ಗುಬ್ಬಿ ಮರಿ ಎಲ್ಲಮ್ಮ?
ಕಣ್ಣಿಗೇಕೋ ಕಾಣದಮ್ಮ
ನನ್ನ ಸಂಗ ಬೇಡವೆಂದು
ತೊರೆದು ಹೋಯಿತೇನಮ್ಮ?
ಕಾಗೆಗೆ ಗೆಳೆಯನಿಲ್ಲಮ್ಮ
ಕಾಳನು ತಿನ್ನುವರಿಲ್ಲಮ್ಮ
ಏಕೆ ಹೀಗಾಯಿತೆಂದು
ಒಮ್ಮೆ ನನಗೆ ಹೇಳಮ್ಮ
ಆಟಿಕೆ ಗುಬ್ಬಿ ಬೇಡಮ್ಮ
ಹಾರುವ ಗುಬ್ಬಿ ತೋರಿಸಮ್ಮ
ಮರದ ಪುಟ್ಟ ಗೂಡಿನಲ್ಲಿ
ಕೂರುವ ಗುಬ್ಬಿ ಬೇಕಮ್ಮ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
12 ಜನ ಸ್ಪಂದಿಸಿರುವರು:
aah ! gubbacchi...reminded me of my childhood. ittichege hanumatanagaradalli nijvaada gubbigalu kaaniskondidvante..
ಇದು ಸುಂದರವಾದ ಶಿಶುಗೀತೆ.
ಅಂತರ್ವಾಣಿ...
ಮಕ್ಕಳಾಗಿ ಬರೆದರೆ ಮಾತ್ರ ಈ ರೀತಿ ಕವಿತೆ ಬರಲು ಸಾಧ್ಯ...
ಸರಳ ಭಾಷೆಯಲ್ಲಿ ಮುಗ್ಧತನವಿದೆ..
ಸುಂದರ ಕವನಕ್ಕೆ
ಅಭಿನಂದನೆಗಳು...
ಗುಬ್ಬಚ್ಚಿಗಳೇ ಮಾಯವಾಗಿ ಹೋಗಿರುವ ಈ ದಿನಮಾನದಲ್ಲಿ ಮತ್ತೆ ಅವನ್ನು ಕವನದ ಮೂಲಕ ನೆನಪಿಸಿದಿರಿ.ಚೆನ್ನಾಗಿದೆ, ಮು೦ದುವರಿಸಿ
ಜಯಶಂಕರ್,
ಗುಬ್ಬಿ ಮರಿ ಕವನವನ್ನು ಓದುತ್ತಾ ನಾನು ಮಗುವಾದೆ...ಅಂದಮೇಲೆ ನೀವು ಬರೆಯುವಾಗ ನೀವು ಮಗುವಾಗಿದ್ದೀರಿ ತಾನೆ...
ತುಂಬ ಚೆನ್ನಾಗಿದೆ
ಅಂತರ್ವಾಣಿ,
ತುಂಬಾ ಸುಂದರ ಕವಿತೆ,
ಯುಗಾದಿಯ ಹಾರ್ದಿಕ ಶುಭಾಶಯಗಳು.
ಎಲ್ಲಾರಿಗೂ ವಂದನೆಗಳು
ಜೇ...
ಸರಳ ಮತ್ತು ಸು೦ದರ ಕವನ... ಮಕ್ಕಳು ಖ೦ಡಿತ ಇಷ್ಟ ಪಡುವ೦ತಹುದು....
ಚಿಕ್ಕವನಿದ್ದಾಗ ಮನೆಯಲ್ಲಿ ೪-೫ ಗುಬ್ಬಚ್ಚಿ ಗೂಡುಗಳಿದ್ದವು... ಆದರೆ ಈಗ ಆಟಿಕೆ ಗುಬ್ಬಚ್ಚಿ ಬಿಟ್ಟರೆ ಹಾರುವ ಗುಬ್ಬಚ್ಚಿ ಕಾಣದು.. ಕವನ ಚೆನ್ನಾಗಿತ್ತು...
ಸುಧೇಶ್,
ಧನ್ಯವಾದಗಳು
ರವಿಕಾಂತ್ ಅವರೆ,
ಧನ್ಯವಾದಗಳು
ಚಿಕ್ಕವಯಸ್ಸಿನಲ್ಲಿ ನಮ್ಮ ಕಣ್ಣೆದುರು ಹಾರುತ್ತಿದ್ದವು ಗುಬ್ಬಿಗಳು. ಅದೇ ನೆನಪಿನಲ್ಲಿ ಬರೆದ ಕವನ.
ತುಂಬಾ ಹಿಡಿಸಿತು ಜಯಶಂಕರ್. ರೀ ನಿಮ್ ಕವನಗಳನ್ನು ಓದುತ್ತಾ ಓದುತ್ತಾ ನಾವೂ ಮಕ್ಕಳಾಗಿಬಿಡ್ತೀವಿ ಕಣ್ರೀ.
-ಧರಿತ್ರಿ
Post a Comment