ಆಕಸ್ಮಿಕದಿ ಸಿಕ್ಕ ಈ ಪೋರ
ಆ ದೇವರು ಕೊಟ್ಟ ವರ!
ಆಗಂತುಕನೆನೆಸಿದರೂ
ಆತ್ಮೀಯನಾದ ಚೋರ!
ಸ್ನೇಹಕ್ಕೊಪ್ಪಿಗೆ ನೀಡಿದೆ
ಸ್ನೇಹಕೂಪವ ನೋಡಿದೆ
ಮನವು ಮೆಚ್ಚಿದ ಮಿತ್ರನಿವನೆ
ಎಂದು ನಾನು ಹಿಗ್ಗಿದೆ!
ಅಭಿರುಚಿಯು ಒಂದಾಗಿದೆ
ಅಭಿಮಾನವು ಹೆಚ್ಚಾಗಿದೆ
ಜೀವನದಂತ್ಯದವರೆಗೂ
ಇವನ ಸ್ನೇಹ ಬೇಕಾಗಿದೆ!
ಅಣ್ಣನಾದ ನನಗೆ
ತಮ್ಮನಾದೆ ಅವನಿಗೆ
ವಂದಿಸುವೆ ಆ ವಿಧಿಗೆ
ವಂದಿಸುವೆ ಈ ನಿಧಿಗೆ!
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
17 ಜನ ಸ್ಪಂದಿಸಿರುವರು:
ಆ ದೇವರು ಕೊಟ್ಟ ವರನ, ಆ ಚೋರನ, ಆ ಪೋರನ, ಅಣ್ಣನ - ಹೆಸರೇನಪ್ಪ?
ಜಯಶ೦ಕರ,
ಅಣ್ಣನ ಬಗ್ಗೆ ಕವಿತೆ ಸರಳವಾಗಿ ಚೆನ್ನಾಗಿದೆ. ನನ್ನ ಬ್ಲಾಗಲ್ಲಿನ ನೀವು ಚುಟುಕನ್ನು ಫೈನ್ ಟ್ಯೂನ್ ಮಾಡಿ ಹೊಸ ಹೊಳಹು ಕೊಟ್ಟಿದ್ದಕ್ಕೆ ವ೦ದನೆ. ನೀವು ತು೦ಬಾ ಚೆನ್ನಾಗಿ ಕವಿತೆ ಬರೆಯುತ್ತಿರಿ. ಖುಶಿಯಾಯಿತು.
ಜಯಶಂಕರ್,
ತಮ್ಮನ ಬಗ್ಗೆ ಒಲವಿನ ಕವನ....ಓಕೆ...
ಆದರೆ ಆತನ ಹೆಸರಿಲ್ಲಾ ಯಾಕೆ?
ellarigu vandanegaLu
hesaru aagale kavanadalle ide gamanisi :)
Nice one jay
nidhi anta na hesru ? poem chennagide
ಚನ್ನಾಗಿದೆ ರೀ..
ಅಂತರ್ವಾಣಿ...
ಬರಲಿಕ್ಕೆ ತಡವಾಯಿತು...
ಟ್ರಾಫಿಕ್ ಸಮಸ್ಯೆ....ಕ್ಷಮೆ ಇರಲಿ
ಸೊಗಸಾದ ಕವನ....
ಆ ಅಣ್ಣನ ಹೆಸರು"ಐಶ್ವರ್ಯ" ಅಂತನಾ...?
ಹೆಸರು ಹೇಳಿ ಮಾರಾಯರೆ..!
jayashankar,wonderful poem
thnx
ಪ್ರಕಾಶಣ್ಣ,
ಅಣ್ಣ ಅಂದ ಮೇಲೆ ಐಶ್ವರ್ಯ ಅಂತ ಹೆಸರು ಇಟ್ಟು ಕೊಳ್ಳಲು ಸಾಧ್ಯವಾ?
ತು೦ಬಾ ಚೆನ್ನಾಗಿದೆ ಜೇ ಕವನ....
ಲಕ್ಷ್ಮಿಯವರು ಹೇಳಿದ೦ತೆ ನಿಧಿ ಅ೦ತ ಇರಬಹುದೇ ನಿಮ್ಮ ತಮ್ಮನ ಹೆಸರು....?
kavana chennagittu...
ಅಣ್ಣನಾದ ನನಗೆ
ತಮ್ಮನಾದೆ ಅವನಿಗೆ
ವಂದಿಸುವೆ ಆ ವಿಧಿಗೆ
ವಂದಿಸುವೆ ಈ ನಿಧಿಗೆ!
ಅಣ್ಣನೆಂಬ ನಿಧಿಗೆ....ಸೂಪರ್ ಕವನ ಜಯಶಂಕರ್. ನಂಗೂ ಅಣ್ಣ ಅಂದ್ರೆ ತುಂಬಾ ಇಷ್ಟ.
-ಧರಿತ್ರಿ
ಎಲ್ಲಾರಿಗೂ
ವಂದನೆಗಳು
ಅಂತರ್ವಾಣಿ...
ಗಂಡು ಮಕ್ಕಳಿಗೆ ಐಶ್ವರ್ಯ ಅಂತ ಹೆಸರು ಇರುತ್ತದೆ...
ಸ್ವಲ್ಪ ದಿನಗಳ ಹಿಂದೆ ಝೀ ಟಿವಿಯಲ್ಲಿ(ಹಿಂದಿ) ಯಲ್ಲಿ
ಐಶ್ವರ್ಯ ಅಂತ ಹುಡುಗ ಹಾಡಲು ಬಂದಿದ್ದ...
ಒಳ್ಳೆಯ ಹಾಡುಗಾರನಾಗಿದ್ದ...
ಕೊನೆಗೂ ಹೆಸರು ಬಾಯ್ಬಿಟ್ಟೇ ಇಲ್ಲ.. :-(
nanna kavanadalle hesaru beretu hOgide.. :)
Post a Comment