ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ
ಹಕ್ಕಿಗಳದೊಂದು ಪುಟ್ಟ ಸಂಸಾರ
ಸಂಬಂಧಗಳು ಸೇರಿದಾಗದು ಸಾಗರ
ಮರವೊಂದ ಹುಡುಕಿತು ಗೂಡು ಕಟ್ಟಲು
ಉಳಿದ ಹಕ್ಕಿಗಳು ಬಂದು ಬೆನ್ನ ತಟ್ಟಲು
ಬಲವಿಲ್ಲದ ರೆಕ್ಕೆಗಳಿರೆ ಹಾರಲಸಾಧ್ಯ
ಬಲ ತುಂಬುವ ಹಕ್ಕಿಗಳಿರಲದು ಸಾಧ್ಯ
ಕಟ್ಟಾಯಿತು ಹಕ್ಕಿಗೊಂದು ಗೂಡು
ಎಷ್ಟು ಚೆಂದವಿದೆ ಅದು ನೀನೆ ನೋಡು
ಹಕ್ಕಿ ಹಾರ ಬಯಸಿದೆ ತನ್ನ ಗೂಡಿಗೆ
ಮುಂದೆ ಕೊಡ ಬೇಕಿಲ್ಲ ಇದಕೆ ಬಾಡಿಗೆ
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
16 ಜನ ಸ್ಪಂದಿಸಿರುವರು:
ಚನ್ನಾಗಿ ಬಂದಿದೆ. ಇನ್ನಷ್ಟು ಪ್ರಯತ್ನಿಸಿದ್ದರೆ ಇನ್ನೂ ಚನ್ನಾಗಿ ಬರೆಯಬಹುದಿತ್ತು.
ಪುಟ್ಟ ಹಕ್ಕಿ ಗೂಡಿನ೦ಥ ಮುದ್ದಾದ ಕವಿತೆ
congratulations on having built a new home. I wish you all happiness.
ಜಯಶಂಕರ್,
ನಿಮ್ಮ ಪದ್ಯದಲ್ಲಿ ಬಾಡಿಗೆ ಪದವನ್ನು ಸಮಯೋಜಿತವಾಗಿ ಬಳಸಿದ್ದೀರಿ..ಚೆನ್ನಾಗಿದೆ.
ಅಂತರ್ವಾಣಿ,
ಬದುಕಿನ ಮಹೊಂನತಿಯನ್ನು ಹಕ್ಕಿಗಳ ಹಾರುವಿಕೆಯಲ್ಲಿ ತಿಳಿಸಿದ್ದಿರ, ಹೌದು, ನಾವೆಲ್ಲಾ ವಿಶಾಲ ಆಗಸದಲ್ಲಿ ಹಾರುವುದ ಕಲಿಯಬೇಕು, ನಮ್ಮಲ್ಲಿನ ಸಂಕುಚಿತ ಮನೋಭಾವಗಳನ್ನು ಕಿತ್ತೆಸೆಯಬೇಕು.
ತುಂಬಾ ಚಂದದ ಕವನ
Nice One
ಗೂಡು ಕಟ್ಟಿಕೊಂಡಿರಾ, ಜಯಶಂಕರ?
Happy Time!
ಉದಯ ಅವರೆ,
ಪ್ರಯತ್ನಿಸುತ್ತೇನೆ.
ಪರಾಂಜಪೆಯವರೆ,
ವಂದನೆಗಳು
ಮಾ,
ಗೊತ್ತಾಗೋಯ್ತಾ?
ಶಿವಣ್ಣ,
ವಂದನೆಗಳು
ಡಾ|,ವಂದನೆಗಳು
ಶಿವಪ್ರಕಾಶ್,
ವಂದನೆಗಳು
ಸುನಾಥಂಕಲ್,
ನಿಮ್ಮ ಊಹೆ ಸರಿಯಿದೆ..
ವಂದನೆಗಳು
ತುಂಬ ಸಿಂಪಲ್ ಆಗಿ,, ಚೆನ್ನಾಗಿ ಮೂಡಿ ಬಂದಿದೆ ಕವನ,,,,, ಮುಂದುವರಿಸಿ.....
ಗುರು
ಧನ್ಯವಾದಗಳು ಗುರು ಅವರೆ
ಎಂಥ ಮಾರಾಯ್ರೆ..ದಿನಾ ಶಿಶುವಾಣಿ,,.ಓದುತ್ತಾ ಓದುತ್ತಾ ನಾವೂ ಪೀಪೀ ಊದೋ ಕೂಸುಗಳಾಗಿಬಡ್ತೀವಿ. ಸುಂದರ, ಸರಳ ಮುದ್ದಾದ ಕವನ. ಅಭಿನಂದನೆಗಳು
-ಧರಿತ್ರಿ
Jayashankar....
hosamanege...
ootakke nammanna kareyalE illavalla....
abhinandanegaLu...
ಧರಿತ್ರಿ,
ಇದು ಶಿಶುವಾಣಿಯಲ್ಲ.
ಪ್ರಕಾಶಣ್ಣ,
ವಂದನೆಗಳು.. ನಮ್ಮ ಮನೆ ಬಾಗಿಲು ಸದಾ ನಿಮಗೆ ತೆರೆದಿರುತ್ತದೆ :)
ಹೊಸ ಮನೆಗೆ ಬಂದ ಮೇಲೆ ಈ ಕವನವೇ? ಚೆನ್ನಾಗಿದೆ.
-ಧರಿತ್ರಿ
dharitri,
haLe maneyalli iddagalE bardu post maaDiddu...
ಹೊಸ ಮನೆಗೆ ಹೋಗುವಾಗಿನ ಸಂದರ್ಭಕ್ಕೆ ಬರೆದಿದ್ದರೂ ಕವನ ಗೂಢಾರ್ಥವನ್ನೂ ಒಳಗೊಂಡಂತಿದ್ದು ಚೆನ್ನಾಗಿದೆ.
Post a Comment