ಹುಟ್ಟಿನಲ್ಲಿ ಸಂತಸ
ಸಾವಿನಲ್ಲಿ ಶೋಕ
ಹೋಯಿತೊಂದು ಜೀವ
ಬಿಟ್ಟು ಈ ಲೋಕ
ಹುಟ್ಟಿನಲ್ಲಿ ಆನಂದ
ಸಾವಿನಲ್ಲಿ ಕಂಬನಿ
ನನ್ನ ಪ್ರೀತಿಸಿದ ಜೀವ
ಬಿಟ್ಟು ಹೋಯಿತು ಧರಣಿ
ಹುಟ್ಟಿನಲ್ಲಿ ಸಂಭ್ರಮ
ಸಾವಿನಲ್ಲಿ ಸಂಕಟ
ನಾ ಪ್ರೀತಿಸಿದ ಜೀವಕೆ
ಮುಂದಿಲ್ಲ ಲೋಕದ ಜಂಜಾಟ
---
ಬದುಕಿದ್ದಿದ್ದರೆ ೭೯ ವರ್ಷವಾಗಿರೋದು..
ಈಗ ೩ ತಿಂಗಳಾಗಿದೆ..
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
9 ಜನ ಸ್ಪಂದಿಸಿರುವರು:
ಹುಟ್ಟು-ಸಾವಿನ ನಡುವೆಯೂ ಇರೋದು ಅದೇ ಕಂಬನಿ, ಅದೇ ಶೋಕ, ಅದೇ ಸಂತಸ ಅಲ್ವೇ? ಒಳ್ಳೆ ಕವನ. ಅಭಿನಂದನೆಗಳು.
-ಧರಿತ್ರಿ
ಜಯಶಂಕರ್,
ಹುಟ್ಟು ಸಾವಿನ ಕವನ ಚೆನ್ನಾಗಿದೆ...
kaalaaya tasmai namah
ಎಲ್ಲರಿಗೂ ಧನ್ಯವಾದಗಳು..ನಗಿಸೋ ಮಧ್ಯೆ ಈ ದುಃಖವಾಣಿಯನ್ನೂ ಹಂಚಿಕೊಂಡಿದ್ದೇನೆ
ಜಯಶಂಕರ,
ನಿಮ್ಮ ದುಃಖದಲ್ಲಿ ನಾನೂ ಭಾಗಿ.
ದೇವರು ನಿಮಗೆ ದುಃಖವನ್ನು ಸಹಿಸುವ ಶಕ್ತಿಯನ್ನು ಕೊಡಲಿ.
ಜಯಶ೦ಕರ
ಚೆನ್ನಾಗಿದೆ, ಮು೦ದುವರಿಯಲಿ
nice!!
ಹುಟ್ಟು ಸಾವಿನ ಬಗ್ಗೆ .. ಒಳ್ಳೆಯ ಕವನ....ಚೆನ್ನಾಗಿ ಮೂಡಿ ಬಂದಿದೆ
ಗುರು
ಚೆನ್ನಾಗಿದೆ ಕವನ.... ಯಾರ ಬಗ್ಗೆ ಬರೆದಿದ್ದೀರೋ ಗೊತ್ತಿಲ್ಲ... ಆದರೂ ನಿಮಗೆ ದು:ಖ ಸಹಿಸುವ ಶಕ್ತಿಯಿರಲಿ...
Post a Comment