ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಚಂದಿರನಲ್ಲಿ, ಚಂದ್ರಮುಖಿಯಿಲ್ಲಿ!
ಭಾವನೆ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!
ಅಲ್ಲಿ ನೋಡಲೋ? ಇಲ್ಲಿ ನೋಡಲೋ?
ಜಲಪಾತವಲ್ಲಿ, ಕಪ್ಪು ಝರಿಯಿಲ್ಲಿ!
ಕಣ್ಣ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!
ಅದ ಸವಿಯಲೋ? ಇದ ಸವಿಯಲೋ?
ಜೇನು ಅಲ್ಲಿ, ಗುಲಾಬಿ ತುಟಿಯಿಲ್ಲಿ
ತುಟಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ!
ಅಲ್ಲಿ ಕೇಳಲೋ? ಇಲ್ಲಿ ಕೇಳಲೋ?
ಕೋಗಿಲೆಯು ಅಲ್ಲಿ, ಇಂಪಾದ ದನಿಯಿಲ್ಲಿ
ಕಿವಿಯ ತಕ್ಕಡಿಯಲಿ ತೂಗಲು
ಯಾವುದೂ ಹೆಚ್ಚಿಲ್ಲ, ಕಡಿಮೆಯಿಲ್ಲ
ಅದ ಬಯಸಲೋ? ಇದ ಬಯಸಲೋ?
ಗೊಂದಲ ನನ್ನದು
ಅದನ್ನು ಬಯಸುತಾ, ಇದನ್ನೂ ಬಯಸುವ
ಹಂಬಲ ನನ್ನದು
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
12 ಜನ ಸ್ಪಂದಿಸಿರುವರು:
ಅಂತರ್ವಾಣಿ...
ಬಹಳ ಸೊಗಸಾಗಿದೆ...
ಸೌಂದರ್ಯವನ್ನು ಬಣ್ಣಿಸಿ....
ಚಂದದ ಪದಗಳಲ್ಲಿ ತೂಗಿಸಿ...
ಮತ್ತೇರುವ ಹಾಗೆ ಮಾಡಿದ್ದೀರಿ..
ಚಂದದ ಕವನಕ್ಕೆ
ಅಭಿನಂದನೆಗಳು...
ಅಂತರ್ವಾಣಿ,
ಬಹಳ ಸೊಗಸಾದ ಕವನ, ಸೋನುದರ್ಯದ ವರ್ಣನೆ ಅದ್ಭುತ, ಅಭಿನಂದನೆಗಳು
ಜಯಶ೦ಕರ,
Romantic ಆಗಿದೆ ಕವನ. ಪದಜೋಡಣೆಯೂ ಚೆನ್ನಾಗಿದೆ. ಎಲ್ಲಿ೦ದ ಬ೦ತು ಸ್ಪೂರ್ತಿ ಇ೦ತಹ ಸೌಂದರ್ಯ ವರ್ಣನೆ ಮಾಡೋಕೆ ? ಏನ್ಸಮಾಚಾರಾ ?? ಸ್ವಲ್ಪ ಹೇಳ್ತೀರಾ ?
ಜಯ ಶಂಕರ್ ಅವರೆ,
"ಅದ ಬಯಸಲೋ? ಇದ ಬಯಸಲೋ?
ಗೊಂದಲ ನನ್ನದು
ಅದನ್ನು ಬಯಸುತಾ, ಇದನ್ನೂ ಬಯಸುವ
ಹಂಬಲ ನನ್ನದು"
ಈ ಸಾಲುಗಳು ಮನುಷ್ಯನ ಸಂದಿಗ್ಧತೆಯನ್ನು ಚನ್ನಾಗಿ ವಿವರಿಸುತ್ತವೆ.
ಹ್ಮ್ಮ್...ಸೂಪರ್ರಾಗಿದೆ ಕವನ ಹೆಚ್ಚಿಲ್ಲ ಕಡಿಮೆ ಇಲ್ಲ !
ಪ್ರಕಾಶಣ್ಣ,
ಇದರಿಂದ ಮತ್ತೇರಿತೇ?..
ಡಾ!,
ವಂದನೆಗಳು.
ಪರಾಂಜಪೆಯವರೆ,
ಅಕ್ಕ ಪಕ್ಕದಲ್ಲಿ ಸಿಗುತ್ತೆ ಸ್ಫೂರ್ತಿ :)
ಉದಯ ಅವರೆ,
ವಂದನೆಗಳು
ಮಾ,
ಕಾಮೆಂಟೂ ಅಷ್ಟೇ ಹೆಚ್ಚಿಲ್ಲ ಕಡಿಮೆಯಿಲ್ಲ :)
ಜಯಶಂಕರ್,
ಕವನ ಬಹಳ ಸರಳವಾಗಿ ಸೊಗಸಾಗಿದೆ...
ಮನಸ್ಸಿನ ಆಸೆಗಳನ್ನು ಸರಳವಾಗಿ ವಿವರಿಸಿದ್ದೀರಿ...
ಅಭಿನಂದನೆಗಳು...
ಜಯಪ್ರಕಾಶ,
‘ಅದನು ಬಯಸಲೊ ಇದನು ಬಯಸಲೊ’ ಎನ್ನುವ ಸಂದೇಹ ನಿಮ್ಮನ್ನು ಯಾಕೆ ಕಾಡ್ತಾ ಇದೆ? ‘ಇಲ್ಲಿ’ ಇಷ್ಟು ಸುಂದರವಾಗಿರೋದು ನಿಮ್ಮ ಕೈಯಾತೆಯಲ್ಲೇ ಇದ್ದಾಗ ‘ಇದನ್ನೇ’ ಬಯಸೋದು ಒಳ್ಳೇದು ಅಂತ ನನ್ನ ಅನುಭವ ಹೇಳ್ತದೆ, ತಮ್ಮಾ!
ನಮಸ್ತೆ,
ಕನ್ನಡದ ಎಲ್ಲ ಯುವ ಕವಿಗಳನ್ನು ಒಂದು ಗೂಡಿಸಲು ವೇದಿಕೆಯಾಗಿ ಯುವ ಕವಿ ಯನ್ನು ಪ್ರಾರಂಭಿಸುತ್ತಿದ್ದೇವೆ. ಕನ್ನಡದ ಎಲ್ಲ ಕವಿಗಳು ಮತ್ತು ಕಾವ್ಯ ಪ್ರೇಮಿಗಳು ಜೊತೆಸೇರಿ ಕಾವ್ಯವನ್ನು ಓದೋಣ, ಕಾವ್ಯವನ್ನು ಚರ್ಚಿಸೋಣ. ನಮ್ಮೊಡನೆ ಸೇರಿ..
http://yuvakavi.ning.com/
ಜಯಶಂಕರ್ ಕವನ ತುಂಬಾ ಚೆನ್ನಾಗಿದೆ. ಅದ್ಸರಿ ಎಲ್ಲಿ ನೋಡಿ ಈ ಕವನ ಬರೆದಿದ್ದು? ಯಾರನ್ನು ನೋಡ್ತಾ ಇದ್ದೀರಿ. ತಿಳಿಸಿಕೊಡ್ತೀರಾ ಮಾರಾಯ್ರೆ.
-ಧರಿತ್ರಿ
ಅಕ್ಕ ಪಕ್ಕ ಯಾರಿರ್ತಾರೆ ಅಂತ ಸ್ವಲ್ಪ ಬಿಡಿಸಿ ಹೇಳಿದ್ರೆ ಆಗ್ತಿರ್ಲಿಲ್ವಾ .. ನಮ್ಮ general knowledge ಹೆಚ್ಚಿಗೆ ಆಗ್ತಿತ್ತು.. ;-)
"ಕಡಿಮಿಯಿಲ್ಲ" ಎಂಬುದಕ್ಕಿಂತ "ಕಡಿಮೆಯಿಲ್ಲ"ಎಂದು ಬಳಸಿದ್ದರೆ ಚೆನ್ನಾಗಿತ್ತು ಅನ್ಸುತ್ತೆ..
hari,
akka pakkadalli yaarirtaare anthe naanu hELOdakkintha neenu bandu nODabEku..
nanna tappannu tiddikoLLuttEne. thumbaa thnx.
Post a Comment