ಹಾರುವ ಹಕ್ಕಿಯ ಹಿಡಿಯಲು ಹೋದ ಪೆದ್ದ ನಾನು
ಬಾನಿನ ಚುಕ್ಕಿಯ ಎಣಿಸಲು ಹೋದ ಪೆದ್ದ ನಾನು
ಮೋಡದಿ ಮಹಲನು ಕಟ್ಟಲು ಹೋದ ಪೆದ್ದ ನಾನು
ಏರುವ ಅಲೆಗಳ ಅಳೆಯಲು ಹೋದ ಪೆದ್ದ ನಾನು
ಹೂವಿನ ಪರಿಮಳ ಮೂಸದೆ ಹೋದ ಪೆದ್ದ ನಾನು
ಬಣ್ಣದ ಚಿತ್ತಾರವ ಅಳಿಸಲು ಹೋದ ಪೆದ್ದ ನಾನು
ಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನು
ಕೊಟ್ಟ ಜೇನನು ಸವಿಯದೇ ಹೋದ ಪೆದ್ದ ನಾನು
ಜ್ಞಾನದ ಬಗ್ಗೆ
-
ಜ್ಞಾನದಿಂ ಮೇಲಿಲ್ಲ| ಶ್ವಾನನಿಂ ಕೀಳಿಲ್ಲ|ಭಾನು ಮಂಡಲದಿಂ ಬೆಳಗಿಲ್ಲ ಜಗದೊಳಗೆ|ಜ್ಞಾನವೇ
ಮೇಲು ಸರ್ವಜ್ಞ||ಜ್ಞಾನದಿಂದಲಿ ಇಹವು| ಜ್ಞಾನದಿಂದಲಿ ಪರವು|ಜ್ಞಾನವಿಲ್ಲದಲೆ ಸಕಲವೂ
ತನಗಿದ್ದು|ಹಾನಿ...
15 years ago
9 ಜನ ಸ್ಪಂದಿಸಿರುವರು:
ನಾನು ಪೆದ್ದ ಅಂತ ಗೊತ್ತಾಗೋದು ಜ್ಞಾನೋದಯಕ್ಕೆ ಮೊದಲ ಮೆಟ್ಟಿಲಂತೆ. ಶುಭವಾಗಲಿ.
"ಬಿಟ್ಟ ಶರವ ಹಿಂದೆ ತರಲು ಹೋದ ಪೆದ್ದ ನಾನು" ಈ ಸಾಲಿನಲ್ಲಿ "ಬಿಟ್ಟ ಬಾಣವ " ಎಂದು ಸೇರಿಸಿದ್ದರೆ ಪದಗಳ ಜೋಡಣೆ ಚನ್ನಾಗಿರುತ್ತಿತ್ತು.
ಅಂತರ್ವಾಣಿ....
ಕವನ ಚೆನ್ನಾಗಿದೆ...
ಭಾವಗಳನ್ನು ವ್ಯಕ್ತ ಪಡಿಸುವಲ್ಲಿ ಪೆದ್ದ ಗೆದ್ದಿದ್ದಾನೆ....
ಅಭಿನಂದನೆಗಳು...
ಪೆದ್ದನ ಕವನ ಜಾಣತನದಿಂದ ಕೂಡಿದೆ.
ಮೊದಲ ನುಡಿಯು ಸಿಗದಂತಹ ವಸ್ತುಗಳನ್ನು ಹಿಡಿಯಹೋಗುವ
ದಡ್ಡತನವನ್ನು ತೋರಿಸಿದರೆ, ಎರಡನೆಯ ನುಡಿಯು ಸಿಗುವ ವಸ್ತುಗಳನ್ನು ಬಿಡುವಂತಹ ಹುಚ್ಚುತನವನ್ನು ತೋರಿಸುತ್ತದೆ.
ಸುಂದರವಾದ ಕವನ.
ಅಂತರ್ವಾಣಿ,
ನಿಮ್ಮ ಕವನ ಒಳ ಅರ್ಥ ತುಂಬಾ ಇಷ್ಟವಾಯಿತು, ನಾನು ಪೆದ್ದ ಎನ್ನುವುದು ಮನುಷ್ಯನ ಸೌಜನ್ಯವನ್ನು ತೋರಿಸುತ್ತದೆ. ಜಗತ್ತಿನ ಪ್ರತಿಯೊಬ್ಬರೂ ಪೆದ್ದರೆ, ಯಾರೂ ಪರಿಪೂರ್ಣರಲ್ಲ.
ಹಾಗಾದ್ರೆ ನಾನು ಕೂಡ ಪೆದ್ದ :).
ಒಳ್ಳೆಯ ಕವನ
ಎಲ್ಲರಿಗೂ,
ಪ್ರತಿಸಲ ನೇರವಾದ ಕವನ ಬರೆಯುತ್ತಿದೆ. ಅದಕ್ಕೆ ಹೀಗೆ ಒಳ ಅರ್ಥವಿರುವ ಕವನ ಬರೆದಿದ್ದೀನಿ. ಮೆಚ್ಚಿದ್ದಕ್ಕೆ ವಂದನೆಗಳು.
ಜಯ್.. ಕವನ ಚೆನ್ನಾಗಿದೆ.. ಆದರೆ ಅಪೂರ್ಣ ಅಂತ ಅನಿಸ್ತಿದೆ.. (ನನ್ನ ವೈಯಕ್ತಿಕ ಅಭಿಪ್ರಾಯ, ಅಷ್ಟೇ)
Post a Comment