಾಗುತ್ತದೆ.

gore said...

ನಿಮ್ಮ ಉತ್ತಮ ಲೇಖನಕ್ಕೆ ಚೆಂದದ ಫೋಟೋಗಳು ಸಾಥ್ ಕೊಟ್ಟಿವೆ... ಧನ್ಯವಾದಗಳು
http://ravikanth-gore.blogspot.com